Renukaswamy Archives - Good News 24x7 https://www.goodnews24x7.com/tag/renukaswamy/ Kannada Sun, 14 Sep 2025 08:56:40 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Renukaswamy Archives - Good News 24x7 https://www.goodnews24x7.com/tag/renukaswamy/ 32 32 ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ https://www.goodnews24x7.com/indecent-comment-case-against-darshans-wife-vijayalakshmi-vijayalakshmi-does-not-respond-to-2-notices/ Sun, 14 Sep 2025 08:56:40 +0000 https://www.goodnews24x7.com/?p=7522 ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ…

The post ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ appeared first on Good News 24x7.

]]>

ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಗೆ ಕೆಡಿಗೇಡಿಗಳು ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭ ಆಗಿತ್ತು. ಅಶ್ಲೀಲ ಕಮೆಂಟ್​​ಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೋಟಿಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೋಟಿಸ್​​ಗಳಿಗೆ ಅವರು ಉತ್ತರ ನೀಡಿಲ್ಲ! ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಚೆನ್ನಮ್ಮನಕರೆ ಅಚ್ಚುಕಟ್ಟು ಪೊಲೀಸರಿಂದ ನೋಟಿಸ್ ಕಳಿಸಲಾಗಿದೆ. ಪೊಲೀಸರ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಕ್ಯಾರೇ ಎನ್ನುತ್ತಿಲ್ಲ.
ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕಮೆಂಟ್​​ಗಳು ಬಂದಿವೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ಮಹಿಳಾ ಆಯೋಗದಿಂದ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಎರಡು ನೋಟಿಸ್​​ಗಳಿಗೂ ವಿಜಯಲಕ್ಷ್ಮಿ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಈಗ ಮೂರನೇ ನೋಟಿಸ್ ನೀಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಮೂರನೇ ನೋಟಿಸ್​ಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ ಪೊಲೀಸರು ಈ ಪ್ರಕರಣವನ್ನು ಮುಕ್ತಾಯ ಮಾಡಲಿದ್ದಾರೆ. ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತನಿಖೆಗೆ ಯಾವುದೇ ಮಾಹಿತಿ ಅಥವಾ ಲೀಡ್ ಸಿಗುತ್ತಿಲ್ಲ ಎಂದು ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಈಗಲಾದರೂ ವಿಜಯಲಕ್ಷ್ಮಿ ಅವರು ನೋಟಿಸ್​​ಗೆ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

ಕಳೆದ ಎರಡು ವರ್ಷಗಳ ಹಿಂದಿನ ಕಾಮೆಂಟ್​​ಗೆ ಇತ್ತೀಚೆಗೆ ದೂರು ನೀಡಲಾಯಿತು. 6 ಟ್ವಿಟರ್ ಖಾತೆಗಳು ಕೂಡ ಎರಡು ವರ್ಷಗಳ ಹಿಂದೆಯೇ ಡಿಲೀಟ್ ಆಗಿವೆ. ಕಳೆದ ಎರಡು ವರ್ಷಗಳಿಂದ ಆರು ಟ್ಟಿಟರ್ ಅಕೌಂಟ್​​ಗಳಿಂದ ಯಾವುದೇ ಮೆಸೇಜ್​​ಗಳು ವಿನಿಮಯ ಆಗಿಲ್ಲ. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿರುವ ಸಿಕೆ ಅಚ್ಚುಕಟ್ಟು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅರೆಸ್ಟ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಭರದಲ್ಲಿ ಕೆಲವರು ಅಸಭ್ಯ, ಅಶ್ಲೀಲ ಪದ ಬಳಕೆ ಮಾಡುತ್ತಿದ್ದಾರೆ.

The post ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ appeared first on Good News 24x7.

]]>
ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್. https://www.goodnews24x7.com/another-post-by-pavithra-before-going-to-jail/ Thu, 14 Aug 2025 10:08:52 +0000 https://www.goodnews24x7.com/?p=6131 ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಿಗೆ ಹೋಗುವ ಟೆನ್ಷನ್ ನಡುವೆಯೂ ಪವಿತ್ರಾ ಗೌಡ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಸ್ಟೋರಿ ಹಾಕಿದ್ದಾರೆ. ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ…

The post ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್. appeared first on Good News 24x7.

