Sandalwood Archives - Good News 24x7 https://www.goodnews24x7.com/tag/sandalwood/ Kannada Tue, 23 Jun 2026 10:20:49 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Sandalwood Archives - Good News 24x7 https://www.goodnews24x7.com/tag/sandalwood/ 32 32 Dolly’s ‘Mother Promise’ release date set https://www.goodnews24x7.com/dollys-mother-promise-release-date-set/ Tue, 23 Jun 2026 10:20:49 +0000 https://www.goodnews24x7.com/?p=9642 ಡಾಲಿಯ ‘ಮದರ್ ಪ್ರಾಮಿಸ್’ ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ…

The post Dolly’s ‘Mother Promise’ release date set appeared first on Good News 24x7.

]]>

ಡಾಲಿಯ ‘ಮದರ್ ಪ್ರಾಮಿಸ್’ ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ ಭಿನ್ನವಾಗಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಡಾಲಿ ಧನಂಜಯ್ ಸಿನಿಮಾ ‘ಮದರ್ ಪ್ರಾಮಿಸ್’ ಬಿಡುಗಡೆಗೆ ದಿನಾಂಕ ನಿಗದಿ

ಡಾಲಿ ಧನಂಜಯ್ ಮತ್ತು ಅವರ ಹಲವು ಗೆಳೆಯರು ಒಟ್ಟಿಗೆ ಸೇರಿ ನಟಿಸಿರುವ ಸಿನಿಮಾ ‘ಮದರ್ ಪ್ರಾಮಿಸ್’ ಪೋಸ್ಟರ್, ಹಾಡು ಮತ್ತು ಹೆಸರಿನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ ಭಿನ್ನವಾಗಿದೆ. ಹೀಗಾಗಿ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

‘ಮದರ್ ಪ್ರಾಮಿಸ್’ ಸಿನಿಮಾವು ಜುಲೈ 10 ರಂದು ಬಿಡುಗಡೆ ಆಗಲಿದೆ. ಸಿನಿಮಾವು ಹಾಸ್ಯಮಯ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸೆಂಟಿಮೆಂಟ್ ಅಂಶಗಳು ಸಹ ಇರಲಿವೆ. ಸಿನಿಮಾವನ್ನು ನಟ ಮೈಸೂರು ಪೂರ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಡಾಲಿ ಧನಂಜಯ್, ಮೈಸೂರು ಪೂರ್ಣ ಸೇರಿದಂತೆ ಹಲವಾರು ಕಲಾವಿದರಿದ್ದಾರೆ. ವಿನಯಾ ಪ್ರಸಾದ್ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಗೀತಾ ಅವರು ಸಹ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಡಾಲಿ ಧನಂಜಯ್, ‘ಡಿಸ್ಟ್ರಿಬ್ಯೂಟರ್ ಲಾಕ್ ಆಗಿದ್ದಾರೆ. ಡೇಟ್ ಫಿಕ್ಸ್ ಆಗಿದೆ. ಹತ್ತಿರದ ಥಿಯೇಟರ್​​ಗಳಲ್ಲಿ ಜುಳೈ 10 ರಿಂದ ಆಟ ಶುರು’ ಎಂದಿದ್ದಾರೆ. ಡಾಲಿ ಅವರ ಪೋಸ್ಟ್​​ಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿ ಸಿನಿಮಾಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಪೋಸ್ಟರ್ ಚೆನ್ನಾಗಿದೆ ಎಂದು ಸಹ ಪ್ರಶಂಸಿಸಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಹಾಸ್ಯ ಪ್ರಧಾನ ರೌಡಿಗಳ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ‘ರೋಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕ್ಯಾಂಡಿ’, ‘ಮ್ಯಾಗಿ’, ‘7 ಅಪ್’, ‘ಜಿಲೇಬಿ’, ‘ಬ್ಯಾಂಡೆಡ್’ ಇನ್ನೂ ಹಲವು ಭಿನ್ನ ಹಾಗೂ ವಿಚಿತ್ರ ಹೆಸರುಗಳ ಪಾತ್ರಗಳು ಸಿನಿಮಾನಲ್ಲಿವೆ. ಸೀಮಿತ ಅವಧಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ಎಲ್ಲದಕ್ಕೂ ಉತ್ತರ ಸಿಗಲಿದೆ. ‘ಮದರ್ ಪ್ರಾಮಿಸ್’ ಸಿನಿಮಾ ಅನ್ನು ಮೈಸೂರು ಪೂರ್ಣ ನಿರ್ದೇಶಿಸಿದ್ದು, ಸಿನಿಮಾಕ್ಕೆ ನವನೀತ್ ಶ್ಯಾಮ್ ಸಂಗೀತ ನೀಡಿದ್ದಾರೆ. ಧನಂಜಯ್ ಜೊತೆಗೆ ಹರ್ಷ್ ಅವರು ಸಹ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಪ್ರದೀಪ್ ರಾವ್ ಸಂಕಲನವಿದೆ.

‘ಹಲಗಲಿ’, ‘ಉತ್ತರಕಾಂಡ’, ‘ಅಣ್ಣಾ ಫ್ರಂ ಮೆಕ್ಸಿಕೊ’ ಸೇರಿದಂತೆ ಒಂದು ಪರಭಾಷೆ ಸಿನಿಮಾನಲ್ಲಿಯೂ ಡಾಲಿ ನಟಿಸುತ್ತಿದ್ದಾರೆ.

The post Dolly’s ‘Mother Promise’ release date set appeared first on Good News 24x7.

]]>
ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. https://www.goodnews24x7.com/bigg-boss-former-contestant-ugram-manju-engaged/ Mon, 10 Nov 2025 05:37:12 +0000 https://www.goodnews24x7.com/?p=8082 ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು…

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>

ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಸ್ಯಾಂಡಲ್​ವುಡ್​ ನಟ ಹಾಗೂ ಬಿಗ್ ಬಾಸ್ ಸೀಸನ್​- 11ರ ಮಾಜಿ ಸ್ಪರ್ಧಿ ಮ್ಯಾಕ್ಸ್ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಪ್ಪ ಹೇಳಿದಂತೆ ಮ್ಯಾಕ್ಸ್​ ಮಂಜು ಮದುವೆಗೆ ರೆಡಿಯಾಗಿದ್ದು ಸದ್ಯದಲ್ಲೇ ಈ ಬಗ್ಗೆ ಮಾಹಿತಿ ತಿಳಿಸಬಹುದು.ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವರ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧದ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ. ಇದನ್ನೂ ಸದ್ಯದಲ್ಲೇ ಅಪ್​ಡೇಟ್ ಕೊಡಬಹುದು. ಅಲ್ಲಿವರೆಗೆ ಕಾಯಬೇಕು ಅಷ್ಟೇ.

