rockingstar Archives - Good News 24x7 https://www.goodnews24x7.com/tag/rockingstar/ Kannada Wed, 08 Jul 2026 07:34:19 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg rockingstar Archives - Good News 24x7 https://www.goodnews24x7.com/tag/rockingstar/ 32 32 ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’ https://www.goodnews24x7.com/yash-kiara-in-a-very-bold-avatar-for-tabahi/ Wed, 08 Jul 2026 07:34:19 +0000 https://www.goodnews24x7.com/?p=9807 ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಟಾಕ್ಸಿಕ್’ ಸಿನಿಮಾದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಬಿಡುಗಡೆಯಾಗಿದೆ. ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅವರ ಸಖತ್ ಬೋಲ್ಡ್ ಮತ್ತು ಗ್ಲಾಮರಸ್ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಆಗಸ್ಟ್ 26…

The post ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’ appeared first on Good News 24x7.

]]>

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಟಾಕ್ಸಿಕ್’ ಸಿನಿಮಾದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಬಿಡುಗಡೆಯಾಗಿದೆ. ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅವರ ಸಖತ್ ಬೋಲ್ಡ್ ಮತ್ತು ಗ್ಲಾಮರಸ್ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಆಗಸ್ಟ್ 26 ರಂದು ರಿಲೀಸ್ ಆಗಲಿರುವ ಈ ಚಿತ್ರದ ಹಾಡಿನ ಸಂಪೂರ್ಣ ವಿವರ ಇಲ್ಲಿದೆ.

ಟಾಕ್ಸಿಕ್’ ಚಿತ್ರದಿಂದ ‘ತಬಾಹಿ’ ವಿಡಿಯೋ ಸಾಂಗ್ ಔಟ್
ರಾಯ-ರುಮಿ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
ಯೋಗರಾಜ್ ಭಟ್ ಸಾಹಿತ್ಯದ ಮೂಡಿ ಬಂದ ಹಾಡು
ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಹಾಟೆಸ್ಟ್ ಅವತಾರ ಅನಾವರಣಗೊಂಡಿದೆ. ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡಿನಲ್ಲಿ ಇಬ್ಬರೂ ಸಖತ್ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾನ್ಸ್ ಮಿತಿಮೀರಿದೆ. ಈ ವಿಡಿಯೋದ ನೋಡಿದ ಎಲ್ಲರೂ ಕಣ್ಣರಳಿಸುತ್ತಿದ್ದಾರೆ. ಕಿಯಾರಾ ಅವರ ಗ್ಲಾಮರ್, ಯಶ್ ಅವರ ಕಟ್ಟುಮಸ್ತಾದ ದೇಹ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಆಗಸ್ಟ್​ 26ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಅದರ ಭಾಗವಾಗಿ ಸಿನಿಮಾ ಪ್ರಚಾರ ಆರಂಭಿಸಿದೆ. ಈ ಮೊದಲು ಟೀಸರ್​​ಗಳ ಮೂಲಕ ಸೆಳೆದಿದ್ದ ಈ ಚಿತ್ರ ತಂಡ ಈಗ ‘ತಬಾಹಿ’ ವಿಡಿಯೋ ಸಾಂಗ್ ಅನಾವರಣ ಮಾಡಿದೆ. ಬೆಳಿಗ್ಗೆ 11.33ಕ್ಕೆ ಸರಿಯಾಗಿ ಸಾಂಗ್ ರಿಲೀಸ್ ಆಗಿದೆ.

ಯಶ್ ಹಾಗೂ ಕಿಯಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ತಬಾಹಿ’ ಹಾಡಿನ ಉದ್ದಕ್ಕೂ ಯಶ್ ಹಾಗೂ ಕಿಯಾರಾ ರೊಮ್ಯಾನ್ಸ್ ಮಾಡುತ್ತಾರೆ. ಯಶ್ ಅವರು ರಾಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅವರು ರುಮಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ನಯನತಾರಾ ಕೂಡ ಕಾಣಿಸುತ್ತಾರೆ.

 

ಈ ಸಾಂಗ್ ಕೇವಲ ಸಾಂಗ್ ಆಗಿ ಮಾತ್ರ ಉಳಿದಿಲ್ಲ, ಸಿನಿಮಾದಲ್ಲಿ ದೃಶ್ಯ ಎಷ್ಟು ಅದ್ದೂರಿಯಾಗಿ ಇರಲಿದೆ ಎಂಬುದಕ್ಕೆ ಒಂದು ಮಾದರಿ ರೀತಿಯಲ್ಲಿ ಕಾಣಿಸಿದೆ. ಅದ್ದೂರಿ ದೃಶ್ಯಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡಿಗೆ ಯೋಗರಾಜ್​ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಮೊದಲು ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿತ್ತು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಡ್​ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ. ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಭಾರಿ ಬಜೆಟ್‌ನಲ್ಲಿ ಬಂಡವಾಳ ಹೂಡಿವೆ. ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಇವರೊಂದಿಗೆ ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಟ್ಟಿಗೆ ಶೂಟ್ ಆಗಿರುವ ಈ ಸಿನಿಮಾ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

 

The post ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’ appeared first on Good News 24x7.