]]>

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಿಗೆ ಹೋಗುವ ಟೆನ್ಷನ್ ನಡುವೆಯೂ ಪವಿತ್ರಾ ಗೌಡ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಸ್ಟೋರಿ ಹಾಕಿದ್ದಾರೆ.

ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಕೂಡಲೇ ಶರಣಾಗುವಂತೆ ಸೂಚಿಸಿದೆ. ಜಾಮೀನು ಆದೇಶ ಹೊರಬೀಳುವ ಮುನ್ನವೇ ಪವಿತ್ರಾ ಗೌಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದಿದ್ದರು.

ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಪವಿತ್ರಾ ಗೌಡ ದೇವರ ಮೊರೆ ಹೋಗಿದ್ದರು. ಜೊತೆಗೆ ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ತೀರ್ಪು ಹೊರಬರುತ್ತಿದ್ದಂತೆ ಮನೆಯಲ್ಲಿ ಪವಿತ್ರಾ ಗೌಡ, ತಾಯಿ ಎದುರು ಬಿಕ್ಕಳಿಸಿ ಅತ್ತಿದ್ದಾರೆ. ಈ ವೇಳೆ ಮನೆ ಬಳಿ ಪೊಲೀಸರು ಬಂಧನಕ್ಕೆ ಕಾದು ನಿಂತಿದ್ದರು. ಮನೆಯ ಬಾಗಿಲು ತೆರೆದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

The post ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್. appeared first on Good News 24x7.

]]>
ದರ್ಶನ್ ಜಾಮೀನು ರದ್ದತಿಗೆ ರಮ್ಯಾ ಪ್ರತಿಕ್ರಿಯೆ ಏನು.? https://www.goodnews24x7.com/what-is-ramyas-reaction-to-darshans-bail-cancellation/ Thu, 14 Aug 2025 07:35:21 +0000 https://www.goodnews24x7.com/?p=6111 ದರ್ಶನ್ ಮತ್ತೆ ಜೈಲಿಗೆ; ನಟಿ ರಮ್ಯಾ ರಿಯಾಕ್ಷನ್ ಏನು? ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ನಟಿ ರಮ್ಯಾ ಅವರು ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಯುತ ಪ್ರಕ್ರಿಯೆಗೆ ಅವರು ಒತ್ತು ನೀಡಿ ಎಂದಿದ್ದಾರೆ. ಕಾನೂನಿನ ಮುಂದೆ ಎಲ್ಲರೂ…

The post ದರ್ಶನ್ ಜಾಮೀನು ರದ್ದತಿಗೆ ರಮ್ಯಾ ಪ್ರತಿಕ್ರಿಯೆ ಏನು.? appeared first on Good News 24x7.

]]>

ದರ್ಶನ್ ಮತ್ತೆ ಜೈಲಿಗೆ; ನಟಿ ರಮ್ಯಾ ರಿಯಾಕ್ಷನ್ ಏನು?

ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ನಟಿ ರಮ್ಯಾ ಅವರು ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಯುತ ಪ್ರಕ್ರಿಯೆಗೆ ಅವರು ಒತ್ತು ನೀಡಿ ಎಂದಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಒತ್ತಿ ಹೇಳಿದ್ದಾರೆ. ಅವರ ಪೋಸ್ಟ್ ಈಗ ಎಲ್ಲ ಕಡೆಗಳಲ್ಲೂ ವೈರಲ್ ಆಗುತ್ತಿದೆ.

ನಟ ದರ್ಶನ್ ಅವರು ಮತ್ತೆ ಜೈಲು ಸೇರಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಬೆನ್ನಲ್ಲೇ ಅವರನ್ನು ಇಂದೇ ಬಂಧಿಸೋ ಸಾಧ್ಯತೆ ಇದೆ. ಈಗ ದರ್ಶನ್ ಪ್ರಕರಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ರಮ್ಯಾ vs ದರ್ಶನ್ ಫ್ಯಾನ್ಸ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈಗ ದರ್ಶನ್ ಜಾಮೀನು ರದ್ದು ಆದೇಶದ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ’ ಎಂದಿದ್ದಾರೆ ರಮ್ಯಾ.

