renowned Archives - Good News 24x7 https://www.goodnews24x7.com/tag/renowned/ Kannada Wed, 01 Apr 2026 10:07:55 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg renowned Archives - Good News 24x7 https://www.goodnews24x7.com/tag/renowned/ 32 32 ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. https://www.goodnews24x7.com/sexual-assault-charges-renowned-malayalam-director-ranjith-arrested-sent-to-14-days-judicial-custody/ Wed, 01 Apr 2026 10:06:46 +0000 https://www.goodnews24x7.com/?p=9063 ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು…

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>

ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧನದ ಬಳಿಕ ರಂಜಿತ್ ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (JFMC) ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಸದ್ಯ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಕೊಚ್ಚಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ನಿರ್ದೇಶಕ ರಂಜಿತ್ ವಿರುದ್ಧ ಈ ಹಿಂದೆಯೂ ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. 2024ರಲ್ಲಿ ಬಂಗಾಳಿ ನಟಿಯೊಬ್ಬರು 2009ರ ಘಟನೆಯನ್ನು ಉಲ್ಲೇಖಿಸಿ ದೂರು ನೀಡಿದ್ದರು. ಇದು ರಂಜಿತ್ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವಾಗಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ರಂಜಿತ್, ಇವೆಲ್ಲವೂ ಸುಳ್ಳು ದೂರುಗಳು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>
ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! https://www.goodnews24x7.com/vikram-ravichandran-gives-an-update-on-the-film-mudhol/ Mon, 18 Aug 2025 08:15:38 +0000 https://www.goodnews24x7.com/?p=6351 ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ…

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.

ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ವಿಜಯ್ ಟಾಟಾ ಅವರ *ಅಮೃತ ಸಿನಿ ಕ್ರಾಫ್ಟ್* ಕಂಪನಿಯ ಮೂಲಕ. ಈ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಹಾಗೂ ಇತರ ಚಿತ್ರಗಳ ಜೊತೆಗೆ ಸಹಕಾರಿಯೂ ಮುಂದಾಗುತ್ತಿದೆ ಎಂಬುದು ಒಂದು ದೊಡ್ಡ ಬೆಳವಣಿಗೆ.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಘೋಷಣೆ : ಈ ವಿಷಯ ತಿಳಿಸಲು ವಿಶೇಷವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್, ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವಿಕ್ರಂ,“ನನ್ನ ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ನಾನು ಆಚರಿಸೋಲ್ಲ. ಆದರೆ ಈ ಬಾರಿ ವಿಜಯ್ ಸರ್ ವಿಶಿಷ್ಟವಾದ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ನಾನು ರವಿಚಂದ್ರನ್ ಸರ್ ಮಗ ಎಂಬುದು ಎಲ್ಲರಿಗೂ ಗೊತ್ತು. ನನ್ನ ಎರಡನೇ ಸಿನಿಮಾದಾಗಿನಿಂದಲೇ ನಿರ್ಮಾಪಕಿ ರಕ್ಷಾ ಮೇಡಂ ಬೆಂಬಲ ನೀಡುತ್ತಿದ್ದಾರೆ.”

“ನನ್ನ ಡ್ರೀಮ್ ಪ್ರಾಜೆಕ್ಟ್‌ಗೆ ಸಪೋರ್ಟ್ ಬೇಕಿತ್ತು. ಆ ಸಮಯದಲ್ಲಿ ಟ್ಯಾಲೆಂಟ್‌ಡ್ ಡೈರೆಕ್ಟರ್ ಕಾರ್ತಿಕ್ ರಾಜು ಸಿಕ್ಕರು. ನಾನು, ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಚರ್ಚೆ ನಡೆಸಿದಾಗ ‘ಮುಧೋಳ್’ ಮೂಡಿಬಂತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.”

ವಿಜಯ್ ಟಾಟಾ ಜೊತೆ ಕೊಲಾಬ್ರೇಶನ್ ಹೇಗೆ ಶುರುವಾಯ್ತು?
ವಿಕ್ರಂ ಅವರಲ್ಲಿ ಉತ್ತಮ ಗೆಳೆಯನಾಗಿರುವ ದಿಲ್ ಸೆ ದಿಲೀಪ್ ಅವರು ಡೈರೆಕ್ಟರ್ ಋಷಿ ಅವರ ಕಥೆಯನ್ನು ಪರಿಚಯಿಸಿದರು. ಆ ಕಥೆ ಇಷ್ಟವಾದ ವಿಕ್ರಂ, ಚಿತ್ರ ನಿರ್ಮಾಪಕರಾದ ವಿಜಯ್ ಟಾಟಾ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು.

“ಒಮ್ಮೆ ಭೇಟಿಯಾದ ನಂತರ, ‘ಮುಧೋಳ್’ ಚಿತ್ರವನ್ನೂ ವಿಜಯ್ ಸರ್‌ಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಹಾಗೂ ವಿಜಯ್ ಸರ್ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ‘ಅಮೃತ ಸಿನಿ ಕ್ರಾಫ್ಟ್’ ಈ ಚಿತ್ರದ ಸಹ ನಿರ್ಮಾಪಕರಾಗಿ ಸೇರಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಕೈಜೋಡಿಸಿದ್ದಾರೆ.”

ಹೊಸ ಶಕ್ತಿಯ ಜೊತೆ ಮುಂದೆ ಸಾಗುತ್ತಿರುವ ‘ಮುಧೋಳ್’ ಟೀಮ್ : ಈ ಕೊಲಾಬ್ರೇಶನ್ ಮೂಲಕ ‘ಮುಧೋಳ್’ ಚಿತ್ರ ತಂಡ ಈಗ ಲಿಷ್ಠವಾಗಿದ್ದು, ಸಿನಿಮಾಗೆ ತಕ್ಕ ಮಟ್ಟದ ಪ್ಲಾಟ್‌ಫಾರ್ಮ್ ಸಿಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಹೊಸ ಪ್ರತಿಭೆಗಳಿದ್ದು, ಈ ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಬೇಕು ಎಂಬ ಆಶಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ.

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>