Rajinikanth Archives - Good News 24x7 https://www.goodnews24x7.com/tag/rajinikanth/ Kannada Sun, 14 Sep 2025 09:15:35 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Rajinikanth Archives - Good News 24x7 https://www.goodnews24x7.com/tag/rajinikanth/ 32 32 ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ https://www.goodnews24x7.com/actor-aamir-khan-expressed-regret-over-the-movie-coolie/ Sun, 14 Sep 2025 09:14:09 +0000 https://www.goodnews24x7.com/?p=7527 ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್…

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>

ನಟ ಆಮಿರ್ ಖಾನ್ ಅವರು ತಮಿಳಿನ ‘ಕೂಲಿ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಮಾಡಿದ್ದಕ್ಕೆ ಅವರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಪತ್ರಿಕೆಯೊಂದರಲ್ಲಿ ವರದಿ ಆದ ಬಳಿಕ ಆಮಿರ್ ಖಾನ್ ತಂಡದ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದರು. ಉಪೇಂದ್ರ, ರಚಿತಾ ರಾಮ್, ಸೌಬಿನ್ ಶಾಹಿರ್, ಆಮಿರ್ ಖಾನ್ (Aamir Khan), ನಾಗಾರ್ಜುನ, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ಅಭಿನಯಿಸಿದರು. ಬಾಕ್ಸ್ ಆಫೀಸ್​​ನಲ್ಲಿ ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇತ್ತೀಚೆಗೆ ಒಂದು ಸುದ್ದಿ ಪ್ರಕಟ ಆಯಿತು. ಆಮಿರ್ ಖಾನ್ ಅವರು ‘ಕೂಲಿ’ (Coolie) ಸಿನಿಮಾದಲ್ಲಿ ನಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಯಿತು. ಆ ಬಗ್ಗೆ ಅವರ ತಂಡದವರಿಂದ ಪ್ರತಿಕ್ರಿಯೆ ಬಂದಿದೆ.

ಅಂದಹಾಗೆ, ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾದಲ್ಲಿ ಮಾಡಿದ್ದು ಅತಿಥಿ ಪಾತ್ರ. ಅದನ್ನು ಆಮಿರ್ ಖಾನ್ ಅವರೇ ಮಾಡಬೇಕು ಎಂಬುದೇನೂ ಇರಲಿಲ್ಲ. ರಜನಿಕಾಂತ್ ಅವರ ಮೇಲಿನ ಪ್ರೀತಿ, ಗೌರವದ ಕಾರಣಕ್ಕೆ ಅವರು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡರು. ಆದರೆ ಈಗ ‘ಯಾಕಾದ್ರೂ ರಜನಿ ಜೊತೆ ಕೂಲಿ ಸಿನಿಮಾ ಮಾಡಿದ್ನೋ’ ಎಂದು ಆಮಿರ್ ಖಾನ್ ಬೇಸರ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಟ್ವಿಸ್ಟ್ ಏನೆಂದರೆ ಆಮಿರ್ ಖಾನ್ ಅವರು ಯಾವ ಪತ್ರಿಕೆಗೂ ಆ ರೀತಿಯ ಹೇಳಿಕೆ ನೀಡಿಲ್ಲ! ಈ ಕುರಿತು ಅವರ ಟೀಮ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ‘ಆಮಿರ್ ಖಾನ್ ಅವರು ಇಂಥ ಯಾವುದೇ ಸಂದರ್ಶನ ನೀಡಿಲ್ಲ. ಕೂಲಿ ಸಿನಿಮಾ ಬಗ್ಗೆ ಅವರು ನೆಗೆಟಿವ್ ಆಗಿ ಮಾತನಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ರಜನಿಕಾಂತ್ ಬಗ್ಗೆ ಆಮಿರ್ ಖಾನ್ ಅವರಿಗೆ ಬಹಳ ಗೌರವ ಇದೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಇಡೀ ಕೂಲಿ ಸಿನಿಮಾ ತಂಡದ ಬಗ್ಗೆ ಅವರಿಗೆ ಆ ಗೌರವ ಇದೆ. ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಗ್ಗೆ ಈ ಗಳಿಕೆಯೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಆಮಿರ್ ಖಾನ್ ತಂಡದವರು ಪ್ರತಿಕ್ರಿಯಿಸಿದ್ದಾರೆ.

