Ratna Archives - Good News 24x7 https://www.goodnews24x7.com/tag/ratna/ Kannada Sun, 31 Aug 2025 05:50:10 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Ratna Archives - Good News 24x7 https://www.goodnews24x7.com/tag/ratna/ 32 32 ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. https://www.goodnews24x7.com/students-went-down-to-the-field-and-engaged-in-paddy-planting-knowledge-of-agriculture-through-practical-experience/ Sun, 31 Aug 2025 05:50:10 +0000 https://www.goodnews24x7.com/?p=7106 ನಾಪೋಕ್ಲು: ಹಳೆ ತಾಲೂಕು ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಭತ್ತದ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ, 9ನೇ ತರಗತಿಯ ವಿದ್ಯಾರ್ಥಿಗಳು ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ…

The post ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. appeared first on Good News 24x7.

]]>

ನಾಪೋಕ್ಲು: ಹಳೆ ತಾಲೂಕು ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಭತ್ತದ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ, 9ನೇ ತರಗತಿಯ ವಿದ್ಯಾರ್ಥಿಗಳು ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ ಚರ್ಮಣ ಅವರ ಹೊಲದಲ್ಲಿ ಕೆಸರು ಗದ್ದೆಗೆ ಇಳಿದು ನಾಟಿ ನಡೆಸಿದರು. ತಮ್ಮ ಕೈಯಾರೆ ಭತ್ತದ ಅಗೆ ನೆಡುವ ಮೂಲಕ ಕೃಷಿ ಬದುಕಿನ ಮಹತ್ವ, ಶ್ರಮದ ಮೌಲ್ಯ ಮತ್ತು ಅನ್ನದಾತರ ಪರिश್ರಮವನ್ನು ನೇರವಾಗಿ ಅನುಭವಿಸಿದರು.

ಶಾಲೆಯ ಕಾರ್ಯದರ್ಶಿ ರತ್ನಾ ಚರ್ಮಣ ಅವರು ಮಕ್ಕಳೊಂದಿಗೆ ನೇರವಾಗಿ ಭಾಗವಹಿಸಿ, ಭತ್ತದ ಸಸಿ ಎಡೆಯುವುದು, ನಾಟಿ ಮಾಡುವುದು, ಕಳೆ ಕೀಳುವುದು ಹಾಗೂ ಬೆಳೆ ಬೆಳೆಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ನೀಡಿದರು. ಕೃಷಿಯ ಮಹತ್ವವನ್ನು ವಿವರಿಸುತ್ತಾ, “ಭೂಮಿಯನ್ನು ಬಂಜರಾಗಿ ಬಿಡದೆ ಉಪಯೋಗಿಸಬೇಕು, ಅದು ನಮ್ಮ ಭವಿಷ್ಯದ ಪಾಲಿಗೆ ಅತಿಮಹತ್ವದ ದಾರಿ” ಎಂದು ವಿದ್ಯಾರ್ಥಿಗಳಿಗೆ ಮನಮಿಡಿಯುವಂತೆ ವಿವರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶೈಲಾ ನರೇಶ್ ಮತ್ತು ಶೃತಿ ಅವರು ಭತ್ತದ ನಾಟಿಯ ತಂತ್ರ, ವಿಧಾನಗಳು ಹಾಗೂ ಕೃಷಿಯ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಪಾಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಕೃಷಿಯ ಹತ್ತಿರ ತರಲು ಸಹಾಯ ಮಾಡುತ್ತಿದ್ದು, ಪರಿಸರ ಸ್ನೇಹಿ ಶಿಕ್ಷಣದತ್ತ ಒಂದು ಹೆಜ್ಜೆಯೆಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

The post ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. appeared first on Good News 24x7.

]]>