RC16 Archives - Good News 24x7 https://www.goodnews24x7.com/tag/rc16/ Kannada Tue, 04 Mar 2025 10:34:22 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RC16 Archives - Good News 24x7 https://www.goodnews24x7.com/tag/rc16/ 32 32 ವಿಗ್ ಹಾಕಿಕೊಂಡು ಎರಡು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾದ ಶಿವಣ್ಣ. https://www.goodnews24x7.com/%e0%b2%b5%e0%b2%bf%e0%b2%97%e0%b3%8d-%e0%b2%b9%e0%b2%be%e0%b2%95%e0%b2%bf%e0%b2%95%e0%b3%8a%e0%b2%82%e0%b2%a1%e0%b3%81-%e0%b2%8e%e0%b2%b0%e0%b2%a1%e0%b3%81-%e0%b2%a4%e0%b2%bf%e0%b2%82%e0%b2%97/ Tue, 04 Mar 2025 10:34:22 +0000 https://www.goodnews24x7.com/?p=2568 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ದೊಡ್ಡ ಬ್ರೇಕ್ ಪಡೆದಿದ್ದರು. ಅಮೆರಿಕದಿಂದ ಸಕ್ಸಸ್ ಫುಲ್ ಆಪರೇಷನ್ ನೊಂದಿಗೆ ಶಿವಣ್ಣ ಕರ್ನಾಟಕಕ್ಕೆ ಮರಳಿದ್ದರು. ಅವರನ್ನು ಅಭಿಮಾನಿಗಳು ಬಹಳ ಸಂತೋಷದಿಂದ ಬರ ಮಾಡಿಕೊಂಡಿದ್ದರು. ಆದರೆ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ…

The post ವಿಗ್ ಹಾಕಿಕೊಂಡು ಎರಡು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾದ ಶಿವಣ್ಣ. appeared first on Good News 24x7.

]]>

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ದೊಡ್ಡ ಬ್ರೇಕ್ ಪಡೆದಿದ್ದರು. ಅಮೆರಿಕದಿಂದ ಸಕ್ಸಸ್ ಫುಲ್ ಆಪರೇಷನ್ ನೊಂದಿಗೆ ಶಿವಣ್ಣ ಕರ್ನಾಟಕಕ್ಕೆ ಮರಳಿದ್ದರು. ಅವರನ್ನು ಅಭಿಮಾನಿಗಳು ಬಹಳ ಸಂತೋಷದಿಂದ ಬರ ಮಾಡಿಕೊಂಡಿದ್ದರು. ಆದರೆ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಸಂಪೂರ್ಣ ಮಾಹಿತಿ ದೊರಕಿರಲಿಲ್ಲ. ಇದೀಗ ಶಿವಣ್ಣರವರು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಖಚಿತವಾದೊಡನೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ಯಾವುದೇ ಸಿನಿಮಾ ಶೂಟ್ನಲ್ಲೂ ಭಾಗಿ ಆಗಿರಲಿಲ್ಲ. ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದರು. ಈಗ ಶಿವರಾಜ್ಕುಮಾರ್ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂಬುದು ಎಲ್ಲರಿಗೂ ಖುಷಿ ಕೊಟ್ಟ ಸುದ್ದಿ. ಈಗ ಅವರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಶಿವಣ್ಣ ಸೈಲೆಂಟ್ ಆಗಿ ಚಿತ್ರೀಕರಣ ಆರಂಭಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನೊಂದೆಡೆ ಶಿವಣ್ಣ ಚಿತ್ರ ರಂಗಕ್ಕೆ ಮರಳಿರುವುದು ಚಿತ್ರರಂಗದವರೆಗೂ ಸಂತಸದ ಸುದ್ದಿಯಾಗಿದೆ.

ಶಿವರಾಜ್ ಕುಮಾರ್ ವಿಗ್ ಹಾಕಿರುವ ಲುಕ್ ಗಮನ ಸೆಳೆದಿದೆ. ಅವರು ಗಡ್ಡ,ಮೀಸೆಯನ್ನು ತೆಗೆದಿದ್ದು, ಸಂಪೂರ್ಣವಾಗಿ ಭಿನ್ನವಾಗಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಿಂದ ಫ್ಯಾನ್ಸ್ ಶಿವಣ್ಣ ಅವರನ್ನು ಸಂಭ್ರಮಿಸಿದ್ದಾರೆ.ಶಿವರಾಜ್ ಕುಮಾರ್ ಅವರು ಶೂಟ್ ಮಾಡ್ತಿರೋದು ಯಾವ ಸಿನಿಮಾ? ಯಾರ ಜೊತೆ? ಎಂಬ ಹಲವಾರು ಪ್ರಶ್ನೆಗಳಿಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಅವರು ಆರಂಭಿಸಿರೋದು ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ನಿರ್ದೇಶನದ

‘ಆರ್ಸಿ 16’ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗೋದಾಗಿ ಈ ಮೊದಲು ಶಿವಣ್ಣ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಅವರು ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ತೆಲುಗು ಚಿತ್ರರಂಗದಿಂದ ವರದಿಗಳು ಕೂಡ ಆಗಿದ್ದವು. ಹೀಗಾಗಿ, ಅವರು ಇದೇ ಸಿನಿಮಾದ ಶೂಟ್ನಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಮರಳಿದ್ದು, ಸಿನಿಮಾ ಶೂಟ್ ಒಂದರಲ್ಲಿ ಭಾಗಿಯಾಗಿದ್ದು, ಸಿನಿ ಪ್ರೇಕ್ಷಕರಿಗೆ ಸಂತಸದ ಸುದ್ದಿಯಾಗಿದೆ.

The post ವಿಗ್ ಹಾಕಿಕೊಂಡು ಎರಡು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾದ ಶಿವಣ್ಣ. appeared first on Good News 24x7.

]]>