RajBShetty Archives - Good News 24x7 https://www.goodnews24x7.com/tag/rajbshetty/ Kannada Wed, 10 Sep 2025 06:04:09 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RajBShetty Archives - Good News 24x7 https://www.goodnews24x7.com/tag/rajbshetty/ 32 32 ‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್ https://www.goodnews24x7.com/su-phram-so-o%e1%b9%adi%e1%b9%adige-bandaru-thiye%e1%b9%adarnalli-nintilla-kalek%e1%b9%a3an-rajbshettymoviesottsufromsopopularityjptuminadfilm-raj-bi-se%e1%b9%ad%e1%b9%adi-ni/ Wed, 10 Sep 2025 06:03:28 +0000 https://www.goodnews24x7.com/?p=7444 ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಾಮ್ ಸೋ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು. 46 ದಿನಗಳ ಯಶಸ್ವಿ ಪ್ರದರ್ಶನದ ನಂತರ ಒಟಿಟಿಗೆ ಬಿಡುಗಡೆಯಾದರೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಲೇ ಇದೆ. ಇದು ಸಿನಿಮಾದ ಜನಪ್ರಿಯತೆ…

The post ‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್ appeared first on Good News 24x7.

]]>

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಾಮ್ ಸೋ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು. 46 ದಿನಗಳ ಯಶಸ್ವಿ ಪ್ರದರ್ಶನದ ನಂತರ ಒಟಿಟಿಗೆ ಬಿಡುಗಡೆಯಾದರೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಲೇ ಇದೆ. ಇದು ಸಿನಿಮಾದ ಜನಪ್ರಿಯತೆ ಮತ್ತು ಪ್ರೇಕ್ಷಕರ ಆಸಕ್ತಿಯನ್ನು ತೋರಿಸುತ್ತದೆ.

ಕೆಲವು ಸಿನಿಮಾಗಳು ಒಟಿಟಿಗೆ ಬರೋ ಮೊದಲೇ ಥಿಯೇಟರ್​ನಿಂದ ಕಾಲ್ಕಿತ್ತಿರುತ್ತವೆ. ಕಲೆಕ್ಷನ್ ಕೂಡ ಸಂಪೂರ್ಣವಾಗಿ ನಿಂತು ಹೋಗಿರುತ್ತದೆ. ಆದರೆ, ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ (Su From So) ಇದಕ್ಕೆ ಭಿನ್ನ. ಈ ಚಿತ್ರ ಸೆಪ್ಟೆಂಬರ್ 9ರಂದು ಒಟಿಟಿಗೆ ಕಾಲಿಟ್ಟಿದೆ. ಆದಾಗ್ಯೂ ಚಿತ್ರ ಥಿಯೇಟರ್​​ನಲ್ಲಿ ಕಲೆಕ್ಷನ್ ಮಾಡೋದನ್ನು ಮುಂದುವರಿಸಿದೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ಇದು ಸಿನಿಮಾದ ಜನಪ್ರಿಯತೆಯನ್ನು ಸೂಚಿಸುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಸುಮಾರು 46 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರದಲ್ಲಿ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಈ ಸಿನಿಮಾ ಒಂದೇ ದಿನ 6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಈಗ ಚಿತ್ರ ಸೆಪ್ಟೆಂಬರ್ 9ರಂದು ಒಟಿಟಿಗೆ ಕಾಲಿಟ್ಟಿದೆ. ಆದರೆ, ಸಿನಿಮಾದ ಕಲೆಕ್ಷನ್ ಮಾತ್ರ ತಗ್ಗಿಲ್ಲ.