‘ಕೂಲಿ’ ಸಿನಿಮಾಗೆ ಅಂದಾಜು 400 ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿತ್ತು. ಅದಕ್ಕೆ ಹೋಲಿಸಿದರೆ 500 ಕೋಟಿ ರೂಪಾಯಿ ಕಲೆಕ್ಷನ್ ಏನೇನೂ ಅಲ್ಲ. ಅಲ್ಲದೇ ವಿಮರ್ಶೆ ದೃಷ್ಟಿಯಿಂದಲೂ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಆಮಿರ್ ಖಾನ್ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ.

The post ‘ಕೂಲಿ’ ಸಿನಿಮಾ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಟ ಆಮಿರ್ ಖಾನ್ appeared first on Good News 24x7.

]]>
‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. https://www.goodnews24x7.com/after-the-hit-of-coolie-a-scam-in-the-name-of-rajinikanth-warning-issued-by-the-thalaiva-team/ Sun, 24 Aug 2025 05:26:47 +0000 https://www.goodnews24x7.com/?p=6606 ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬ್ಲಾಕ್‌ಬಸ್ಟರ್ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಭಾರತವಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಹೆಸರು ಬಳಸಿಕೊಂಡು, ಕೆಲವರು ತಪ್ಪು ಮಾಹಿತಿಯಿಂದ ಹಣ ಗಳಿಸುವ ಯತ್ನ ಮಾಡುತ್ತಿದ್ದಾರೆ. ಮಲೇಷ್ಯಾದಲ್ಲಿ ನಕಲಿ…

The post ‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. appeared first on Good News 24x7.

]]>

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬ್ಲಾಕ್‌ಬಸ್ಟರ್ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಭಾರತವಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಹೆಸರು ಬಳಸಿಕೊಂಡು, ಕೆಲವರು ತಪ್ಪು ಮಾಹಿತಿಯಿಂದ ಹಣ ಗಳಿಸುವ ಯತ್ನ ಮಾಡುತ್ತಿದ್ದಾರೆ.

ಮಲೇಷ್ಯಾದಲ್ಲಿ ನಕಲಿ “Meet & Greet” ಆಫರ್

ಮಲೇಷ್ಯಾದ Malik Streams ಎಂಬ ಸಂಸ್ಥೆ, ‘ಕೂಲಿ’ ಸಿನಿಮಾ ವೀಕ್ಷಿಸಿ ಲಕ್ಕಿ ಡ್ರಾ ಗೆಲ್ಲಿದವರಿಗೆ ರಜನಿಕಾಂತ್ ಅವರನ್ನು ಭೇಟಿ ಮಾಡುವ ಅವಕಾಶವಿದೆ ಎಂಬ ನಕಲಿ ಆಫರ್ ನೀಡಿದೆ. ಈ ಆಫರ್ ನಿಜ ಎನ್ನುವ ಮುನ್ನ, ತಕ್ಷಣವೇ ತಲೈವಾ ತಂಡ ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣ ವಂಚನೆ ಮತ್ತು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನಡೆದಿರುವ ಕಾರ್ಯವೆಂದು ಘೋಷಿಸಿದೆ.

