RadhikaPandit Archives - Good News 24x7 https://www.goodnews24x7.com/tag/radhikapandit/ Kannada Sat, 07 Mar 2026 07:49:53 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RadhikaPandit Archives - Good News 24x7 https://www.goodnews24x7.com/tag/radhikapandit/ 32 32 ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! https://www.goodnews24x7.com/rocking-star-in-a-new-look-with-radhika-pandit/ Sat, 07 Mar 2026 07:49:40 +0000 https://www.goodnews24x7.com/?p=8767 Yash: ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಶ್ ಭಾರತೀಯ ಸಿನೆಮಾ ಲೋಕವೇ ಹಿಂತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ…

The post ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! appeared first on Good News 24x7.

]]>

Yash: ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಯಶ್
ಭಾರತೀಯ ಸಿನೆಮಾ ಲೋಕವೇ ಹಿಂತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ ಅವರ ಲುಕ್ ಮತ್ತು ಸ್ಟೈಲ್ ಅಭಿಮಾನಿಗಳಲ್ಲಿ ಗಮನ ಸೆಳೆದಿತ್ತು. ಗಡ್ಡ ಹಾಗೂ ಲಾಂಗ್ ಹೇರ್‌ನಲ್ಲಿದ್ದ ಯಶ್ ಹಲವು ವರ್ಷಗಳಿಂದ ಅದೇ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಅದೆಷ್ಟೋ ವರ್ಷಗಳ ಬಳಿಕ ಯಶ್ ಕಂಪ್ಲೀಟ್ ಲುಕ್ ಬದಲಾಗಿದೆ. ಹೊಸ ಲುಕ್‌ನಲ್ಲಿ ಮೊದಲ ಬಾರಿಗೆ ಯಶ್ ಕ್ಯಾಮೆರ ಕಣ್ಣಿಗೆ ಬಿದ್ದಿದ್ದಾರೆ. ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಕೆಜಿಎಫ್ ಬಳಿಕ ಅದೇ ಲುಕ್‌ನಲ್ಲಿ ಇದ್ದ ಯಶ್
ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಯಶ್ ಅವರ ಲುಕ್ ಅಭಿಮಾನಿಗಳಲ್ಲಿ ಐಕಾನಿಕ್ ಆಗಿತ್ತು. ಗಡ್ಡ ಬಿಟ್ಟು, ಉದ್ದ ಕೂದಲಿನ ಸ್ಟೈಲ್‌ನಲ್ಲಿ ಅವರು ಹಲವು ವರ್ಷಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಹೊಸ ಲುಕ್‌ನಲ್ಲಿ ದರ್ಶನ
ಇತ್ತೀಚೆಗೆ ಮುಂಬೈನಲ್ಲಿ ಯಶ್ ಹೊಸ ಲುಕ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದೀಗ ಯಶ್ , ಹೊಸ ಹೇರ್ ಸ್ಟೈಲ್ ಮತ್ತು ಕ್ಲೀನ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಜಿಎಫ್ ನಂತರ ಇದೇ ಮೊದಲ ಬಾರಿಗೆ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ.

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ. ಆದರೆ ಇತ್ತೀಚೆಗೆ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ . ಈ ಹಿನ್ನೆಲೆಯಲ್ಲಿ ಯಶ್ ಈಗ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

The post ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! appeared first on Good News 24x7.

]]>