SiliconCity Archives - Good News 24x7 https://www.goodnews24x7.com/tag/siliconcity/ Kannada Tue, 10 Mar 2026 10:38:37 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SiliconCity Archives - Good News 24x7 https://www.goodnews24x7.com/tag/siliconcity/ 32 32 ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ! https://www.goodnews24x7.com/the-heat-of-the-iran-israel-war-is-now-directly-affecting-the-lives-of-the-people-of-silicon-city-bengaluru/ Tue, 10 Mar 2026 10:38:28 +0000 https://www.goodnews24x7.com/?p=8835 ಮಧ್ಯಪ್ರಾಚ್ಯದ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರದಿಂದಾಗಿ ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೊರೆಂಟ್​ಗಳಿಗೆ ಮಾತ್ರವಲ್ಲದೇ ಲಕ್ಷಾಂತರ ಜನ ವಾಸವಿರೋ ಪಿಜಿಗಳಿಗೂ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಹೋಟೆಲ್ ಮಾತ್ರವಲ್ಲ.. ಪಿಜಿಗಳಿಗೂ ಸಂಕಷ್ಟ ಆಹಾರ ಪೂರೈಕೆ ಸ್ಥಗಿತದ ಭೀತಿ.. ಆತಂಕದಲ್ಲಿ 10 ಲಕ್ಷ ಮಂದಿ…

The post ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ! appeared first on Good News 24x7.

]]>

ಮಧ್ಯಪ್ರಾಚ್ಯದ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರದಿಂದಾಗಿ ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೊರೆಂಟ್​ಗಳಿಗೆ ಮಾತ್ರವಲ್ಲದೇ ಲಕ್ಷಾಂತರ ಜನ ವಾಸವಿರೋ ಪಿಜಿಗಳಿಗೂ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಹೋಟೆಲ್ ಮಾತ್ರವಲ್ಲ.. ಪಿಜಿಗಳಿಗೂ ಸಂಕಷ್ಟ
ಆಹಾರ ಪೂರೈಕೆ ಸ್ಥಗಿತದ ಭೀತಿ.. ಆತಂಕದಲ್ಲಿ 10 ಲಕ್ಷ ಮಂದಿ
ಕೆಲ ಪಿಜಿಗಳಲ್ಲಿ ಆಹಾರ ಪೂರೈಕೆ ಸ್ಥಗಿತಗೊಳ್ಳುವ ಮುನ್ಸೂಚನೆ
ಈಗಾಗಲೇ ಕೆಲವು ಪಿಜಿಗಳಲ್ಲಿ ಬಗೆ ಬಗೆಯ ಅಡುಗೆಗೆ ಬ್ರೇಕ್​

ಬೆಂಗಳೂರು : ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ. ಗ್ಯಾಸ್ ಸರಬರಾಜಿನಲ್ಲಿ ಉಂಟಾಗಿರುವ ಅಡಚಣೆ ಮತ್ತು ಬೆಲೆ ಏರಿಕೆಯು ನಗರದ ಹೋಟೆಲ್‌ಗಳನ್ನು ಮಾತ್ರವಲ್ಲದೆ, ಲಕ್ಷಾಂತರ ಮಂದಿ ವಾಸವಿರುವ ಪಿಜಿಗಳನ್ನೂ ಬೆಂಬಿಡದೆ ಕಾಡುತ್ತಿದೆ.

