rockingstarYash Archives - Good News 24x7 https://www.goodnews24x7.com/tag/rockingstaryash/ Kannada Sat, 01 Nov 2025 10:15:07 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg rockingstarYash Archives - Good News 24x7 https://www.goodnews24x7.com/tag/rockingstaryash/ 32 32 ‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು. ಗರ್ವದಿಂದ ಬಾಳು ನಾ ಕನ್ನಡಿಗನೆಂದು ; ಯಶ್ https://www.goodnews24x7.com/tap-your-chest-and-say-i-am-an-indian-live-with-pride-i-am-a-kannadigan-yash/ Sat, 01 Nov 2025 10:15:07 +0000 https://www.goodnews24x7.com/?p=7965 ಪ್ಯಾನ್ ಇಂಡಿಯಾ ಸ್ಟಾರ್ ಯಶ್ ತಮ್ಮ ಕನ್ನಡ ಪ್ರೀತಿ ಸ್ಪಷ್ಟಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದಂದು ‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’ ಎಂದು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೀತಿ ತೋರಿಸಿದ್ದಾರೆ. ಅಲ್ಲದೆ, ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕುರಿತಾದ ಎಲ್ಲಾ…

The post ‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು. ಗರ್ವದಿಂದ ಬಾಳು ನಾ ಕನ್ನಡಿಗನೆಂದು ; ಯಶ್ appeared first on Good News 24x7.

]]>

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ತಮ್ಮ ಕನ್ನಡ ಪ್ರೀತಿ ಸ್ಪಷ್ಟಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದಂದು ‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’ ಎಂದು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೀತಿ ತೋರಿಸಿದ್ದಾರೆ. ಅಲ್ಲದೆ, ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕುರಿತಾದ ಎಲ್ಲಾ ವದಂತಿಗಳನ್ನು ನಿರ್ಮಾಪಕರು ತಳ್ಳಿ ಹಾಕಿದ್ದು, ಸಿನಿಮಾ ಯುಗಾದಿಗೆ ತೆರೆಗೆ ಬರಲಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಕನ್ನಡದ ಮೇಲೆ ಗೌರವ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಆದರೆ, ಅವರು ಕರ್ನಾಟಕದಲ್ಲಿ ನಡೆಯೋ ಎಲ್ಲಾ ಬೆಳವಣಿಗೆ ಬಗ್ಗೆಯೂ ಪ್ರತಿಕ್ರಿಯೆ ನೀಡೋದಿಲ್ಲ. ಈ ಬಗ್ಗೆ ಅನೇಕರಿಗೆ ಬೇಸರ ಇದೆ. ಯಶ್ ಕನ್ನಡ ಮರೆತಿದ್ದಾರೆ ಎಂಬ ಆರೋಪ ಮರೆತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಒಂದೇ ಟ್ವೀಟ್ ಮೂಲಕ ಅವರು ಅದನ್ನು ಸುಳ್ಳು ಮಾಡಿದ್ದಾರೆ.

ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವ. ಈ ಸಮಯದಲ್ಲಿ ಅನೇಕರು ಶುಭಾಶಯ ಕೋರುತ್ತಿದ್ದಾರೆ. ಯಶ್ ಕೂಡ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಟ್ವೀಟ್ ಮಾಡಿದ್ದಾರೆ. ‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು. ಗರ್ವದಿಂದ ಬಾಳು ನಾ ಕನ್ನಡಿಗನೆಂದು. ಸಾವಿರ ಭಾಷೆ ನಾಲಿಗೆಯಲ್ಲಿರಲಿ. ಕನ್ನಡ ಭಾಷೆ ಹೃದಯದಲ್ಲಿರಲಿ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ’ ಎಂದು ಯಶ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

ಟಾಕ್ಸಿಕ್ ಸಿನಿಮಾ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಹಲವು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ತೆರೆಗೆ ಬರಲಿದೆ. ಯುಗಾದಿ ಪ್ರಯುಕ್ತ ಸಿನಿಮಾ ರಿಲೀಸ್ ಆಗಲಿದೆ.

