#Rs 20 Archives - Good News 24x7 https://www.goodnews24x7.com/tag/rs-20/ Kannada Mon, 02 Mar 2026 11:56:59 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #Rs 20 Archives - Good News 24x7 https://www.goodnews24x7.com/tag/rs-20/ 32 32 ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? https://www.goodnews24x7.com/will-the-price-of-gold-in-india-soon-reach-rs-20000will-the-price-of-gold-in-india-soon-reach-rs-20000/ Mon, 02 Mar 2026 11:56:08 +0000 https://www.goodnews24x7.com/?p=8591 ಪಶ್ಚಿಮ ಏಷ್ಯಾ ಪ್ರದೇಶವು ಹೊತ್ತಿ ಉರಿಯುತ್ತಿದೆ. ಹಣವಂತರು ತಮ್ಮ ಹಣದ ಸುರಕ್ಷತೆಗೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಚಿನ್ನದ ಬೆಲೆ ಮತ್ತೆ ನಾಗಾಲೋಟ ಮಾಡುವುದು ನಿಶ್ಚಿತವಾಗಿದೆ. ತಜ್ಞರ ಪ್ರಕಾರ ಚಿನ್ನದ ಬೆಲೆ ಸದ್ಯದಲ್ಲೇ ಗ್ರಾಮ್​ಗೆ 20,000…

The post ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? appeared first on Good News 24x7.

]]>

ಪಶ್ಚಿಮ ಏಷ್ಯಾ ಪ್ರದೇಶವು ಹೊತ್ತಿ ಉರಿಯುತ್ತಿದೆ. ಹಣವಂತರು ತಮ್ಮ ಹಣದ ಸುರಕ್ಷತೆಗೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಚಿನ್ನದ ಬೆಲೆ ಮತ್ತೆ ನಾಗಾಲೋಟ ಮಾಡುವುದು ನಿಶ್ಚಿತವಾಗಿದೆ. ತಜ್ಞರ ಪ್ರಕಾರ ಚಿನ್ನದ ಬೆಲೆ ಸದ್ಯದಲ್ಲೇ ಗ್ರಾಮ್​ಗೆ 20,000 ರೂ ಸಮೀಪ ಮುಟ್ಟಬಹುದು.

ಪಶ್ಚಿಮ ಏಷ್ಯನ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಹೀಗೇ ಮುಂದುವರಿದರೆ ಚಿನ್ನದ ಬೆಲೆ ಹೈಜಂಪ್ ಮಾಡಿಕೊಂಡು ಸಾಗಬಹುದು ಎಂದು ಪರಿಣಿತರು ಊಹಿಸಿದ್ದಾರೆ. ಈಗಾಗಲೇ ಹೂಡಿಕೆದಾರರು ಗೋಲ್ಡ್ ಇಟಿಎಫ್​ಗಳನ್ನು ಹಣ ಹಾಕುವುದನ್ನು ಹೆಚ್ಚಿಸಿದ್ದಾರೆ. ಇದು ಇನ್ನೂ ಬಹಳಷ್ಟು ಹೆಚ್ಚಬಹುದು. ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಚಿನ್ನದ ಬೆಲೆ ಮೇಲೆ ಆಗಲಿದೆ.

20,000 ರೂ ಸಮೀಪಕ್ಕೆ ಚಿನ್ನದ ಬೆಲೆ?
ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್​ಗೆ 5,400 ಯುಎಸ್ ಡಾಲರ್ ಇದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಮ್​ಗೆ 17,434 ರು ಬೆಲೆ ಇದೆ. ಈಗ ಜಾಗತಿಕವಾಗಿ ಭಯದ ವಾತಾವರಣ ತೀವ್ರಗೊಳ್ಳುತ್ತಿದ್ದು, ಇಂಥ ಸಂದರ್ಭಗಳಲ್ಲಿ ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುವುದು ಸ್ವಾಭಾವಿಕ. ಈಗ ಅದೇ ಆಗುತ್ತಿರುವುದು. ತಜ್ಞರು ಮಾಡಿರುವ ಅಂದಾಜು ಪ್ರಕಾರ, ಒಂದು ಔನ್ಸ್​ಗೆ 5,400 ಡಾಲರ್ ಇರುವ ಚಿನ್ನದ ಬೆಲೆ ಕೆಲ ದಿನಗಳಲ್ಲಿ 6,000 ಡಾಲರ್ ಮುಟ್ಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,400 ರೂ ಮುಟ್ಟಬಹುದು.

ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಹೆಚ್ಚಿಸಲಿವೆ. ಗೋಲ್ಡ್ ಇಟಿಎಫ್​ಗಳ ಮೇಲೆ ಹೂಡಿಕೆ ಹೆಚ್ಚಲಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಮೂರು ಅಂಶಗಳು ಚಿನ್ನದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಬಹುದು. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಜಂಪ್ ಪಡೆಯಬಹುದು.ಭಾರತದಲ್ಲಿ ಚಿನ್ನದ ಬೆಲೆ ಸೋಮವಾರ ಬೆಳಗ್ಗೆ ಭರ್ಜರಿ ಇಳಿಕೆ ಕಂಡು ನಂತರ ಮತ್ತೆ ಶೇ. 4.37ರಷ್ಟು ಮೇಲೇರಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 296 ರೂ ದಾಟಿದೆ.

ಈ ಹಿನ್ನಲೆಯಲ್ಲಿ ತೈಲ ಬೆಲೆ ಏರಿಕೆ !
ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಏರಿಕೆ ಆಗುವ ಭೀತಿ ಇದೆ. ಈಗಾಗಲೇ ಹೆಚ್ಚಿನ ಮಟ್ಟದಲ್ಲಿರುವ ತೈಲ ಬೆಲೆ ಬ್ಯಾರಲ್​ಗೆ 90 ಡಾಲರ್ ಮಟ್ಟದಲ್ಲೇ ಹೆಚ್ಚಿನ ಕಾಲ ಮುಂದುವರಿದರೆ ಭಾರತದ ಆರ್ಥಿಕತೆಗೆ ತುಸು ಹಿನ್ನಡೆ ತರಬಹುದು.

The post ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? appeared first on Good News 24x7.

]]>