SarvamRajanimayam Archives - Good News 24x7 https://www.goodnews24x7.com/tag/sarvamrajanimayam/ Kannada Wed, 13 Aug 2025 10:04:58 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SarvamRajanimayam Archives - Good News 24x7 https://www.goodnews24x7.com/tag/sarvamrajanimayam/ 32 32 ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. https://www.goodnews24x7.com/rajinikanths-coolie-sets-a-record-in-pre-booking-tomorrow-is-a-festive-celebration-for-thalaiva-fans/ Wed, 13 Aug 2025 10:04:58 +0000 https://www.goodnews24x7.com/?p=6030 ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್​ಗಳಲ್ಲಿ ಅವರ ಅಭಿಮಾನಿಗಳಂತೂ…

The post ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. appeared first on Good News 24x7.

]]>

ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್​ಗಳಲ್ಲಿ ಅವರ ಅಭಿಮಾನಿಗಳಂತೂ ರಜನಿಯವರ ಸ್ಟೈಲ್, ಡೈಲಾಗ್​ಗೆ ಕುಣಿದು ಕುಪ್ಪಳಿಸುತ್ತಿರುತ್ತಾರೆ.

ಇದಕ್ಕೆ ಸಾಕ್ಷಿ ಎಂಬಂತೆ ನಾಳೆ ರಜನಿಕಾಂತ್ ನಟನೆಯಲ್ಲಿ ಬಹುನಿರೀಕ್ಷಿತ ಕೂಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಸ್ಟಾರ್​ ಹೀರೋನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ. ಹೌದು, ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಆಗಸ್ಟ್​ 14ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ.

ರಜನಿಕಾಂತ್​ ನಾಯಕನಾಗಿ ದಕ್ಷಿಣ ಹಾಗೂ ಉತ್ತರ ಭಾರತದ ಕಲಾವಿದರು ಅಭಿನಯಿಸಿರೋ ಕೂಲಿ ಸಿನಿಮಾ ತೆರೆಗೆ ಅಪ್ಪಳಿಸೋದಕ್ಕೆ ಸಜ್ಜಾಗಿದೆ. ಸದ್ಯ ಎಲ್ಲೆಡೆ ಕೂಲಿ ಮೇನಿಯಾ ಕಂಡು ಬಂದಿದೆ. ವಿಶೇಷ ಏನೆಂದರೆ ಕೂಲಿ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ನಟ ಉಪೇಂದ್ರ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಟಿಸಿದ್ದಾರೆ.

ಈಗಾಗಲೇ ಚೆನ್ನೈನಲ್ಲಿ ಫಸ್ಟ್​ ಡೇ ಫಸ್ಟ್​ ಶೋಗಳು ಕಂಪ್ಲೀಟ್ ಸೋಲ್ಡ್​ ಔಟ್​ ಆಗಿವೆ. ಮಲ್ಟಿಪ್ಲೆಕ್ಸ್​​ವೊಂದರಲ್ಲೇ ಮೊದಲ ದಿನ ಒಟ್ಟು 56 ಶೋಗಳನ್ನು ಇಡಲಾಗಿದ್ದು, ಅಂದರೆ ಅಷ್ಟು ಶೋಗಳ ಟಿಕೆಟ್​ ಮಾರಾಟವಾಗಿದೆ. ಇನ್ನೂ, ತಮಿಳುನಾಡು ಸರ್ಕಾರ ಥೇಟರ್​ಗಳಲ್ಲಿ ಗರಿಷ್ಠ 150ರೂ, ಮಲ್ಟಿಪ್ಲೆಕ್ಸ್​ಗಳಲ್ಲಿ 160ರೂ ಹಾಗೂ ಐಮ್ಯಾಕ್ಸ್​ಗಳಲ್ಲಿ 480 ರೂ ಟಿಕೆಟ್​​ ದರವನ್ನು ನಿಗದಿ ಪಡಿಸಲಾಗಿದೆ.

ಅಮೆರಿಕಾದಲ್ಲಿ ಕೂಲಿ ಪ್ರೀ ಬುಕ್ಕಿಂಗ್​ ದಾಖಲೆ
ತಮಿಳು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಕೂಲಿ ಸಿನಿಮಾ ಪ್ರಿ ಬುಕ್ಕಿಂಗ್​ನಿಂದಲೇ 2 ಮಿಲಿಯನ್​ ಡಾಲರ್​ ಅಂದರೆ 17.55 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದನ್ನೂ ನಿರ್ಮಾಣ ಸಂಸ್ಥೆ ಸನ್​ ಪಿಕ್ಚರ್ಸ್​ ಅಧಿಕೃತವಾಗಿ ಘೋಷಣೆ ಮಾಡಿದೆ.

 

The post ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. appeared first on Good News 24x7.

]]>