ಹಬ್ಬಿತ್ತು ವದಂತಿ
‘ಟಾಕ್ಸಿಕ್’ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಈ ಸಿನಿಮಾದ ಶೂಟಿಂಗ್ ಬಗ್ಗೆ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್​ದಾಸ್​ಗೆ ಕಿರಿಕ್ ಆಗಿದೆ ಎಂದು ವರದಿ ಆಗಿತ್ತು. ಆದರೆ, ಇದನ್ನು ನಿರ್ಮಾಣ ಸಂಸ್ಥೆ ಕೆವಿಎನ್ ತಳ್ಳಿ ಹಾಕಿದೆ. ಇದು ಕೇವಲ ವಂದತಿ ಎಂದು ಸ್ಪಷ್ಟಪಡಿಸಿದೆ. ಇದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಸಿನಿಮಾ ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ.

The post ‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು. ಗರ್ವದಿಂದ ಬಾಳು ನಾ ಕನ್ನಡಿಗನೆಂದು ; ಯಶ್ appeared first on Good News 24x7.

]]>
ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ https://www.goodnews24x7.com/nithyashri-says-she-would-love-to-act-with-yash/ Sun, 14 Sep 2025 10:44:58 +0000 https://www.goodnews24x7.com/?p=7537 ನಟಿ ಆಗಬೇಕು ಎಂದು ಆಸೆ ಇದೆ. ಯಾವುದಾದರೂ ಓಕೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ. ಸೈಡ್ ರೋಲ್ ಆದರೂ ಪರವಾಗಿಲ್ಲ ಯಶ್​ ಅವರ ಜೊತೆ ಆ್ಯಕ್ಟ್​ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು…

The post ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ appeared first on Good News 24x7.

]]>

ನಟಿ ಆಗಬೇಕು ಎಂದು ಆಸೆ ಇದೆ. ಯಾವುದಾದರೂ ಓಕೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ. ಸೈಡ್ ರೋಲ್ ಆದರೂ ಪರವಾಗಿಲ್ಲ ಯಶ್​ ಅವರ ಜೊತೆ ಆ್ಯಕ್ಟ್​ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಆಸೆ ಇದ್ದೇ ಇದೆ. ಚಾನ್ಸ್​ ಸಿಕ್ಕರೇ ಹೋಗುತ್ತೇನೆ ಎಂದು ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಹಾಡು ಹಾಡಿ ವೈರಲ್ ಆದ ಯುವತಿ ನಿತ್ಯಾಶ್ರೀ ಹೇಳಿದ್ದಾರೆ.

ಮೊದಲು ನಾನು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಗುರುತಿಸಿಕೊಂಡು ಮೇಡಂ ನೀವು ಅಲ್ವಾ ಸಾಂಗ್ ಹಾಡಿದ್ದು ಸೆಲ್ಫಿ ಕೊಡಿ ಎಂದು ಕೇಳಿದಾಗ ಫ್ರೌಡ್ ಫೀಲ್ ಆಗುತ್ತದೆ. ಇದನ್ನು ನೋಡಿದಾಗ ಇನ್ನು ಎತ್ತರಕ್ಕೆ ಬೆಳೆಯಬೇಕು ಎನಿಸುತ್ತದೆ. ಆ್ಯಕ್ಟಿಂಗ್​ನಲ್ಲಿ ಚಾನ್ಸ್​ ಸಿಗಬೇಕು ಎಂದು ಕೇಳಿಕೊಳ್ಳುತ್ತೇನೆ. ಏಕೆಂದರೆ ನಟನೆ ನನಗೆ ಇಷ್ಟ. ಎಲ್ಲರಿಗೂ ಚಾನ್ಸ್​ ಕೊಟ್ಟ ಮೇಲೆ ನನಗೆ ಕೊಡಿ ಎಂದು ನಿತ್ಯಾಶ್ರೀ ಹೇಳಿದ್ದಾರೆ.

The post ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ appeared first on Good News 24x7.

]]>