SHOOTING Archives - Good News 24x7 https://www.goodnews24x7.com/tag/shooting/ Kannada Sun, 05 Jul 2026 06:57:40 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SHOOTING Archives - Good News 24x7 https://www.goodnews24x7.com/tag/shooting/ 32 32 ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ https://www.goodnews24x7.com/kriti-sanon-exposes-discrimination-in-the-film-industry/ Sun, 05 Jul 2026 06:57:40 +0000 https://www.goodnews24x7.com/?p=9759 ಸಿನಿಮಾದ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಕೃತಿ ಸನನ್ ಅವರು ಮಾತನಾಡಿದ್ದಾರೆ. ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಸೆಟ್‌ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು…

The post ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ appeared first on Good News 24x7.

]]>

ಸಿನಿಮಾದ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಕೃತಿ ಸನನ್ ಅವರು ಮಾತನಾಡಿದ್ದಾರೆ. ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಸೆಟ್‌ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು ಕೃತಿ ಸನೋನ್ ಅಭಿಪ್ರಾಯಪಟ್ಟಿದ್ದಾರೆ.

ಶೂಟಿಂಗ್ ವೇಳೆ ನಟಿಯರನ್ನು ಕೀಳಾಗಿ ಕಾಣಲಾಗುತ್ತದೆ: ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್

ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಆರೋಪ.

ಸಹಾಯಕ ನಿರ್ದೇಶಕರ ವರ್ತನೆ ಬಗ್ಗೆಯೂ ಕೃತಿ ಸನೋನ್ ಅಸಮಾಧಾನ.
ಚಿತ್ರರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ನಡೆಯುವ ಲಿಂಗ ತಾರತಮ್ಯದ (Gender Bias) ಕುರಿತು ಖ್ಯಾತ ನಟಿ ಕೃತಿ ಸನನ್ (Kriti Sanon) ಮುಕ್ತವಾಗಿ ಧ್ವನಿ ಎತ್ತಿದ್ದಾರೆ. ಚಿತ್ರೀಕರಣದ ಸೆಟ್‌ಗಳಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಕೀಳಾಗಿ ಕಾಣಲಾಗುತ್ತದೆ ಮತ್ತು ಪುರುಷರಿಗೆ ಹೋಲಿಸಿದರೆ ನಟಿಯರನ್ನು ಹೇಗೆ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದ ಕೃತಿ, ತಾವು ಮಾಡೆಲಿಂಗ್, ಇಂಜಿನಿಯರಿಂಗ್ ಕಾಲೇಜು ಮತ್ತು ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಭಾಗವಾಗಿದ್ದರೂ, ಬಾಲಿವುಡ್‌ನಲ್ಲೇ ಅತ್ಯಂತ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ ಕೇಳಿದರೆ ಕಿರಿಕಿರಿ ಅಂತಾರೆ!’

ಚಿತ್ರೀಕರಣದ ಸಮಯದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ ಎಂದು ಕೃತಿ ವಿವರಿಸಿದ್ದಾರೆ. ತಮಗೆ ಚಿತ್ರಕಥೆ ಹಾಗೂ ಪಾತ್ರಗಳ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸುವ ಅಭ್ಯಾಸ ಮೊದಲಿನಿಂದಲೂ ಇದೆ ಎಂದ ಅವರು, ‘ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್‌ನಲ್ಲಿರುವವರು ‘ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ 50 ಪ್ರಶ್ನೆಗಳು ಶುರುವಾಗುತ್ತವೆ’ ಎಂದು ಆಡಿಕೊಳ್ಳುತ್ತಾರೆ. ಇದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನು ಸಿನಿಮಾದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ ಎಂದು ಹೊಗಳುತ್ತಾರೆ’ ಎಂದು ಹೇಳಿದ್ದಾರೆ.

‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’:
‘ನನಗೂ ಇಂತಹ ಅನುಭವವಾಗಿದೆ. ನಾನು ಪ್ರಶ್ನೆ ಕೇಳಿದಾಗ ‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’ ಎಂದು ಹೇಳುತ್ತಿದ್ದರು. ಆದರೆ ಅದೇ ಪ್ರಶ್ನೆಯನ್ನು ಸಹನಟ ಕೇಳಿದಾಗ ‘ಓಕೆ, ಹಾಗೇ ಮಾಡೋಣ’ ಎಂದು ಒಪ್ಪಿಕೊಳ್ಳುತ್ತಿದ್ದರು’ ಎಂದು ಕೃತಿ ಬೇಸರ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಿಗುವ ಸೌಲಭ್ಯಗಳಲ್ಲೂ ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಗಂಭೀರ ಆರೋಪ ಮಾಡಿದ್ದಾರೆ.

