rain Archives - Good News 24x7 https://www.goodnews24x7.com/tag/rain/ Kannada Tue, 14 Jul 2026 06:11:54 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg rain Archives - Good News 24x7 https://www.goodnews24x7.com/tag/rain/ 32 32 KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! https://www.goodnews24x7.com/9836-2huge-drop-in-krs-inflow-farmers-and-bengaluruans-worried/ Tue, 14 Jul 2026 06:11:54 +0000 https://www.goodnews24x7.com/?p=9836 ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ…

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>

ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟದ ಮುನ್ಸೂಚನೆ ನೀಡಿದೆ. ಒಳಹರಿವಿನಲ್ಲಿ ದಿಢೀರ್ ಕುಸಿತಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ.ನಿನ್ನೆಯ ಒಳಹರಿವು: 7,500 ಕ್ಯೂಸೆಕ್ಇಂದಿನ ಒಳಹರಿವು: ಕೇವಲ 3,685 ಕ್ಯೂಸೆಕ್ಮುಂಗಾರು ಆರಂಭದ ಮಳೆ ನೋಡಿ ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದ ಮಂಡ್ಯ ಭಾಗದ ರೈತರು, ಈಗ ಬೆಳೆಗಳಿಗೆ ನೀರು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಬೆಂಗಳೂರಿಗರಿಗೂ ಕಾದಿದೆಯೇ ನೀರಿನ ಕ್ಷಾಮ?ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಆತಂಕದ ಸಂಗತಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.ಜಲಾಶಯದ ಇಂದಿನ ಸ್ಥಿತಿಗತಿ (KRS Today’s Status)ವಿವರಗಳುಮಾಹಿತಿಗರಿಷ್ಠ ಮಟ್ಟ124.80 ಅಡಿಇಂದಿನ ಮಟ್ಟ92.54 ಅಡಿಗರಿಷ್ಠ ಸಾಮರ್ಥ್ಯ49.452 ಟಿಎಂಸಿಸದ್ಯದ ನೀರಿನ ಸಂಗ್ರಹ17.509 ಟಿಎಂಸಿಇಂದಿನ ಒಳಹರಿವು3,685 ಕ್ಯೂಸೆಕ್ಇಂದಿನ ಹೊರಹರಿವು623 ಕ್ಯೂಸೆಕ್ಮುಖ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ರೈತರಿಗೂ ಮತ್ತು ಜನಸಾಮಾನ್ಯರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ನೀರಿನ ಸಂಕಷ್ಟ ಎದುರಾಗುವುದು ಅನಿವಾರ್ಯ ಎಂಬಂತಾಗಿದೆ.

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>
ವೈಷ್ಣೋದೇವಿ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಾ*ವಿನ ಸಂಖ್ಯೆ 35ಕ್ಕೆ ಏರಿಕೆ https://www.goodnews24x7.com/landslide-death-toll-on-vaishno-devi-yatra-route-rises-to-35/ Wed, 27 Aug 2025 12:48:30 +0000 https://www.goodnews24x7.com/?p=6825 ಜಮ್ಮುವಿನಲ್ಲಿ ಭಾರೀ ಮಳೆಯಿಂದಾಗಿ ವೈಷ್ಣೋ ದೇವಿ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಅನೇಕ ಯಾತ್ರಿಕರು ಸೇರಿದಂತೆ ಮೃತರ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ಇನ್ನು ವೈಷ್ಣೋ ದೇವಿ ಯಾತ್ರೆ ಸ್ಥಗಿತಗೊಂಡಿದೆ. ಜೊತೆಗೆ ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತವಾಗಿವೆ. ಸಾಂಬಾ, ಕಥುವಾ, ಜಮ್ಮು, ಉಧಂಪುರ, ದೋಡಾ…

The post ವೈಷ್ಣೋದೇವಿ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಾ*ವಿನ ಸಂಖ್ಯೆ 35ಕ್ಕೆ ಏರಿಕೆ appeared first on Good News 24x7.

]]>

ಜಮ್ಮುವಿನಲ್ಲಿ ಭಾರೀ ಮಳೆಯಿಂದಾಗಿ ವೈಷ್ಣೋ ದೇವಿ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಅನೇಕ ಯಾತ್ರಿಕರು ಸೇರಿದಂತೆ ಮೃತರ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ಇನ್ನು ವೈಷ್ಣೋ ದೇವಿ ಯಾತ್ರೆ ಸ್ಥಗಿತಗೊಂಡಿದೆ. ಜೊತೆಗೆ ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತವಾಗಿವೆ.

ಸಾಂಬಾ, ಕಥುವಾ, ಜಮ್ಮು, ಉಧಂಪುರ, ದೋಡಾ ಮುಂತಾದ ತಗ್ಗು ಪ್ರದೇಶಗಳಿಗೆ ಭಾರೀ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ನದಿ ಪಾತ್ರಗಳಲ್ಲಿ ವಾಸಿಸೋರ ಸುರಕ್ಷತೆಗಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಳೆ ಬಹುತೇಕ ನಿಂತಿರೋದ್ರಿಂದ ಸ್ವಲ್ಪ ಸಮಾಧಾನವಾಗಿದೆ. ತಗ್ಗು ಪ್ರದೇಶಗಳಿಂದ ನೀರು ಕಡಿಮೆಯಾಗಲು ಪ್ರಾರಂಭಿಸಿದೆ. ವಿಪತ್ತಿನಿಂದ ಉಂಟಾದ ಹಾನಿ ನಿಮ್ಮ ಮುಂದೆಯೇ ಇದೆ. 2014 ರಲ್ಲಿಯೂ ಹೀಗೆಯೇ ಆಗಿತ್ತು ಎಂದು ಸಿಎಂ ಹೇಳಿದ್ದಾರೆ.