ಮ್ಯಾಕ್ಸ್ ಮಂಜು ಹುಡುಗಿ ಯಾರು?
ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್​ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

 

 

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>
ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! https://www.goodnews24x7.com/bigbas-sisan12-arambha-yavaga-dina%e1%b9%85ka-rivil-ma%e1%b8%8dida-kicca-biggbosskicchasudeepsudeepsandalwoodmysorebaadshah-52ne-vasantakke-kali%e1%b9%ad%e1%b9%adiruva-sudip-avaru-ondina-mod/ Tue, 02 Sep 2025 06:08:03 +0000 https://www.goodnews24x7.com/?p=7258 52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.…

The post ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! appeared first on Good News 24x7.

]]>

52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.

ಸ್ಯಾಂಡಲ್​ವುಡ್​ ಬಾದಷಾ, ವೀರ ಮದಕರಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮಾಚರಣೆ. 52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಕಿಚ್ಚ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.

ಕನ್ನಡದ ಬಿಗ್​ಬಾಸ್- 12 ಯಾವಾಗ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಇದ್ದಾರೆ. ಈ ಸೀಸನ್ ಯಾವಾಗ ಶುರುವಾಗುತ್ತೆಂದು, ಈ ಬಗ್ಗೆ ಅಪ್​ಡೇಟ್ಸ್​ ಯಾವಾಗ ಸಿಗುತ್ತವೆ ಎನ್ನುವುದು ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗುತ್ತಿದೆ. ಸೀಸನ್​ 12ಕ್ಕೆ ಸುದೀಪ್ ನಿರೂಪಣೆ ಮಾಡಲ್ಲ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಸುದೀಪ್ ಅವರೇ ನಿರೂಪಣೆ ಮಾಡೋದು ಕನ್​ಫರ್ಮ್ ಆಗೋಗಿದೆ. ಜೊತೆಗೆ ಮೊನ್ನೆ ಮೊನ್ನೆ ಬಿಗ್​ಬಾಸ್​- 12ರ ಲೋಗೋ ಕೂಡ ರಿಲೀಸ್ ಮಾಡಲಾಗಿದೆ.

ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ಬರ್ತ್​ಡೇ ಸೆಲೆಬ್ರೆಷನ್​ ಆಯೋಜನೆ ಮಾಡಲಾಗಿತ್ತು. ವಿಶ್ ಮಾಡಲು ಆಗಮಿಸಿದ್ದ ಕಿಚ್ಚ ಇದೇ ವೇಳೆ ಬಿಗ್​​ಬಾಸ್​ ಬಗ್ಗೆ ದೊಡ್ಡ ಅಪ್​ಡೇಟ್ ಕೊಟ್ಟಿದ್ದಾರೆ. ಕಿಚ್ಚನನ್ನ ನೋಡುತ್ತಿದ್ದಂತೆ ಫ್ಯಾನ್ಸ್​ ಸಂತಸ ದುಪ್ಪಟ್ಟು ಆಗಿತ್ತು. ಇದೇ ವೇಳೆ ಅಭಿಮಾನಿಗಳಿಗೆ ಸಂದೇಶ ಕೊಟ್ಟ ಸುದೀಪ್ ಅತಿ ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.

ಇದೇ ಸೆಪ್ಟೆಂಬರ್ 28 ರಿಂದ ಟಿವಿಯಲ್ಲಿ ನಿಮಗೆ ಸಿಗುತ್ತೇನೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದರ ಅರ್ಥ ಬಿಗ್​ಬಾಸ್​- 12 ಇದೇ ಸೆಪ್ಟೆಂಬರ್ 28 ರಿಂದ ಆರಂಭವಾಗುವುದು ಪಕ್ಕಾ ಆದಂತೆ ಆಗಿದೆ. ಸುದೀಪ್ ಅವರೇ ಬಿಗ್​ಬಾಸ್​- 12 ಆರಂಭದ ದಿನಾಂಕವನ್ನು ರಿವೀಲ್ ಮಾಡಿದಂತೆ ಆಗಿದೆ. ಇನ್ನು ಕೇವಲ 26 ದಿನಗಳ ಬಳಿಕ ಕಿರುತೆರೆ ಮೇಲೆ ಕಿಚ್ಚ ಸುದೀಪ್​ ಅವರನ್ನು ನೋಡಬಹುದು.

ಇನ್ನು ಕಳೆದ ಸೀಸನ್​​, ಬಿಗ್​ಬಾಸ್​- 11ರಲ್ಲಿ ಹಳ್ಳಿ ಹುಡುಗ ಹನುಮಂತು ಮೊದಲ ಸ್ಥಾನದಲ್ಲಿ ಪ್ರಶಸ್ತಿ ಪಡೆದುಕೊಂಡರೇ, ತ್ರಿವಿಕ್ರಮ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಮನೆಯಲ್ಲಿ ಸಾಕಷ್ಟು ಟ್ವಿಸ್ಟ್​ ಟರ್ನ್ಸ್​, ಜಗಳ, ನಾಮಿನೇಷನ್, ಎಲಿಮಿನೆಷನ್, ಕಿಚ್ಚನ ಚಪ್ಪಾಳೆ, ಮನೆಯಲ್ಲಿನ ಆಟ ಎಲ್ಲವೂ ವೀಕ್ಷಕರನ್ನು ರಜಿಸಿದ್ದವು. ಅದರಂತೆ ಈ ಬಾರಿಯೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಂಟೇಸ್ಟೆಂಟ್​ಗಳು ಯಾರು ಯಾರು ಎನ್ನುವುದು ಇನ್ನು ನಿಗೂಢವಾಗಿದೆ.

The post ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! appeared first on Good News 24x7.

]]>
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… https://www.goodnews24x7.com/sandalwood-beauty-ankita-amar-has-finally-broken-her-silence-about-marriage-listen-to-what-the-actress-said/ Sat, 16 Aug 2025 10:51:15 +0000 https://www.goodnews24x7.com/?p=6245 ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ…

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>

ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ ಆದ ಈಕೆ, ಟಿವಿ ಧಾರಾವಾಹಿಗಳ ಮೂಲಕ ನಟನೆಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲಿಗೆ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಬಳಿಕ ‘ನಮ್ಮನೆ ಯುವರಾಣಿ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದು “ಮೀರಾ” ಎಂಬ ಪಾತ್ರದಿಂದ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು.

ಅಂಕಿತಾ ಕೇವಲ ನಟಿಯಷ್ಟೇ ಅಲ್ಲದೆ, ಖ್ಯಾತ ನಿರೂಪಕಿ, ಗಾಯಕಿ ಹಾಗೂ ನೃತ್ಯಕಾರಿಯೂ ಹೌದು. ‘ಎದೆ ತುಂಬಿ ಹಾಡುವೆನು’ ಎಂಬ ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿ ಹೊಸ ಮಟ್ಟಿಗೆ ಗುರುತಿಸಿಕೊಂಡ ಅವರು, ಮೈಸೂರಿನವರಾಗಿದ್ದು ಎಂಬಿಬಿಎಸ್‌ ಓದಿದ್ದರೂ ಕಲೆಯತ್ತ ಹೆಚ್ಚಿನ ಆಸಕ್ತಿ ತೋರಿ ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನೇ ತಮ್ಮ ಜೀವನ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನೂರಾರು ಮಹಿಳೆಯರ ನಡುವೆ ಭಜನೆಗೆ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆ ಪಡೆದ ಘಟನೆ ಈತನಕ ನೆನಪಿನಲ್ಲಿಯೇ ಉಳಿದಿದೆ.

ಇತ್ತೀಚೆಗೆ ಚಿತ್ತಾರಾ ಸ್ಟಾರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಅಂಕಿತಾಗೆ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ತಮTypical ಶೈಲಿಯಲ್ಲಿ ಉತ್ತರ ನೀಡಿ ಎಲ್ಲರ ಮುಖದಲ್ಲಿ ನಗು ತರಿಸಿದರು. “ಈಗಷ್ಟೇ ಮದುವೆಯಾದ ನಿರೂಪಕಿಯನ್ನೊಮ್ಮೆ ನೋಡಿ, ನಾನೂ ಮದುವೆಯಾಗೋಣ ಅಂದುಕೊಳ್ಳುತ್ತೇನೆ. ಇನ್ನೂ ಐದು ವರ್ಷ ಹೊಸದಾಗಿ ಮದುವೆಯಾದವರನ್ನು ನೋಡಿ ನೀವು ಹೇಗಿದ್ದೀರಾ ಅಂತ ಗಮನಿಸಿದಮೇಲೆ ನಾನು ಮದುವೆಯಾಗ್ತೀನಿ” ಎಂದು ಅಂಕಿತಾ ಹುಬ್ಬೆತ್ತಿಸಿದರು. ತಮಗೆ ಬದಲಿಗೆ ಅಭಿಮಾನಿಗಳು ಮದುವೆಯ ಬಗ್ಗೆ ಹೆಚ್ಚು ಕಾತುರದಿಂದ ಕಾದು ನೋಡುತ್ತಿದ್ದಾರೆ ಎಂದೂ ಅವರು ನಗುಮಾಡುತ್ತಲೇ ನಾಚಿಕೆಯಿಂದ ಹೇಳಿದರು.

ಅವರ ಸ್ಯಾಂಡಲ್‌ವುಡ್ ಪ್ರಯಾಣಕ್ಕೂ ಇಂದಿನಿಂದಲೇ ಸಕ್ರೀಯವಾಗಿದೆ. ‘ಅಬಜದಬ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರೂ ಅದು ಇನ್ನೂ ಬಿಡುಗಡೆ ಆಗಿಲ್ಲ. ಆದರೂ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ‘ರಂಗು ರಗಳೆ’ ಸೇರಿದಂತೆ ಹಲವು ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳಲ್ಲಿ ತಮ್ಮ ವೈವಿಧ್ಯಮಯ ಪ್ರತಿಭೆ ತೋರಿಸುವದಕ್ಕೆ ಸಜ್ಜಾಗಿದ್ದಾರೆ.

ಅಂಕಿತಾ ತಮ್ಮ ಕಲಾ ಆಸಕ್ತಿಯ ಬಗ್ಗೆ ಮಾತನಾಡುತ್ತಿದ್ದಂತೆ, “ನನಗೆ ಮಲ್ಟಿಟಾಸ್ಕಿಂಗ್‌ ಅಂದರೆ ಇಷ್ಟ. ನಾಟಕ, ನೃತ್ಯ, ಗಾಯನ, ನಿರೂಪಣೆ — ಇವು ಎಲ್ಲವನ್ನೂ ನಾನು ಸಮಾನವಾಗಿ ಇಷ್ಟಪಡುವೆ. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೇ ಇದ್ದರೆ ಓದುವ ಆಸಕ್ತಿಯೇ ಇರುತ್ತಿರಲಿಲ್ಲ. ಈಗ ನಾನು ನೃತ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ, ಜೊತೆಗೆ ಸುಗಮ ಸಂಗೀತ ಕಲಿಯುತ್ತಿದ್ದೇನೆ” ಎಂದಿದ್ದರು.

ಒಟ್ಟಾರೆ, ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅಂಕಿತಾ ಅಮರ್‌ ಸ್ಯಾಂಡಲ್‌ವುಡ್‌ನಲ್ಲಿ ನಿಜವಾದ ಕಲಾವಿದೆ ಎಂಬ ಗುರುತನ್ನು ಸಂಪಾದಿಸಿದ್ದಾರೆ.

