SeshadriIyer Archives - Good News 24x7 https://www.goodnews24x7.com/tag/seshadriiyer/ Kannada Sun, 26 Oct 2025 12:15:11 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SeshadriIyer Archives - Good News 24x7 https://www.goodnews24x7.com/tag/seshadriiyer/ 32 32 ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ https://www.goodnews24x7.com/why-dk-shivakumar-called-kumaraswamy-an-empty-trunk-dcm-walks-in-cubbon-park/ Sun, 26 Oct 2025 12:15:11 +0000 https://www.goodnews24x7.com/?p=7870 ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು. ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM…

The post ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ appeared first on Good News 24x7.

]]>

ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು.

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಇಂದು ಕಬ್ಬನ್​ ಪಾರ್ಕ್​​ನಲ್ಲಿ ನಡಿಗೆ ​ಕಾರ್ಯಕ್ರಮ ಹಮ್ಮಿಕೊಂಡಿದ್ರು. ಕೆಲ ಕಾಲ ಪಾರ್ಕ್​​ನಲ್ಲಿ ವಾಕಿಂಗ್ (Walking) ನಡೆಸಿದ್ರು. ಇದೇ ವೇಳೆ ಸಾರ್ವಜನಿಕರ ಜೊತೆ ಕೂಡ ಚರ್ಚೆ ನಡೆಸಿದ್ರು. ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಬಗ್ಗೆ ಮಾತಾಡ್ತಾ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ವಾಕ್​
ಬೆಂಗಳೂರು ನಡಿಗೆ ಮೂಲಕ ಜನರ ಜೊತೆ ಹೆಜ್ಜೆ ಹಾಕಲು ಡಿಸಿಎಂ ಕಬ್ಬನ್ ಪಾರ್ಕಿಗೆ ಆಗಮಿಸಿದ್ರು. ಇಂದು ಎಲ್ಲ ಪಾಲಿಕೆ ವ್ಯಾಪ್ತಿಯ ಜನರಿಗೂ ದೂರು ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ಬೆಂಗಳೂರು ನಡಿಗೆ ಆರಂಭವಾಯ್ತು, ಡಿಸಿಎಂಗೆ ಶಾಸಕ ರಿಜ್ವಾನಾ ಹರ್ಷದ್, ಹ್ಯಾರಿಸ್ ಸಾಥ್ ನೀಡಿದ್ರು.

ಕುಮಾರಸ್ವಾಮಿ ಖಾಲಿ ಟ್ರಂಕ್
ಸಾರ್ವಜನಿಕರ ಜೊತೆಗೆ ಖಾತಾ ಬಗ್ಗೆ ಡಿಸಿಎಂ ಮಾತುಕತೆ ನಡೆಸಿದ್ದಾರೆ. ಮಾತುಕತೆ ಸಮಯದಲ್ಲಿ ಕುಮಾರಸ್ವಾಮಿಯನ್ನ ಖಾಲಿ ಟ್ರಂಕ್ ಎಂದು ಕರೆದಿದ್ದಾರೆ. ಇದೇ ವೇಳೆ ಸಾರ್ವಜನಿಕರು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಡಿಕೆಶಿಗೆ ಹೇಳಿದ್ದಾರೆ. ಇದಕ್ಕೆ ಥ್ಯಾಂಕ್ ಯೂ ಎಂದ ಡಿಸಿಎಂ ನಿಮ್ಮಂತಹ ಎಜ್ಯುಕೇಟೆಡ್ ಬಿ‌ ಖಾತಾದಿಂದ ಎ ಖಾತಾ ಮಾಡುವಂತದನ್ನು ಒಪ್ಪುತ್ತಿದ್ದೀರಾ ಎಂದಿದ್ದಾರೆ.

ಜನರ ಜೊತೆ ಡಿಸಿಎಂ ಸಂವಾದ
ಕಬ್ಬನ್ ಪಾರ್ಕ್ ನಲ್ಲಿರೋ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಡಿಸಿಎಂ ಡಿಕೆ ಶಿವಕುಮಾರ್​ ಪುಷ್ಪಾರ್ಚನೆ ಮಾಡಿದ್ರು. ಮೈಸೂರು ದಿವಾನ್ ಆಗಿದ್ದ ಶೇಷಾದ್ರಿ ಅಯ್ಯರ್, ವಾಕ್ ಮುಗಿಸಿ ವೇದಿಕೆಗೆ ಬಂದ ಡಿಸಿಎಂ ಜನರ ಜೊತೆ ಸಂವಾದ ನಡೆಸಿದ್ರು.ಸಿಗ್ನಲ್​​ನಲ್ಲಿ ಸಮಸ್ಯೆ ಹೆಚ್ಚಾಗಿದೆ. ಟನಲ್‌ ರಸ್ತೆ ವಿರೋಧಿಸುತ್ತಿದ್ದು, ಮುಂಬೈನಲ್ಲಿ ಅವರೇ ಟನಲ್‌ ರಸ್ತೆ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ಟನಲ್‌ ರಸ್ತೆ ಕಾರ್ಯ ನಿಲ್ಲಿಸಬೇಡಿ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಮನವಿ ಮಾಡಿದೆ. ಲಾಲ್ ಬಾಗ್ ರೀತಿ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಜನರು ಮನವಿ ಮಾಡಿದ್ದಾರೆ. ಕಬ್ಬನ್ ಪಾರ್ಕ್ ಒಳಗಿರೋ ಲೀಸ್ ಬಿಲ್ಡಿಂಗ್​​ಗಳ ತೆರವಿಗೆ ಆಗ್ರಹಿಸಿದ್ದಾರೆ.

ಲಾಲ್ ಬಾಗ್ ಮಾದರಿಯಲ್ಲೇ ಕಬ್ಬನ್ ಪಾರ್ಕ್ ನಲ್ಲಿ ಟಿಕೆಟ್ ಮಾಡಿ, ಯಾವುದೇ ದಿನ ಕಬ್ಬನ್ ಪಾರ್ಕ್ ನಲ್ಲಿ ವಾಹನಗಳು ಓಡಾಡದಂತೆ ಮನವಿ ಮಾಡಿದ್ರು. ಯಾವುದೇ ಕಮರ್ಷಿಯಲ್ ಚಟುವಟಿಕೆ ನಡೆಯದಂತೆ ಡಿಸಿಎಂಗೆ ಮನವಿ ಸಲ್ಲಿಸಿದ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಆಗ್ರಹಿಸಿದ್ರು.

The post ಕುಮಾರಸ್ವಾಮಿ ಖಾಲಿ ಟ್ರಂಕ್​ ಎಂದಿದ್ಯಾಕೆ ಡಿಕೆ ಶಿವಕುಮಾರ್;​ ಕಬ್ಬನ್ ಪಾರ್ಕ್​​ನಲ್ಲಿ ಡಿಸಿಎಂ ನಡಿಗೆ​​ appeared first on Good News 24x7.

]]>