‘ನ್ಯಾಯಯುತವಾಗಿ ಪ್ರಕ್ರಿಯೆಯನ್ನು ಅನುಸರಿಸಿ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳಿ. ಇದು ದೀರ್ಘ ಮತ್ತು ಕಠಿಣ. ಆದರೆ ಸುರಂಗದ ಕೊನೆಯಲ್ಲಿ ಬೆಳಕು ಇದೆ ಎಂಬ ನಂಬಿಕೆ ಇರಲಿ ಎಂದು ನಾನು ಇತರರಿಗೆ ಹೇಳುತ್ತೇನೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯ ಸಿಕ್ಕೇ ಸಿಗುತ್ತದೆ. ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ’ ಎಂದು ರಮ್ಯಾ ಕೋರಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ರಮ್ಯಾ, ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ನಂಬಿಕೆ ಇದೆ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ರವಾನೆ ಮಾಡಿದ್ದರು. ಇದು ರಮ್ಯಾ ಅಸಮಾಧಾನಕ್ಕೆ ಕಾರಣ ಆಗಿತ್ತು. ರಮ್ಯಾ ಈ ಸಂಬಂಧ ದೂರು ಕೂಡ ದಾಖಲಿಸಿದ್ದರು. ಈ ದೂರು ಆಧರಿಸಿ ಕೆಲವರನ್ನು ಬಂಧಿಸಲಾಗಿದೆ. ಈಗ ದರ್ಶನ್ ಬಂಧನ ಬೆನ್ನಲ್ಲೇ ರಮ್ಯಾ ಖುಷಿಯಾಗಿದ್ದಾರೆ.

The post ದರ್ಶನ್ ಜಾಮೀನು ರದ್ದತಿಗೆ ರಮ್ಯಾ ಪ್ರತಿಕ್ರಿಯೆ ಏನು.? appeared first on Good News 24x7.

]]>
ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! https://www.goodnews24x7.com/renukaswamy-case-court-adjourns-hearing-to-september-9/ Tue, 12 Aug 2025 07:50:52 +0000 https://www.goodnews24x7.com/?p=5909 ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು. ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು…

The post ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! appeared first on Good News 24x7.

]]>

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು.

ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ಪುಟ್ಟಸ್ವಾಮಿ, ರಾಘವೇಂದ್ರ, ನಂದೀಶ್, ರವಿಶಂಕರ್, ನಾಗರಾಜು, ಲಕ್ಷ್ಮಣ್, ದೀಪಕ್ ಕುಮಾರ್ ನ್ಯಾಯಾಲಯದ ಮುಂದೆ ಹಾಜರಿದ್ದರು. ವಿನಯ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಗೈರಾಗಿದ್ದರು.

ವಿಚಾರಣೆ ಬಳಿಕ ಪವಿತ್ರಾ ಗೌಡ ಕೋರ್ಟ್ ಆವರಣದಲ್ಲೇ ನಿಂತಿದ್ದರು. ದರ್ಶನ್ ಹೋಗುವುದನ್ನು ನೋಡಿಕೊಂಡು ನಿಂತಿದ್ದರು. ಆದರೆ, ಪವಿತ್ರಾ ಗೌಡ ಕಡೆ ತಿರುಗಿ ನೋಡದೇ ದರ್ಶನ್ ತೆರಳಿದರು. ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ಗೆ ನಟ ಧನ್ವೀರ್ ಸಾಥ್ ಕೊಟ್ಟಿದ್ದರು.

The post ರೇಣುಕಾಸ್ವಾಮಿ ಕೇಸ್; ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್! appeared first on Good News 24x7.

]]>
ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್ : ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ ! https://www.goodnews24x7.com/d-gang-to-appear-in-court-today-verdict-likely-to-be-announced-this-week/ Tue, 12 Aug 2025 05:32:04 +0000 https://www.goodnews24x7.com/?p=5872 ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್ : ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ ! ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳು ಇಂದು (ಆ.12) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಲಿದ್ದಾರೆ. ವಿಚಾರಣೆಗೆ…

The post ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್ : ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ ! appeared first on Good News 24x7.

]]>

ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್ : ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ !

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳು ಇಂದು (ಆ.12) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಲಿದ್ದಾರೆ.