 

ಮಾತಾ ವೈಷ್ಣೋ ದೇವಿ ಕತ್ರಾ, ಜಮ್ಮು ತಾವಿ ಮತ್ತು ಪಠಾಣ್‌ಕೋಟ್ ರೈಲು ನಿಲ್ದಾಣಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಬಗ್ಗೆ ಮಾಹಿತಿಗಾಗಿ ಸಹಾಯ ಪಡೆಯಬಹುದು.

ಸಹಾಯವಾಣಿ ಸಂಖ್ಯೆಗಳು
ಜಮ್ಮು- 7888839911
ದೆಹಲಿ- 9717638775

ಇನ್ನು ಲಡಾಖ್‌ನಲ್ಲಿ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು, ರೈಲು ಸೇವೆಗಳು ಮತ್ತು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ರಂಬನ್ ಜಿಲ್ಲೆಯ ಮರೋಗ್, ದಿಗ್ಡೋಲ್, ಬ್ಯಾಟರಿ ಚಶ್ಮಾ ಮತ್ತು ಕೇಲಾ ಮೋರ್ಹ್‌ಗಳಲ್ಲಿ ಹಲವಾರು ಭೂಕುಸಿತಗಳು, ಮಣ್ಣು ಕುಸಿತ ಮತ್ತು ಗುಂಡಿನ ಕಲ್ಲುಗಳಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

The post ವೈಷ್ಣೋದೇವಿ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಾ*ವಿನ ಸಂಖ್ಯೆ 35ಕ್ಕೆ ಏರಿಕೆ appeared first on Good News 24x7.

]]>
ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! https://www.goodnews24x7.com/the-rain-is-pouring-non-stop-people-are-spending-their-days-with-their-lives-in-their-hands/ Sun, 24 Aug 2025 05:54:08 +0000 https://www.goodnews24x7.com/?p=6613 ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ…

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>

ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ ಅಕ್ಷರಶಃ ತತ್ತರಿಸಿರುವ ರಾಜಸ್ಥಾನ, ಬಿಹಾರ, ಒಡಿಶಾಗಳಲ್ಲಿ ಜನ ಜೀವ ಕೈಯಲ್ಲಿ ಹಿಡಿದು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಬೆಳೆ, ರಸ್ತೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗ್ತಿವೆ. ಮಳೆ, ತನ್ನ ರೌದ್ರ ಪ್ರತಾಪದಿಂದ ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ವರುಣ ಅಬ್ಬರಕ್ಕೆ ಉತ್ತರ ಭಾರತ ನಲುಗಿ ಹೋಗ್ತಿದ್ದು, ರಾಜಸ್ತಾನ, ಒಡಿಶಾ ಹಾಗೂ ಬಿಹಾರದಲ್ಲಿ ಜನರ ಕಣ್ಣ ಮುಂದೆಯೇ ಆಸ್ತಿ-ಪಾಸ್ತಿಗಳು ನಾಶ ಆಗುತ್ತಿವೆ. ನಿರಂತರ ಮಳೆಯಿಂದಾಗಿ ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟಾ, ಬುಂಡಿ, ಬರಾನ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸವಾಯಿ ಮಾಧೋಪುರ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ಬಸ್ ವಾಲಿಕೊಂಡು ನಿಂತಿದ್ದು, ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ತೆರಳಿದ್ದ ಎನ್​ಡಿಆರ್​ಎಫ್​ ಸಿಬ್ಬಂದಿ ಇದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿದೆ.

 

ಇನ್ನು ಭಾರೀ ಮಳೆಗೆ ಬುಂಡಿ ಪ್ರದೇಶ ಜಲಾವೃತವಾಗಿದ್ದು, ಜೈಪುರದ ಅಮೇರ್ ಕೋಟೆಯಲ್ಲಿ 200 ಅಡಿ ಉದ್ದದ ಗೋಡೆ ಕುಸಿತವಾಗಿದೆ. ಬಿಹಾರದಲ್ಲೂ ವರುಣನ ಅಬ್ಬರ.. ಉಕ್ಕಿ ಹರಿದ ಲೋಕೈನ್ ರಿವರ್ ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗ್ತಿವೆ. ನಗರದ ಪ್ರಮುಖ ರಸ್ತೆಗಳು ಕೊಚ್ಚಿಹೋಗಿ ಬೆಳೆಗಳು ನಾಶವಾಗಿವೆ. ಓಡಿಶಾದಲ್ಲೂ ವರುಣ ತನ್ನ ರೌದ್ರ ರೂಪ ಪ್ರದರ್ಶಿಸ್ತಿದ್ದಾನೆ. ಧಾರಾಕಾರ ಮಳೆಗೆ ಸಮಕೋಯ್​ ನದಿ ಪಾಯ ಮಟ್ಟ ಮೀರಿದೆ. ಇದ್ರಿಂದ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರರತ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಭೀತಿ ಮಧ್ಯೆಯೇ ಜನರು ಬದುಕು ನಡೆಸುವಂತಾಗಿದೆ. ಇನ್ನೂ ಮಳೆ ಮುಂದುವರಿದ್ರೆ ಉತ್ತರ ಭಾರತದಲ್ಲಿ ಪ್ರವಾಹ ಅಪ್ಪಳಿಸಿದ್ರೂ ಅಚ್ಚರಿಯೇನಿಲ್ಲ.

