social media Archives - Good News 24x7 https://www.goodnews24x7.com/tag/social-media/ Kannada Wed, 26 Aug 2026 12:04:32 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg social media Archives - Good News 24x7 https://www.goodnews24x7.com/tag/social-media/ 32 32 ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ! https://www.goodnews24x7.com/after-ram-charan-kiccha-sudeeps-bodyguards-now-yash-has-a-bodyguard/ Wed, 26 Aug 2026 12:04:32 +0000 https://www.goodnews24x7.com/?p=9926 ಚಿತ್ರರಂಗದಲ್ಲಿ ನೆಚ್ಚಿನ ನಟರ ಜೊತೆಗೆ ಅವರ ಪರ್ಸನಲ್‌ ಬಾಡಿಗಾರ್ಡ್‌ಗಳೂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ನಟ ರಾಮ್‌ ಚರಣ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವೇಳೆಯಲ್ಲಿ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್, ಆಫ್ರಿಕಾ…

The post ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ! appeared first on Good News 24x7.

]]>

ಚಿತ್ರರಂಗದಲ್ಲಿ ನೆಚ್ಚಿನ ನಟರ ಜೊತೆಗೆ ಅವರ ಪರ್ಸನಲ್‌ ಬಾಡಿಗಾರ್ಡ್‌ಗಳೂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ನಟ ರಾಮ್‌ ಚರಣ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವೇಳೆಯಲ್ಲಿ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್, ಆಫ್ರಿಕಾ ಮೂಲದ ಅಂತರಾಷ್ಟ್ರೀಯ ಮಾರ್ಷಲ್‌ ಆರ್ಟ್ಸ್‌ ಪಟು ಹಾಗೂ ಮಾಡೆಲ್ ಕೆವಿನ್‌ ಕುಂಟಾ ತಮ್ಮ ದೈತ್ಯ ದೇಹಕಟ್ಟು ಮತ್ತು ರಗಡ್ ಲುಕ್‌ನಿಂದಾಗಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದರು. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಅಕ್ಕನ ಮಗ ಸಂಚೀತ್‌ ಸಂಜೀವ್‌ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಪ್ರಚಾರ ಸಂದರ್ಭದಲ್ಲಿ, ಸುದೀಪ್‌ ಅವರ ಕೆಂಪು-ಬಿಳಿ ಮೈಬಣ್ಣದ ಇಟಲಿ ಮೂಲದ ಬಾಡಿಗಾರ್ಡ್‌ ಸರ್ಗಿಯುಝ್‌ ವೋಲಾಕ್‌ ನೆಟ್ಟಿಗರ ಗಮನ ಸೆಳೆದು ಭಾರಿ ಸ್ಪಾಟ್‌ಲೈಟ್ ಪಡೆದುಕೊಂಡಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಅವರ ಹಿಂದಿನ ಶಕ್ತಿಯಾಗಿ ನಿಂತಿರುವ ಪಕ್ಕಾ ದೇಸಿ ದೈತ್ಯ ಶ್ರೀನಿವಾಸ್‌ ಅಲಿಯಾಸ್ ‘ಸೀನ’ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದ್ದಾರೆ. ಯಶ್, ರಾಧಿಕಾ ಪಂಡಿತ್ ಹಾಗೂ ಅವರ ಕುಟುಂಬಕ್ಕೆ ಬಂಡೆಯಂತೆ ರಕ್ಷಣೆ ನೀಡುತ್ತಿರುವ ಈ ಯಶ್ ಶ್ರೀನಿವಾಸ್, ಕಟ್ಟುಮಸ್ತಾದ ದೇಹ ಮತ್ತು ತೀಕ್ಷ್ಣವಾದ ಲುಕ್ ಹೊಂದಿದ್ದು ಸಾವಿರಾರು ಫಾಲೋವರ್ಸ್‌ಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ಯಶ್‌ ಅವರಿಗೆ ಬರೋಬ್ಬರಿ 12 ವರ್ಷಗಳ ಕಾಲ ಅಂಗರಕ್ಷಕರಾಗಿದ್ದ ರಾಮಚಂದ್ರ ರಾಜು ಅವರನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಗುರುತಿಸಿ ‘ಕೆಜಿಎಫ್‌’ ಸಿನಿಮಾದ ‘ಗರುಡ’ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆ ಒಂದು ಪಾತ್ರದ ಮೂಲಕ ಗರುಡ ರಾಮ್‌ ಅವರು ದಕ್ಷಿಣ ಭಾರತದಾದ್ಯಂತ ಬಹುಭಾಷಾ ಖಳನಟನಾಗಿ ಹೊರಹೊಮ್ಮಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. ಪ್ರಸ್ತುತ ಲಕ್ಷ ಲಕ್ಷ ಸಂಬಳ ಪಡೆಯುತ್ತಿರುವ ಶ್ರೀನಿವಾಸ್ ಅವರಿಗೂ ಅಂತಹದ್ದೇ ಸುವರ್ಣ ಅವಕಾಶ ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದ್ದು, ಇವರ ರಗಡ್ ಅವತಾರಕ್ಕೆ ವಿಲನ್ ಪಾತ್ರಗಳು ಪಕ್ಕಾ ಸೂಟ್ ಆಗುವುದರಿಂದ ಮುಂದಿನ ದಿನಗಳಲ್ಲಿ ಇವರೂ ಕೂಡ ಬೆಳ್ಳಿತೆರೆಯಲ್ಲಿ ದೊಡ್ಡ ಮಟ್ಟದ ಖಳನಟನಾಗಿ ಮಿಂಚಿದರೂ ಆಶ್ಚರ್ಯವಿಲ್ಲ.

