ragi Archives - Good News 24x7 https://www.goodnews24x7.com/tag/ragi/ Kannada Sat, 06 Sep 2025 05:34:47 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ragi Archives - Good News 24x7 https://www.goodnews24x7.com/tag/ragi/ 32 32 ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ https://www.goodnews24x7.com/crop-destruction-due-to-wild-boars-and-bears-farmers-protest-over-forest-loss-forest-department-not-listening/ Sat, 06 Sep 2025 05:34:47 +0000 https://www.goodnews24x7.com/?p=7397 ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ…

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>

ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ ಹರವದಿ ಕಕ್ಕುಪ್ಪಿ ಜರ್ಮಲಿ ಗ್ರಾಮಗಳು , ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು. ಹೊಲಗಳಿಗೆ ಕರಡಿ ಹಂದಿಗಳ ಹಾವಳಿ ಮಿತಿ ಮೀರಿದ್ದು , ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಗತ್ಯ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಡಿಗಳು ಕಾಡು ಹಂದಿಗಳು ಹೊಲದಲ್ಲಿನ ಮೆಕ್ಕೇಜೋಳ , ಹಾಗೂ ಜೋಳದ ಫಸಲನ್ನು ತಿಂದು ಹಾಳು ಮಾಡಿದ್ದು. ಹತ್ತಾರು ವರ್ಷಗಳಿಂದಲೂ ಇದು ಪ್ರತಿಭಾರಿಯೂ ಜರುಗುತ್ತಿದೆ , ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ. ಅಗತ್ಯ ಕ್ರಮಗಳನ್ನು ಜರುಗಿಸುವಂತೆ , ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ. ಕಾಡು ಹಂದಿ ಕರಡಿಗಳಿಂದ ದಾಳಿಯಿಂದ ಅಪಾರ ಪ್ರಮಾಣಸ ಬೆಳೆ ನಾಶ: ಕಾಡು ಹಂದಿಗಳು ಕರಡಿಗಳು ರೈತರ ಹೊಲಗಳಿಗೆ ನುಗ್ಗಿ, ಕಟಾವು ಹಂತದಲ್ಲಿದ್ದ ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿವೆ. ಈ ಸಂಬಂಧಿಸಿದಂತೆ ಈಗಾಗಾಲೆ ಅರವದಿ ಗ್ರಾಮದ ರೈತರು , ಕೂಡ್ಲಿಗಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮತ್ತು ತಮಗಾದ ಬೆಳೆ ನಷ್ಟ ತುಂಬಿ ಕಡಬೇಕು , ಅದಕ್ಕಾಗಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕರಡಿಗಳು ಕೆಲವೊಮ್ಮೆ ಹಾಡು ಹಗಲುನಲ್ಲಿಯೇ ಹೊಲದಲ್ಲಿ ಕಾರ್ಯನಿರತ , ರೈತರ ಮೇಲೆ ದಾಳಿ ಮಾಡಿ ಮಾರಣಾಂತಿಕ ಗಾಯಗೋಳಿಸಿರುವ ಹಲವು ನಿದರ್ಶನಗಳಿವೆ. ರಾತ್ರಿ ಸಮಯದಲ್ಲಿ
ಕಾಡು ಹಂದಿಗಳ ಹಾಗೂ ಕರಡಿ ಅತಿಕ್ರಮಣ ಮಿತಿ ಮೀರಿದ್ದು , ಕರಡಿಗಳು ಕಾಡು ಹಂದಿಗಳು ಕಾಡು ಪ್ರದೇಶಗಳಿಂದ ಹೊರಬಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತವೆ.