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>
ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ. ಹವಾಮಾನ ಇಲಾಖೆ ಎಚ್ಚರಿಕೆ ! https://www.goodnews24x7.com/heavy-rains-in-the-state-for-the-next-five-days-meteorological-department-warns/ Mon, 18 Aug 2025 05:35:37 +0000 https://www.goodnews24x7.com/?p=6301 ರಾಜ್ಯದಲ್ಲಿ ಮಳೆಯ ಆರ್ಭಟ ಮತ್ತೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಸಾಧ್ಯತೆ…

The post ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ. ಹವಾಮಾನ ಇಲಾಖೆ ಎಚ್ಚರಿಕೆ ! appeared first on Good News 24x7.

]]>

ರಾಜ್ಯದಲ್ಲಿ ಮಳೆಯ ಆರ್ಭಟ ಮತ್ತೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಸೂಚಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿಯು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ಈ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ನದಿಗಳು ಉಕ್ಕಿ ಹರಿಯುವ ಸಾಧ್ಯತೆ ಇರುವ ಕಾರಣದಿಂದ ನದಿಪಾತ್ರ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಳೆಯ ತೀವ್ರತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಂಗಳೂರು ನಗರದಲ್ಲಿ ಆಗಸ್ಟ್ 21ರ ವರೆಗೆ ಹಗುರ ಮಳೆಯ ಮುನ್ಸೂಚನೆ ನೀಡಲಾಗಿದೆ.

 

The post ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ. ಹವಾಮಾನ ಇಲಾಖೆ ಎಚ್ಚರಿಕೆ ! appeared first on Good News 24x7.

]]>
ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! https://www.goodnews24x7.com/ganga-yamuna-rivers-overflow-in-prayagraj-varuna-mridangam-in-north-india-floods/ Tue, 05 Aug 2025 10:05:15 +0000 https://www.goodnews24x7.com/?p=5360 ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್…

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>

ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್ ಅಧಿಕಾರಿಯಿಂದ ಆರತಿ! ದೇವರಿಗೂ ಜಲ ದಿಗ್ಬಂಧನ! ಪ್ರಯಾಗ್ರಾಜ್ನಲ್ಲಿ ಮಹಾ ಪ್ರವಾಹ! ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗರಾಜ್ ನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಗಂಗಾ ನದಿ ನೀರು ಮನೆಗಳಿಗೆ ನುಗ್ಗಿದೆ. ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನವರಿಯಲ್ಲಿ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಆದರೇ, ಈಗ ಅದೇ ಪ್ರಯಾಗರಾಜ್ ನ ಸ್ಥಳೀಯ ನಿವಾಸಿಗಳು ಗಂಗಾ, ಯಮುನಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಗಾ, ಯಮುನಾ ನದಿಯಲ್ಲಿ 10 ಲಕ್ಷ ಕ್ಯೂಸೆಕ್ ನೀರು ಏಕಕಾಲಕ್ಕೆ ಹರಿಯುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಪ್ರಕೃತಿ ಮುಂದೆ ಮನುಷ್ಯ ಯಕಶ್ಚಿತ್ ಅನ್ನೋದು ಪದೇ ಪದೇ ಸಾಬೀತಾಗ್ತಾನೆ ಇದೆ.. ಪ್ರಕೃತಿ ದೇವಿ ಒಮ್ಮೆ ಮುನಿಸಿಕೊಂಡ್ರೆ ಮಾನವನ ಅವಶೇಷವೂ ಸಿಗದೇ ನಾಪತ್ತೆಯಾಗಿಬಿಡ್ತಾನೆ. ಪ್ರಯಾಗ್ರಾಜ್ನಲ್ಲಿ ಮಳೆರಾಯನ ಆರ್ಭಟ ಜನರ ಬದುಕನ್ನೆ ನುಂಗಿ ಹಾಕಿದೆ.. ಜೀವ ಮತ್ತು ಜೀವನ ಉಳಿಸಿಕೊಳ್ಳೋದಕ್ಕೆ ಜನ ಅಕ್ಷರಶಃ ಹರಸಾಹಸವನ್ನೆ ಪಡ್ತಿದ್ದಾರೆ.. ನೆತ್ತಿಗೆ ಆಸರೆಯಾಗಿದ್ದ ಸೂರುಗಳು ಜಲಾವೃತವಾಗಿದ್ದು, ಕಾಳಜಿ ಕೇಂದ್ರವೇ ದಿಕ್ಕಾಗಿದೆ.. ಜಲಾಸುರು ಸೃಷ್ಟಿಸಿರುವ ಅವಾಂತರದ ಒಂದೊಂದು ದೃಶ್ಯಗಳು ನಿಜಕ್ಕೂ ಕರುಣಜಾನಕ.. ಆ ವರುಣ ಮೃದoಗದ ದೃಶ್ಯಗಳು ಭಯಾನಕ.

ಕಳೆದೆರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಬ್ಬರಿಸಿ ಬೊಬ್ಬಿರಿದ್ದ ಮಳೆರಾಯ ಈಗ ಉತ್ತರ ಭಾರತದಲ್ಲಿ ಆರ್ಭಟಿಸ್ತಿದ್ದಾನೆ. ವರುಣನ ಅಟ್ಟಹಾಸಕ್ಕೆ ಜನ ಸಾಕಪ್ಪ ವರುಣ ನಮ್ಮನ್ನ ಬಿಟ್ಟುಬಿಡು ಅಂತ ಕೈ ಮುಗಿದು ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.. ಕಳೆದ ಮೂರು ದಿನದಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ವರುಣ ಬಡಪಾಯಿ ಜನರ ಬದುಕಿಗೆ ಕತ್ತಲೆ ಆವರಿಸುವಂತೆ ಮಾಡಿದ್ದಾನೆ. ಬಿಟ್ಟು ಬಿಡದೇ ಸುರಿಯತ್ತಿರುವ ಮಳೆ ಹತ್ತಾರು ಗ್ರಾಮಗಳನ್ನ ಸ್ವಾಹ ಮಾಡಿದೆ. ಮನೆ ಕಳ್ಕೊಂಡು ಕಂಗಾಲಾದವರು ಕಾಳಜಿ ಕೇಂದ್ರ ಸೇರಿ ನೆರವಿಗಾಗಿ ಎದುರು ನೋಡ್ತಿದ್ದಾರೆ. ಪ್ರಯಾಗ್ ಪ್ರವಾಹದ ಒಂದೊಂದು ದೃಶ್ಯವೂ ಭೀಕರ. ರಣ ಭೀಕರ..
ರಾಜಮೌಳಿ ಬಾಹುಬಲಿ ಸಿನಿಮಾದ ಈ ಸೀನ್ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡಿ. ಇಂಥದೊಂದು ಕಲ್ಪನೆ ಮೂವಿ ಮಾಂತ್ರಿಕ ರಾಜಮೌಳಿಗೆ ಬಿಟ್ಟು ಬೇರೆ ಯಾರಿಗೂ ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಮೈದುಂಬಿ ಹರಿಯುತ್ತಿರುವ ನದಿ, ಕೈಯಲ್ಲಿ ಕಂದ, ಈ ಸೀನ್ ನೋಡುತ್ತಿದ್ದರೇ, ಮೈ ರೋಮಾಂಚನವಾಗಿ ಬಿಡುತ್ತೆ. ಇದು ರೀಲ್ ಸೀನ್, ಸಿನಿಮಾದ ಸೀನ್.

ಇದ್ಯಾವುದೋ ಸಿನಿಮಾ ಸೀನ್ ಅಲ್ಲ. ಅಥವಾ ರೀಲ್ಸ್ಗಾಗಿ ಮಾಡಿದ ವಿಡಿಯೋ ಕೂಡ ಅಲ್ಲ.. ಸಾವು ಬದುಕಿನ ಸಂಘರ್ಷಕ್ಕೆ ಸಾಕ್ಷಿಯಾಗಿರೋವ ಕರುಳು ಹಿಂಡುವ ವಿಡಿಯೋ.. ಗಂಗೆ ಯಮುನೆಯ ಆರ್ಭಟಕ್ಕೆ ಸಾಕ್ಷಿಯಾದ ದೃಶ್ಯವಿದು.. ಆರ್ಭಟಿಸ್ತಿರೋ ಮಳೆರಾಯ ಪ್ರಯಾಗರಾಜ್ನಲ್ಲಿ ಮಹಾ ಪ್ರವಾಹವನ್ನೆ ಸೃಷ್ಟಿಸಿಬಿಟ್ಟಿದ್ದಾನೆ. ಮನೆಗಳಿಗೆ ನೀರು ನುಗ್ಗಿ, ಜೀವ ಉಳಿದ್ರೆ ಸಾಕು ಅಂತ ಜನ ಉಟ್ಟ ಬಟ್ಟೆಯಲ್ಲೇ ತಾವಿದ್ದ ಸ್ಥಳವನ್ನ ತೊರೆಯುತ್ತಿದ್ದಾರೆ.. ಹೀಗೆ ಪ್ರವಾಹದಿಂದ ಬಚಾವ್ ಆಗುವ ಹೊತ್ತಲ್ಲಿ ಕಂಡು ಬಂದ ಮನ ಮಿಡಿಯುವ ಮಿಡಿಯುವ ದೃಶ್ಯವಿದು… ಮುಂದೆ ಅಪ್ಪ ತನ್ನ ಕರುಳ ಬಳ್ಳಿಯನ್ನ ಅಂಗೈಯಲ್ಲಿ ಹಿಡಿದು ಒಂದೊಂದೆ ಹೆಜ್ಜೆ ಇಡ್ತಿದ್ರೆ, ಹಿಂದೆ ಗಂಡ ಹೆಗಲಿಗೆ ಕೈ ಒರಗಿ ಹೆಂಡತಿ ಸಾಗ್ತಿದ್ದಾಳೆ.. ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ಕರುಳು ಹಿಂಡಿದ ಅನುಭವವೇ ಆಗುತ್ತೆ.

ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ನೀರೇ ಕಾಣ್ತಿದೆ.. ಆ ನೀರಿನ ಮಧ್ಯೆ ಮೂರು ಜೀವಗಳು ಸಿಲುಕಿವೆ.. ಸುಮಾರು ನೂರು ಮೀಟರ್ ತನಕ ಅರ್ಧದೇಹದ ತನಕ ನೀರು ನಿಂತಿದೆ.. ಸ್ವಲ್ಪ ಎಚ್ಚರ ತಪ್ಪಿದ್ರೂ ಕೈಯಲ್ಲಿದ್ದ ಮಗು ನೀರುಪಾಲಾಗುತ್ತೆ.. ಹೀಗಾಗಿ ಮಗುವಿನ ತಂದೆ.. ಮಗುವಿಗೆ ಒಂದು ಹನಿ ನೀರು ಕೂಡ ತಾಗದಂತೆ ಜೋಪಾನವಾಗಿ ಕಂದನನ್ನ ರಕ್ಷಣೆ ಮಾಡೋ ಸಾಹಸಕ್ಕೆ ಕೈ ಹಾಕಿದ್ದಾನೆ.. ಕೇವಲ ಮಗುವಿನ ಪ್ರಾಣ ಮಾತ್ರವಲ್ಲ.. ಬೆನ್ನ ಹಿಂದೆ ಹೆಜ್ಜೆ ಹಾಕ್ತಿರೋ ಹೆಂಡತಿಯನ್ನ ಆತ ಕಾಪಾಡಬೇಕಿದೆ.

ಉತ್ತರ ಪ್ರದೇಶದ ಪ್ರಯರಾಜ್ನಲ್ಲಿ ವರುಣನ ಆರ್ಭಟಕ್ಕೆ ಮನೆಗಳೆಲ್ಲ ಮುಳುಗಡೆಯಾಗಿ.. ಜನ ಜೀವನ್ಮರಣದ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೂ ಕೂಡ ಗಂಗೆ ಯಮನೆಯ ಆರ್ಭಟಕ್ಕ ಈ ದಂಪತಿ ಮನೆ ಜಲಾವೃತವಾಗಿದ್ದು, ಹಸುಗೂಸಿನ ಜೊತೆ ಗಂಡ ಹೆಂಡತಿ ಇಬ್ಬರೂ ಪ್ರವಾಹವನ್ನೆ ದಾಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಪ್ಪನ ಈ ಹರಸಾಹಸವನ್ನ ಕಂಡು ಜನ ಕೂಡ ಆಶ್ಚರ್ಯಗೊಂಡಿದ್ದಾರೆ.

ಪ್ರಯಾಗ್ರಾಜ್ನಲ್ಲಿ ಸುರಿಯುತ್ತಿರುವ ಮಳೆಯಿಂದ ಗಂಗೆ ಮತ್ತು ಯುಮನಾ ನದಿಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ… ನದಿ ಪಾತ್ರದಲ್ಲಿರೋ ಜನರ ಪಾಡಂತು ನಿಜಕ್ಕೂ ಘೋರಾತಿ ಘೋರವಾಗಿದೆ.. ಶಾಕಿಂಗ್ ಏನಂದ್ರೆ ನದಿ ಪಾತ್ರವನ್ನ ದಾಟಿ ಗಂಗೆ ನಗರಕ್ಕೂ ನುಗ್ಗಿದ್ದಾಳೆ. ಅಷ್ಟರ ಮಟ್ಟಿಗೆ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ.. ಹೀಗಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮನೆ ಹೊಸ್ತಿಲ ತನಕವೂ ಗಂಗೆ ನುಗ್ಗಿ ಬಂದಿದ್ದಾಳೆ.. ಆದ್ರೆ ಈ ಪುಣ್ಯಾತ್ಮ ಗಂಗೆ ಮನೆ ಬಾಗಿಲಿಗೆ ಬಂದಿದ್ದಾಳೆ ಅಂತ ಪೂಜೆ ಸಲ್ಲಿಸಿದ್ದಾನೆ.

ಇನ್ನೊಂದೆರಡು ಅಡಿ ನೀರು ಹೆಚ್ಚಾದ್ರು, ಮನೆಯೂ ಉಳಿಯಲ್ಲ, ಮನೆಯಲ್ಲಿದ್ದವು ಉಳಿಯಲ್ಲ.. ಇಂಥಾ ಟೈಮ್ನಲ್ಲಿ ಓದಿರೋ ತಿಳುವಳಿಕೆ ಇರೋ ಇಂಥವರೇ ಮೌಢ್ಯಕ್ಕೆ ಬಿದ್ರೆ ಏನ್ ಹೇಳೋಣ ಹೇಳಿ.. ಮನೆಗೆ ಗಂಗಾ ನದಿ ನುಗ್ಗಿ ಬಂದಿದ್ರೆ, ಈ ಪೊಲೀಸ್ ಅಧಿಕಾರಿಗೆ ಗಂಗೆ ಗುಲಾಬಿ ಹೂವು ಹಾಕಿ, ಆರತಿ ಮಾಡಿ ಪೂಜೆ ಸಲ್ಲಿಸಿದ್ದಾನೆ.ಇದಷ್ಟೆ ಅಲ್ಲ ಮುಳುಗಿರೋ ಮನೆ ಮೇಲಿಂದನೇ ಈ ಆಸಾಮಿ ನೀರಿಗೆ ಹಾರಿ ಸ್ವೀಮ್ಮಿಂಗ್ ಮಾಡಿದ್ದಾನೆ. ಇದನ್ನ ಹುಚ್ಚಾಟ ಅನ್ಬೇಕೋ.. ಮೌಢ್ಯದ ಪರಮಾವಧಿ ಅನ್ಬೇಕೋ ಗೊತ್ತಿಲ್ಲ.