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>
ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮಗನ ಹೆಸರೇನು ಗೊತ್ತಾ? https://www.goodnews24x7.com/do-you-know-the-name-of-vasishtha-simha-and-actress-haripriyas-son/ Sat, 16 Aug 2025 09:45:07 +0000 https://www.goodnews24x7.com/?p=6225 ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮಗನಿಗೆ ಹೆಸರಿಡುವ ಶಾಸ್ತ್ರ ಹಮ್ಮಿಕೊಂಡಿದ್ದಾರೆ ಕನ್ನಡದ ಸ್ಟಾರ್ ದಂಪತಿ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ತಮ್ಮ ಮುದ್ದಾದ ಮಗನ ನಾಮಕರಣ ಸಂಭ್ರಮದಲ್ಲಿದ್ದಾರೆ.…

The post ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮಗನ ಹೆಸರೇನು ಗೊತ್ತಾ? appeared first on Good News 24x7.

]]>

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮಗನಿಗೆ ಹೆಸರಿಡುವ ಶಾಸ್ತ್ರ ಹಮ್ಮಿಕೊಂಡಿದ್ದಾರೆ ಕನ್ನಡದ ಸ್ಟಾರ್ ದಂಪತಿ.

ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ತಮ್ಮ ಮುದ್ದಾದ ಮಗನ ನಾಮಕರಣ ಸಂಭ್ರಮದಲ್ಲಿದ್ದಾರೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ಮಗನಿಗೆ ಹೆಸರಿಡುವ ಶಾಸ್ತ್ರ ಹಮ್ಮಿಕೊಂಡಿದ್ದಾರೆ.

ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಹಾಗೂ ಮಗು ಸೇಮ್​ ಕಾಸ್ಟ್ಯೂಮ್ ಧರಿಸಿಕೊಂಡಿದ್ದಾರೆ. ಅದೇ ಕಾಸ್ಟ್ಯೂಮ್​ನಲ್ಲಿ ಮೂವರು ಮಿಂಚುತ್ತಿದ್ದಾರೆ.


ವಿಶೇಷ ಏನೆಂದರೆ ಕೃಷ್ಣ ಜನ್ಮಾಷ್ಟಮಿಯಂದೇ ಮುದ್ದಾದ ಮಗನಿಗೆ ಹೆಸರನ್ನು ಇಡಲು ದಂಪತಿ ಮುಂದಾಗಿದ್ದಾರೆ. ಆದ್ರೆ ಇಂದು ಸಂಜೆ 6.00 ಗಂಟೆಗೆ ಹೆಸರನ್ನು ದಂಪತಿ ರಿವೀಲ್​ ಮಾಡಲಿದ್ದಾರೆ. ಸದ್ಯ ಇದೇ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಕೂಡ ದಂಪತಿಯನ್ನು ನೋಡಿ ಖುಷಿ ಪಟ್ಟಿದ್ದಾರೆ.

The post ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮಗನ ಹೆಸರೇನು ಗೊತ್ತಾ? appeared first on Good News 24x7.

]]>
‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ https://www.goodnews24x7.com/dimple-queen-in-coolie-movie-rachita-shared-a-photo-with-rajini/ Sat, 16 Aug 2025 06:29:01 +0000 https://www.goodnews24x7.com/?p=6175 ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ…

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>

ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು.

ಅಷ್ಟೇ ಅಲ್ಲದೇ ಕೂಲಿ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಹೌದು, ಸರ್​ಪ್ರೈಸ್​ ಎಂಬಂತೆ ಕೂಲಿ ಸಿನಿಮಾದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ನಟಿ ರಚಿತಾ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊದ ಮೊದಲು ಪಾಪದ ಹುಡುಗಿಯಾಗಿ ಕಾಣಿಸಿಕೊಂಡ ರಚ್ಚು ತದನಂತರ ರೆಬೆಲ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲು ಬಾರಿಗೆ ರಚಿತಾ ರಾಮ್​ ಅವರ ನಟನೆಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ಕೊಡುತ್ತಿದ್ದಾರೆ.
ಸಿನಿಮಾ ರಿಲೀಸ್​ ಆಗಿರೋ ಖುಷಿಯಲ್ಲಿ ನಟಿ ರಚಿತಾ ರಾಮ್​ ಸೂಪರ್ ಸ್ಟಾರ್​ ಜೊತೆಗೀನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಜಿನಿ ಜೊತೆಗೆ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋ ಜೊತೆಗೆ ‘‘ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಇದನ್ನೂ ಹಂಚಿಕೊಳ್ಳಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್​ ಯೂ’’ ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಇದೇ ಫೋಟೋ ಜೊತೆಗೆ ರಚಿತಾ ರಾಮ್​ ಅಭಿನಯದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್​ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೂಲಿಯಲ್ಲಿ ಅದ್ಭುತ ಅಭಿನಯ, ನೀವು ಹಾಗೇ ಅಭಿನಯಿಸುತ್ತೀರಾ ಅಂತ ಎಂದಿಗೂ ನಿರೀಕ್ಷಿಸಿರಲಿಲ್ಲ ಮೇಡಂ, ಅಳುವುವವರನ್ನು ಯಾವತ್ತು ನಂಬಬಾರದು ಅಂತ ನಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ನೂ, 2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ ಈಗ ಕನ್ನಡದ ಬಹು ಬೇಡಿಕೆಯ ನಟಿ ಎನಿಸಿಕೊಂಡರು. 2022ರಲ್ಲಿ ಟಾಲಿವುಡ್‌ಗೆ ಪ್ರವೇಶಿಸಿದ್ದ ಅವರು ಈ ವರ್ಷ ಕೂಲಿ ಸಿನಿಮಾ ಮೂಲಕ ಕಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ.

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>
ತನ್ನ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವಿಗೆ ಅಜ್ಜಿಯ ಹೆಸರನ್ನೇ ಇಟ್ಟ ನಟಿ ಭಾವನಾ; ಈ ಹೆಸರನ್ನೆ ಆಯ್ಕೆ ಮಾಡಿದ್ಯಾಕೆ ಗೊತ್ತಾ ? https://www.goodnews24x7.com/actress-bhavana-named-her-twin-daughter-after-her-grandmother-do-you-know-why-she-chose-this-name/ Tue, 05 Aug 2025 11:12:47 +0000 https://www.goodnews24x7.com/?p=5382 ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಬೋಲ್ಡ್ ಹೆಜ್ಜೆ ಇಟ್ಟಿದ್ದಾರೆ. ಭಾವನಾ ರಾಮಣ್ಣ ಮದುವೆ ಆಗದೆಯೇ ಮಗುವನ್ನು ಪಡೆಯಲು ಮುಂದಾಗಿದ್ದಾರೆ. ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಸಧ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.…

The post ತನ್ನ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವಿಗೆ ಅಜ್ಜಿಯ ಹೆಸರನ್ನೇ ಇಟ್ಟ ನಟಿ ಭಾವನಾ; ಈ ಹೆಸರನ್ನೆ ಆಯ್ಕೆ ಮಾಡಿದ್ಯಾಕೆ ಗೊತ್ತಾ ? appeared first on Good News 24x7.

