Sarojini Nagar Archives - Good News 24x7 https://www.goodnews24x7.com/tag/sarojini-nagar/ Kannada Mon, 14 Apr 2025 11:30:05 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Sarojini Nagar Archives - Good News 24x7 https://www.goodnews24x7.com/tag/sarojini-nagar/ 32 32 ಒಂದು ಬಟ್ಟೆಗಾಗಿ ನಡೆಯಿತು ಮಹಿಳೆಯರ ನಡುವೆ ಜಡೆ ಜಗಳ….. https://www.goodnews24x7.com/%e0%b2%92%e0%b2%82%e0%b2%a6%e0%b3%81-%e0%b2%ac%e0%b2%9f%e0%b3%8d%e0%b2%9f%e0%b3%86%e0%b2%97%e0%b2%be%e0%b2%97%e0%b2%bf-%e0%b2%a8%e0%b2%a1%e0%b3%86%e0%b2%af%e0%b2%bf%e0%b2%a4%e0%b3%81-%e0%b2%ae/ Mon, 14 Apr 2025 11:30:05 +0000 https://www.goodnews24x7.com/?p=3261 ಹೌದು ವೀಕ್ಷಕರೇ ಇಂತಹದೊಂದು ಅಮಾನವೀಯ ಘಟನೆ ದೆಹಲಿಯ ಸರೋಜಿನಿ ನಗರದಲ್ಲಿ ನಡೆದಿದೆ. ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳು ಶಾಂತ ಸ್ವಭಾವದವನಾಗಿರುತ್ತಾರೆ ಅಲ್ಲದೇ ಅವರನ್ನು ಹೇಗೆ ಬೇಕಾದರೂ ನಿಯಂತ್ರಣ ಮಾಡಬಹುದು ಆದರೆ ಅವರು ಒಂದು ವಸ್ತುವನ್ನು ಇಷ್ಟಪಟ್ಟರು ಎಂದರೆ ಅದಕ್ಕಾಗಿ ಯುದ್ಧ ಮಾಡಿ…

The post ಒಂದು ಬಟ್ಟೆಗಾಗಿ ನಡೆಯಿತು ಮಹಿಳೆಯರ ನಡುವೆ ಜಡೆ ಜಗಳ….. appeared first on Good News 24x7.

]]>

ಹೌದು ವೀಕ್ಷಕರೇ ಇಂತಹದೊಂದು ಅಮಾನವೀಯ ಘಟನೆ ದೆಹಲಿಯ ಸರೋಜಿನಿ ನಗರದಲ್ಲಿ ನಡೆದಿದೆ. ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳು ಶಾಂತ ಸ್ವಭಾವದವನಾಗಿರುತ್ತಾರೆ ಅಲ್ಲದೇ ಅವರನ್ನು ಹೇಗೆ ಬೇಕಾದರೂ ನಿಯಂತ್ರಣ ಮಾಡಬಹುದು ಆದರೆ ಅವರು ಒಂದು ವಸ್ತುವನ್ನು ಇಷ್ಟಪಟ್ಟರು ಎಂದರೆ ಅದಕ್ಕಾಗಿ ಯುದ್ಧ ಮಾಡಿ ಆದರೂ ಸರಿ ಪಡೆದುಕೊಳ್ಳುತ್ತಾರೆ. ಇಂತಹ ಅನೇಕ ಘಟನೆಗಳು ನಮ್ಮ ಕಣ್ಮುಂದೆ ಕಾಣಸಿಗುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಾನೆ ಇದೆ. ಅದು ಕೂಡ ಒಂದು ಬಟ್ಟೆಗಾಗಿ ಯುವತಿಯರು ಜಗಳ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ.

ಫ್ಯಾಷನ್ ಬಗ್ಗೆ ಹೆಚ್ಚು ಗೊತ್ತಿರುವುದು ಮಹಿಳೆಯರಿಗೆ ಮಾತ್ರ, ಅವರಷ್ಟು ಈ ಫ್ಯಾಷನ್ ವಿಷಯದಲ್ಲಿ ತಜ್ಞರು ಯಾರು ಇಲ್ಲ. ಒಂದು ಬಾರಿ ಇಷ್ಟ ಆಯಿತು ಅಂದ್ರೆ ಅದನ್ನು ಖರೀದಿ ಮಾಡದೇ ಬಿಡುವುದಿಲ್ಲ. ಅದರಲ್ಲೂ ಬಟ್ಟೆಯಲ್ಲಿ ಕೇಳಬೇಕಾ ಅಬ್ಬಾಬ್ಬ ಹುಚ್ಚು ಪ್ರೀತಿ ಅದರಲ್ಲಿ, ಬಟ್ಟೆ ಅಂಗಡಿ ಹೋದ್ರೆ ವಾಪಸ್ಸು ಬರುವುದು ಒಂದಿಷ್ಟು ಬಟ್ಟೆಗಳ ಜತೆಗೆ. ಇಲ್ಲೊಂದು ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಒಂದೇ ಬಟ್ಟೆಗಾಗಿ ಜಗಳವಾಡುತ್ತಿರುವುದನ್ನು ಕಾಣಬಹುದು.

ಈ ಇಬ್ಬರ ಜಗಳವನ್ನು ನೋಡಿ ಅಲ್ಲಿ ನಿಂತಿದ್ದ ಅನೇಕರು ಈ ದೃಶ್ಯವನ್ನು ನೋಡಿ ಆನಂದಿಸಿದ್ದಾರೆ. ಇನ್ನು ಕೆಲವರು ಈ ಜಗಳವನ್ನು ವಿಡಿಯೋ ಮಾಡುವುದನ್ನು ಕಾಣಬಹುದು.ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಕಪಾಳಕ್ಕೆ ಹೊಡೆದಿರುವುದು ಕಾಣಬಹುದು. ಇನ್ನೊಂದು ಮಹಿಳೆ ನಾನೇನು ಕಡಿಮೆ ಇಲ್ಲ ಎಂದು ಆಕೆಯ ಮೇಲೆ ಪ್ರತಿ ದಾಳಿ ಮಾಡಿದ್ದಾರೆ. ಈ ಇಬ್ಬರ ಜಗಳವನ್ನು ಬಿಡಿಸಲು ಮಹಿಳೆಯೊಬ್ಬರು ಮಧ್ಯೆ ಬಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಮಹಿಳೆ ಬಂದು ಮಹಿಳೆಯ ಜುಡು ಹಿಡಿದು ಎಳೆದಾಡಿದ್ದಾರೆ. ಇವರ ಜಗಳವನ್ನು ಕಂಡು ಬಿಡಿಸಲು ಬಂದು ಮಹಿಳೆ ಬಿಡಿ ಬಿಡಿ ಎಂದು ಆ ಇಬ್ಬರು ಮಹಿಳೆಯರು ಜಗಳವನ್ನು ಮತ್ತಷ್ಟು ಜೋರಾಗಿ ಮಾಡಿದ್ದಾರೆ. ಅಲ್ಲಿದ್ದ ಬಟ್ಟೆಗಳೆಲ್ಲ ಚಲ್ಲಾಪಿಲ್ಲಿ ಮಾಡಿದ್ದಾರೆ. ಕೊನೆಗೆ ಎಲ್ಲರೂ ಬಂದು ಅವರಿಬ್ಬರ ಜಗಳ ನಿಲ್ಲಿಸಿದ್ದಾರೆ.

The post ಒಂದು ಬಟ್ಟೆಗಾಗಿ ನಡೆಯಿತು ಮಹಿಳೆಯರ ನಡುವೆ ಜಡೆ ಜಗಳ….. appeared first on Good News 24x7.

]]>