ವಿಚಾರಣೆಗೆ ಹಾಜರಾಗುತ್ತಿರುವ ಆರೋಪಿಗಳ ವಿರುದ್ಧದ ಟ್ರಯಲ್ ಆರಂಭಿಸಲು ಇಂದು ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸರ್ಕಾರಿ ವಕೀಲರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, 17 ಆರೋಪಿಗಳು, ದರ್ಶನ್ ಸಹಿತ, ಕೋರ್ಟ್ ಮುಂದೆ ಹಾಜರಾಗಿ ವಿಚಾರಣೆಗೆ ಒಳಗಾಗಲಿದ್ದಾರೆ.

ಇನ್ನೊಂದೆಡೆ, ರಾಜ್ಯ ಸರ್ಕಾರವು ದರ್ಶನ್, ಪವಿತ್ರ ಗೌಡ, ರಾಘವೇಂದ್ರ, ಪವನ್, ಜಗದೀಶ್, ಅನುಕುಮಾರ್ ಹಾಗೂ ರವಿಶಂಕರ್‌ ಸೇರಿದಂತೆ ಹಲವರ ಜಾಮೀನು ರದ್ದುಪಡಿಸಲು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಸುರಕ್ಷತಾ ಕಾರಣಗಳಿಂದಾಗಿ ಸರ್ಕಾರ ಜಾಮೀನು ರದ್ದತಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಆರೋಪಿಗಳ ಪರ ವಕೀಲರಿಗೆ ಲಿಖಿತ ವಾದ ಸಲ್ಲಿಸಲು ಸೂಚನೆ ನೀಡಿತ್ತು. ಅದರಂತೆ, ಕಳೆದ ವಾರವಷ್ಟೇ ಲಿಖಿತ ವಾದ ಸಲ್ಲಿಕೆ ನಡೆದಿದೆ. ಜಾಮೀನು ರದ್ದಾದರೆ, ಎಲ್ಲ ಆರೋಪಿಗಳನ್ನೂ ಪುನಃ ಜೈಲಿಗೆ ಕಳಿಸುವ ನಿರೀಕ್ಷೆಯಿದೆ.

The post ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್ : ಈ ವಾರದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆ ! appeared first on Good News 24x7.

]]>
ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಶಾಕ್ https://www.goodnews24x7.com/another-shock-for-actor-darshan-who-was-expecting-bail/ Wed, 09 Oct 2024 13:27:00 +0000 https://www.goodnews24x7.com/?p=791 ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಶಾಕ್ ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್‌ಗೆ ಮತ್ತೆ ಶಾಕ್ ಎದುರಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ರೇಣುಕಾಸ್ವಾಮಿ ಹ* ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಹಾಗೂ…

The post ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಶಾಕ್ appeared first on Good News 24x7.

]]>

ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಶಾಕ್

ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್‌ಗೆ ಮತ್ತೆ ಶಾಕ್ ಎದುರಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.

ರೇಣುಕಾಸ್ವಾಮಿ ಹ* ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಹಾಗೂ ಆರೋಪಿಗಳಾದ ರವಿಶಂಕರ್, ದೀಪಕ್, ಲಕ್ಷ್ಮಣ್‌, ನಾಗರಾಜ್ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅಕ್ಟೋಬರ್ 14ಕ್ಕೆ ಕೋರ್ಟ್ ಕಾಯ್ದಿರಿಸಿದೆ.

The post ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಶಾಕ್ appeared first on Good News 24x7.

]]>
ಶಕ್ತಿದೇವತೆಯ ಮೊರೆ ಹೋದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ https://www.goodnews24x7.com/darshans-wife-vijayalakshmi-went-to-shaktidevata/ Tue, 10 Sep 2024 08:15:12 +0000 https://www.goodnews24x7.com/?p=571 ಶಕ್ತಿದೇವತೆಯ ಮೊರೆ ಹೋದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ದೇವರುಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿ ಪತಿಯ ಬಿಡುಗಡೆಗಾಗಿ…

The post ಶಕ್ತಿದೇವತೆಯ ಮೊರೆ ಹೋದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ appeared first on Good News 24x7.

]]>

ಶಕ್ತಿದೇವತೆಯ ಮೊರೆ ಹೋದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ದೇವರುಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿ ಪತಿಯ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮುಂದುವರೆಸಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಂಡಿರೋ ಬೆನ್ನಲ್ಲೇ ದರ್ಶನ್ ಪತ್ನಿ 51 ಶಕ್ತಿಪೀಠಗಳಲ್ಲಿ ಒಂದಾಗಿರುವ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

The post ಶಕ್ತಿದೇವತೆಯ ಮೊರೆ ಹೋದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ appeared first on Good News 24x7.

