RakshaBandhan Archives - Good News 24x7 https://www.goodnews24x7.com/tag/rakshabandhan/ Kannada Wed, 13 Aug 2025 12:06:45 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RakshaBandhan Archives - Good News 24x7 https://www.goodnews24x7.com/tag/rakshabandhan/ 32 32 ಮಾವುತರಿಗೂ ಕಾವಾಡಿಗರಿಗೂ ರಕ್ಷಾ ಬಂಧನದ ಸೊಬಗು. https://www.goodnews24x7.com/the-beauty-of-raksha-bandhan-for-elephants-and-horsemen/ Wed, 13 Aug 2025 12:06:45 +0000 https://www.goodnews24x7.com/?p=6062 ಮೈಸೂರು : ಮೈಸೂರು ದಸರಾ ಆನೆಗಳೊಂದಿಗೆ ಆಗ ಮಿಸಿರುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಸಿಹಿ ಹಂಚಿ ಶ್ರೀ ದುರ್ಗಾ ಫೌಂಡೇಶನ್ನ ಮಹಿಳೆಯರು ರಕ್ಷಾ ಬಂಧನ ಆಚರಿಸಿದರು. ಸವಾ ಆನೆಗಳೊಂದಿಗೆ ವಾಸಿಸುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟುವ ಸೌಭಾಗ್ಯ…

The post ಮಾವುತರಿಗೂ ಕಾವಾಡಿಗರಿಗೂ ರಕ್ಷಾ ಬಂಧನದ ಸೊಬಗು. appeared first on Good News 24x7.

]]>

ಮೈಸೂರು : ಮೈಸೂರು ದಸರಾ ಆನೆಗಳೊಂದಿಗೆ ಆಗ ಮಿಸಿರುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಸಿಹಿ ಹಂಚಿ ಶ್ರೀ ದುರ್ಗಾ ಫೌಂಡೇಶನ್ನ ಮಹಿಳೆಯರು ರಕ್ಷಾ ಬಂಧನ ಆಚರಿಸಿದರು.

ಸವಾ ಆನೆಗಳೊಂದಿಗೆ ವಾಸಿಸುವ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟುವ ಸೌಭಾಗ್ಯ ನಮ್ಮದಾಗಿರು ವುದೇ ಸಂತಸ ತಂದಿದೆ. ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹಳ ಮಹತ್ವವಿದ್ದು, ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಈ ವರ್ಷದ ದಸರಾ ಉತ್ಸವವನ್ನು ಯಶಸ್ವಿ ಗೊಳಿಸಲಿ ಎಂದು ಪಾರ್ಥಿಸಿದ್ದೇವೆ

ಎಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ತಿಳಿಸಿದರು. ಮಹಿಳಾ ಉದ್ಯಮಿ ಖುಷಿ ಏನು, ಕಾವ್ಯ, ಮುಖಂಡರಾದ ಜಿ.ರಾಘವೇಂದ್ರ, ಎಸ್.ಎನ್.ರಾಜೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

The post ಮಾವುತರಿಗೂ ಕಾವಾಡಿಗರಿಗೂ ರಕ್ಷಾ ಬಂಧನದ ಸೊಬಗು. appeared first on Good News 24x7.

]]>
ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು, ಸಿರಾಜ್​ಗೆ ರಾಖಿ ಕಟ್ಟಿ್ದ್ದಾರೆ.. ಇದಕ್ಕೆ ಬಲವಾದ ಕಾರಣವಿದೆ. https://www.goodnews24x7.com/khyata-gayaki-asa-bhosle-mommaga%e1%b8%b7u-sirajge-rakhi-ka%e1%b9%ad%e1%b9%adiddare-idakke-balavada-kara%e1%b9%87avide-rak%e1%b9%a3a-bandhana-sahodara-sahodariyara-sambandha-beseyuvantaha-pavit/ Sun, 10 Aug 2025 08:51:55 +0000 https://www.goodnews24x7.com/?p=5689 ರಕ್ಷಾ ಬಂಧನ ಸಹೋದರ- ಸಹೋದರಿಯರ ಸಂಬಂಧ ಬೆಸೆಯುವಂತಹ ಪವಿತ್ರವಾದ ಹಬ್ಬವಾಗಿದೆ. ಸಹೋದರಿಯೂ ತನ್ನ ಸಹೋದರನಿಗೆ ಆಯಸ್ಸು, ಆರೋಗ್ಯ, ಸಮೃದ್ಧಿ ಎಲ್ಲವೂ ಸಿಗಲಿ ಎಂದು ಹಾರೈಸುವುದು ಆಗಿದೆ. ರಕ್ಷಾ ಬಂಧನದ ಹಿನ್ನೆಲೆ ಕ್ರಿಕೆಟರ್ಸ್​, ಸೆಲೆಬ್ರಿಟಿಗಳು ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಖುಷಿ ಪಟ್ಟಿದ್ದಾರೆ.…