ಕಳೆದ ಮೂರು ನಾಲ್ಕು ದಿನದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿರೋದ್ರಿಂದ.. ಜನರ ಬದುಕಿಗೆ ಕತ್ತಲೇ ಆವರಿಸಿದೆ. ಮನೆಗಳೆಲ್ಲ ಜಲಾವೃತವಾಗಿದ್ದು, ಜನರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಪ್ರಯಾಗರಾಜ್ ಸೇರಿದಂತೆ 12 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆರಾಯನ ಆರ್ಭಟ ಅದೆಷ್ಟಿದೆ ಅಂದ್ರೆ ಎರಡಂತಸ್ತಿನ ಕಟ್ಟಡಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ… ಒಂದ್ಕಡೆ ಮಳೆ.. ಇನ್ನೊಂದ್ಕಡೆ ಮನೆ ಮುಂದೆಯೇ ಮೊಣಕಾಲುದ್ದ ನಿಂತಿರೋ ನೀರು.. ಹೀಗೆ ಜೀವಕ್ಕಾಗಿ ಪರದಾಡ್ತಿರೋರ ಪಾಲಿಗೆ ದೇವದೂಂತರಂತೆ ನಿಂತು ಎನ್ಡಿಆರ್ ಎಫ್ ತಂಡ ಕೆಲಸ ಮಾಡ್ತಿದೆ. ಬಹಳಷ್ಟು ಮನೆಗಳ ಅರ್ಧ ಭಾಗ ನೀರಲ್ಲಿ ಮುಳುಗಿ ಹೋಗಿದೆ.. ದಿಕ್ಕೇ ತೋಚದೇ ಕೂತಿದ್ದವರಿಗೆ ದೇವರಂತೆ ಬಂದು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಮನೆಯಲ್ಲಿದ್ದವರನ್ನ ಏಣಿ ಮೂಲಕ ಒಬ್ಬೊಬ್ಬರನ್ನೆ ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.

ಗಂಗಾ ತೀರದಲ್ಲಿ ಬೋಟಿಂಗ್ ಮಾಡ್ತಿದ್ದ ಬಡಪಾಯಿಗಳ ಒಪ್ಪತ್ತಿನ ಊಟಕ್ಕೂ ಮಳೆರಾಯ ಕಲ್ಲು ಹಾಕಿದ್ದಾನೆ. ಗಂಗೆ ದಡದಲ್ಲಿ ಬೋಟಿಂಗ್ ಇಲ್ಲಿನ ನಿವಾಸಿಗಳಿಗೆ ಮುಖ್ಯ ಆದಾಯ.. ನೂರಾರು ಕುಟಂಬಗಳಿಗೆ ಇವತ್ತು ಇದೇ ಬೋಟಿಂಗ್ ಕೆಲಸವೇ ಆಸರೆಯಾಗಿದೆ.. ಆದ್ರೀಗ ನದಿಯಲ್ಲಿ ನೀರು ಹೆಚ್ಚಾಗಿರೋ ಕಾರಣಕ್ಕೆ ಬೋಟಿಂಗ್ ಕೂಡ ಬಂದ್ ಆಗಿದ್ದು, ಅದನ್ನೆ ನಂಬ್ಕೊಂಡು ಕೆಲಸ ಮಾಡ್ತಿದ್ದವರ ಪರದಾಡುವಂತಾಗಿದೆ. ಎಲ್ಲ ಬಂದ್ ಆಗಿದೆ ನಮ್ಮ ಕಷ್ಟ ಕೇಳೋರು ಯಾರು ಅಂತ ಬೋಟ್ ಓಡಿಸೋ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ.


ನಮ್ಮ ದಿನದ ಊಟ ಇದೇ ಆಗಿತ್ತು.. ಅದೇ ಇಲ್ಲ..ಗಂಗಾನದಿ ಉಕ್ಕಿ ಹರಿಯುತ್ತಿರೋದ್ರಿಂದ.. ಘಾಟ್ ಬಳಿ ಜನ ಸ್ನಾನಕ್ಕೆ ಬರ್ತಿದ್ರು. ಈಗ ಎಲ್ಲ ಬಂದ್ ಆಗಿದೆ. ಸ್ನಾನ ಮಾಡೋರಿಗೂ ಜಾಗ ಇಲ್ಲ… ಬೋಟ್ ಮೂಲಕ ಹೋಗ್ತಿದ್ರು.. ಯಾರು ಬರ್ತಿಲ್ಲ. ಒಂದು ಗಂಟೆ ಎರಡು ಗಂಟೆ ಬಳಿಕ ಒಬ್ಬೊಬ್ಬರು ಬರ್ತಾರೆ.. ಪೊಲೀಸರು ಕೂಡ ಬಿಡಲ್ಲ.. ಅಲ್ಲಿ ಶವ ಸಂಸ್ಕಾರ ಮಾಡುವ ಘಾಟ್ ಕೂಡ ಮುಳುಗಿ ಹೋಗಿದೆ. ಹೆಣ ಸುಡೋಕು ಕಷ್ಟ ಆಗ್ತಿದೆ. ಅಸ್ಥಿ ತಂದೆ ಬೋಟ್ ಮೂಲಕ ಗಂಗೆಯಲ್ಲಿ ಬಿಡ್ತಿದ್ರು.. ಈಗ ಯಾರು ಬರ್ತಿಲ್ಲ.ಒಟ್ನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಘಾಟ್ಗಳಲ್ಲಿ ಹೆಣ ಸುಡೋದಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹಳ್ಳದ ನಟ್ಟ ನಡುವಲ್ಲಿ ಸಿಲುಕಿಕೊಂದಿದ್ದ ಬೈಕ್ ಸವಾರ ಬದುಕಿ ಬಂದ ದೃಶ್ಯ ನಿಜಕ್ಕೂ ರಣ ರೋಚಕವಾಗಿದೆ.

