RekhaSrinivas Archives - Good News 24x7 https://www.goodnews24x7.com/tag/rekhasrinivas/ Kannada Sat, 11 Jul 2026 11:38:25 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RekhaSrinivas Archives - Good News 24x7 https://www.goodnews24x7.com/tag/rekhasrinivas/ 32 32 ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ https://www.goodnews24x7.com/severe-punishment-for-the-rapists-rekha-srinivas/ Sat, 11 Jul 2026 11:38:25 +0000 https://www.goodnews24x7.com/?p=9826 ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್. ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ…

The post ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ appeared first on Good News 24x7.

]]>

ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್.

ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ 13 ವರ್ಷದ ಒಬ್ಬ ಅಪ್ರಾಪ್ತ ಮೇಲೆ 30 ಜನ ನರರಾಕ್ಷಸರು ಎರಗುತ್ತಾರೆಂದರೆ ಇದೆಂಥ ಸಮಾಜ?. ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೂರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಖಾತ್ರಿಪಡಿಸಬೇಕೆಂದು ಪತ್ರಿಕೆ ಹೇಳಿಕೆಯ ಮೂಲಕ ಒತ್ತಾಯಿಸಿದರು.

ಉತ್ತರಪ್ರದೇಶದಲ್ಲಿ ಈಚೆಗೆ 14 ವರ್ಷದ ಅಪ್ರಾಪ್ತ ಅ*ಶ್ಲೀ*ಲ ಸಿನಿಮಾ ಮತ್ತು ಮದ್ಯ, ಮಾದಕ ವಸ್ತುಗಳಿಗೆ ಬಲಿಯಾಗಿ 9 ತಿಂಗಳ ಹಸುಗೂಸಿನ ಮೇಲೆ ಅ*ತ್ಯಾಚಾ*ರ ಎಸಗಿರುವ ಘಟನೆ ನಾಗರಿಕ ಸಮಾಜವನ್ನೇ ತಲೆತಗ್ಗಿಸುಂತೆ ಮಾಡಿದೆ. ವಿಕೃತಿಗಳ ವಿರುದ್ಧ ಪ್ರಜ್ಞಾವಂತ ಜನತೆಯು ಸೇರಿ ಇಡೀ ಮಹಿಳಾ ಸಮುದಾಯ ಬಲಿಷ್ಠವಾದ ಹೋರಾಟ ಕಟ್ಟಲು ಮುಂದೆ ಬರಬೇಕೆಂದು ಪತ್ರಿಕೆಯ ಮೂಲಕ ಆಗ್ರಹಿಸಿದರು.

The post ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ appeared first on Good News 24x7.

]]>
ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. https://www.goodnews24x7.com/gauri-ga%e1%b9%87esa-habbada-a%e1%b9%85gavagi-muttaide-paurakarmikarige-bagina-arpa%e1%b9%87e-mysoreatharvalifekillsfoundationkarunesevatrustdrpuneethrajkumarrajashivarajsridurgafoundationpres/ Fri, 22 Aug 2025 07:40:05 +0000 https://www.goodnews24x7.com/?p=6465 ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಿ ನಂತರ ಮಾತನಾಡಿದ ಕರುಣೆ ಸೇವಾ…

The post ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. appeared first on Good News 24x7.

]]>

ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಿ ನಂತರ ಮಾತನಾಡಿದ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜಿಸುವುದು ಹಿಂದು ಧರ್ಮಿಯರ ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸತಂದಿದೆ ಎಂದು ಹೇಳಿದರು, ಮೈಸೂರಿನ ಅರಮನೆ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಸಮ ಹೆಚ್ಚು, ಅಂಥವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಉಂಟು ಮಾಡುತ್ತದೆ ಎಂದು ಹೇಳಿದರು.

 

ಬಾಗಿನ ಪಡೆದ ಪೌರಕಾರ್ಮಿಕ ಮಹಿಳೆ ಜಯಲಕ್ಷ್ಮಿ ಮಾತನಾಡಿ ಪೌರಕಾರ್ಮಿಕರನ್ನು ಗುರುತಿಸಿ ಸಹೋದರಿಯಂತೆ ಬಾಗಿನ ನೀಡಿರುವುದು. ನಮ್ಮೆಲ್ಲರಿಗೂ ಸಂತಸ ಉಂಟು ಮಾಡಿದೆ, ಅವರ ಸಂಸ್ಥೆಗೆ ಧನ್ಯವಾದಗಳು.ಎಂದು ಹೇಳಿದರು. ಅಥರ್ವ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ, ಡಾಕ್ಟರ್ ಪುನೀತ್ ರಾಜಕುಮಾರ್ ರಾಜ ಶಿವರಾಜ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಮಂಜುಳಾ ಸೋಮಣ್ಣ, ಜ್ಯೋತಿ, ವರ್ಷಿಣಿ, ಹಾಗೂ ಪೌರಕಾರ್ಮಿಕ ಸಿಬ್ಬಂದಿಗಳು ಹಾಜರಿದ್ದರು.

The post ಗೌರಿ ಗಣೇಶ ಹಬ್ಬದ ಅಂಗವಾಗಿ ಮುತ್ತೈದೆ ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ. appeared first on Good News 24x7.

]]>