ರಜನಿಕಾಂತ್ ತಂಡದ ಸ್ಪಷ್ಟನೆ

ರಜನಿಕಾಂತ್ ಅವರ ವೈಯಕ್ತಿಕ ಪಿಆರ್‌ಒ ರಿಯಾಜ್ ಕೆ ಆಹಮದ್ ಟ್ವೀಟ್ ಮೂಲಕ ತಿಳಿಸಿದ್ದಾರೆ:

“ಮಲೇಷ್ಯಾದ Malik Streams ಪ್ರಸ್ತುತ ಪ್ರಚಾರ ಮಾಡುತ್ತಿರುವ ‘Meet & Greet Thalaivar’ ಸ್ಪರ್ಧೆಯು ನಕಲಿ ಮತ್ತು ಅನಧಿಕೃತವಾಗಿದೆ. ರಜನಿಕಾಂತ್ ಅವರಿಂದ ಯಾವುದೇ ಅನುಮತಿ ಪಡೆಯದೇ ಈ ಕಾರ್ಯಕ್ರಮ ಘೋಷಿಸಲಾಗಿದೆ. ಅಭಿಮಾನಿಗಳು ಇಂತಹ ವಂಚನೆಗಳಿಗೆ ಒಳಗಾಗಬಾರದು.”

ಅಭಿಮಾನಿಗಳು ಮತ್ತು ಸಾರ್ವಜನಿಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಇದನ್ನು ಹೆಚ್ಚಿನವರು ತಿಳಿದುಕೊಳ್ಳಲು ಶೇರ್ ಮಾಡುವಂತೆ ಮನವಿ ಮಾಡಲಾಗಿದೆ.

‘ಕೂಲಿ’ ಬಾಕ್ಸಾಫೀಸ್ ಸ್ಥಿತಿ

ಚಿತ್ರ ಬಿಡುಗಡೆಯ ಮೊದಲ ನಾಲ್ಕು ದಿನಗಳಲ್ಲಿ ‘ಕೂಲಿ’ ಚಿತ್ರವು ವಿಶ್ವದಾದ್ಯಂತ ₹404 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ನಂತರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಕಡಿಮೆಯಾಗಿದ್ದು, ಪ್ರತಿ ವೀಕೆಂಡ್‌ನಲ್ಲಿ ಮಾತ್ರ ಹೆಚ್ಚಳ ಕಂಡುಬರುತ್ತಿದೆ ಎನ್ನಲಾಗುತ್ತಿದೆ.

The post ‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. appeared first on Good News 24x7.

]]>
ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! https://www.goodnews24x7.com/rajinikanth-kamal-haasan-on-the-same-screen-after-4-decades/ Wed, 20 Aug 2025 10:11:10 +0000 https://www.goodnews24x7.com/?p=6401 ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ…

The post ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! appeared first on Good News 24x7.

]]>

ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರಿಗೆ ಈಗಾಗಲೇ 70 ವರ್ಷಗಳು ದಾಟಿದ್ದರೂ ಗ್ಯಾಂಗ್​ಸ್ಟರ್​ಗಳಾಗಿ ಸಿನಿಮಾದಲ್ಲಿ ಮಿಂಚಲಿದ್ದಾರಂತೆ. ಈ ಕುರಿತು ಸಿನಿಮಾ ಸ್ಕ್ರೀಪ್ಟ್​ ಅನ್ನು ಕೊರೊನಾಗಿಂತ ಮೊದಲೇ ಸಿದ್ಧವಾಗಿತ್ತು. ಆದರೆ ಇಷ್ಟು ದಿನ ಈ ಸ್ಕ್ರೀಪ್ಟ್​ ಅನ್ನು ಹಾಗೇ ಇಡಲಾಗಿತ್ತು. ಈಗ ಮತ್ತೆ ಇದು ಮುನ್ನೆಲೆಗೆ ಬಂದಿದ್ದು ಹೆಸರಿಡದ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ದಿಗ್ಗಜ ನಟರು ಅಭಿನಯಿಸಲಿದ್ದಾರೆ ಎನ್ನುವ ಸಿನಿಮಾ ಇನ್ನು ಮಾತುಕತೆಯಲ್ಲಿದೆ. ಇದರ ನಡುವೆ ಲೋಕೇಶ್ ಕನಕರಾಜ್ ಅವರು ಕಾರ್ತಿ ಜೊತೆ ಖೈದಿ-2 ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಮುಂಬರುವ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಹೀಗಾಗಿ ಅವರಿಗಾಗಿ ನಿರ್ದೇಶಕರು ಇನ್ನಷ್ಟು ಕಾಯಬೇಕಾಗಿದೆ ಎಂದು ಹೇಲಾಗುತ್ತಿದೆ.