]]>

ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಬೋಲ್ಡ್ ಹೆಜ್ಜೆ ಇಟ್ಟಿದ್ದಾರೆ. ಭಾವನಾ ರಾಮಣ್ಣ ಮದುವೆ ಆಗದೆಯೇ ಮಗುವನ್ನು ಪಡೆಯಲು ಮುಂದಾಗಿದ್ದಾರೆ. ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಸಧ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಐವಿಎಫ್‌ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳ ಮಕ್ಕಳಿಗೆ ಭಾವನಾ ತಾಯಿಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧವಾಗಿ ಚರ್ಚೆ ನಡೆಯುತ್ತಿದೆ. ಈ ಯಾವ ಚರ್ಚೆ, ಟೀಕೆಗೂ ತಲೆ ಕೆಡಿಸಿಕೊಳ್ಳದ ಭಾವನಾ ರಾಮಣ್ಣ ಅವರು ತಮ್ಮ ನಿರ್ಧಾರವನ್ನ ಖುಷಿಯಿಂದ ಹಂಚಿಕೊಂಡಿದ್ದರು.

ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ತಾನು ಯಾಕೆ ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಮುಂದಾದೆ ಅನ್ನೋದನ್ನು ಈಗಾಗಲೇ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ನಟಿ ಭಾವನಾ ರಾಮಣ್ಣ ಅವರು ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಅವರು ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಅವಳಿ ಮಕ್ಕಳು ಹುಟ್ಟುತ್ತವೆಂದು ಹಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು. ಅವರನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋ ಬಗ್ಗೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಸಂದರ್ಶನದಲ್ಲಿ ನಟಿ ಭಾವನಾ ಅವರು, 40 ರಿಂದ 50ರ ಒಳಗಿನ ವಯಸ್ಸಿನವರಾಗಿದ್ದರಿಂದ ಸಹಜ ಹೆರಿಗೆ ಆಗುವುದಿಲ್ಲ. ಸಿ ಸೆಕ್ಷನ್ ಮೂಲಕವೇ ಹೆರಿಗೆ ಮಾಡಿಸುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸಂದರ್ಶನದಲ್ಲಿ ನಟಿ ಭಾವನಾ ರಾಮಣ್ಣ ಅವರು, ತಮಗೆ ಹುಟ್ಟುವ ಮಕ್ಕಳಿಗೆ ಹೆಸರನ್ನೂ ಕೂಡ ಇಟ್ಟಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಏನು ಹೆಸರು? ಗಂಡು ಮಗು ಹುಟ್ಟಿದರೆ ಏನು ಹೆಸರು? ಅನ್ನೋದನ್ನೂ ಈಗಾಗಲೇ ತೀರ್ಮಾನಿಸಿದ್ದಾರೆ.

ಭಾವನಾ ರಾಮಣ್ಣ ಅವರಿಗೆ ಕೆಲವು ದಿನಗಳ ಹಿಂದಷ್ಟೇ ಹಸಿರು ಹಾಗೂ ಕೆಂಪು ಬಣ್ಣದ ಸೀರೆಯುಟ್ಟು ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ್ದರು. ಗರ್ಭಿಣಿಯಾಗಿರುವ ನಟಿ ಭಾವನಾ ಅವರಿಗೆ ತಮ್ಮ ಮುಂದಿನ ಬದುಕು ಹೇಗಿರುತ್ತೆ ಅನ್ನೋದು ಗೊತ್ತಿದೆ. ಅದೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಈ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ವೈದ್ಯರು ಅವಳಿ ಮಕ್ಕಳು ಹುಟ್ಟುತ್ತಾರೆಂದು ಗೊತ್ತಾಗುತ್ತಿದ್ದಂತೆ ಇದೇ ಹೆಸರು ಇಡಬೇಕು ಎಂದೂ ನಿರ್ಧರಿಸಿದ್ದಾರೆ. ಅದರಲ್ಲೂ ಹೆಣ್ಣು ಮಗು ಹುಟ್ಟಿದರೆ, ರುಕ್ಮಿಣಿ ಎಂದು ಹೆಸರು ಇಡುವುದಕ್ಕೆ ನಟಿ ಭಾವನಾ ರಾಮಣ್ಣ ಅವರು ನಿರ್ಧರಿಸಿದ್ದಾರೆ. ಇದೇ ಹೆಸರು ಇಡುವುದಕ್ಕೂ ಒಂದು ವಿಶೇಷ ಕಾರಣವಿದೆಯಂತೆ.

ಹೆಣ್ಣು ಮಗುವಿಗೆ ಮಾತ್ರ ಯೋಚನೆ ಮಾಡಿದ್ದು, ತನ್ನ ಅಜ್ಜಿಯ ಹೆಸರನ್ನೇ ಇಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ನಟಿ ಭಾವನಾ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಅಜ್ಜಿಯ ಹೆಸರು ರುಕ್ಮಿಣಿ. ಹೀಗಾಗಿ ಹೆಣ್ಣು ಮಗು ಹುಟ್ಟಿದರೆ ರಕ್ಮಿಣಿ ಎಂದು ಹೆಸರಿಡುತ್ತೇನೆ. ಆದರೆ, ಗಂಡು ಮಗುವಿಗೆ ಇನ್ನೂ ಹೆಸರಿಡುವ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಇನ್ನೂ ನಟಿ ಭಾವನಾ ಅವರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುವುದಾಗಿಯೂ ಹೇಳಿಕೊಂಡಿದ್ದಾರೆ.

