royalhospitality Archives - Good News 24x7 https://www.goodnews24x7.com/tag/royalhospitality/ Kannada Tue, 11 Nov 2025 07:56:05 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg royalhospitality Archives - Good News 24x7 https://www.goodnews24x7.com/tag/royalhospitality/ 32 32 ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? https://www.goodnews24x7.com/is-mysore-central-jail-also-providing-royal-hospitality-to-prisoners/ Tue, 11 Nov 2025 07:54:46 +0000 https://www.goodnews24x7.com/?p=8114 ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್​ ಬೆನ್ನಲ್ಲೇ, ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ಮದ್ಯ, ಮಾಂಸ, ಮೊಬೈಲ್ ಫೋನ್‌ಗಳಂತಹ ದುಬಾರಿ ಸೌಲಭ್ಯಗಳು ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ. ಜೈಲುಗಳು ಸುಧಾರಣಾ ಕೇಂದ್ರಗಳ ಬದಲಿಗೆ ಮೋಜಿನ ತಾಣಗಳಾಗಿ ಮಾರ್ಪಟ್ಟಿದ್ದು, ರಾಜ್ಯದ ಕಾರಾಗೃಹ…

The post ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? appeared first on Good News 24x7.

]]>

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್​ ಬೆನ್ನಲ್ಲೇ, ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ಮದ್ಯ, ಮಾಂಸ, ಮೊಬೈಲ್ ಫೋನ್‌ಗಳಂತಹ ದುಬಾರಿ ಸೌಲಭ್ಯಗಳು ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ. ಜೈಲುಗಳು ಸುಧಾರಣಾ ಕೇಂದ್ರಗಳ ಬದಲಿಗೆ ಮೋಜಿನ ತಾಣಗಳಾಗಿ ಮಾರ್ಪಟ್ಟಿದ್ದು, ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿನ ಲೋಪಗಳನ್ನು ಇದು ಎತ್ತಿ ತೋರಿಸುತ್ತಿದೆ.

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್​ ಆಗಿದ್ದು, ಉಗ್ರ ಮತ್ತು ಅತ್ಯಾಚಾರಿಗಳೂ ಮೊಬೈಲ್​ ಬಳಸುತ್ತಿದ್ದ ಕ್ಲಿಪ್​ಗಳು ಹೊರ ಬಂದಿದ್ದವು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸರ್ಕಾರ ಘಟನೆ ಸಂಬಂಧ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಿ, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೂ ಕೈದಿಗಳಿಗೆ ಸಕಲ ಸೌಕರ್ಯ ಸಿಗುತ್ತಿರುವ ಬಗ್ಗೆ ವರದಿಯಾಗಿದೆ.

