RajaShivaraj Archives - Good News 24x7 https://www.goodnews24x7.com/tag/rajashivaraj/ Kannada Fri, 22 Aug 2025 07:40:53 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RajaShivaraj Archives - Good News 24x7 https://www.goodnews24x7.com/tag/rajashivaraj/ 32 32 ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. https://www.goodnews24x7.com/gauri-ga%e1%b9%87esa-habbada-a%e1%b9%85gavagi-muttaide-paurakarmikarige-bagina-arpa%e1%b9%87e-mysoreatharvalifekillsfoundationkarunesevatrustdrpuneethrajkumarrajashivarajsridurgafoundationpres/ Fri, 22 Aug 2025 07:40:05 +0000 https://www.goodnews24x7.com/?p=6465 ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಿ ನಂತರ ಮಾತನಾಡಿದ ಕರುಣೆ ಸೇವಾ…

The post ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. appeared first on Good News 24x7.

]]>

ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಿ ನಂತರ ಮಾತನಾಡಿದ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜಿಸುವುದು ಹಿಂದು ಧರ್ಮಿಯರ ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸತಂದಿದೆ ಎಂದು ಹೇಳಿದರು, ಮೈಸೂರಿನ ಅರಮನೆ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಸಮ ಹೆಚ್ಚು, ಅಂಥವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಉಂಟು ಮಾಡುತ್ತದೆ ಎಂದು ಹೇಳಿದರು.

 

ಬಾಗಿನ ಪಡೆದ ಪೌರಕಾರ್ಮಿಕ ಮಹಿಳೆ ಜಯಲಕ್ಷ್ಮಿ ಮಾತನಾಡಿ ಪೌರಕಾರ್ಮಿಕರನ್ನು ಗುರುತಿಸಿ ಸಹೋದರಿಯಂತೆ ಬಾಗಿನ ನೀಡಿರುವುದು. ನಮ್ಮೆಲ್ಲರಿಗೂ ಸಂತಸ ಉಂಟು ಮಾಡಿದೆ, ಅವರ ಸಂಸ್ಥೆಗೆ ಧನ್ಯವಾದಗಳು.ಎಂದು ಹೇಳಿದರು. ಅಥರ್ವ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ, ಡಾಕ್ಟರ್ ಪುನೀತ್ ರಾಜಕುಮಾರ್ ರಾಜ ಶಿವರಾಜ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಮಂಜುಳಾ ಸೋಮಣ್ಣ, ಜ್ಯೋತಿ, ವರ್ಷಿಣಿ, ಹಾಗೂ ಪೌರಕಾರ್ಮಿಕ ಸಿಬ್ಬಂದಿಗಳು ಹಾಜರಿದ್ದರು.

The post ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. appeared first on Good News 24x7.

]]>