ಈ ಹಿಂದೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರು. ಆದರೆ ಈ ದಿಗ್ಗಜ ನಟರು 1979ರಲ್ಲಿ ರಿಲೀಸ್ ಆದಂತಹ ಅಲಾವುದ್ದೀನುಮ್ ಅಲ್ಭೂತ ವಿಲಕ್ಕುಮ್ ಎನ್ನುವ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಸೇರಿ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ಮತ್ತೆ ಅಭಿನಯ ಮಾಡಿರಲಿಲ್ಲ. ಸದ್ಯ 46 ವರ್ಷಗಳ ಬಳಿಕ ರಜನಿ-ಕಮಲ್ ಸ್ಕ್ರೀನ್ ಶೇರ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ ” ದಿ ಡೆವಿಲ್ ” ನ , ಮೊದ

The post ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..! appeared first on Good News 24x7.

]]>
‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ https://www.goodnews24x7.com/dimple-queen-in-coolie-movie-rachita-shared-a-photo-with-rajini/ Sat, 16 Aug 2025 06:29:01 +0000 https://www.goodnews24x7.com/?p=6175 ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ…

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>

ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು.

ಅಷ್ಟೇ ಅಲ್ಲದೇ ಕೂಲಿ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಹೌದು, ಸರ್​ಪ್ರೈಸ್​ ಎಂಬಂತೆ ಕೂಲಿ ಸಿನಿಮಾದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ನಟಿ ರಚಿತಾ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊದ ಮೊದಲು ಪಾಪದ ಹುಡುಗಿಯಾಗಿ ಕಾಣಿಸಿಕೊಂಡ ರಚ್ಚು ತದನಂತರ ರೆಬೆಲ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲು ಬಾರಿಗೆ ರಚಿತಾ ರಾಮ್​ ಅವರ ನಟನೆಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ಕೊಡುತ್ತಿದ್ದಾರೆ.
ಸಿನಿಮಾ ರಿಲೀಸ್​ ಆಗಿರೋ ಖುಷಿಯಲ್ಲಿ ನಟಿ ರಚಿತಾ ರಾಮ್​ ಸೂಪರ್ ಸ್ಟಾರ್​ ಜೊತೆಗೀನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಜಿನಿ ಜೊತೆಗೆ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋ ಜೊತೆಗೆ ‘‘ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಇದನ್ನೂ ಹಂಚಿಕೊಳ್ಳಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್​ ಯೂ’’ ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಇದೇ ಫೋಟೋ ಜೊತೆಗೆ ರಚಿತಾ ರಾಮ್​ ಅಭಿನಯದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್​ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೂಲಿಯಲ್ಲಿ ಅದ್ಭುತ ಅಭಿನಯ, ನೀವು ಹಾಗೇ ಅಭಿನಯಿಸುತ್ತೀರಾ ಅಂತ ಎಂದಿಗೂ ನಿರೀಕ್ಷಿಸಿರಲಿಲ್ಲ ಮೇಡಂ, ಅಳುವುವವರನ್ನು ಯಾವತ್ತು ನಂಬಬಾರದು ಅಂತ ನಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ನೂ, 2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ ಈಗ ಕನ್ನಡದ ಬಹು ಬೇಡಿಕೆಯ ನಟಿ ಎನಿಸಿಕೊಂಡರು. 2022ರಲ್ಲಿ ಟಾಲಿವುಡ್‌ಗೆ ಪ್ರವೇಶಿಸಿದ್ದ ಅವರು ಈ ವರ್ಷ ಕೂಲಿ ಸಿನಿಮಾ ಮೂಲಕ ಕಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ.

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>