ಕಟಾವು ಸಮೀಪಿಸುತ್ತಿದ್ದಂತೆ ಕಾಡು ಹಂದಿಗಳು ದಾಳಿ ಮಾಡಿ, ಮೆಕ್ಕೆಜೋಳ, ಜೋಳ ಮತ್ತು ರಾಗಿ ಮುಂತಾದ ಬೆಳೆಗಳನ್ನು ತಿಂದು ಹಾಕಿ, ಬೆಳೆಯನ್ನು ಬೇಕ‍ಾ ಬಿಟ್ಟಿಯಾಗಿ ತುಳಿದು ನಾಶಪಡಿಸುತ್ತಿವೆ. ಮತ್ತು
ಕರಡಿ ಹಂದಿ ದಾಳಿಗಳಿಂದ ಪ್ರತಿ ರೈತರಿಗೆ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸುತ್ತಿದ್ದು , ನೊಂದ ರೈತರುಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಾಂತರ ರೂ ಬೆಲೆಯ ಬೆಳೆ ನಾಶ- ತಾಲೂಕಿನ ಹರವದಿ ಗ್ರಾಮದಲ್ಲಿ ಸುಮಾರು ಐವತ್ತು ರೈತರ ಹೊಲಗಳಿಗೆ , ಕರಡಿ ಕಾಡು ಹಂದಿ ಲಗ್ಗೆ ಹಾಕಿ ನಾಶಪಡಿಸಿವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಓರ್ವ ರೈತನ ಹೊಲವು ಮೂರು ಎಕರೆ ಯಿಂದ ಐದು ಎಕರೆ ಹೊಲದಷ್ಟು , ಅಂದರೆ ಓರ್ವ ರೈತನ ಹೊಲದಲ್ಲಿನ ಐದು ಕ್ವಿಂಟಾಲ್ ನಿಂದ ಹತ್ತು ಕ್ವಿಂಟಾಲ್ ನಷ್ಟು ಫಲ ನಷ್ಟವಾಗಿದ್ದು. ಅರವದಿ ಗ್ರಾಮದ ಸಮಸ್ತ ರೈತರ ಒಟ್ಟು ಬೆಳೆ ನಷ್ಟ , ಹತ್ತಾರು ಲಕ್ಷ ರೂಗಳಷ್ಟು ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ನಷ್ಟಕ್ಕೊಳಗಾಗಿರುವ ಗ್ರಾಮದ ರೈತರು ಅರಣ್ಯ ಇಲಾಖೆಗೆ ಅಗತ್ಯ ದ‍ಾಖಲುಗಳ ಸಮೇತ ಪರಿಹಾರಕ್ಕಾಗಿ ,ನಷ್ಟದ ಕುರಿತು ಮಾಹಿತಿ ನೀಡಿದ್ದಾರೆ , ಮತ್ತು ಸೂಕ್ತ ಪರಿಹಾರ ನೀಡುವಂತೆ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹರವದಿ ಗ್ರಾಮ , ಜರ್ಮಲಿ ಗ್ರ‍‍ಾಮ , ಕಕುಪ್ಪಿ ಗ್ರ‍ಾಮಗಳು ಸೇರಿದಂತೆ , ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿ ಕರಡಿಗಳು ಒಳಗೊಂಡಂತೆ ಇತರೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದು ಗ್ರಾಮಗಳ ಗ್ರ‍ಾಮಸ್ಥರು ದೂರಿದ್ದಾರೆ. ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿವೆ , ಅವು ರ‍ಾತ್ರೊರಾತ್ರಿ ಹೊಲಕ್ಕೆ ನುಗ್ಗಿ ಬೇಳ ನಾಶ ಮಾಡುತ್ತಿದ್ದು , ಇದರಿಂದಾಗಿ ರೈತರು ಅಪಾರ ಪ್ರಮ‍ಾಣದಲ್ಲಿ ನಷ್ಟಕ್ಕೆ ಈಡಾಗುತ್ತಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ವೈಫಲ್ಯ- ರೈತರ ಆಕ್ರೋಶ ಆರೋಪ- ಕಾಡು ಪ್ರಾಣಿಗಳ ಹಾವಳಿ ಪ್ರಕರಣಗಳು ಹತ್ತು ಹಲವಾರು ವರ್ಷಗಳಿಂದಲೂ , ಪ್ರತಿ ವರ್ಷವೂ ಜರುಗುತ್ತಿರುವ ದುರಂತವಾಗಿದ್ದು. ಪ್ರತಿ ಭಾರೀವೂ ಇಲಾಖೆಗೆ ಕ್ರಮ ಕೈಗೊಳ್ಳುವಂತೆ , ಹಾಗೂ ಸೂಕ್ತ ಪರಿಹಾರ ನೀಡುವಂತೆ ಮಾಡುತ್ತೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ ಮನವಿಯನ್ನು ಡಸ್ಟ್ ಬಿನ್ ಗೆ ಹಾಕಿ ಸಾಗಹಾಕಲಾಗುತ್ತಿದೆ , ಅಪಾರ ನಷ್ಟ ಅನುಭವಿಸಿದವರಿಗೆ. ಇಲಾಖೆಯಿಂದ ಅರೆಕಾಸಿನ ಬಿಡಿಗಾಸಿನ ಪರಿಹಾರ ನೀಡಲಾಗುತ್ತಿದ್ದು , ರಕ್ಷಣೆಗೆ ಯಾವುದೇ ಒಂದು ಕ್ರಮವನ್ನು ಜರುಗಿಸುತ್ತಿಲ್ಲ. ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ಹಾವಳಿ ನಿಂಯತ್ರಿಸಲು , ಹತ್ತು ಹಲವು ಯೋಜನೆಗಳಿದ್ದು ಅದಾವುದನ್ನು ಇಲ್ಲಿ ಜಾರಿ ತರಲಾಗುತ್ತಿಲ್ಲ. ಬದಲಿಗೆ ಭರವಸೆಗಳ ಮಹಾಪೂರ ಹರಿಸಿ ರೈತರ ಮೂಗಿಗೆ ತುಪ್ಪ ಸವರಿದಂತೆ , ಅಲ್ಪ ಪ್ರಮಾಣದ ಪರಿಹಾರ ನೀಡಿ , ಮೂಗಿಗೆ ತುಪ್ಪ ಸವರಿ ಕೈ ತೊಳೆದು ಕೊಳ್ಳೋ ಪರಿಪಾಟಲನ್ನು ಅರಣ್ಯ ಇಲಾಖೆ ರೂಡಿಸಿಕೊಳ್ಳಲಾಗಿದೆ. ಹೀಗಾಗಿ ತಮ್ಮ ರೋಧನ ಅಕ್ಷರಸಃ ಅರಣ್ಯ ರೋಧನವಾಗಿದ್ದು , ಸಂಬಂಧಿಸಿದಂತೆ ಇಾಲಾಖೆಯ ಉನ್ನತಾಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸಚಿವರು ಶಾಸಕರು ಖುದ್ದು , ಪರಿಶೀಲಿಸಿ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆ ನಡೆಸಿ ದಿಟ್ಟ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸಲು , ಅರಣ್ಯ ಇಲಾಖೆಯಿಂದ ಖಾಯಂ ಸೂಕ್ತ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ. ಹರವದಿ ಗ್ರಾಮ , ಕಕ್ಕುಪ್ಪಿ ಗ್ರಾಮ , ಜರ್ಮಲಿ ಗ್ರಾಮಗಳ ರೈತರು , ಹಾಗೂ ವನ್ಯ ಪ್ರಾಣಿಗಳ ಬಾಧಿತ ತಾಲೂಕಿನ ಎಲ್ಲಾ ಗ್ರಾಮಗಳ ರೈತರು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ಪರಿಹಾರ : ದುಪ್ಪಟ್ಟು ಹೆಚ್ಚಿಸಿ , ಅರ್ಜಿ ಸಲ್ಲಿಸುವ ವಿಧ‍ಾನ ಸರಳ ಗೊಳಿಸಿ- ಪರಿಹಾರ ಧನವು ಅವೈಜ್ಞಾನಿಕ ಮಾನದಂಡದಿಂದ ಕೂಡಿದ್ದು , ಪರಿಹಾರದ ಮಾನದಂಡ ದ್ವಿಗುಣಗೊಲಕಿಸಿ ಪರಿಹಾರ ಹೆಚ್ಚಿಸಬೇಕು. ಮತ್ತು ಪರಿ ಹಾರ ಹಣಕ್ಕಾಗಿ ಸಲ್ಲಿಸಬೇಕ‍ಾಗಿರುವ ವಿಧ‍‍ಾನವು , ತುಂಬಾ ಜಠಿಲಾಗಿದ್ದು ಸರಳವಾಗಿಸಬೇಕಿದೆ. ಪರಿಹಾರ ಧನ ಶೀಘ್ರವಾಗಿ ನೇರವಾಗಿ ನಷ್ಟ ಹೊಂದಿರುವ ರೈತನ ಖಾತೆಗೆ , ಜಮಾ ಆಗುವಂತೆ ಅಗತ್ಯ ಕ್ರಮ ಜರುಗಿಸಬೇಕೆಂದು. ಕೂಡ್ಲಿಗಿ ತಾಲೂಕಿನ ಸಮಸ್ತ ರೈತರು , ರೈತ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>