The post ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ! appeared first on Good News 24x7.

]]>
ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ https://www.goodnews24x7.com/melody-diplomacy-we-are-a-world-famous-couple-says-italian-pm-meloni/ Wed, 17 Jun 2026 06:59:33 +0000 https://www.goodnews24x7.com/?p=9595 ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹ ಇಡೀ ವಿಶ್ವದ ಗಮನ ಸೆಳೆದಿದೆ. ಇವರಿಬ್ಬರ ರಾಜತಾಂತ್ರಿಕ ಒಡನಾಟವು ಭಾರತ ಮತ್ತು ಇಟಲಿ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಜಿ7…

The post ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ appeared first on Good News 24x7.

]]>

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹ ಇಡೀ ವಿಶ್ವದ ಗಮನ ಸೆಳೆದಿದೆ. ಇವರಿಬ್ಬರ ರಾಜತಾಂತ್ರಿಕ ಒಡನಾಟವು ಭಾರತ ಮತ್ತು ಇಟಲಿ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಜಿ7 ಶೃಂಗಸಭೆಯ ಫೋಟೋಶೂಟ್‌ ವೇಳೆ ಇಬ್ಬರು ನಾಯಕರ ನಡುವೆ ನಡೆದ ಒಂದು ಸ್ವಾರಸ್ಯಕರ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನ ‘ಫೇಮಸ್ ಕಪಲ್’
ವಿಶ್ವದ ಪ್ರಮುಖ ನಾಯಕರು ಜಾಗತಿಕ ಸವಾಲುಗಳು ಮತ್ತು ರಾಜತಾಂತ್ರಿಕ ವಿಷಯಗಳ ಕುರಿತು ಚರ್ಚಿಸಲು ಜಿ7 ಶೃಂಗಸಭೆಯಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಗ್ರೂಪ್‌ ಫೋಟೋಗಾಗಿ ಸಾಲಾಗಿ ನಿಲ್ಲುತ್ತಿದ್ದಾಗ ಪ್ರಧಾನಿ ಮೋದಿ ಮತ್ತು ಮೆಲೋನಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮಾತುಕತೆಯ ಮಧ್ಯೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಭೇಟಿಗೆ ಸಿಗುವ ಜನಪ್ರಿಯತೆಯನ್ನು ಉಲ್ಲೇಖಿಸಿದಾಗ, ಜಾರ್ಜಿಯಾ ಮೆಲೋನಿ ಅವರು ಮುಗುಳ್ನಗುತ್ತಾ, “ಹೌದು, ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ!” ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರಧಾನಿ ಮೋದಿ ಕೂಡ ನಗುತ್ತಾ ಸಮ್ಮತಿಸಿದ ವೀಡಿಯೊ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಜಾಗತಿಕ ವೇದಿಕೆಯಲ್ಲಿ ‘ಮೆಲೋಡಿ’ ಮ್ಯಾಜಿಕ್
ಕಳೆದ ಬಾರಿಯ ಶೃಂಗಸಭೆಯಲ್ಲೂ ಈ ಜೋಡಿಯ ಭೇಟಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ.

