RachitaRam Archives - Good News 24x7 https://www.goodnews24x7.com/tag/rachitaram/ Kannada Sun, 14 Sep 2025 09:15:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RachitaRam Archives - Good News 24x7 https://www.goodnews24x7.com/tag/rachitaram/ 32 32 ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ https://www.goodnews24x7.com/actor-aamir-khan-expressed-regret-over-the-movie-coolie/ Sun, 14 Sep 2025 09:14:09 +0000 https://www.goodnews24x7.com/?p=7527 ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್…

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>

ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್ ತಂಡದ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದರು. ಉಪೇಂದ್ರ, ರಚಿತಾ ರಾಮ್, ಸೌಬಿನ್ ಶಾಹಿರ್, ಆಮಿರ್ ಖಾನ್ (Aamir Khan), ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ಅಭಿನಯಿಸಿದರು. ಬಾಕ್ಸ್ ಆಫೀಸ್​​ನಲ್ಲಿ ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇತ್ತೀಚೆಗೆ ಒಂದು ಸುದ್ದಿ ಪ್ರಕಟ ಆಯಿತು. ಆಮಿರ್ ಖಾನ್ ಅವರು ‘ಕೂಲಿ’ (Coolie) ಸಿನಿಮಾದಲ್ಲಿ ನಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಯಿತು. ಆ ಬಗ್ಗೆ ಅವರ ತಂಡದವರಿಂದ ಪ್ರತಿಕ್ರಿಯೆ ಬಂದಿದೆ.

ಅಂದಹಾಗೆ, ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾದಲ್ಲಿ ಮಾಡಿದ್ದು ಅತಿಥಿ ಪಾತ್ರ. ಅದನ್ನು ಆಮಿರ್ ಖಾನ್ ಅವರೇ ಮಾಡಬೇಕು ಎಂಬುದೇನೂ ಇರಲಿಲ್ಲ. ರಜನಿಕಾಂತ್ ಅವರ ಮೇಲಿನ ಪ್ರೀತಿ, ಗೌರವದ ಕಾರಣಕ್ಕೆ ಅವರು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡರು. ಆದರೆ ಈಗ ‘ಯಾಕಾದ್ರೂ ರಜನಿ ಜೊತೆ ಕೂಲಿ ಸಿನಿಮಾ ಮಾಡಿದ್ನೋ’ ಎಂದು ಆಮಿರ್ ಖಾನ್ ಬೇಸರ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಟ್ವಿಸ್ಟ್ ಏನೆಂದರೆ ಆಮಿರ್ ಖಾನ್ ಅವರು ಯಾವ ಪತ್ರಿಕೆಗೂ ಆ ರೀತಿಯ ಹೇಳಿಕೆ ನೀಡಿಲ್ಲ! ಈ ಕುರಿತು ಅವರ ಟೀಮ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ‘ಆಮಿರ್ ಖಾನ್ ಅವರು ಇಂಥ ಯಾವುದೇ ಸಂದರ್ಶನ ನೀಡಿಲ್ಲ. ಕೂಲಿ ಸಿನಿಮಾ ಬಗ್ಗೆ ಅವರು ನೆಗೆಟಿವ್ ಆಗಿ ಮಾತನಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ರಜನಿಕಾಂತ್ ಬಗ್ಗೆ ಆಮಿರ್ ಖಾನ್ ಅವರಿಗೆ ಬಹಳ ಗೌರವ ಇದೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಇಡೀ ಕೂಲಿ ಸಿನಿಮಾ ತಂಡದ ಬಗ್ಗೆ ಅವರಿಗೆ ಆ ಗೌರವ ಇದೆ. ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಗ್ಗೆ ಈ ಗಳಿಕೆಯೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಆಮಿರ್ ಖಾನ್ ತಂಡದವರು ಪ್ರತಿಕ್ರಿಯಿಸಿದ್ದಾರೆ.

‘ಕೂಲಿ’ ಸಿನಿಮಾಗೆ ಅಂದಾಜು 400 ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿತ್ತು. ಅದಕ್ಕೆ ಹೋಲಿಸಿದರೆ 500 ಕೋಟಿ ರೂಪಾಯಿ ಕಲೆಕ್ಷನ್ ಏನೇನೂ ಅಲ್ಲ. ಅಲ್ಲದೇ ವಿಮರ್ಶೆ ದೃಷ್ಟಿಯಿಂದಲೂ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಆಮಿರ್ ಖಾನ್ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ.

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>
‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ https://www.goodnews24x7.com/dimple-queen-in-coolie-movie-rachita-shared-a-photo-with-rajini/ Sat, 16 Aug 2025 06:29:01 +0000 https://www.goodnews24x7.com/?p=6175 ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ…

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>

ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು.

ಅಷ್ಟೇ ಅಲ್ಲದೇ ಕೂಲಿ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಹೌದು, ಸರ್​ಪ್ರೈಸ್​ ಎಂಬಂತೆ ಕೂಲಿ ಸಿನಿಮಾದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ನಟಿ ರಚಿತಾ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊದ ಮೊದಲು ಪಾಪದ ಹುಡುಗಿಯಾಗಿ ಕಾಣಿಸಿಕೊಂಡ ರಚ್ಚು ತದನಂತರ ರೆಬೆಲ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲು ಬಾರಿಗೆ ರಚಿತಾ ರಾಮ್​ ಅವರ ನಟನೆಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ಕೊಡುತ್ತಿದ್ದಾರೆ.
ಸಿನಿಮಾ ರಿಲೀಸ್​ ಆಗಿರೋ ಖುಷಿಯಲ್ಲಿ ನಟಿ ರಚಿತಾ ರಾಮ್​ ಸೂಪರ್ ಸ್ಟಾರ್​ ಜೊತೆಗೀನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಜಿನಿ ಜೊತೆಗೆ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋ ಜೊತೆಗೆ ‘‘ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಇದನ್ನೂ ಹಂಚಿಕೊಳ್ಳಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್​ ಯೂ’’ ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಇದೇ ಫೋಟೋ ಜೊತೆಗೆ ರಚಿತಾ ರಾಮ್​ ಅಭಿನಯದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್​ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೂಲಿಯಲ್ಲಿ ಅದ್ಭುತ ಅಭಿನಯ, ನೀವು ಹಾಗೇ ಅಭಿನಯಿಸುತ್ತೀರಾ ಅಂತ ಎಂದಿಗೂ ನಿರೀಕ್ಷಿಸಿರಲಿಲ್ಲ ಮೇಡಂ, ಅಳುವುವವರನ್ನು ಯಾವತ್ತು ನಂಬಬಾರದು ಅಂತ ನಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ನೂ, 2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ ಈಗ ಕನ್ನಡದ ಬಹು ಬೇಡಿಕೆಯ ನಟಿ ಎನಿಸಿಕೊಂಡರು. 2022ರಲ್ಲಿ ಟಾಲಿವುಡ್‌ಗೆ ಪ್ರವೇಶಿಸಿದ್ದ ಅವರು ಈ ವರ್ಷ ಕೂಲಿ ಸಿನಿಮಾ ಮೂಲಕ ಕಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ.

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>