 

The post ತನ್ನ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವಿಗೆ ಅಜ್ಜಿಯ ಹೆಸರನ್ನೇ ಇಟ್ಟ ನಟಿ ಭಾವನಾ; ಈ ಹೆಸರನ್ನೆ ಆಯ್ಕೆ ಮಾಡಿದ್ಯಾಕೆ ಗೊತ್ತಾ ? appeared first on Good News 24x7.

]]>
ಆಪರೇಷನ್ ಸಿಂಧೂರ ಒಂದೊಳ್ಳೆ ರೋಚಕ ಕಥೆ ಎಂದ ನಿರ್ದೇಶಕ …. https://www.goodnews24x7.com/%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%b8%e0%b2%bf%e0%b2%82%e0%b2%a7%e0%b3%82%e0%b2%b0-%e0%b2%92%e0%b2%82%e0%b2%a6%e0%b3%8a%e0%b2%b3%e0%b3%8d%e0%b2%b3%e0%b3%86/ Wed, 07 May 2025 12:58:26 +0000 https://www.goodnews24x7.com/?p=3709 ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಭಾರತೀಯರು ಉಗ್ರರ ದಾಳಿಗೆ ಕೊನೆಯುಸಿರೆಳೆದಿದ್ದರು. ಇಂದು ಭಾರತ, ಪಾಕಿಸ್ತಾನಿಯರಿಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಬಹುದು.ಇದರ ಬೆನ್ನಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಿನಿಮವಾಗುವ ಚರ್ಚೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ…

The post ಆಪರೇಷನ್ ಸಿಂಧೂರ ಒಂದೊಳ್ಳೆ ರೋಚಕ ಕಥೆ ಎಂದ ನಿರ್ದೇಶಕ …. appeared first on Good News 24x7.

]]>

ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಭಾರತೀಯರು ಉಗ್ರರ ದಾಳಿಗೆ ಕೊನೆಯುಸಿರೆಳೆದಿದ್ದರು. ಇಂದು ಭಾರತ, ಪಾಕಿಸ್ತಾನಿಯರಿಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಬಹುದು.ಇದರ ಬೆನ್ನಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಿನಿಮವಾಗುವ ಚರ್ಚೆಯಾಗುತ್ತಿದೆ.
ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರೋ ಕಾರ್ಯಾಚರಣೆ ಮೈ ಜುಮ್ಮೆನ್ನುವಂತೆ ಮಾಡಿದೆ. ಭಾರತೀಯ ಸೇನೆಯ ಈ ಯಶಸ್ವಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿರೋದೇ ವಿಶೇಷವಾಗಿದೆ.ಆಪರೇಷನ್ ಸಿಂಧೂರ ಪಹಲ್ಗಾಮ್‌ನಲ್ಲಿ ಸಿಂಧೂರ ಅಳಿಸಿದ ಉಗ್ರರ ಸಂಹಾರದ ಪ್ರತೀಕವಾಗಿದೆ. ಕಣ್ಣ ಮುಂದೆಯೇ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನ್ಯಾಯ ನೀಡುವ ಭಾರತದ ಹೋರಾಟವಾಗಿದೆ. ಭಯೋತ್ಪಾದಕರ ಬುಡಕ್ಕೆ ಬೆಂಕಿ ಇಟ್ಟಿರುವ ಅಪರೇಷನ್ ಸಿಂಧೂರ ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯೋದರಲ್ಲೂ ಅನುಮಾನವೇ ಇಲ್ಲ.

ಆಪರೇಷನ್ ಸಿಂಧೂರದ ಬಗ್ಗೆ ಎಲ್ಲೆಲ್ಲೂ ಚರ್ಚೆಯಾಗುತ್ತಿರುವಾಗಲೇ ಆಪರೇಷನ್ ಸಿಂಧೂರ ಸಿನಿಮಾ ಆಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎ.ಎಂ.ಆರ್ ರಮೇಶ್‌ ಅವರು ಈ ಬಗ್ಗೆ ಮಾತನಾಡಿ ಇದು ಒಂದೊಳ್ಳೆ ರೋಚಕ ಕಥೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.ಸೈನೈಡ್, ಅಟ್ಟಹಾಸ ಅನ್ನೋ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಮಾತನಾಡಿ ಇಂದು ನಿಜಕ್ಕೂ ರೋಮಾಂಚನವಾಗುತ್ತಿದೆ. ಭಯೋತ್ಪಾದಕರು ಸತ್ತಿದ್ರೆ, ನಿಜಕ್ಕೂ ಖುಷಿಯ ವಿಚಾರ. ಇಂತಹದೊಂದು ಪ್ರತೀಕಾರದ ದಾಳಿಯನ್ನ ನಾವು ಎದುರು ನೋಡುತ್ತಾ ಇದ್ವಿ. ಉಗ್ರರಿಗೆ ಭಾರತೀಯ ಸೇನೆ ತಕ್ಕದಾದ ಉತ್ತರ ಕೊಟ್ಟಿದೆ ಎಂದಿದ್ದಾರೆ.

ಆಪರೇಷನ್ ಸಿಂಧೂರ ಹೆಸರಲ್ಲೇ ಒಂದು ಎಮೋಷನ್ ಇದೆ. ಸಿನಿಮಾ ಮಾಡೋಕೆ ನಿಜಕ್ಕೂ ಒಂದೊಳ್ಳೆ ಘಟನೆ ಇದು‌. ಈ ಸ್ಕ್ರೈಕ್ ಹಿಂದಿನ ಕಥೆ ಹಿಡಿದ್ರೆ ಒಂದೊಳ್ಳೆ ರೋಚಕ ಕಥೆ ಆಗುತ್ತೆ. ಯಾರಾದ್ರೂ ಈ ಸಿನಿಮಾ ಮಾಡೋರಿಗೆ ಒಳ್ಳೆಯದಾಗಲಿ. ಈಗಾಗಲೇ ಬಹುಶಃ ಯಾರಾದರೂ ಟೈಟಲ್ ರಿಜಿಸ್ಟರ್ ಮಾಡಿಸಿದ್ರೂ ಮಾಡಿಸಿರುತ್ತಾರೆ ಎಂದು ಎ.ಎಂ.ಆರ್ ರಮೇಶ್ ಹೇಳಿದ್ದಾರೆ.