 

‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ 9ರಂದು 5 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಒಟಿಟಿಗೆ ಬಂದ ಹೊರತಾಗಿಯೂ ಥಿಯೇಟರ್​ನಲ್ಲಿ ಸಾಕಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಅನೇಕರಿಗೆ ಸಿನಿಮಾ ಒಟಿಟಿಗೆ ಕಾಲಿಟ್ಟ ವಿಚಾರ ತಿಳಿದಿಲ್ಲದೇ ಇರಬಹುದು. ಹೀಗಾಗಿ, ದುಡ್ಡು ಕೊಟ್ಟು ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾಗೆ ರಾಜ್​ ಬಿ ಶೆಟ್ಟಿ ನಿರ್ಮಾಣ ಇದೆ. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದಲ್ಲಿ ಲಾಭ ಕಂಡಿದ್ದಾರೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 122.34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸಿನಿಮಾದ ಅಂತಿಮ ಕಲೆಕ್ಷನ್ ಎಂದೇ ಹೇಳಬಹುದು. ಈ ಚಿತ್ರದ ಭಾರತದಲ್ಲಿ 107.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ವಿದೇಶದಿಂದ 15 ಕೋಟಿ ರೂಪಾಯಿ ಹರಿದು ಬಂದಿದೆ. ‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಈ ಸಿನಿಮಾಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಹಲವು ಸ್ಥಳೀಯ ಕಲಾವಿದರು ನಟಿಸಿದ್ದಾರೆ.

The post ‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್ appeared first on Good News 24x7.

]]>
‘ಸು ಫ್ರಮ್ ಸೋ’ 100 ಕೋಟಿ ಕಲೆಕ್ಷನ್ https://www.goodnews24x7.com/su-from-so-100-crore-collection/ Sun, 17 Aug 2025 06:29:26 +0000 https://www.goodnews24x7.com/?p=6262 ‘ಸು ಫ್ರಮ್ ಸೋ’ ಸಿನಿಮಾ ಪ್ರತಿ ವೀಕೆಂಡ್​​ನಲ್ಲೂ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕನಾಗಿ ರಾಜ್ ಬಿ. ಶೆಟ್ಟಿ, ನಿರ್ದೇಶಕನಾಗಿ ಜೆ.ಪಿ. ತುಮಿನಾಡು ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ‘ವಾರ್ 2’, ‘ಕೂಲಿ 2’ ಸಿನಿಮಾಗಳ ಪೈಪೋಟಿ ಇದ್ದರೂ ‘ಸು ಫ್ರಮ್ ಸೋ’…

The post ‘ಸು ಫ್ರಮ್ ಸೋ’ 100 ಕೋಟಿ ಕಲೆಕ್ಷನ್ appeared first on Good News 24x7.

]]>

‘ಸು ಫ್ರಮ್ ಸೋ’ ಸಿನಿಮಾ ಪ್ರತಿ ವೀಕೆಂಡ್​​ನಲ್ಲೂ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕನಾಗಿ ರಾಜ್ ಬಿ. ಶೆಟ್ಟಿ, ನಿರ್ದೇಶಕನಾಗಿ ಜೆ.ಪಿ. ತುಮಿನಾಡು ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ‘ವಾರ್ 2’, ‘ಕೂಲಿ 2’ ಸಿನಿಮಾಗಳ ಪೈಪೋಟಿ ಇದ್ದರೂ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ದಾಟಿದೆ.
100 ಕೋಟಿ ರೂಪಾಯಿ ಗಳಿಸಿದ ‘ಸು ಫ್ರಮ್ ಸೋ’: ಇಷ್ಟಕ್ಕೇ ನಿಲ್ಲಲ್ಲ ಕಲೆಕ್ಷನ್