ಬೆಂಗಳೂರಿನಲ್ಲಿ ಉದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಹಬ್ ಆಗಿರುವುದರಿಂದ ಇಲ್ಲಿನ ಪಿಜಿಗಳ ಮೇಲೆ ಸಾಕಷ್ಟು ಜನ ಅವಲಂಬಿತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಒಟ್ಟು 15,000 ಪಿಜಿಗಳಿದ್ದು, ಅದರಲ್ಲಿ ಸುಮಾರು 10,00,000 ಜನ ವಾಸವಾಗಿದ್ದಾರೆ. ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈಗ ಉಂಟಾಗಿರುವ ಗ್ಯಾಸ್ ಅಲಭ್ಯತೆಯಿಂದಾಗಿ ಮಾಲೀಕರು ಅಡುಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಮೆನುವಿನಲ್ಲಿ ಕಡಿತಗೊಂಡ ಅಡುಗೆ ರೆಸಿಪಿಗಳು
ಈಗಾಗಲೇ ಹಲವು ಪಿಜಿಗಳಲ್ಲಿ ಸಿಲಿಂಡರ್ ಉಳಿಸುವ ಉದ್ದೇಶದಿಂದಾಗಿ ಬಗೆ ಬಗೆಯ ಅಡುಗೆಗಳಿಗೆ ಬ್ರೇಕ್ ಹಾಕಲಾಗಿದೆ. ಕೇವಲ ಅಗತ್ಯವಾದ ಸೀಮಿತ ಪ್ರಮಾಣದ ಆಹಾರವನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದಾಗಿ ಪಿಜಿಯಲ್ಲಿನ ಜನ ಹೋಟೆಲ್​ನತ್ತ ಮುಖ ಮಾಡೋದು ಸರ್ವೇ ಸಾಮಾನ್ಯ, ಆದರೆ ಆದರೆ ಹೋಟೆಲ್‌ಗಳಲ್ಲೂ ಕಮರ್ಷಿಯಲ್ ಗ್ಯಾಸ್ ಕೊರತೆ ಇರುವುದರಿಂದ ಅಲ್ಲಿಯೂ ಊಟ ಸಿಗುವುದು ಕಷ್ಟವಾಗಲಿದೆ.ಒಂದು ವೇಳೆ ಮುಂದಿನ ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ, ಬಹುತೇಕ ಪಿಜಿಗಳಲ್ಲಿ ಆಹಾರದ ಪೂರೈಕೆ ಸಂಪೂರ್ಣವಾಗಿ ಬಂದ್​ ಮಾಡುವ ಮುನ್ಸೂಚನೆ ಇದೆ.

ದರಗಳ ವ್ಯತ್ಯಾಸ ಹೀಗಿದೆ
ಗೃಹ ಬಳಕೆ ಸಿಲಿಂಡರ್ ಹಳೆ ದರ: ರೂ. 855.50 – ಹೊಸ ದರ: ರೂ. 915.50
ಕಮರ್ಷಿಯಲ್ ಸಿಲಿಂಡರ್ಹಳೆ ದರ: ರೂ. 1,814 – ಹೊಸ ದರ: ರೂ. 1,929

ಸದ್ಯಕ್ಕೆ ಸಂಕಷ್ಟದಲ್ಲಿರುವವರು ಯಾರು?
ನಗರಕ್ಕೆ ಉದ್ಯೋಗ ಅರಸಿ ಬಂದ ಐಟಿ ಉದ್ಯೋಗಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಬಿಕ್ಕಟ್ಟಿನಿಂದ ನೇರವಾಗಿ ತತ್ತರಿಸಿದ್ದಾರೆ. ಅತ್ತ ಪಿಜಿ ಬಾಡಿಗೆ ಏರಿಸುವ ಆತಂಕ, ಇತ್ತ ಊಟ ಸಿಗದ ಆತಂಕ ಎರಡೂ ಜನರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.
ಒಟ್ಟಾರೆಯಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಬೆಂಗಳೂರಿನಂತಹ ಮಹಾನಗರದ ಸಾಮಾನ್ಯ ಜನರ ಹೊಟ್ಟೆ ಮೆಲೆ ಪರಿಣಾಮ ಬೀರುತ್ತಿರುವುದು ಜಾಗತಿಕ ಅವಲಂಬನೆಯ ಕಟು ಸತ್ಯವನ್ನು ತೋರಿಸುತ್ತಿದೆ.

The post ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ! appeared first on Good News 24x7.

]]>
ಕುಖ್ಯಾತ ಅಂತಾರಾಜ್ಯ ಗಾಂಜಾ ಪೆಡ್ಲರ್‌ ಬಂಧನ https://www.goodnews24x7.com/notorious-interstate-ganja-peddler-arrested/ Thu, 26 Feb 2026 12:43:05 +0000 https://www.goodnews24x7.com/?p=8502 ಸಿಲಿಕಾನ್‌ ಸಿಟಿಯಲ್ಲಿ ಕೇರಳ ಪೊಲೀಸರು (Kerala Police) ಭರ್ಜರಿ ಬೇಟಿ ನಡೆಸಿ, ಕುಖ್ಯಾತ ಅಂತರರಾಜ್ಯ ಗಾಂಜಾ ಪೆಡ್ಲರ್‌ನನ್ನು (Ganja Peddler) ಬಂಧಿಸಿದ್ದಾರೆ. ಅಸ್ಸಾಂ ಮೂಲದ ಧೀರೇಶ್ ಕುಟುಮ್ (27) ಬಂಧಿತ ಆರೋಪಿ. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೈಲಸಂದ್ರದಲ್ಲಿ ದಾಳಿ ನಡೆಸಿ, 1…

The post ಕುಖ್ಯಾತ ಅಂತಾರಾಜ್ಯ ಗಾಂಜಾ ಪೆಡ್ಲರ್‌ ಬಂಧನ appeared first on Good News 24x7.