The post ಆಪರೇಷನ್ ಸಿಂಧೂರ ಒಂದೊಳ್ಳೆ ರೋಚಕ ಕಥೆ ಎಂದ ನಿರ್ದೇಶಕ …. appeared first on Good News 24x7.

]]>
ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… https://www.goodnews24x7.com/%e0%b2%a4%e0%b2%ae%e0%b3%8d%e0%b2%ae-%e0%b2%ae%e0%b2%97%e0%b2%b3-%e0%b2%b9%e0%b3%81%e0%b2%9f%e0%b3%8d%e0%b2%9f%e0%b3%81%e0%b2%b9%e0%b2%ac%e0%b3%8d%e0%b2%ac%e0%b2%b5%e0%b2%a8%e0%b3%8d%e0%b2%a8%e0%b3%81/ Sat, 05 Apr 2025 12:38:37 +0000 https://www.goodnews24x7.com/?p=3068 ಚಂದನವನದ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಚಂದ್ರಕಾಂತ್ ಸಖತ್ ಖುಷಿಯಲ್ಲಿದ್ದಾರೆ. ಕಾರಣ ಅವರ ಮಗಳಾದಂತಹ ನೇಸರಾಳ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ. ದಂಪತಿಗಳಿಬ್ಬರಿಗೂ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸುವುದೇ ಒಂದು ಹಬ್ಬವಾಗಿದೆ. ಹೌದು, 2022ರಲ್ಲಿ ಉದ್ಯಮಿ ಯಶಸ್ಸು…

The post ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… appeared first on Good News 24x7.

]]>

ಚಂದನವನದ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಚಂದ್ರಕಾಂತ್ ಸಖತ್ ಖುಷಿಯಲ್ಲಿದ್ದಾರೆ. ಕಾರಣ ಅವರ ಮಗಳಾದಂತಹ ನೇಸರಾಳ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ. ದಂಪತಿಗಳಿಬ್ಬರಿಗೂ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸುವುದೇ ಒಂದು ಹಬ್ಬವಾಗಿದೆ.

ಹೌದು, 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರನ್ನು ಚಂದನವನದ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಇದೀಗ ಆ ಸಂಭ್ರಮವನ್ನು ಆಚರಿಸಲು ಒಂದು ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಮುದ್ದಾದ ಮಗಳ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದೀಗ ನಟಿ ಅದಿತಿ ಪ್ರಭುದೇವ ಅವರ ಮುದ್ದಾದ ಮಗಳು ನೇಸರ ಹುಟ್ಟು ಹಬ್ಬದ ಖುಷಿಯಲ್ಲಿದ್ದಾಳೆ. ಮಗಳ ಸಂಭ್ರಮವನ್ನು ಪೋಷಕರು ದುಪ್ಪಟ್ಟು ಮಾಡಿದ್ದಾರೆ. ಅಲ್ಲದೇ ಮಗಳ ಬರ್ತ್ ಡೇಯನ್ನು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ನಲ್ಲಿ ಸಖತ್ ಗ್ರ್ಯಾಂಡ್ ಆಗಿ ಮಾಡಿದ್ದಾರೆ.ಇನ್ನೂ, ನಿನ್ನೆ ಅದಿತಿ ಪ್ರಭುದೇವ ಮಗಳು ನೇಸರ ಹುಟ್ಟು ಹಬ್ಬಕ್ಕೆ ಸಾಕಷ್ಟು ತಾರೆಯರು ಭಾಗಿಯಾಗಿ ಪಾರ್ಟಿಗೆ ಮೆರಗು ತುಂಬಿದ್ದಾರೆ. ಅದಿತಿ ಪ್ರಭುದೇವ್ ಮಗಳ ಬರ್ತ್ ಡೇಗೆ ನಟಿಯರಾದ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಭಾಗಿಯಾಗಿದ್ದರು. ನೆನಪಿರಲಿ ಪ್ರೇಮ್ ಮತ್ತು ಮಗಳು ಅಮೃತಾ ಕೂಡ ಬಂದಿದ್ದರು ಇಷ್ಟೇ ಅಲ್ಲದೇ ನಟಿ ಮೇಘನಾ ರಾಜ್ ಹಾಗೂ ಮಗ ರಾಯನ್ ರಾಜ್ ಕೂಡ ಭಾಗಿಯಾಗಿ ಖುಷಿಪಟ್ಟಿದ್ದಾರೆ. ಹಿಟ್ಲರ್ ಕಲ್ಯಾಣ ಮಲೈಕಾ ಹಾಗೂ ಗುರುಕಿರಣ್ ಅವರು ಹಾಡು ಹಾಡಿ ಮನರಂಜನೆ ನೀಡಿದ್ದಾರೆ.

ಅವರ ಮಗಳ ಹುಟ್ಟು ಹಬ್ಬದಿಂದ, ಕನ್ನಡ ಚಿತ್ರರಂಗದ ಹಲವಾರು ತಾರೆಗಳು ಬಂದಿರುವುದು ಅವರಿಗೆ ಸಂತೋಷ ದುಪ್ಪಟ್ಟಾದಂತಿದೆ. ಒಟ್ಟಿನಲ್ಲಿ ಮುದ್ದು ಹೆಣ್ಣು ಮಗುವಿನ ಜೀವನ ಸುಂದರವಾಗಿರಲಿ ಎಂದು ಹರಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ಹಾಗೂ ಯಶಸ್ ಪಾಟ್ಲ.

 

 

 

 

 

 

The post ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… appeared first on Good News 24x7.

