Rishabh Archives - Good News 24x7 https://www.goodnews24x7.com/tag/rishabh/ Kannada Sat, 09 Aug 2025 06:06:13 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Rishabh Archives - Good News 24x7 https://www.goodnews24x7.com/tag/rishabh/ 32 32 ‘ಕಾಂತಾರ’ದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು : ಕಂಬಳದಲ್ಲಿ ಚಾಂಪಿಯನ್ ಆಗಿದ್ದ ಅಪ್ಪು . https://www.goodnews24x7.com/appu-kona-who-shone-in-kantara-passes-away-appu-was-a-champion-in-kambala/ Sat, 09 Aug 2025 06:06:13 +0000 https://www.goodnews24x7.com/?p=5609 ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಪ್ಪು ಕೋಣ ನಿಧನ ಹೊಂದಿದೆ. ರಿಷಬ್ ಶೆಟ್ಟಿ ಅವರ ತರಬೇತಿಗೆ ಸಹಾಯ ಮಾಡಿದ ಈ ಕೋಣ, ಹಲವು ಕಂಬಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿತ್ತು. ಅಪ್ಪು ಕೋಣದ ಸಾವು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಕಾಂತಾರ…

The post ‘ಕಾಂತಾರ’ದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು : ಕಂಬಳದಲ್ಲಿ ಚಾಂಪಿಯನ್ ಆಗಿದ್ದ ಅಪ್ಪು . appeared first on Good News 24x7.

]]>

ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಪ್ಪು ಕೋಣ ನಿಧನ ಹೊಂದಿದೆ. ರಿಷಬ್ ಶೆಟ್ಟಿ ಅವರ ತರಬೇತಿಗೆ ಸಹಾಯ ಮಾಡಿದ ಈ ಕೋಣ, ಹಲವು ಕಂಬಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿತ್ತು. ಅಪ್ಪು ಕೋಣದ ಸಾವು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಕಾಂತಾರ ಚಿತ್ರದ ಯಶಸ್ಸಿನಲ್ಲಿ ಅಪ್ಪು ಕೋಣದ ಪಾತ್ರ ಮಹತ್ವದ್ದಾಗಿತ್ತು.

‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಅನೇಕ ಕಲಾವಿದರು ಜನಪ್ರಿಯತೆ ಪಡೆದರು. ಈ ಸಿನಿಮಾದಲ್ಲಿ ಕರಾವಳಿಯ ಸಂಪ್ರದಾಯದ ಬಗ್ಗೆ ಹೇಳಲಾಗಿತ್ತು. ದಕ್ಷಿಣ ಕನ್ನಡದ ಜನತೆಯ ಉಸಿರಿನ ಜೊತೆ ಬೆರೆತು ಹೋದ ಕಂಬಳದ ದೃಶ್ಯಗಳೂ ಇದ್ದವು. ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಹಾಗೂ ಕಂಬಳ ಪ್ರಿಯರಿಗೆ ಈ ವಿಚಾರ ಬೇಸರ ಮೂಡಿಸಿದೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿ ಮಿಂಚಿದ್ದರು. ಈ ಚಿತ್ರದ ನಿರ್ದೇಶನ ಕೂಡ ಅವರದ್ದೇ. ಅವರು ಈ ಸಿನಿಮಾಗಾಗಿ ಕಷ್ಟಪಟ್ಟು ಕಂಬಳ ಓಡಿಸೋದನ್ನು ಕಲಿತಿದ್ದರು. ಇದಕ್ಕಾಗಿ ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಬಳಕೆ ಆಗಿತ್ತು. ಈ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರು ಇಡಲಾಗಿತ್ತು. ಈ ಪೈಕಿ ಅಪ್ಪು ಕೋಣ ನಿಧನ ಹೊಂದಿದೆ.

ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಪಡೆದಿದ್ದರು. ಇವುಗಳ ಜೊತೆ ರಿಷಬ್​ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಒಂದು ಕೋಣ ನಿಧನ ಹೊಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಪ್ರಶಸ್ತಿಗಳ ಸರಮಾಲೆ..
ಸಿನಿಮಾಗಳಲ್ಲಿ ಮಾತ್ರ ಅಪ್ಪು ಹಾಗೂ ಕಾಲಾ ಕೋಣಗಳು ಚಾಂಪಿಯನ್ ಅಲ್ಲ, ನಿಜ ಜೀವನದಲ್ಲೂ ಇವು ಸಾಕಷ್ಟು ಅವಾರ್ಡ್ ಗೆದ್ದಿವೆ. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಈಗ ಅಗಲಿದೆ.

 

The post ‘ಕಾಂತಾರ’ದಲ್ಲಿ ಮಿಂಚಿದ್ದ ಅಪ್ಪು ಕೋಣ ಸಾವು : ಕಂಬಳದಲ್ಲಿ ಚಾಂಪಿಯನ್ ಆಗಿದ್ದ ಅಪ್ಪು . appeared first on Good News 24x7.

]]>
‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? https://www.goodnews24x7.com/another-part-of-the-kantara-series-the-arrival-of-a-pan-india-hero/ Mon, 04 Aug 2025 08:00:26 +0000 https://www.goodnews24x7.com/?p=5302 ‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ…

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ.
ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಸಿನಿಮಾದ ಬಗ್ಗೆ ಭರ್ಜರಿ ಅಪ್​ಡೇಟ್ ಒಂದು ಸಿಕ್ಕಿದೆ. ‘ಕಾಂತಾರ’  ಸಿನಿಮಾಗೆ ಪ್ರೀಕ್ವೆಲ್ ಮಾತ್ರವಲ್ಲ, ಸೀಕ್ವೆಲ್ ಕೂಡ ಬರಲಿದೆಯಂತೆ.

 

 

 

 

 

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ 280ಕ್ಕೂ ಹೆಚ್ಚು ದಿನ ಶೂಟ್ ಮಾಡಲಾಗಿದೆ. ರಿಷಬ್ ಅವರು ಕಳೆದ ಮೂರು ವರ್ಷಗಳಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈಗ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.

‘ಕಾಂತಾರ: ಚಾಪ್ಟರ್ 1’ಗೆ ಸಿನಿಮಾ ಪೂರ್ಣಗೊಳ್ಳುವುದಿಲ್ಲವಂತೆ. ಈ ಸಿನಿಮಾಗೆ ಸೀಕ್ವೆಲ್ ತರುವ ಆಲೋಚನೆ ಕೂಡ ಇದೆ. ಹಾಗೆ ಏನಾದರೂ ನಡೆದರೆ, ‘ಕಾಂತಾರ: ಚಾಪ್ಟರ್ 2’ ಎನ್ನುವ ಶೀರ್ಷಿಕೆ ಇಡಬಹುದು. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ರಿಷಬ್ ಶೆಟ್ಟಿ ಹಾಗೂ ಜೂನಿಯರ್ ಎನ್​ಟಿಆರ್ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಮೊದಲು ಜೂನಿಯರ್ ಎನ್​ಟಿಆರ್ ಅವರು ತಮ್ಮ ತಾಯಿ ಜೊತೆ ಕುಂದಾಪುರಕ್ಕೆ ತೆರಳಿದ್ದರು. ಈ ವೇಳೆ ‘ಕಾಂತಾರ’ ಸಿನಿಮಾದಲ್ಲಿ ನಟಿಸುವ ಆಫರ್ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಚಿತ್ರದ ಮೂಲಕ ಹಿಂದಿಗೆ ಕಾಲಿಟ್ಟಿದ್ದಾರೆ. ಅವರು ಕನ್ನಡದಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಒಂದೊಮ್ಮೆ ಅವರು ಕನ್ನಡಕ್ಕೆ ಬಂದರೆ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. ಸದ್ಯ ಅವರು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>