The post ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು, ಸಿರಾಜ್​ಗೆ ರಾಖಿ ಕಟ್ಟಿ್ದ್ದಾರೆ.. ಇದಕ್ಕೆ ಬಲವಾದ ಕಾರಣವಿದೆ. appeared first on Good News 24x7.

]]>

ರಕ್ಷಾ ಬಂಧನ ಸಹೋದರ- ಸಹೋದರಿಯರ ಸಂಬಂಧ ಬೆಸೆಯುವಂತಹ ಪವಿತ್ರವಾದ ಹಬ್ಬವಾಗಿದೆ. ಸಹೋದರಿಯೂ ತನ್ನ ಸಹೋದರನಿಗೆ ಆಯಸ್ಸು, ಆರೋಗ್ಯ, ಸಮೃದ್ಧಿ ಎಲ್ಲವೂ ಸಿಗಲಿ ಎಂದು ಹಾರೈಸುವುದು ಆಗಿದೆ. ರಕ್ಷಾ ಬಂಧನದ ಹಿನ್ನೆಲೆ ಕ್ರಿಕೆಟರ್ಸ್​, ಸೆಲೆಬ್ರಿಟಿಗಳು ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಖುಷಿ ಪಟ್ಟಿದ್ದಾರೆ. ಅದರಂತೆ ಸ್ಟಾರ್ ಕ್ರಿಕೆಟರ್​ ಮೊಹಮ್ಮದ್ ಸಿರಾಜ್ ಕೂಡ ರಾಖಿ ಕಟ್ಟಿಕೊಳ್ಳುವ ಮೂಲಕ ಆ ವದಂತಿಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್​, ಪೇಸ್ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಅವರಿಗೆ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರು ರಾಖಿ ಕಟ್ಟಿ, ಸಿಹಿ ತಿನಿಸಿದ್ದಾರೆ. ಜನೈ ಭೋಸ್ಲೆ ಅವರು ಸಿರಾಜ್ ಅವರ ಕೈಗೆ ರಾಖಿ ಕಟ್ಟಿ, ಸಿಹಿ ತಿನಿಸಿರುವ ವಿಡಿಯೋ, ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಜನೈ ಭೋಸ್ಲೆ ವಿಶೇಷವಾದ ಟ್ಯಾಗ್​ಲೈನ್ ಬರೆದಿದ್ದಾರೆ.

ಉತ್ತಮವಾದದ್ದನ್ನ ಕೇಳಲು ಆಗಲಿಲ್ಲ ಎಂದು ಜನೈ ಭೋಸ್ಲೆ ವಿಡಿಯೋಗೆ ಟ್ಯಾಗ್​ಲೈನ್ ಬರೆದಿದ್ದಾರೆ. ಅವರು ಈ ರೀತಿಯಾದ ಟ್ಯಾಗ್​ಲೈನ್ ಬರೆಯಲು ಬಲವಾದ ಕಾರಣವಿದೆ. ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನೈ ಭೋಸ್ಲೆ ಹಾಗೂ ಸಿರಾಜ್ ಬಗ್ಗೆ ಬೇರೆಯೇ ಅರ್ಥದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಇಬ್ಬರು ರಕ್ಷಾ ಬಂಧನ ಹಬ್ಬ ಆಚರಣೆ ಮಾಡುವ ಮೂಲಕ ಅದಕ್ಕೆ ತೆರೆ ಎಳೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾವುದು ಸುಳ್ಳು, ಯಾವುದು ನಿಜ ಎನ್ನುವುದನ್ನು ನಂಬೋಕೆ ಆಗಲ್ಲ. ಏಕೆಂದರೆ ಆಶಾ ಬೋಸ್ಲೆ ಅವರ ಮೊಮ್ಮಗಳಾದ ಜನೈ ಭೋಸ್ಲೆ ಹಾಗೂ ಸಿರಾಜ್ ನಡುವೆ ಲವ್ ಇದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇಬ್ಬರು ಯಾವುದೋ ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ವೈರಲ್ ಮಾಡಲಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಅವರು ಅಂತಿಮವಾಗಿ ಸ್ಪಷ್ಟನೆಯನ್ನು ರಕ್ಷಾ ಬಂಧನದ ಮೂಲಕ ನೀಡಿದ್ದಾರೆ.