‘ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ’:
‘ಹಲವು ಬಾರಿ ನಟರಿಗೆ ನೀಡಲಾಗುವ ಕಾರು ಅಥವಾ ಕ್ಯಾರವಾನ್ ರೂಮ್‌ಗಳು ತುಂಬಾ ಐಷಾರಾಮಿಯಾಗಿರುತ್ತವೆ. ಆದರೆ ನಟಿಯರಿಗೆ ಸಾಮಾನ್ಯವಾದ ರೂಮ್ ನೀಡಲಾಗುತ್ತದೆ. ನನಗೆ ಸಣ್ಣ ರೂಮ್ ಅಥವಾ ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ ಆ ಮೂಲಕ ನಾನು ಅವರಿಗಿಂತ ಕಮ್ಮಿ ಎನ್ನುವಂತೆ ನನ್ನನ್ನು ಭಾವಿಸಬೇಡಿ ಎನ್ನುವುದಷ್ಟೇ ನನ್ನ ವಾದ’ ಎಂದು ಕೃತಿ ಹೇಳಿದ್ದಾರೆ.

ಇದರೊಂದಿಗೆ ಸಹಾಯಕ ನಿರ್ದೇಶಕರ ವರ್ತನೆಯ ಬಗ್ಗೆಯೂ ಮಾತನಾಡಿರುವ ಅವರು, ‘ಶೂಟಿಂಗ್ ಸೆಟ್‌ಗೆ ಬರುವಂತೆ ಸಹಾಯಕ ನಿರ್ದೇಶಕರು ಮೊದಲು ಹುಡುಗಿಯರನ್ನೇ ಕರೆಯುತ್ತಾರೆ. ಅವರಿಗೆ ಪುರುಷ ನಟರನ್ನು ಕಂಡರೆ ಕೊಂಚ ಭಯವಿರುತ್ತದೆ. ಹೀಗಾಗಿ ಮಹಿಳಾ ನಟಿಯರನ್ನು ಅವರು ತುಂಬಾ ಸಲೀಲಾಗಿ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಕೃತಿ, ಹಿಂದೆ ಬಾಲಿವುಡ್‌ನಲ್ಲಿ ಮಹಿಳೆಯರಿಗೆ ಸಿಗುತ್ತಿದ್ದ ಪಾತ್ರಗಳು ಕೇವಲ ಗ್ಲಾಮರ್ ಅಥವಾ ನಾಯಕನ ಪ್ರೇಯಸಿಯ ಪಾತ್ರಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಕಾಲ ಬದಲಾಗುತ್ತಿದೆ, ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ ಮತ್ತು ನಟಿಯರಿಗಾಗಿ ಉತ್ತಮ ಪಾತ್ರಗಳನ್ನು ಬರೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

The post ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ appeared first on Good News 24x7.

]]>
‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? https://www.goodnews24x7.com/another-part-of-the-kantara-series-the-arrival-of-a-pan-india-hero/ Mon, 04 Aug 2025 08:00:26 +0000 https://www.goodnews24x7.com/?p=5302 ‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ…

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ.
ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಸಿನಿಮಾದ ಬಗ್ಗೆ ಭರ್ಜರಿ ಅಪ್​ಡೇಟ್ ಒಂದು ಸಿಕ್ಕಿದೆ. ‘ಕಾಂತಾರ’  ಸಿನಿಮಾಗೆ ಪ್ರೀಕ್ವೆಲ್ ಮಾತ್ರವಲ್ಲ, ಸೀಕ್ವೆಲ್ ಕೂಡ ಬರಲಿದೆಯಂತೆ.

 

 

 

 

 

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ 280ಕ್ಕೂ ಹೆಚ್ಚು ದಿನ ಶೂಟ್ ಮಾಡಲಾಗಿದೆ. ರಿಷಬ್ ಅವರು ಕಳೆದ ಮೂರು ವರ್ಷಗಳಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈಗ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.