 

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>
ರಾಜ್ಯಾದ್ಯಂತ ಮೂರು ದಿನಗಳ ಕಾಲ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ. https://www.goodnews24x7.com/heavy-rains-across-the-state-for-three-days-red-alert-declared-in-these-districts/ Mon, 26 May 2025 07:40:34 +0000 https://www.goodnews24x7.com/?p=4087 ಬೆಂಗಳೂರು : ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ…

The post ರಾಜ್ಯಾದ್ಯಂತ ಮೂರು ದಿನಗಳ ಕಾಲ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ. appeared first on Good News 24x7.

]]>

ಬೆಂಗಳೂರು : ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ನಾಳೆಯಿಂದ ಮೇ 27ರವರೆಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ಇದಲ್ಲದೇ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಬಗ್ಗೆ ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದು, ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಮೇ.24ರಿಂದ ಮೇ.27ರವರೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

The post ರಾಜ್ಯಾದ್ಯಂತ ಮೂರು ದಿನಗಳ ಕಾಲ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ. appeared first on Good News 24x7.

]]>
ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ. https://www.goodnews24x7.com/cm-siddaramaiah-visits-rain-damaged-areas-and-inspects/ Wed, 21 May 2025 09:35:42 +0000 https://www.goodnews24x7.com/?p=4048 ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜನರು ತತ್ತರಿಸಿದ್ದು, ಈ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ಪಡೆದರು. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ…

The post ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ. appeared first on Good News 24x7.

]]>

ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜನರು ತತ್ತರಿಸಿದ್ದು, ಈ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ಪಡೆದರು.

ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಹಾಕಿ ಹಲವೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗವಾರದಲ್ಲಿ ವೀರಣ್ಣ ಪಾಳ್ಯ ಜಂಕ್ಷನ್ ಬಳಿ ರಾಜಕಾಲುವೆಯನ್ನ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದರು.
ನಂತರ ಹೆಚ್ ಬಿಆರ್ ಲೇಔಟ್ 5ನೇ ಬ್ಲಾಕ್ ಗೂ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಮಳೆಹಾನಿ ಪರಿಶೀಲಿಸಿದರು. ಸಿಎಂ ಮತ್ತು ಡಿಸಿಎಂಗೆ ಸಚಿವ ಕೆ.ಜೆ ಜಾರ್ಜ್, ಅಧಿಕಾರಿಗಳು ಸಾಥ್ ನೀಡಿದರು. ಇದೇ ವೇಳೆ ರಾಜಕಾಲುವೆ ಒತ್ತುವರಿ ಆರೋಪ ಕುರಿತು ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದರು.

The post ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ. appeared first on Good News 24x7.

]]>
ಕರ್ನಾಟಕ ರಾಜ್ಯಾದ್ಯಂತ 4 ದಿನ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಲ್ಲಿ Yellow ಅಲರ್ಟ್ ಘೋಷಣೆ. https://www.goodnews24x7.com/4-day-rain-forecast-across-karnataka-yellow-alert-declared-in-many-districts/ Thu, 01 May 2025 05:33:35 +0000 https://www.goodnews24x7.com/?p=3518 ಬೆಂಗಳೂರು : ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಕಳೆದ ಎರಡು ವಾರಗಳಿಂದ ನಾನಾ ಕಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು , ನಿನ್ನೆ…

The post ಕರ್ನಾಟಕ ರಾಜ್ಯಾದ್ಯಂತ 4 ದಿನ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಲ್ಲಿ Yellow ಅಲರ್ಟ್ ಘೋಷಣೆ. appeared first on Good News 24x7.

]]>

ಬೆಂಗಳೂರು : ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.


ಈಗಾಗಲೇ ಕಳೆದ ಎರಡು ವಾರಗಳಿಂದ ನಾನಾ ಕಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು , ನಿನ್ನೆ ರಾತ್ರಿ ಬೆಂಗಳೂರು ಮೈಸೂರು ಮಂಡ್ಯ ಸೇರಿ ಹಲವು ಕಡೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಈ ಮಧ್ಯೆ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.


ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ.


