SaanviSudeep Archives - Good News 24x7 https://www.goodnews24x7.com/tag/saanvisudeep/ Kannada Wed, 23 Sep 2026 10:45:55 +0000 en-US hourly 1 https://wordpress.org/?v=7.1.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SaanviSudeep Archives - Good News 24x7 https://www.goodnews24x7.com/tag/saanvisudeep/ 32 32 ಕಾಲಿವುಡ್‌ಗೆ ಹೆಜ್ಜೆ ಇಟ್ಟ ಸಾನ್ವಿ ಸುದೀಪ್! https://www.goodnews24x7.com/saanvi-sudeep-steps-into-kollywood/ Wed, 23 Sep 2026 10:45:55 +0000 https://www.goodnews24x7.com/?p=10058 ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಮೊದಲು ’ಮಾರ್ಕ್ ’ ಸಿನಿಮಾದ ‘ಮಸ್ತ್‌ ಮಲೈಕಾ’ ಸೂಪರ್ ಹಿಟ್ ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಾನ್ವಿ ಸುದೀಪ್,…

The post ಕಾಲಿವುಡ್‌ಗೆ ಹೆಜ್ಜೆ ಇಟ್ಟ ಸಾನ್ವಿ ಸುದೀಪ್! appeared first on Good News 24x7.

]]>

ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಮೊದಲು ’ಮಾರ್ಕ್ ’ ಸಿನಿಮಾದ ‘ಮಸ್ತ್‌ ಮಲೈಕಾ’ ಸೂಪರ್ ಹಿಟ್ ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಾನ್ವಿ ಸುದೀಪ್, ಈಗ ‘ಸಿಗ್ಮಾ’ ಚಿತ್ರದ ‘ಸುಲೋಚನ’ ಎಂಬ ಮತ್ತೊಂದು ರೋಮ್ಯಾಂಟಿಕ್ ಹಾಡಿಗೆ ಧ್ವನಿಯಾಗುವ ಮೂಲಕ ಮತ್ತೆ ಸೌಂಡ್ ಮಾಡುತ್ತಿದ್ದಾರೆ.

ಕಾಲಿವುಡ್‌ಗೆ ಹೆಜ್ಜೆ ಇಟ್ಟ ಸಾನ್ವಿ
ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿದೇಶದಲ್ಲಿ ಸಿನಿಮಾ ನಿರ್ದೇಶನದ ತರಬೇತಿ ಮುಗಿಸಿ ಬಂದಿರುವ ಜೇಸನ್ ಸಂಜಯ್, ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆಯ ಕಥಾವಸ್ತುವಿನೊಂದಿಗೆ ಬಂದಿದ್ದಾರೆ. ಈ ಬಿಗ್ ಪ್ರಾಜೆಕ್ಟ್‌ ಅನ್ನು ಖ್ಯಾತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಹಾಡುವ ಅವಕಾಶ ಸಾನ್ವಿಗೆ ಸಿಕ್ಕಿದ್ದು, ಈ ಮೂಲಕ ಕಾಲಿವುಡ್​​ಗೆ ಕಾಲಿಟ್ಟಿದ್ದಾರೆ.

 

ಹೊಸ ಹೆಜ್ಜೆ ಇಟ್ಟ ಸಾನ್ವಿ
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡು ಗಮನ ಸೆಳೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಾಡು ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಸಾನ್ವಿ ಅವರ ವಿಶಿಷ್ಟ ಕಂಠ ಮತ್ತು ಧ್ವನಿಯಲ್ಲಿನ ಹೊಸತನ ಯುವಜನತೆಯನ್ನು ಅಪಾರವಾಗಿ ಸೆಳೆದಿತ್ತು. ಆ ಹಾಡಿನ ಯಶಸ್ಸಿನ ಬಳಿಕ ಅವರನ್ನು ಹುಡುಕಿ ಸಾಕಷ್ಟು ಆಫರ್ ಹುಡುಕಿ ಬರುತ್ತಿವೆ. ಅವರು ಈಗ ‘ಸುಲೋಚನ’ ಹಾಡನ್ನು ಒಪ್ಪಿ ಹಾಡಿದ್ದಾರೆ.

ಸಿಗ್ಮಾ ಚಿತ್ರದಲ್ಲಿ ಕಲಾವಿದರ ದಂಡು‘ಸಿಗ್ಮಾ’ ಸಿನಿಮಾದಲ್ಲಿ ಯುವ ನಟ ಸಂದೀಪ್ ಕಿಶನ್ ಹಾಗೂ ‘ಜಾತಿ ರತ್ನಲು’ ಖ್ಯಾತಿಯ ಫರಿಯಾ ಅಬ್ದುಲ್ಲಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾನ್ವಿ ಅವರ ಗಾಯನಕ್ಕೆ ಅದ್ಭುತ ಮೆಲೋಡಿ ಸ್ಪರ್ಶ ನೀಡಿದ್ದಾರೆ.

The post ಕಾಲಿವುಡ್‌ಗೆ ಹೆಜ್ಜೆ ಇಟ್ಟ ಸಾನ್ವಿ ಸುದೀಪ್! appeared first on Good News 24x7.

]]>