ಮೈಸೂರು ಕೇಂದ್ರ ಕಾರಾಗ್ರಹದಲ್ಲಿ ಕೆಲ ಕೈದಿಗಳಿಗೆ ಬೇಕಾದ ಸೌಲಭ್ಯ ಒದಗಿಸಲಾಗುತ್ತಿದ್ದು, ಮದ್ಯ, ಮಾಂಸಾಹಾರ, ಸಿಗರೇಟುಗಳು ಮತ್ತು ಬೀಡಿ, ಮೊಬೈಲ್ ಫೋನ್​ಗಳು ನಿರ್ದಿಷ್ಟ ಬೆಲೆಗೆ ಲಭ್ಯವಾಗುತ್ತಿವೆ. ಆ ಮೂಲಕ ಕೈದಿಗಳ ಮನಃಪರಿವರ್ತನಾ ಕೇಂದ್ರಗಳಾಗಬೇಕಿದ್ದ ಜೈಲು, ಮೋಜಿನ ಸ್ಥಳವಾಗಿ ಮಾರ್ಪಟ್ಟಿದೆ. ಕಾರಾಗೃಹದ ಒಳಭಾಗದಲ್ಲಿ ಪ್ರತಿ ವಸ್ತುವಿಗೂ ನಿಗದಿತ ಬೆಲೆ ಇದ್ದು, ಮಾರುಕಟ್ಟೆಯಲ್ಲಿ ದರ ಬದಲಾದರೂ ಇಲ್ಲಿ ಯಾವುದೇ ಏರಿಳಿತ ಆಗಲ್ಲ. ಒಂದು ವಸ್ತುವಿನ ಕನಿಷ್ಟ ಬೆಲೆಯೇ 150 ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವವರಿಗಾಗಿ ಪ್ರತಿ ವಾರ ಮದ್ಯ ಮತ್ತು ಮಾಂಸವನ್ನು ಆರ್ಡರ್​ ಮಾಡಲಾಗುತ್ತೆ ಎಂಬ ಬಗ್ಗೆ ಜೈಲ್ ವಿಸಿಟಿಂಗ್ ಬೋರ್ಡಿನ ಸದಸ್ಯ ಪವನ ಸಿದ್ದರಾಮು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಕೈದಿಗಳಿಗೆ ಐಷಾರಾಮಿ ಜೀವನಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕ್ಯಾಂಟೀನ್​ ಆಪರೇಟರ್​​ಗಳು ಮತ್ತು ಕೆಲ ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿ ಪಾತ್ರ ವಹಿಸಿದ್ದಾರೆ. ಇವು ಜೈಲು ಅಧೀಕ್ಷಕರ ಮೂಗಿನ ಕೆಳಗೆಯೇ ನಡೆಯುತ್ತಿರುವ ಘಟನೆಗಳಾಗಿವೆ. ಮೈಸೂರು ಪೊಲೀಸರು ಸರ್ಪ್ರೈಸ್​ ವಿಸಿಟ್​ಗಳನ್ನು ನಡೆಸಿದರೂ ಅಲ್ಲಿ ಏನು ಸಿಗದಿರುವುದು ವಿಪರ್ಯಾಸ. ಸರಿಯಾಗಿ ದಾಳಿ ನಡೆಸಿದರೆ ಪ್ರತಿಬಾರಿಯೂ ನೂರಾರು ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಬಹುದು. ಮೈಸೂರು ಕೇಂದ್ರ ಕಾರಾಗೃಹದ ಪ್ರಸ್ತುತ ಮುಖ್ಯ ಸೂಪರ್‌ಟೆಂಡೆಂಟ್ ಹಿಂದೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಸ ಮಾಡಿದ್ದರು. ಈಗ ಅಲ್ಲಿಂದ ದೇಶಾದ್ಯಂತ ಸುದ್ದಿಯಾಗುವ ರೀತಿಯ ವಿಡಿಯೋಗಳು ಹೊರ ಬಂದಿವೆ. ಆ ಮೂಲಕ ನಾವು ಕಾರಾಗೃಹಗಳಲ್ಲಿ ಪ್ಯಾರಲೆಲ್ ಮಾಫಿಯಾ ನೆಟ್‌ವರ್ಕ್ ನಿರ್ಮಿಸುತ್ತಿದ್ದೇವೆ ಎಂದು ಪವನ ಸಿದ್ದರಾಮು ತಿಳಿಸಿದ್ದಾರೆ ಎಂದು ವರದಿಯಾಗಿದೆ.

The post ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? appeared first on Good News 24x7.

]]>
ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ https://www.goodnews24x7.com/court-gives-big-relief-to-darshan-who-asked-to-give-him-poison/ Tue, 09 Sep 2025 12:01:13 +0000 https://www.goodnews24x7.com/?p=7424 ನಟ ದರ್ಶನ್​​ಗೆ ಬೆಂಗಳೂರು ಸೆಷನ್ಸ್ ಕೋರ್ಟ ಬಿಗ್ ರಿಲೀಫ್ ನೀಡಿದೆ. ದರ್ಶನ್​ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಅಲ್ಲದೆ, ದರ್ಶನ್​ಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಇದರೊಂದಿಗೆ ದರ್ಶನ್​ಗೆ ಬಿಗ್ ರಿಲೀಫ್ ದೊರೆತಂತಾಗಿದೆ.…

The post ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ appeared first on Good News 24x7.