ಹಾರರ್ ಕಾಮಿಡಿ ಕಥಾಹಂದರದ ‘ಸು ಫ್ರಮ್ ಸೋ’  ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಬಿಡುಗಡೆಗೂ ಮುನ್ನ ಯಾರೂ ಊಹಿಸಿರಲಿಲ್ಲ. ಎಷ್ಟೋ ಜನರಿಗೆ ಈ ರೀತಿಯ ಒಂದು ಸಿನಿಮಾ ಬರುತ್ತಿದೆ ಎಂಬುದೇ ತಿಳಿದಿರಲಿಲ್ಲ. ಚಿತ್ರದ ಹೆಸರು ಹೇಳಲು ಕೆಲವರಿಗೆ ನಾಲಿಗೆ ಹೊರಳುತ್ತಿರಲಿಲ್ಲ. ಆದರೆ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಪಡೆದುಕೊಳ್ಳಲು ಆರಂಭಿಸಿದ ಬಳಿಕ ಎಲ್ಲರ ಬಾಯಲ್ಲೂ ಇದೇ ಸಿನಿಮಾದ ಚರ್ಚೆ ಶುರು ಆಯಿತು. ಅದರ ಪರಿಣಾಮವಾಗಿ ‘ಸು ಫ್ರಮ್ ಸೋ’ ಸಿನಿಮಾ ಅದ್ಭುತ ಕಲೆಕ್ಷನ್  ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಾಜ್ ಬಿ. ಶೆಟ್ಟಿ  ಮತ್ತು ಅವರ ತಂಡಕ್ಕೆ ಈ ಯಶಸ್ಸಿನಿಂದ ಸಖತ್ ಖುಷಿ ಆಗಿದೆ.

ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ 100 ಕೋಟಿ ರೂಪಾಯಿ ಯಶಸ್ಸು ಕಾಣುವುದು ಎಂದರೆ ತಮಾಷೆಯೇ ಅಲ್ಲ. ಅಂಥ ಸಾಧನೆಯನ್ನು ಜೆ.ಪಿ. ತುಮಿನಾಡು ಅವರು ಮಾಡಿದ್ದಾರೆ. ಅವರೇ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಕೂಡ ಮಾಡಿರುವುದರಿಂದ ಅವರಿಗೆ ಇದು ಡಬಲ್ ಗೆಲುವು.

ಈ ಸಿನಿಮಾದಲ್ಲಿ ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೂ ಕೂಡ ‘ಸು ಫ್ರಮ್ ಸೋ’ ಹವಾ ಕಡಿಮೆ ಆಗಿಲ್ಲ. ಬಿಡುಗಡೆ ಆಗಿ 24 ದಿನ ಕಳೆದರೂ ಸಹ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. 23 ದಿನಕ್ಕೆ ಕರ್ನಾಟಕದಲ್ಲಿ ಈ ಸಿನಿಮಾ 69.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಲಯಾಳಂನಲ್ಲಿ 5.07 ಕೋಟಿ ರೂಪಾಯಿ, ತೆಲುಗಿನಲ್ಲಿ 1.23 ಕೋಟಿ ರೂಪಾಯಿ ಗಳಿಸಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 100.99 ಕೋಟಿ ರೂಪಾಯಿ ಆಗಲಿದೆ.

ಆಗಸ್ಟ್ 14ರಂದು ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳು ಬಿಡುಗಡೆ ಆದವು. ಆ ಸಿನಿಮಾಗಳು ಸಾಕಷ್ಟು ಪರದೆಗಳನ್ನು ಆಕ್ರಮಿಸಿಕೊಂಡವು. ಹಾಗಿದ್ದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾದ ಹವಾ ತಗ್ಗಿಲ್ಲ. ಬೆಂಗಳೂರಿನಲ್ಲಿ ಈಗಲೂ ಕೂಡ ಈ ಸಿನಿಮಾ ಅನೇಕ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್​​ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮವಾಗಿ ಕಲೆಕ್ಷನ್ ಆಗುತ್ತಿದೆ.

The post ‘ಸು ಫ್ರಮ್ ಸೋ’ 100 ಕೋಟಿ ಕಲೆಕ್ಷನ್ appeared first on Good News 24x7.