]]>
ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! https://www.goodnews24x7.com/rocking-star-in-a-new-look-with-radhika-pandit/ Sat, 07 Mar 2026 07:49:40 +0000 https://www.goodnews24x7.com/?p=8767 Yash: ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಶ್ ಭಾರತೀಯ ಸಿನೆಮಾ ಲೋಕವೇ ಹಿಂತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ…

The post ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! appeared first on Good News 24x7.

]]>

Yash: ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಯಶ್
ಭಾರತೀಯ ಸಿನೆಮಾ ಲೋಕವೇ ಹಿಂತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ ಅವರ ಲುಕ್ ಮತ್ತು ಸ್ಟೈಲ್ ಅಭಿಮಾನಿಗಳಲ್ಲಿ ಗಮನ ಸೆಳೆದಿತ್ತು. ಗಡ್ಡ ಹಾಗೂ ಲಾಂಗ್ ಹೇರ್‌ನಲ್ಲಿದ್ದ ಯಶ್ ಹಲವು ವರ್ಷಗಳಿಂದ ಅದೇ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಅದೆಷ್ಟೋ ವರ್ಷಗಳ ಬಳಿಕ ಯಶ್ ಕಂಪ್ಲೀಟ್ ಲುಕ್ ಬದಲಾಗಿದೆ. ಹೊಸ ಲುಕ್‌ನಲ್ಲಿ ಮೊದಲ ಬಾರಿಗೆ ಯಶ್ ಕ್ಯಾಮೆರ ಕಣ್ಣಿಗೆ ಬಿದ್ದಿದ್ದಾರೆ. ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಅವರ ಹೊಸ ಅವತಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಕೆಜಿಎಫ್ ಬಳಿಕ ಅದೇ ಲುಕ್‌ನಲ್ಲಿ ಇದ್ದ ಯಶ್
ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಯಶ್ ಅವರ ಲುಕ್ ಅಭಿಮಾನಿಗಳಲ್ಲಿ ಐಕಾನಿಕ್ ಆಗಿತ್ತು. ಗಡ್ಡ ಬಿಟ್ಟು, ಉದ್ದ ಕೂದಲಿನ ಸ್ಟೈಲ್‌ನಲ್ಲಿ ಅವರು ಹಲವು ವರ್ಷಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಹೊಸ ಲುಕ್‌ನಲ್ಲಿ ದರ್ಶನ
ಇತ್ತೀಚೆಗೆ ಮುಂಬೈನಲ್ಲಿ ಯಶ್ ಹೊಸ ಲುಕ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದೀಗ ಯಶ್ , ಹೊಸ ಹೇರ್ ಸ್ಟೈಲ್ ಮತ್ತು ಕ್ಲೀನ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಜಿಎಫ್ ನಂತರ ಇದೇ ಮೊದಲ ಬಾರಿಗೆ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ.

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ. ಆದರೆ ಇತ್ತೀಚೆಗೆ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ . ಈ ಹಿನ್ನೆಲೆಯಲ್ಲಿ ಯಶ್ ಈಗ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

The post ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್! appeared first on Good News 24x7.

]]>
ಯಶ್ ತಾಯಿ ಪುಷ್ಪಾ ಎಚ್ಚರಿಕೆ ? ಮುಖ್ಯಮಂತ್ರಿ ಎದುರು ಹೋಗ್ತೀನಿ ದೂರು ಸ್ವೀಕರಿಸದ್ದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ! https://www.goodnews24x7.com/yashs-mother-pushpa-warns-will-go-to-the-chief-minister-if-the-complaint-is-not-accepted-we-will-fight-fiercely/ Tue, 12 Aug 2025 11:57:31 +0000 https://www.goodnews24x7.com/?p=5955 ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಯಿತು. ಸಿನಿಮಾವನ್ನು ನೋಡದೆ ನೆಗೆಟಿವ್ ವಿಮರ್ಶೆಗಳನ್ನು ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕೋರಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿನ ಈ ರೀತಿಯ ನಕಾರಾತ್ಮಕ ಪ್ರಚಾರದಿಂದ ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಹಾನಿಯ…

The post ಯಶ್ ತಾಯಿ ಪುಷ್ಪಾ ಎಚ್ಚರಿಕೆ ? ಮುಖ್ಯಮಂತ್ರಿ ಎದುರು ಹೋಗ್ತೀನಿ ದೂರು ಸ್ವೀಕರಿಸದ್ದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ! appeared first on Good News 24x7.

