Ravichandran Archives - Good News 24x7 https://www.goodnews24x7.com/tag/ravichandran/ Kannada Sun, 31 May 2026 07:42:37 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Ravichandran Archives - Good News 24x7 https://www.goodnews24x7.com/tag/ravichandran/ 32 32 3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? https://www.goodnews24x7.com/why-did-actress-bindiya-apologize-after-3-decades-2/ Sun, 31 May 2026 07:42:37 +0000 https://www.goodnews24x7.com/?p=9585 ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

The post 3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? appeared first on Good News 24x7.

]]>

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ಭಾವುಕರಾಗಿದ್ದಾರೆ. ಅಲ್ಲದೆ ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗೆ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಂದಿಯಾ, ತಪ್ಪು ತಿಳುವಳಿಕೆಯಿಂದ ಈ ರೀತಿ ಆಯಿತು ಎಂದು ಅವರು ಹೇಳಿದ್ದಾರೆ. ‘ಜಾನ್ ತೇರೆ ನಾಮ್’ ಹೆಸರಿನ ಹಿಂದಿ ಸಿನಿಮಾ ಯಶಸ್ಸಿನಲ್ಲಿ ಬಿಂದಿಯಾ ತೇಲುತ್ತಿದ್ದರು. ಇದೇ ಸಮಯದಲ್ಲಿ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದ ರವಿಚಂದ್ರನ್ ಮತ್ತು ಅವರ ತಂಡ ಮುಂಬೈಗೆ ತೆರಳಿತ್ತು. ಆಗ ಬಿಂದಿಯಾ ಅವರನ್ನು ಭೇಟಿ ಮಾಡಿತ್ತು. ಭಾಷೆಯ ಸಮಸ್ಯೆ ಇದ್ದರೂ, ಉದ್ಯಮದ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ಬಿಂದಿಯಾ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಸಿನಿಮಾ ತೆರೆಕಂಡು ರವಿಚಂದ್ರನ್-ಬಿಂದಿಯಾ ಜೋಡಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡರು.

ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಮಾಧ್ಯಮಗಳಲ್ಲಿ ರವಿಚಂದ್ರನ್ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದವು. ಮ್ಯಾಗಜಿನ್ ಒಂದರಲ್ಲಿ ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪವನ್ನು ನಟಿ ಮಾಡಿದ್ದರು. ‘ನಾನು ಹೇಳಿದ್ದೇ ಒಂದು, ಆದರೆ ಅಂದು ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದ್ದೇ ಇನ್ನೊಂದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿತ್ತು’ ಎಂದು ಬಿಂದಿಯಾ ಹೇಳಿದ್ದಾರೆ. ಈ ವಿವಾದ ದೊಡ್ಡದಾಗುತ್ತಿದ್ದಂತೆ ರವಿಚಂದ್ರನ್ ಅವರು ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು.

‘ಅದು ನನ್ನ ಜೀವನದ ಅತ್ಯಂತ ಕಠಿಣ ಸಮಯ. ವಿಷಯ ಕೋರ್ಟ್‌ ಮೆಟ್ಟಿಲೇರುವಷ್ಟು ದೊಡ್ಡದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಆಗ ನನಗೆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವಷ್ಟು ವಯಸ್ಸು ಅಥವಾ ಪ್ರಬುದ್ಧತೆ ಇರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಕೋರ್ಟ್‌ನಲ್ಲೇ ಬಿಂದಿಯಾ ಕ್ಷಮೆ ಕೇಳಿದ ನಂತರ ರವಿಚಂದ್ರನ್ ಪ್ರಕರಣವನ್ನು ಹಿಂಪಡೆದರು.
ಸಂದರ್ಶನದಲ್ಲಿ ಮಾತನಾಡುತ್ತಾ ಭಾವುಕರಾದ ಬಿಂದಿಯಾ, ‘ರವಿ ಸರ್ ಯಾವುದೇ ತಪ್ಪು ಮಾಡಿರಲಿಲ್ಲ. ನನ್ನಿಂದಾಗಿ ಅಷ್ಟು ದೊಡ್ಡ ಸ್ಟಾರ್ ಕೋರ್ಟ್‌ಗೆ ಬಂದು ನಿಲ್ಲುವಂತಾಗಿದ್ದು ನನಗೆ ಇಂದಿಗೂ ಕಾಡುವ ನೋವು’ ಎಂದು ಕಣ್ಣೀರಿಡುತ್ತಾ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

ಅಲ್ಲದೆ, ರವಿಚಂದ್ರನ್ ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಅವರು, ‘ಮುಂದೆಂದಾದರೂ ರವಿ ಸರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾನು ಯಾವುದೇ ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧಳಿದ್ದೇನೆ’ ಎಂದು ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಿದ್ದಾರೆ.