]]>
‘ಸು ಫ್ರಮ್ ಸೋ‘ 20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದಿದೆ. https://www.goodnews24x7.com/su-from-so-breaks-katera-collection-record-in-20-days/ Thu, 14 Aug 2025 08:29:49 +0000 https://www.goodnews24x7.com/?p=6115 ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಈ ಚಿತ್ರದ ಕಲೆಕ್ಷನ್ ಸರಿ ಸುಮಾರು 90 ಕೋಟಿ ರೂಪಾಯಿ ಆಸುಪಾಸಿನಲ್ಲಿತ್ತು. ಈ ದಾಖಲೆಯನ್ನು ಕನ್ನಡದ ಮತ್ತೊಂದು ಚಿತ್ರ ‘ಸು ಫ್ರಮ್ ಸೋ’ ಮುರಿದು ಹಾಕಿದೆ.…

The post ‘ಸು ಫ್ರಮ್ ಸೋ‘ 20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದಿದೆ. appeared first on Good News 24x7.

]]>

ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಈ ಚಿತ್ರದ ಕಲೆಕ್ಷನ್ ಸರಿ ಸುಮಾರು 90 ಕೋಟಿ ರೂಪಾಯಿ ಆಸುಪಾಸಿನಲ್ಲಿತ್ತು. ಈ ದಾಖಲೆಯನ್ನು ಕನ್ನಡದ ಮತ್ತೊಂದು ಚಿತ್ರ ‘ಸು ಫ್ರಮ್ ಸೋ’ ಮುರಿದು ಹಾಕಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್​ sacnilk ಅಲ್ಲಿರೋ ಅಂಕಿ-ಅಂಶ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಸು ಫ್ರಮ್ ಸೋ’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ತಂಡದವರೇ ಭಾವಿಸಿರಲಿಲ್ಲ. 20ನೇ ದಿನ (ಆಗಸ್ಟ್ 13) ಸಿನಿಮಾ 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕನ್ನಡ ಒಂದರಲ್ಲೇ ಸಿನಿಮಾ 63 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಚಿತ್ರ 90 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಭಾರತದ ನೆಟ್ ಕಲೆಕ್ಷನ್ 70 ಕೋಟಿ ರೂಪಾಯಿ ಇದೆ. ಗ್ರಾಸ್ ಕಲೆಕ್ಷನ್ 80 ಕೋಟಿ ರೂಪಾಯಿ ಆಗಿದೆ. ಹೊರ ದೇಶಗಳಿಂದ 10 ಕೋಟಿ ರೂಪಾಯಿ ಹರಿದು ಬಂದಿದೆ.

ಮಲಯಾಳಂ ಭಾಷೆಯಲ್ಲಿ ‘ಸು ಫ್ರಮ್ ಸೋ’ ಸಿನಿಮಾ 4.75 ಕೋಟಿ ರೂಪಾಯಿ ಕಲೆ ಹಾಕಿದೆ. ತೆಲುಗಿನಿಂದ ಚಿತ್ರಕ್ಕೆ 1.05 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟಾರೆ ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಇದು ದರ್ಶನ್ ಅಭಿನಯದ ‘ಕಾಟೇರ’ ದಾಖಲೆಯನ್ನೂ ಉಡೀಸ್ ಮಾಡಿದೆ.

‘ಕಾಟೇರ’ ಸಿನಿಮಾ ಭಾರತದಲ್ಲಿ 68.1 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ‘ಸು ಫ್ರಮ್ ಸೋ’ ಭಾರತದ ನೆಟ್ ಕಲೆಕ್ಷನ್ 70 ಕೋಟಿ ರೂಪಾಯಿ ಇದೆ. ಈ ಮೂಲಕ ದರ್ಶನ್ ಮಾಡಿದ ದಾಖಲೆಯನ್ನು ರಾಜ್ ಬಿ. ಶೆಟ್ಟಿ ಅವರು ಮುರಿದು ಹಾಕಿದ್ದಾರೆ. ಅಂದಹಾಗೆ ಈ ಬಗ್ಗೆ ತಂಡದವರು ಯಾವುದೇ ಅಧಿಕೃತ ಲೆಕ್ಕ ಬಿಡುಗಡೆ ಮಾಡಿಲ್ಲ.

The post ‘ಸು ಫ್ರಮ್ ಸೋ‘ 20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದಿದೆ. appeared first on Good News 24x7.

]]>