]]>

ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಯಿತು. ಸಿನಿಮಾವನ್ನು ನೋಡದೆ ನೆಗೆಟಿವ್ ವಿಮರ್ಶೆಗಳನ್ನು ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕೋರಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿನ ಈ ರೀತಿಯ ನಕಾರಾತ್ಮಕ ಪ್ರಚಾರದಿಂದ ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಯಿತು. ಈ ಸಿನಿಮಾಗೆ ಪೃಥ್ವಿ ಅಂಬರ್ ಹೀರೋ. ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ ಸೇರಿದಂತೆ ಅನೇಕರು ಈ ಚಿತ್ರದ ಭಾಗ ಆಗಿದ್ದಾರೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ಪುಷ್ಪಾ ಅವರು ಸಾಕಷ್ಟು ಸಂದರ್ಶನ ನೀಡಿದ್ದರು. ಸಿನಿಮಾ ರಿಲೀಸ್ ಬಳಿಕವೂ ಇದನ್ನು ಮುಂದುವರಿಸಿದ್ದಾರೆ. ಅನೇಕ ಕಡೆಗಳಲ್ಲಿ ಪುಷ್ಪಾ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹಾಗೂ ವೈರತ್ವ ಇದ್ದೇ ಇದೆ. ಸಿನಿಮಾ ರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರವನ್ನು ನೋಡದೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆ ಹಂಚುವ ಕೆಲಸ ಮಾಡುತ್ತಿದ್ದಾರಂತೆ. ಈ ರೀತಿಯ ಆರೋಪವನ್ನು ಪುಷ್ಪಾ ಮಾಡಿದ್ದಾರೆ. ಜೊತೆಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಪುಷ್ಪಾ ಕೋರಿಕೆ.

‘ಟಾಕಿಂಗ್ ಪ್ಯಾರಟ್’ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ಪುಷ್ಪಾ ಸಂದರ್ಶನ ನೀಡಿದ್ದಾರೆ. ‘ನಮ್ಮ ಸಿನಿಮಾದ ಪ್ರಚಾರ ನೋಡಿ ಕೆಲವರು ನೆಗೆಟಿವ್ ಟಾಕ್​ ಹಬ್ಬಿಸಿದ್ದರು. ಸಿನಿಮಾ ಮಾಡುವವರಿಗೆ ನಿಜಕ್ಕೂ ಕಷ್ಟ ಇದೆ. ಇಲ್ಲಿ ನೂರು ತೊಂದರೆ ಇದೆ. ಮುಖ್ಯಮಂತ್ರಿ ಎದುರು ಹೋಗ್ತೀನಿ. ಇದನ್ನು ತಡೆಯಿರಿ ಎಂದು ಕೇಳುತ್ತೇನೆ. ಇದು ಸರ್ಕಾರದ ಕೆಲಸ’ ಎಂದು ಪುಷ್ಪಾ ಹೇಳಿದ್ದಾರೆ.

‘ಸಿನಿಮಾ ನೋಡಿ ಬಂದರೆ ತೊಂದರೆ ಇಲ್ಲ. ಆದರೆ, ಸುಮಾರು ಜನರು ಸಿನಿಮಾ ನೋಡದೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ನಾವು ದೂರು ತೆಗೆದುಕೊಂಡು ಬಂದಾಗ ಇದನ್ನು ಸ್ವೀಕರಿಸಬೇಕು. ಇಲ್ಲವಾದಲ್ಲಿ ರಾಕ್​ಲೈನ್​ ವೆಂಕಟೇಶ್​ಗೆ ಹೇಳಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಪುಷ್ಪಾ ಅವರು ಹೇಳಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಏಕೆ ಓಡುತ್ತಿಲ್ಲ ಎಂಬುದಕ್ಕೆ ಈ ರೀತಿಯ ಕುತಂತ್ರಗಳೇ ಕಾರಣ. ನನ್ನ ದುಡ್ಡು ನಾನು ತಡೆದುಕೊಳ್ಳುತ್ತೇನೆ. ಆದರೆ, ಇನ್ನೊಬ್ಬರಿಗೆ ಕಷ್ಟ ಆಗಬಹುದು. ನಾವು ಒಂದು ನಿರ್ಧಾರಕ್ಕೆ ಬರಲೇಬೇಕು. ಮುಂದಿನ ದಿನಗಳಲ್ಲಿ ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

The post ಯಶ್ ತಾಯಿ ಪುಷ್ಪಾ ಎಚ್ಚರಿಕೆ ? ಮುಖ್ಯಮಂತ್ರಿ ಎದುರು ಹೋಗ್ತೀನಿ ದೂರು ಸ್ವೀಕರಿಸದ್ದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ! appeared first on Good News 24x7.

]]>