The post ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು, ಸಿರಾಜ್​ಗೆ ರಾಖಿ ಕಟ್ಟಿ್ದ್ದಾರೆ.. ಇದಕ್ಕೆ ಬಲವಾದ ಕಾರಣವಿದೆ. appeared first on Good News 24x7.

]]>
ಮಕ್ಕಳೊಂದಿಗೆ ಮೋದಿ ರಕ್ಷಾಬಂಧನ ಸಂಭ್ರಮ : ಪ್ರಧಾನಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು, ಸೋದರಿಯರು . https://www.goodnews24x7.com/modi-celebrates-raksha-bandhan-with-children-school-children-sisters-tie-rakhi-to-pm/ Sat, 09 Aug 2025 10:47:59 +0000 https://www.goodnews24x7.com/?p=5644 ಇವತ್ತು ರಕ್ಷಾಬಂಧನ ಹಬ್ಬದ ಸಂಭ್ರಮ. ಎಲ್ಲ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುತ್ತಿದ್ದಾರೆ. ಪ್ರಧಾನಿ ಮೋದಿಗೆ ದೆಹಲಿಯಲ್ಲಿ ಶಾಲಾ ಮಕ್ಕಳು ರಾಖಿ ಕಟ್ಟಿದ್ದಾರೆ. ಜೊತೆಗೆ ಪ್ರಜಾಪಿತ ಬ್ರಹ್ಮ ಕುಮಾರಿ ಸಂಘಟನೆಯ ಸೋದರಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದ್ದರು ದೇಶದೆಲ್ಲೆಡೆ ಇಂದು ರಕ್ಷಾ…

The post ಮಕ್ಕಳೊಂದಿಗೆ ಮೋದಿ ರಕ್ಷಾಬಂಧನ ಸಂಭ್ರಮ : ಪ್ರಧಾನಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು, ಸೋದರಿಯರು . appeared first on Good News 24x7.

]]>

ಇವತ್ತು ರಕ್ಷಾಬಂಧನ ಹಬ್ಬದ ಸಂಭ್ರಮ. ಎಲ್ಲ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುತ್ತಿದ್ದಾರೆ. ಪ್ರಧಾನಿ ಮೋದಿಗೆ ದೆಹಲಿಯಲ್ಲಿ ಶಾಲಾ ಮಕ್ಕಳು ರಾಖಿ ಕಟ್ಟಿದ್ದಾರೆ. ಜೊತೆಗೆ ಪ್ರಜಾಪಿತ ಬ್ರಹ್ಮ ಕುಮಾರಿ ಸಂಘಟನೆಯ ಸೋದರಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದ್ದರು

ದೇಶದೆಲ್ಲೆಡೆ ಇಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಿದ್ದಾರೆ. ಸೋದರಿಯರು ಸಂಕಷ್ಟದಲ್ಲಿದ್ದಾಗ, ಸೋದರರು ಬಂದು ರಕ್ಷಿಸುತ್ತಾರೆ. ಈ ಪ್ರೀತಿಯ, ಸೋದರತ್ವ, ಭಾಂಧವ್ಯದ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲೆಲ್ಲೂ ಇಂದು ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಧಾನಿ ನಿವಾಸದಿಂದ ಹಿಡಿದು ಹಳ್ಳಿಯ ಬಡವರ ಮನೆಯವರೆಗೂ ಎಲ್ಲೆಲ್ಲೂ ರಕ್ಷಾ ಬಂಧನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರಧಾನಿ ನಿವಾಸಕ್ಕೆ ದೆಹಲಿಯ ಶಾಲಾ ಮಕ್ಕಳು ಭೇಟಿ ನೀಡಿ ಪ್ರಧಾನಿ ಮೋದಿಗೆ ಸೋದರತ್ವದ ಸಂಕೇತವಾದ ರಾಖಿಯನ್ನು ಕಟ್ಟಿದ್ದರು. ಪ್ರಧಾನಿ ಮೋದಿ ಖುಷಿಯಿಂದ ಶಾಲಾ ಮಕ್ಕಳ ಜೊತೆ ಬೆರೆತು, ಮಾತನಾಡಿ ರಾಖಿ ಕಟ್ಟಿಸಿಕೊಂಡರು. ಮಕ್ಕಳಿಗೆ ಚಾಕಲೇಟ್ ಸೇರಿದಂತೆ ಗಿಫ್ಟ್ ನೀಡಿದ್ದರು. ಪ್ರಧಾನಿ ನಿವಾಸದ ರಕ್ಷಾ ಬಂಧನ ಹಬ್ಬದ ಪೋಟೋಗಳ ಝಲಕ್ ಇಲ್ಲಿದೆ ನೋಡಿ.