]]>
ಸೆಪ್ಟೆಂಬರ್ 12 ರವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ https://www.goodnews24x7.com/darshans-judicial-custody-extended-till-september-12/ Mon, 09 Sep 2024 08:41:03 +0000 https://www.goodnews24x7.com/?p=547 ಸೆಪ್ಟೆಂಬರ್ 12 ರವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24 ನೇ…

The post ಸೆಪ್ಟೆಂಬರ್ 12 ರವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ appeared first on Good News 24x7.

]]>

ಸೆಪ್ಟೆಂಬರ್ 12 ರವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

The post ಸೆಪ್ಟೆಂಬರ್ 12 ರವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ appeared first on Good News 24x7.

]]>
ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… https://www.goodnews24x7.com/actor-darshans-jail-fate-will-be-decided-tomorrow/ Sun, 08 Sep 2024 08:54:05 +0000 https://www.goodnews24x7.com/?p=535 ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್. ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರು 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು. ನಾಳೆಗೆ ನಟ…

The post ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… appeared first on Good News 24x7.

]]>

ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ…

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್. ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಬೆಂಗಳೂರು 24 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

ನಾಳೆಗೆ ನಟ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯ. ನಾಳೆ ನಿರ್ಧಾರ ಆಗಲಿದೆ ದರ್ಶನ್ ಜೈಲು ಭವಿಷ್ಯ. ಜೈಲಿಂದಲೇ ವಿಚಾರಣೆಗೆ ಹಾಜರಾಗಲಿರೋ ದರ್ಶನ್. ವಿಡಿಯೋ ಸಂವಾದದ ಮೂಲಕ ಕೋರ್ಟ್​ಗೆ ಹಾಜರು. ಬೆಂಗಳೂರು 24ನೇ ಎಸಿಎಂಎಂ ಕೋರ್ಟ್​ನಲ್ಲಿ ವಿಚಾರಣೆ. ನಾಳೆ ಮಧ್ಯಾಹ್ನ ನಡೆಯಲಿರೋ ದರ್ಶನ್ ವಿಚಾರಣೆ

The post ನಾಳೆ ನಿರ್ಧಾರ ಆಗಲಿದೆ ನಟ ದರ್ಶನ್ ಜೈಲು ಭವಿಷ್ಯ… appeared first on Good News 24x7.

]]>
ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ https://www.goodnews24x7.com/parappana-agraharadinda-ba%e1%b8%b7%e1%b8%b7ari-jailige-na%e1%b9%ada-darsan-siph%e1%b9%ad-re%e1%b9%87ukasvami-kole-prakara%e1%b9%87adalli-na%e1%b9%ada-darsan-seridante-o%e1%b9%ad%e1%b9%adu-17-mandi-vi/ Thu, 29 Aug 2024 04:24:33 +0000 https://www.goodnews24x7.com/?p=483 ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ವಿಚಾರಣಾಧೀನ ಖೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್…

The post ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ appeared first on Good News 24x7.

]]>

ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ವಿಚಾರಣಾಧೀನ ಖೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು 24ನೇ ಎಸಿಎಂಎಂ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಫೋಟೊ ವೈರಲ್ ಆಗಿತ್ತು. ಇದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ತಕ್ಷಣ ಎಚ್ಚೆತ್ತ ಸರ್ಕಾರ 9 ಮಂದಿ ಜೈಲು ಸಿಬ್ಬಂದಿಯನ್ನ ಅಮಾನತುಗೊಳಿಸಿತ್ತು.ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಗೃಹ ಇಲಾಖೆ ಹಾಗೂ ಪೊಲೀಸರು ನ್ಯಾಯಾಲಯದ ಆದೇಶ ಪಡೆದು, ಇಂದು ರಾಜ್ಯದ ವಿವಿಧ ಜೈಲುಗಳಿಗೆ ಆರೋಪಿಗಳ್ನು ಸ್ಥಳಾಂತರ ಮಾಡಿದ್ದಾರೆ.

The post ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ appeared first on Good News 24x7.

]]>