The post 3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? appeared first on Good News 24x7.

]]>
ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! https://www.goodnews24x7.com/vikram-ravichandran-gives-an-update-on-the-film-mudhol/ Mon, 18 Aug 2025 08:15:38 +0000 https://www.goodnews24x7.com/?p=6351 ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ…

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.

ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ವಿಜಯ್ ಟಾಟಾ ಅವರ *ಅಮೃತ ಸಿನಿ ಕ್ರಾಫ್ಟ್* ಕಂಪನಿಯ ಮೂಲಕ. ಈ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಹಾಗೂ ಇತರ ಚಿತ್ರಗಳ ಜೊತೆಗೆ ಸಹಕಾರಿಯೂ ಮುಂದಾಗುತ್ತಿದೆ ಎಂಬುದು ಒಂದು ದೊಡ್ಡ ಬೆಳವಣಿಗೆ.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಘೋಷಣೆ : ಈ ವಿಷಯ ತಿಳಿಸಲು ವಿಶೇಷವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್, ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವಿಕ್ರಂ,“ನನ್ನ ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ನಾನು ಆಚರಿಸೋಲ್ಲ. ಆದರೆ ಈ ಬಾರಿ ವಿಜಯ್ ಸರ್ ವಿಶಿಷ್ಟವಾದ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ನಾನು ರವಿಚಂದ್ರನ್ ಸರ್ ಮಗ ಎಂಬುದು ಎಲ್ಲರಿಗೂ ಗೊತ್ತು. ನನ್ನ ಎರಡನೇ ಸಿನಿಮಾದಾಗಿನಿಂದಲೇ ನಿರ್ಮಾಪಕಿ ರಕ್ಷಾ ಮೇಡಂ ಬೆಂಬಲ ನೀಡುತ್ತಿದ್ದಾರೆ.”

“ನನ್ನ ಡ್ರೀಮ್ ಪ್ರಾಜೆಕ್ಟ್‌ಗೆ ಸಪೋರ್ಟ್ ಬೇಕಿತ್ತು. ಆ ಸಮಯದಲ್ಲಿ ಟ್ಯಾಲೆಂಟ್‌ಡ್ ಡೈರೆಕ್ಟರ್ ಕಾರ್ತಿಕ್ ರಾಜು ಸಿಕ್ಕರು. ನಾನು, ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಚರ್ಚೆ ನಡೆಸಿದಾಗ ‘ಮುಧೋಳ್’ ಮೂಡಿಬಂತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.”

ವಿಜಯ್ ಟಾಟಾ ಜೊತೆ ಕೊಲಾಬ್ರೇಶನ್ ಹೇಗೆ ಶುರುವಾಯ್ತು?
ವಿಕ್ರಂ ಅವರಲ್ಲಿ ಉತ್ತಮ ಗೆಳೆಯನಾಗಿರುವ ದಿಲ್ ಸೆ ದಿಲೀಪ್ ಅವರು ಡೈರೆಕ್ಟರ್ ಋಷಿ ಅವರ ಕಥೆಯನ್ನು ಪರಿಚಯಿಸಿದರು. ಆ ಕಥೆ ಇಷ್ಟವಾದ ವಿಕ್ರಂ, ಚಿತ್ರ ನಿರ್ಮಾಪಕರಾದ ವಿಜಯ್ ಟಾಟಾ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು.

“ಒಮ್ಮೆ ಭೇಟಿಯಾದ ನಂತರ, ‘ಮುಧೋಳ್’ ಚಿತ್ರವನ್ನೂ ವಿಜಯ್ ಸರ್‌ಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಹಾಗೂ ವಿಜಯ್ ಸರ್ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ‘ಅಮೃತ ಸಿನಿ ಕ್ರಾಫ್ಟ್’ ಈ ಚಿತ್ರದ ಸಹ ನಿರ್ಮಾಪಕರಾಗಿ ಸೇರಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಕೈಜೋಡಿಸಿದ್ದಾರೆ.”

ಹೊಸ ಶಕ್ತಿಯ ಜೊತೆ ಮುಂದೆ ಸಾಗುತ್ತಿರುವ ‘ಮುಧೋಳ್’ ಟೀಮ್ : ಈ ಕೊಲಾಬ್ರೇಶನ್ ಮೂಲಕ ‘ಮುಧೋಳ್’ ಚಿತ್ರ ತಂಡ ಈಗ ಲಿಷ್ಠವಾಗಿದ್ದು, ಸಿನಿಮಾಗೆ ತಕ್ಕ ಮಟ್ಟದ ಪ್ಲಾಟ್‌ಫಾರ್ಮ್ ಸಿಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಹೊಸ ಪ್ರತಿಭೆಗಳಿದ್ದು, ಈ ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಬೇಕು ಎಂಬ ಆಶಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ.

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>