 

 

 

ಓರ್ವ ಬಾಲಕಿಯ ಮೋದಿಗೆ ರಾಖಿ ಕಟ್ಟಿದ ಬಳಿಕ ಮೋದಿ ಜೊತೆಗೆ ಆಟವಾಡಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸೋದರಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಮೋದಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದರು. ರಕ್ಷಾ ಬಂಧನದ ವೇಳೆ ಪ್ರತಿ ವರ್ಷವೂ ಮೋದಿ ಸೋದರಿಯರಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಇಂದು ಆ ಸಂಪ್ರದಾಯವನ್ನು ಮುಂದುವರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ತುಂಬ ಇಂದು ರಾಖಿಗಳು ತುಂಬಿದ್ದವು. ಬಣ್ಣ ಬಣ್ಣದ ರಾಖಿಗಳನ್ನು ಶಾಲಾ ಮಕ್ಕಳು, ಪ್ರಜಾಪಿತ ಬ್ರಹ್ಮಕುಮಾರಿ ಸೋದರಿಯರು ಕಟ್ಟಿದ್ದರು.

The post ಮಕ್ಕಳೊಂದಿಗೆ ಮೋದಿ ರಕ್ಷಾಬಂಧನ ಸಂಭ್ರಮ : ಪ್ರಧಾನಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು, ಸೋದರಿಯರು . appeared first on Good News 24x7.

]]>
ಪ್ರಧಾನಿ ಮೋದಿಗೆ ಪಾಕಿಸ್ತಾನದ ಸಹೋದರಿ . ಅಣ್ಣ-ತಂಗಿ ಸಂಬಂಧಕ್ಕೀಗ 30 ವರ್ಷ! https://www.goodnews24x7.com/prime-minister-modi-has-a-sister-from-pakistan-brother-sister-relationship-celebrates-30-years/ Sat, 09 Aug 2025 07:06:52 +0000 https://www.goodnews24x7.com/?p=5615 ರಕ್ಷಾ ಬಂಧನ ಸಮೀಪಿಸ್ತಿದ್ದಂತೆಯೇ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸದ ಕಥೆಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ. ನಿಮಗೆ ಗೊತ್ತಾ ಪ್ರಧಾನಿ ಮೋದಿಗೆ ಪಾಕಿಸ್ತಾನದ ಒಬ್ಬ ಸಹೋದರಿ ಇದ್ದಾರೆ. ಅವರು ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿದ್ದಾರೆ. ಪವಿತ್ರ ಹಬ್ಬ ರಕ್ಷಾ ಬಂಧನ ಸಮೀಪಿಸ್ತಿದ್ದಂತೆಯೇ…

The post ಪ್ರಧಾನಿ ಮೋದಿಗೆ ಪಾಕಿಸ್ತಾನದ ಸಹೋದರಿ . ಅಣ್ಣ-ತಂಗಿ ಸಂಬಂಧಕ್ಕೀಗ 30 ವರ್ಷ! appeared first on Good News 24x7.

]]>

ರಕ್ಷಾ ಬಂಧನ ಸಮೀಪಿಸ್ತಿದ್ದಂತೆಯೇ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸದ ಕಥೆಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ. ನಿಮಗೆ ಗೊತ್ತಾ ಪ್ರಧಾನಿ ಮೋದಿಗೆ ಪಾಕಿಸ್ತಾನದ ಒಬ್ಬ ಸಹೋದರಿ ಇದ್ದಾರೆ. ಅವರು ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿದ್ದಾರೆ.