ಬೆಂಗಳೂರು ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರ, ತುಮಕೂರು ಚಿತ್ರದುರ್ಗ ಶಿವಮೊಗ್ಗ ಮೈಸೂರು, ಮಂಡ್ಯ, ಚಿಕ್ಕಮಗಳೂರು ಚಾಮರಾಜನಗರ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

The post ಕರ್ನಾಟಕ ರಾಜ್ಯಾದ್ಯಂತ 4 ದಿನ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಲ್ಲಿ Yellow ಅಲರ್ಟ್ ಘೋಷಣೆ. appeared first on Good News 24x7.

]]>
ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ… : ಹವಾಮಾನ ಇಲಾಖೆ ಮುನ್ಸೂಚನೆ! https://www.goodnews24x7.com/rajyada-vividhe%e1%b8%8de-biruga%e1%b8%b7i-sahita-bhari-ma%e1%b8%b7e-sadhyate-havamana-ilakhe-munsucane-havamana-ilakhe-saiklon-prabhavadinda-rajyada-halavu-jillega%e1%b8%b7alli-bhari-ma/ Tue, 01 Apr 2025 06:01:59 +0000 https://www.goodnews24x7.com/?p=2956 ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ… : ಹವಾಮಾನ ಇಲಾಖೆ ಮುನ್ಸೂಚನೆ! ಸೈಕ್ಲೋನ್ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪೂರ್ವ ಮುಂಗಾರು ಆರ್ಭಟವು ಗುಡುಗು ಸಿಡಿಲಿನೊಂದಿಗೆ ಏಪ್ರಿಲ್ 6 ರವರೆಗೂ ಅಪ್ಪಳಿಸಲಿದೆ ಎಂದು…

The post ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ… : ಹವಾಮಾನ ಇಲಾಖೆ ಮುನ್ಸೂಚನೆ! appeared first on Good News 24x7.

]]>

ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ… : ಹವಾಮಾನ ಇಲಾಖೆ ಮುನ್ಸೂಚನೆ!

ಸೈಕ್ಲೋನ್ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪೂರ್ವ ಮುಂಗಾರು ಆರ್ಭಟವು ಗುಡುಗು ಸಿಡಿಲಿನೊಂದಿಗೆ ಏಪ್ರಿಲ್ 6 ರವರೆಗೂ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆ, ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಆಲಿಕಲ್ಲು ಮಳೆಯೊಂದಿಗೆ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳು ಮತ್ತು ದಕ್ಷಿಣ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ.

The post ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ… : ಹವಾಮಾನ ಇಲಾಖೆ ಮುನ್ಸೂಚನೆ! appeared first on Good News 24x7.

]]>
ಕರ್ನಾಟಕದ 14 ಜಿಲ್ಲೆಗಳಲ್ಲಿ ಮಾರ್ಚ್ 12ರಿಂದ 3 ದಿನಗಳ ಕಾಲ ಮಳೆ. https://www.goodnews24x7.com/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-14-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%ae/ Sat, 08 Mar 2025 05:14:17 +0000 https://www.goodnews24x7.com/?p=2663 ಕರ್ನಾಟಕ ಮಾರ್ಚ್ 08: ಕರ್ನಾಟಕದಲ್ಲಿ ಗರಿಷ್ಠ ತಾಪಮಾನದಲ್ಲಿ ಏರುತ್ತಿದ್ದಂತೆ ಮಳೆ(Rain)ಯ ಮುನ್ಸೂಚನೆಯೂ ಸಿಕ್ಕಿದೆ. ಮಾರ್ಚ್ 12ರಿಂದ ಮೂರು ದಿನಗಳ ಕಾಲ ಕರ್ನಾಟಕದ 14ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ,…

The post ಕರ್ನಾಟಕದ 14 ಜಿಲ್ಲೆಗಳಲ್ಲಿ ಮಾರ್ಚ್ 12ರಿಂದ 3 ದಿನಗಳ ಕಾಲ ಮಳೆ. appeared first on Good News 24x7.

]]>

ಕರ್ನಾಟಕ ಮಾರ್ಚ್ 08: ಕರ್ನಾಟಕದಲ್ಲಿ ಗರಿಷ್ಠ ತಾಪಮಾನದಲ್ಲಿ ಏರುತ್ತಿದ್ದಂತೆ ಮಳೆ(Rain)ಯ ಮುನ್ಸೂಚನೆಯೂ ಸಿಕ್ಕಿದೆ. ಮಾರ್ಚ್ 12ರಿಂದ ಮೂರು ದಿನಗಳ ಕಾಲ ಕರ್ನಾಟಕದ 14ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ವಿಜಯನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ.

ಕಲಬುರಗಿಯಲ್ಲಿ 37.8 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಬೀದರ್ನಲ್ಲಿ 12.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇದೆ.
ಹೊನ್ನಾವರ, ಕಾರವಾರ, ಹಾಸನ, ಮೈಸೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿತ್ತು. ಬೀದರ್ ಹಾಗೂ ಕೊಪ್ಪಳದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇತ್ತು. ಹೊನ್ನಾವರದಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 36.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೀದರ್ನಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 12.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 35.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಧಾರವಾಡದಲ್ಲಿ 35.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 36.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 37.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 35.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 36.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಎಚ್ಎಎಲ್ನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

The post ಕರ್ನಾಟಕದ 14 ಜಿಲ್ಲೆಗಳಲ್ಲಿ ಮಾರ್ಚ್ 12ರಿಂದ 3 ದಿನಗಳ ಕಾಲ ಮಳೆ. appeared first on Good News 24x7.

]]>