]]>

ನಟ ದರ್ಶನ್​​ಗೆ ಬೆಂಗಳೂರು ಸೆಷನ್ಸ್ ಕೋರ್ಟ ಬಿಗ್ ರಿಲೀಫ್ ನೀಡಿದೆ. ದರ್ಶನ್​ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಅಲ್ಲದೆ, ದರ್ಶನ್​ಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಇದರೊಂದಿಗೆ ದರ್ಶನ್​ಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ (Darshan) ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ನಿರಾಕರಿಸಿದೆ. ಅಲ್ಲದೆ, ಅವರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿದ್ದು, ಬಿಗ್ ರಿಲೀಫ್ ದೊರೆತಂತಾಗಿದೆ. A2 ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಕಾರಣಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೊಲೆ ಆರೋಪಿ ದರ್ಶನ್​ಗೆ ಜೈಲಿನ ಆವರಣದಲ್ಲಿ ಓಡಾಡಲು ಅನುಮತಿ ಕೊಟ್ಟಿದೆ.
ದರ್ಶನ್ ಮನವಿಗೆ ಸ್ಪಂದಿಸಿದ ಕೋರ್ಟ್ ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಪುರಸ್ಕರಿಸಿದೆ. ದರ್ಶನ್​ಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಲು ಅನುಮತಿ ನೀಡಿದೆ. ಆದರೆ, ಜೈಲಿನ ಕೈಪಿಡಿ ಅನುಸರಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಬೇರೆ ಜೈಲಿಗೆ ಸ್ಥಳಾಂತರಿಸಲು ಐಜಿ ಕ್ರಮ ಕೈಗೊಳ್ಳಬಹುದು ಎಂದೂ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ವಿಷ ಕೊಡಿ ಎಂದಿದ್ದ ದರ್ಶನ್: ತೀರ್ಪಿಗೂ ಮುನ್ನ ವಿಚಾರಣೆ ವೇಳೆ ಜಡ್ಜ್ ಬಳಿ ಮನವಿ ಮಾಡಿದ್ದ ದರ್ಶನ್, ‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು. ಆಗ ಜಡ್ಜ್ ‘ನೀವು ಹಾಗೆಲ್ಲಾ ಹೇಳುವಂತಿಲ್ಲ’ ಎಂದಿದ್ದರು.

ವಿಷ ಕೊಡಿ ಎಂದಿದ್ದೇಕೆ ದರ್ಶನ್? ಸುಪ್ರೀಂ ಕೋರ್ಟ್​ ಖಡಕ್ ಸೂಚನೆಯ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲಿನಂತೆ ವಿಐಪಿ ಸೌಲಭ್ಯ ಸಿಗುತ್ತಿರಲಿಲ್ಲ. ರಾಜಾತಿಥ್ಯ ಸಿಗುತ್ತಿರಲಿಲ್ಲ. ಜೈಲಿನಲ್ಲಿ ಓರ್ವ ಸಾಮಾನ್ಯ ಖೈದಿಯಂತೆ ಪರಿಗಣಿಸಲಾಗುತ್ತಿತ್ತು. ಜೈಲಿನ ಖೈದಿಗಳ ಕೊಠಡಿಯಿಂದಲೂ ಹೊರಗೆ ಬರಲಾಗುತ್ತಿರಲಿಲ್ಲ. ಇದರಿಂದ ನರಕಯಾತನೆ ಅನುಭವಿಸುತ್ತಿರುವ ದರ್ಶನ್ ವಿಷ ಕೊಡಿ ಎಂದು ಮನವಿ ಮಾಡಿದ್ದರು. ಇದೀಗ ಕೋರ್ಟ್ ಸಹ ದರ್ಶನ್ ಬಗ್ಗೆ ತುಸು ಕನಿಕರ ತೋರಿದ್ದು, ಹಾಸಿಗೆ ದಿಂಬು ಹಾಗೂ ಜೈಲಿನಲ್ಲಿ ಓಡಾಡಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ದರ್ಶನ್​ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

The post ವಿಷ ಕೊಡಿ ಎಂದ ದರ್ಶನ್​ ಬಿಗ್ ರಿಲೀಫ್ ನೀಡಿದ ಕೋರ್ಟ್ appeared first on Good News 24x7.

]]>