‘ಕಾಂತಾರ: ಚಾಪ್ಟರ್ 1’ಗೆ ಸಿನಿಮಾ ಪೂರ್ಣಗೊಳ್ಳುವುದಿಲ್ಲವಂತೆ. ಈ ಸಿನಿಮಾಗೆ ಸೀಕ್ವೆಲ್ ತರುವ ಆಲೋಚನೆ ಕೂಡ ಇದೆ. ಹಾಗೆ ಏನಾದರೂ ನಡೆದರೆ, ‘ಕಾಂತಾರ: ಚಾಪ್ಟರ್ 2’ ಎನ್ನುವ ಶೀರ್ಷಿಕೆ ಇಡಬಹುದು. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ರಿಷಬ್ ಶೆಟ್ಟಿ ಹಾಗೂ ಜೂನಿಯರ್ ಎನ್​ಟಿಆರ್ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಮೊದಲು ಜೂನಿಯರ್ ಎನ್​ಟಿಆರ್ ಅವರು ತಮ್ಮ ತಾಯಿ ಜೊತೆ ಕುಂದಾಪುರಕ್ಕೆ ತೆರಳಿದ್ದರು. ಈ ವೇಳೆ ‘ಕಾಂತಾರ’ ಸಿನಿಮಾದಲ್ಲಿ ನಟಿಸುವ ಆಫರ್ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಚಿತ್ರದ ಮೂಲಕ ಹಿಂದಿಗೆ ಕಾಲಿಟ್ಟಿದ್ದಾರೆ. ಅವರು ಕನ್ನಡದಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಒಂದೊಮ್ಮೆ ಅವರು ಕನ್ನಡಕ್ಕೆ ಬಂದರೆ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. ಸದ್ಯ ಅವರು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>
ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಖಡಕ್ ನಿಯಮ; ಸರ್ಕಾರದಿಂದ ಹೊಸ ಆದೇಶ. https://www.goodnews24x7.com/%e0%b2%85%e0%b2%b0%e0%b2%a3%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b6%e0%b3%82%e0%b2%9f%e0%b3%8d-%e0%b2%ae%e0%b2%be%e0%b2%a1%e0%b3%81%e0%b2%b5%e0%b2%b5%e0%b2%b0%e0%b2%bf/ Fri, 24 Jan 2025 04:57:51 +0000 https://www.goodnews24x7.com/?p=1880 ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡ ಶೂಟಿಂಗ್ ನಡೆಸುವಾಗ ನಿಯಮ ಉಲ್ಲಂಘನೆ ಆರೋಪ ಎದುರಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಹೊಸ…

The post ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಖಡಕ್ ನಿಯಮ; ಸರ್ಕಾರದಿಂದ ಹೊಸ ಆದೇಶ. appeared first on Good News 24x7.

]]>

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡ ಶೂಟಿಂಗ್ ನಡೆಸುವಾಗ ನಿಯಮ ಉಲ್ಲಂಘನೆ ಆರೋಪ ಎದುರಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.
‘ಕಾಂತಾರ ಚಾಪ್ಟರ್ 1’ ಹಾಗೂ ‘ಟಾಕ್ಸಿಕ್’ ಸಿನಿಮಾಗಳ ಶೂಟಿಂಗ್ ವೇಳೆ ಸಾಕಷ್ಟು ವಿವಾದ ಹುಟ್ಟಿಕೊಂಡಿತ್ತು. ‘ಟಾಕ್ಸಿಕ್’ ತಂಡದವರು ಮರ ಕಡಿದ ಆರೋಪ ಹೊತ್ತರೆ, ‘ಕಾಂತಾರ’ ತಂಡದವರು ಬಾಂಬ್ ಸ್ಫೋಟ್ ಮಾಡಿದ ಹಾಗೂ ಅರಣ್ಯದಲ್ಲಿ ಬೆಂಕಿ ಹಚ್ಚಿದ ಆರೋಪ ಎದುರಿಸಿದರು. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ.
‘ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಶುಲ್ಕ ಪಡೆದು ಅನುಮತಿಸಲಾಗುತ್ತಿದೆ. ಪ್ರಸ್ತುತ ಅರಣ್ಯ ಪ್ರದೇಶದ ಚಿತ್ರೀಕರಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡುತ್ತಿರುವುದು ಸರಿಯಷ್ಟೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ಚಿತ್ರೀಕರಣದಿಂದಾಗಬಹುದಾದ ತೊಂದರೆಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಚುರಗೊಂಡಿರುವುದನ್ನು ಗಮನಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಅರಣ್ಯ ಪ್ರದೇಶಗಳಲ್ಲಿ ವಿವಿಧ ಬಗೆಯ ಚಿತ್ರೀಕರಣಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳು ಅನುಮತಿಯನ್ನು ನೀಡುತ್ತಿದ್ದಾರೆ. ಇದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿಯು ಹೊರ ಜಗತ್ತಿಗೆ ದೊರೆಯುವ ಸಂಭವವಿರುತ್ತದೆ. ಅರಣ್ಯ ಮತ್ತು ವನ್ಯಜೀವಿಗಳ ಸೂಕ್ಷ್ಮತೆಯ ಅರಿವಿಲ್ಲದೆ ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ದಕ್ಕೆ ಉಂಟಾಗುವ ಸಂಭವವಿರುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
‘ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸುವ ಹಿತದೃಷ್ಟಿಯಿಂದ, ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಬೇಕು’ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

The post ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಖಡಕ್ ನಿಯಮ; ಸರ್ಕಾರದಿಂದ ಹೊಸ ಆದೇಶ. appeared first on Good News 24x7.