]]>

ಸಿಲಿಕಾನ್‌ ಸಿಟಿಯಲ್ಲಿ ಕೇರಳ ಪೊಲೀಸರು (Kerala Police) ಭರ್ಜರಿ ಬೇಟಿ ನಡೆಸಿ, ಕುಖ್ಯಾತ ಅಂತರರಾಜ್ಯ ಗಾಂಜಾ ಪೆಡ್ಲರ್‌ನನ್ನು (Ganja Peddler) ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಧೀರೇಶ್ ಕುಟುಮ್ (27) ಬಂಧಿತ ಆರೋಪಿ. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೈಲಸಂದ್ರದಲ್ಲಿ ದಾಳಿ ನಡೆಸಿ, 1 ಕೋಟಿ ಮೌಲ್ಯದ 2 ಕೆಜಿ ಎಂಡಿಎಂಎ ಡ್ರಗ್ಸ್ ಸೀಜ್ ಮಾಡಲಾಗಿದೆ.

ಕೇರಳ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಪಡೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತು. ಸೆರೆಲ್ಯಾಕ್ ಪಾಕೆಟ್‌ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡಲಾಗುತ್ತಿತ್ತು. ರಮೇಶ್ ರೆಡ್ಡಿ ಬಡಾವಣೆಯ ಮನೆಯೊಂದರಲ್ಲಿ ಪೊಲೀಸರು ಸೀಜ್‌ ಮಾಡಿದ್ದಾರೆ. ಸತ್ಯಜಿತ್‌ ನೇತೃತ್ವದ ತಂಡದಿಂದ ದಾಳಿ ನಡೆದಿತ್ತು.

ದಾಳಿ ವೇಳೆ 2 ಕೆಜಿ ತೂಕದ ನಾಲ್ಕು ಪ್ಯಾಕೆಟ್‌, 15 ಕ್ಕೂ ಅಧಿಕ ಖಾಲಿಯಾದ ಸೆರೆಲ್ಯಾಕ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಸ್ವಿಗ್ಗಿ ಜೊಮ್ಯಾಟೊ ಡೆಲಿವರಿ ಬಾಯ್ ರೀತಿ ಎಂಡಿಎಂಎ ಸರಬರಾಜು ಮಾಡಲಾಗುತ್ತಿತ್ತು. ಕೇರಳದ ಮಲ್ಲಪುರಂನಲ್ಲಿ ಆರೋಪಿ ಧೀರೇಶ್ ಸಹಚರರು ಸಿಕ್ಕಿಬಿದ್ದಿದ್ದರು. ವಾರದ ಹಿಂದೆ 1 ಕೆಜಿ ಎಂಡಿಎಂಎ ಸಹಿತ 8 ಮಂದಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಿಂಗ್‌ಪಿನ್ ಧೀರೇಶ್ ಬಗ್ಗೆ ಮಾಹಿತಿ ಸಿಕ್ಕಿತ್ತು.

ಆರೋಪಿ ಧೀರೇಶ್ ತಂಗಿ ಪತಿ ನೈಜೀರಿಯಾ ಮೂಲದವನು. ಆತನ ಮೂಲಕ ಎಂಡಿಎಂಎ ಡ್ರಗ್ಸ್ ಅಸ್ಸಾಂಗೆ ರವಾನೆಯಾಗುತ್ತಿತ್ತು. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ, ಕರ್ನಾಟಕಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಪ್ರಕರಣ ಸಂಬಂಧ ಕೇರಳ‌ ಪೊಲೀಸರಿಂದ 9 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು ಮೂರು ಕೆಜಿಯಷ್ಟು ಎಂಡಿಎಂಎ ಸೀಜ್ ಮಾಡಲಾಗಿದೆ.

The post ಕುಖ್ಯಾತ ಅಂತಾರಾಜ್ಯ ಗಾಂಜಾ ಪೆಡ್ಲರ್‌ ಬಂಧನ appeared first on Good News 24x7.

]]>