Shantigram Archives - Good News 24x7 https://www.goodnews24x7.com/tag/shantigram/ Kannada Fri, 06 Jun 2025 08:41:21 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Shantigram Archives - Good News 24x7 https://www.goodnews24x7.com/tag/shantigram/ 32 32 ಹಾಸನದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಬಾರಿ ದುರಂತ, ಐವರಿಗೆ ಗಂಬೀರ ಗಾಯ, 1 ಸಾ*ವಾಗಿರುವ ಶಂಕೆ; ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ. https://www.goodnews24x7.com/stone-mining-accident-in-hassan-five-seriously-injured-suspected-to-be-dead-dc-sp-visit-the-spot/ Fri, 06 Jun 2025 08:41:21 +0000 https://www.goodnews24x7.com/?p=4261 ಹಾಸನ : ಕಲ್ಲು ಗಣಿಗಾರಿಕೆ ವೇಳೆ ಬಾರಿ ದುರಂತ ಸಂಭವಿಸಿ ಐವರು ಆಸ್ಪತ್ರೆಗೆ ದಾಖಲಾಗಿದ್ದು, ಮಣ್ಣಿನಡಿ ಕೆಲವರು ಸಿಲುಕಿರೊ ಘಟನೆ ತಾಲೂಕಿನ ಶಾಂತಿಗ್ರಾಮದ ದೂಮಗೆರೆ ಗ್ರಾಮದಲ್ಲಿ ತಡರಾತ್ರಿ ಕಂಡು ಬಂದಿದೆ. ಕಲ್ಲು ಗಣಿಗಾರಿಕೆಯಲ್ಲಿ ಬಾರಿ ದುರಂತ ಸಂಭವಿಸಿ ಐವರು ಕಾರ್ಮಿಕರಿಗೆ ಗಂಭೀರ…

The post ಹಾಸನದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಬಾರಿ ದುರಂತ, ಐವರಿಗೆ ಗಂಬೀರ ಗಾಯ, 1 ಸಾ*ವಾಗಿರುವ ಶಂಕೆ; ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ. appeared first on Good News 24x7.

]]>

ಹಾಸನ : ಕಲ್ಲು ಗಣಿಗಾರಿಕೆ ವೇಳೆ ಬಾರಿ ದುರಂತ ಸಂಭವಿಸಿ ಐವರು ಆಸ್ಪತ್ರೆಗೆ ದಾಖಲಾಗಿದ್ದು, ಮಣ್ಣಿನಡಿ ಕೆಲವರು ಸಿಲುಕಿರೊ ಘಟನೆ ತಾಲೂಕಿನ ಶಾಂತಿಗ್ರಾಮದ ದೂಮಗೆರೆ ಗ್ರಾಮದಲ್ಲಿ ತಡರಾತ್ರಿ ಕಂಡು ಬಂದಿದೆ. ಕಲ್ಲು ಗಣಿಗಾರಿಕೆಯಲ್ಲಿ ಬಾರಿ ದುರಂತ ಸಂಭವಿಸಿ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿ, ಓರ್ವ ಚಾಮರಾಜನಗರ ಮೂಲದ ಕಾರ್ಮಿಕರ ಸ್ಥಿತಿ ಚಿಂತಜನಕವಾಗಿದೆ.

ಓರ್ವ ಕಾರ್ಮಿಕ ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ನಾಲ್ವರಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಣಿಗಾರಿಕೆ ವೇಳೆ ದೊಡ್ಡ ಬಂಡೆ ಕುಸಿದು ಅವಘಡ ಆಗಿರೊ ಶಂಕೆವ್ಯಕ್ತವಾಗಿದೆ. ವಿಷಯ ತಿಳಿದ ಎಸ್ಪಿ ಮೊಹಮದ್ ಸುಜೀತಾ, ಡಿಸಿ ಸಿ. ಸತ್ಯಭಾಮ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹೊರಟು ಮಾಹಿತಿ ಪಡೆದರು. ಈ ವೇಳೆ ಮಣ್ಣಿನಡಿ ಕೆಲವರು ಸಿಲುಕಿರೊ ಶಂಕೆ ವ್ಯಕ್ತಪಡಿಸಲಾಗಿದೆ.

ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಹಾಸನದ ಬಂಡೆ ದೇವರಾಜ್ ಎಂಬುವವರಿಗೆ ಸೇರಿದ ಕ್ವಾರಿಯಲ್ಲಿ ಈ ದುರ್ಘಟನೆ ಸಂಬವಿಸಿರುವುದಾಗಿ ಆರೋಪಿಸಲಾಗಿದೆ. ಕೂಡಲೇ ಇತನ ಮೇಲೆ ದೂರು ದಾಖಲು ಮಾಡುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ.
ಗ್ರಾನೈಟ್ ಕ್ವಾರಿ ಮಾಲೀಕ ಅರ್ಜುನ್ನನ್ನು ಶಾಂತಿಗ್ರಾಮ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಮಧ್ಯಾಹ್ನ ನಡೆದ ಘಟನೆ ಮುಚ್ಚಿಟ್ಟ ಆರೋಪದಡಿ ಪೊಲೀಸರು ಕೆಲವರನ್ನ ವಶಕ್ಕೆ ಪಡೆದು ಶಾಂತಿಗ್ರಾಮ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯಲ್ಲಿ ಅನೇಕರು ಸಾವನಪ್ಪಿರುವುದಾಗಿ ಸ್ಥಳೀಯರ ದೂರಾಗಿದೆ. ಹೆಚ್ಚಿನ ತನಿಖೆಗೆ ಆದೇಶ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

The post ಹಾಸನದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಬಾರಿ ದುರಂತ, ಐವರಿಗೆ ಗಂಬೀರ ಗಾಯ, 1 ಸಾ*ವಾಗಿರುವ ಶಂಕೆ; ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ. appeared first on Good News 24x7.

]]>