]]>
ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಗ್ರಾಮಸ್ಥರ ಆಕ್ರೋಶ . https://www.goodnews24x7.com/%e0%b2%b0%e0%b2%bf%e0%b2%b7%e0%b2%ac%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf-%e0%b2%85%e0%b2%b5%e0%b2%b0-%e0%b2%95%e0%b2%be%e0%b2%82%e0%b2%a4%e0%b2%be%e0%b2%b0-2/ Mon, 20 Jan 2025 11:39:27 +0000 https://www.goodnews24x7.com/?p=1814 ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಚಿತ್ರೀಕರಣದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಲಾಗಿದೆ ಎಂಬ ಆರೋಪದಿಂದಾಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಪರಿಸರ ಹಾನಿ ಹಾಗೂ ವನ್ಯಜೀವಿಗಳಿಗೆ ಉಂಟಾಗಬಹುದಾದ ಅಪಾಯದ ಬಗ್ಗೆ ಗ್ರಾಮಸ್ಥರು…

The post ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಗ್ರಾಮಸ್ಥರ ಆಕ್ರೋಶ . appeared first on Good News 24x7.

]]>

ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಚಿತ್ರೀಕರಣದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಲಾಗಿದೆ ಎಂಬ ಆರೋಪದಿಂದಾಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಪರಿಸರ ಹಾನಿ ಹಾಗೂ ವನ್ಯಜೀವಿಗಳಿಗೆ ಉಂಟಾಗಬಹುದಾದ ಅಪಾಯದ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಚಿತ್ರದ ಪ್ರೀಕ್ವೆಲ್. ಈ ಸಿನಿಮಾದ ಶೂಟಿಂಗ್ ಕುಂದಾಪುರದ ಸುತ್ತಮುತ್ತ ಸಾಗುತ್ತಿದೆ. ಇದರಲ್ಲಿಯೂ ಮಣ್ಣಿನ ಕಥೆ ಹೇಳಲು ರಿಷಬ್ ಶೆಟ್ಟಿ ರೆಡಿ ಆಗಿದ್ದಾರೆ. ಹೀಗಿರುವಾಗಲೇ ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪ ತಂಡದ ಮೇಲೆ ಬಂದಿದೆ. ಸಿನಿಮಾ ತಂಡದ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
‘ಕಾಂತಾರ’ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ 2’ ಮಾಡುವ ಆಸಕ್ತಿ ತೋರಿಸಿತು. ರಿಷಬ್ ಶೆಟ್ಟಿ ಅವರು ಹೊಸ ಕಥೆಯೊಂದಿಗೆ ಎರಡನೇ ಪಾರ್ಟ್ ಮಾಡಲು ರೆಡಿ ಆಗಿದ್ದಾರೆ. ಚಿತ್ರದ ಶೂಟಿಂಗ್ ಹಾಗೂ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕುಂದಾಪುರದಲ್ಲೇ ನಡೆಯುತ್ತಿದೆ. ಈ ಕಾರಣಕ್ಕೆ ರಿಷಬ್ ಅವರು ತಮ್ಮ ಹುಟ್ಟೂರಿಗೆ ಶಿಫ್ಟ್ ಆಗಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಜನವರಿ 2ರಿಂದ ಈ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರತಂಡ, ಶೂಟಿಂಗ್ಗಾಗಿ ಗೋಮಾಳ ಜಾಗಕ್ಕೆ ಪರವಾನಗಿ ಪಡೆದಿದೆ. ಆದರೆ, ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದು,
‘ಚಿತ್ರೀಕರಣಕ್ಕೆ ಯಾವೆಲ್ಲಾ ಪರವಾನಿಗೆ ನೀಡಿದ್ದಾರೆ ಎಂಬ ಮಾಹಿತಿ ಕೊಡಬೇಕು. ಅರಣ್ಯ, ಕಂದಾಯ ಇಲಾಖೆಯವರು ಮಾಹಿತಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸದ್ಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದರಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎನ್ನಲಾಗಿದೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು ಎಂಬುದು ಗ್ರಾಮಸ್ಥರ ಆಗ್ರಹ. ‘ಕೂಡಲೇ ಶೂಟಿಂಗ್ ಸ್ಥಗಿತಗೊಳಿಸಿ ಪರಿಸರ ಉಳಿಸಿ. ಇಲ್ಲವಾದರೆ ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ’ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.

The post ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಶೂಟ್ ವೇಳೆ ಅರಣ್ಯಕ್ಕೆ ಹಾನಿ? ಗ್ರಾಮಸ್ಥರ ಆಕ್ರೋಶ . appeared first on Good News 24x7.

]]>