ಪವಿತ್ರ ಹಬ್ಬ ರಕ್ಷಾ ಬಂಧನ ಸಮೀಪಿಸ್ತಿದ್ದಂತೆಯೇ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸದ ಕಥೆಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ. ಅಂತಹ ಒಂದು ಕಥೆ ಇದೆ, ಅದು ಗಡಿಗಳನ್ನು ದಾಟಿ ಮಾನವೀಯತೆ ಮತ್ತು ಸಹೋದರತ್ವದ ಉದಾಹರಣೆಯಾಗಿ ನಿಂತಿದೆ! ಹೌದು, ನಿಮಗೆ ಗೊತ್ತಾ ಪ್ರಧಾನಿ ಮೋದಿಗೆ ಪಾಕಿಸ್ತಾನದ ಒಬ್ಬ ಸಹೋದರಿ ಇದ್ದಾರೆ. ಅವರು ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿದ್ದಾರೆ.

ಅಂದ್ಹಾಗೆ ಅವರ ಹೆಸರು, ಕಮರ್ ಮೊಹ್ಸಿನ್ ಶೇಖ್ ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿರುವ ಅವರು ಈ ಬಾರಿಯೂ ಮೋದಿಗೆ ಸಿಹಿ ನೀಡಿ, ರಾಖಿ ಕಟ್ಟಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ತಾವೇ ಎರಡು ರಾಖಿಗಳನ್ನ ಸಿದ್ಧಮಾಡಿಕೊಂಡಿದ್ದು, ಪ್ರಧಾನಿ ಕಚೇರಿಯ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷ ಅವರು ಓಂ ಮತ್ತು ಗಣೇಶನ ವಿನ್ಯಾಸಗಳನ್ನು ಹೊಂದಿರುವ ಎರಡು ರಾಖಿಗಳನ್ನು ತಯಾರಿಸಿದ್ದಾರೆ.

ಯಾರು ಈ ಕಮರ್ ಮೊಹ್ಸಿನ್ ಶೇಖ್..?
ಕಮರ್ ಮೊಹ್ಸಿನ್ ಶೇಖ್ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. 1981ರಲ್ಲಿ ಅಹಮದಾಬಾದ್‌ನ ಪ್ರಸಿದ್ಧ ವರ್ಣಚಿತ್ರಕಾರ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದ ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಪ್ರಸ್ತುತ ಅವರು ತಮ್ಮ ಪತಿಯೊಂದಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಕಮರ್ ಮತ್ತು ಮೋದಿ ನಡುವಿನ ವಿಶೇಷ ಸಂಬಂಧವು ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಾಮಾನ್ಯ ಕಾರ್ಯಕರ್ತನಾಗಿದ್ದಾಗ ಪ್ರಾರಂಭವಾಗಿದೆ.

ಅಣ್ಣ-ತಂಗಿ ಸಂಬಂಧ ಹೇಗೆ ಆರಂಭವಾಯಿತು?

1990 ರಲ್ಲಿ ಅಂದಿನ ಗುಜರಾತ್ ರಾಜ್ಯಪಾಲ ಡಾ.ಸ್ವರೂಪ್ ಸಿಂಗ್ ಮೂಲಕ ಮೋದಿಯನ್ನು ಭೇಟಿಯಾದೆ ಎಂದು ಕಮರ್ ಹೇಳುತ್ತಾರೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಕಮರ್ ತನ್ನ ಪತಿಯ ಚಿತ್ರಕಲಾ ಪ್ರದರ್ಶನಕ್ಕಾಗಿ ದೆಹಲಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಡಾ. ಸ್ವರೂಪ್ ಸಿಂಗ್ ನರೇಂದ್ರ ಮೋದಿಗೆ ಕಮರ್ ಅವರನ್ನು ತಮ್ಮ ಮಗಳೆಂದು ಪರಿಗಣಿಸುವುದಾಗಿ ಹೇಳಿದರು. ಅದಕ್ಕೆ ಮೋದಿ, ಹಾಗಿದ್ದರೆ ಅವರು ನನ್ನ ಸಹೋದರಿ ಆಗುತ್ತಾಳೆ ಎಂದು ಉತ್ತರಿಸಿದ್ದರಂತೆ. ಅಲ್ಲಿಂದ ಈ ವಿಶಿಷ್ಟ ಸಂಬಂಧಕ್ಕೆ ಅಡಿಪಾಯ ಬಿದ್ದಿದೆ.

The post ಪ್ರಧಾನಿ ಮೋದಿಗೆ ಪಾಕಿಸ್ತಾನದ ಸಹೋದರಿ . ಅಣ್ಣ-ತಂಗಿ ಸಂಬಂಧಕ್ಕೀಗ 30 ವರ್ಷ! appeared first on Good News 24x7.

]]>