]]>
ಏಪ್ರಿಲ್ 6, 2024 ರ ರಾಮನವಮಿಯಂದು ಉಪವಾಸ ಆಚರಿಸುವುದು ಹೇಗೆ ? https://www.goodnews24x7.com/%e0%b2%8f%e0%b2%aa%e0%b3%8d%e0%b2%b0%e0%b2%bf%e0%b2%b2%e0%b3%8d-6-2024-%e0%b2%b0-%e0%b2%b0%e0%b2%be%e0%b2%ae%e0%b2%a8%e0%b2%b5%e0%b2%ae%e0%b2%bf%e0%b2%af%e0%b2%82%e0%b2%a6%e0%b3%81-%e0%b2%89%e0%b2%aa/ Sat, 05 Apr 2025 11:52:05 +0000 https://www.goodnews24x7.com/?p=3057 ಈ ವರ್ಷ ರಾಮ ನವಮಿಯನ್ನು ಏಪ್ರಿಲ್ 6 ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ದಿನದಂದು ದೇಶಾದ್ಯಂತ ರಾಮ ದೇವಾಲಯಗಳಲ್ಲಿ ಹಬ್ಬಗಳು ಭರದಿಂದ ಸಾಗಲಿವೆ. ಈ ಪರಿಸ್ಥಿತಿಯಲ್ಲಿ, ಕೆಲವು ಭಕ್ತರು ರಾಮ ನವಮಿಯಂದು ಉಪವಾಸ ಆಚರಿಸುತ್ತಾರೆ. ಜೊತೆಗೆ ರಾಮ ನವಮಿಯಂದು ನಾವು…

The post ಏಪ್ರಿಲ್ 6, 2024 ರ ರಾಮನವಮಿಯಂದು ಉಪವಾಸ ಆಚರಿಸುವುದು ಹೇಗೆ ? appeared first on Good News 24x7.

]]>

ಈ ವರ್ಷ ರಾಮ ನವಮಿಯನ್ನು ಏಪ್ರಿಲ್ 6 ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ದಿನದಂದು ದೇಶಾದ್ಯಂತ ರಾಮ ದೇವಾಲಯಗಳಲ್ಲಿ ಹಬ್ಬಗಳು ಭರದಿಂದ ಸಾಗಲಿವೆ. ಈ ಪರಿಸ್ಥಿತಿಯಲ್ಲಿ, ಕೆಲವು ಭಕ್ತರು ರಾಮ ನವಮಿಯಂದು ಉಪವಾಸ ಆಚರಿಸುತ್ತಾರೆ. ಜೊತೆಗೆ ರಾಮ ನವಮಿಯಂದು ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದನ್ನೂ ತಿಳಿದುಕೊಳ್ಳುವುದು ಅಗತ್ಯ.

ರಾಮ ನವಮಿಯ ದಿನದಂದು, ಬೆಳಿಗ್ಗೆ ಬೇಗನೆ ಎದ್ದು, ಪವಿತ್ರ ಸ್ನಾನ ಮಾಡಿ, ನಂತರ ಮನೆಯನ್ನು ಶುದ್ಧೀಕರಿಸಿ, ಉಪವಾಸವನ್ನು ಪ್ರಾರಂಭಿಸಬೇಕು. ಅದೇ ರೀತಿ, ಆ ದಿನ ನಮ್ಮ ಮನೆಗೆ ದೇಣಿಗೆ ಕೇಳಿಕೊಂಡು ಬರುವವರಿಗೆ ನಾವು ಇಲ್ಲ ಎಂದು ಹೇಳದೆ ಸಹಾಯ ಮಾಡಬೇಕು.

ರಾಮ ನವಮಿಯನ್ನು ಸುಮಾರು ಒಂಬತ್ತು ದಿನಗಳ ಕಾಲ ಹಬ್ಬವಾಗಿ ಆಚರಿಸಲಾಗುತ್ತದೆ. ರಾಮನ ಜನನದ 9 ದಿನಗಳ ಮೊದಲು ಮತ್ತು ಅವನ ಜನನದ 9 ದಿನಗಳ ನಂತರ, ಸುಮಾರು 18 ದಿನಗಳವರೆಗೆ ವಿವಿಧ ರೂಪಗಳಲ್ಲಿ ಆಚರಣೆಗಳು ಮತ್ತು ಉಪವಾಸಗಳನ್ನು ನಡೆಸಲಾಗುತ್ತದೆ. ಉಪವಾಸ ಮಾಡುತ್ತಿರುವವರು ಬೆಳಿಗ್ಗೆಯಿಂದ ಸಂಜೆಯವರೆಗೆ ಹಾಲು ಮತ್ತು ಹಣ್ಣುಗಳನ್ನು ಸೇವಿಸಿ ಉಪವಾಸ ಮಾಡಬಹುದು. ಈ ದಿನ ಮನೆಯಲ್ಲಿ ಕೆಲವು ಸಿಹಿತಿಂಡಿಗಳನ್ನು ತಯಾರಿಸಿ, ರಾಮನಿಗೆ ಅರ್ಪಿಸಿ ಪೂಜಿಸಿದರೆ, ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ.
ರಾಮನವಮಿಯ ಪೂಜಾ ವಿಧಾನ:

ಪೂಜಾ ಕೋಣೆಯಲ್ಲಿ, ಶ್ರೀರಾಮನ ಭಾವಚಿತ್ರ ಅಥವಾ ಮೂರ್ತಿಯನ್ನು ಶ್ರೀಗಂಧ ಮತ್ತು ಕುಂಕುಮದಿಂದ ಅಲಂಕರಿಸಬೇಕು. ಜೊತೆಗೆ ರಾಮನಿಗೆ ಪ್ರಿಯವಾದ ತುಳಸಿ ಮಾಲೆಯಿಂದ ಅಲಂಕರಿಸಬೇಕು. ಇದರ ಜೊತೆಗೆ ಅನ್ನ, ನೀರು, ಮಜ್ಜಿಗೆ, ವಡೆ, ಪಂಚಾಮೃತ ಮತ್ತು ಬಾಳೆಹಣ್ಣುಗಳ ಜೊತೆಗೆ ಹಣ್ಣುಗಳು, ವೀಳ್ಯದೆಲೆ ಹೂವುಗಳನ್ನು ಇಡಿ. ಪೂಜೆ ಮುಗಿದ ನಂತರ, ಪೂಜೆಯಲ್ಲಿ ಇಟ್ಟಿರುವ ವಸ್ತುಗಳನ್ನು ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಪ್ರಸಾದದ ರೀತಿಯಲ್ಲಿ. ಸಾಧ್ಯವಿರುವವರು ಹತ್ತಿರದ ರಾಮ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಬಹುದು.

The post ಏಪ್ರಿಲ್ 6, 2024 ರ ರಾಮನವಮಿಯಂದು ಉಪವಾಸ ಆಚರಿಸುವುದು ಹೇಗೆ ? appeared first on Good News 24x7.

]]>