ಜಾಗತಿಕ ನಾಯಕ: ಮೆಲೋನಿ ಅವರು ಮೋದಿ ಅವರನ್ನು “ಜಾಗತಿಕ ನಾಯಕ” ಎಂದು ಬಣ್ಣಿಸಿದ್ದು, ಆಧುನಿಕ ಭಾರತದ ಧ್ವನಿಯನ್ನು ಜಾಗತಿಕ ವೇದಿಕೆಯಲ್ಲಿ ಗಟ್ಟಿಗೊಳಿಸುವಲ್ಲಿ ಮೋದಿ ಅವರ ಪಾತ್ರ ಶ್ಲಾಘನೀಯ ಎಂದಿದ್ದಾರೆ.

ಮೆಲೋಡಿ ಚಾಕೊಲೇಟ್ ರಾಜತಾಂತ್ರಿಕತೆ: ಈ ಹಿಂದೆ ಪ್ರಧಾನಿ ಮೋದಿ ಅವರು ಇಟಲಿ ಪ್ರಧಾನಿಗೆ ಭಾರತದ ಜನಪ್ರಿಯ ‘ಮೆಲೋಡಿ’ ಚಾಕ್‌ಲೇಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಮೆಲೋನಿ ಅದರ ಸ್ವಾದವನ್ನು ಕೊಂಡಾಡಿದ್ದರು. ಭಾರತದಲ್ಲಿ ವಿರೋಧ ಪಕ್ಷಗಳು ಇದರ ಬಗ್ಗೆ ಟೀಕೆ ಮಾಡಿದರೂ, ಮೋದಿ ಬೆಂಬಲಿಗರು ಇದನ್ನು ಯಶಸ್ವಿ “ಮೆಲೋಡಿ ರಾಜತಾಂತ್ರಿಕತೆ” ಎಂದೇ ಕರೆದಿದ್ದರು.

ಒಟ್ಟಿನಲ್ಲಿ, ಜಿ7 ಶೃಂಗಸಭೆಯ ಗಂಭೀರ ರಾಜತಾಂತ್ರಿಕ ಚರ್ಚೆಗಳ ನಡುವೆಯೂ ಭಾರತ ಮತ್ತು ಇಟಲಿ ನಾಯಕರ ಈ ಆತ್ಮೀಯ ಕ್ಷಣಗಳು ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.ಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ!
ಮೆ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹ ಇಡೀ ವಿಶ್ವದ ಗಮನ ಸೆಳೆದಿದೆ. ಇವರಿಬ್ಬರ ರಾಜತಾಂತ್ರಿಕ ಒಡನಾಟವು ಭಾರತ ಮತ್ತು ಇಟಲಿ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಜಿ7 ಶೃಂಗಸಭೆಯ ಫೋಟೋಶೂಟ್‌ ವೇಳೆ ಇಬ್ಬರು ನಾಯಕರ ನಡುವೆ ನಡೆದ ಒಂದು ಸ್ವಾರಸ್ಯಕರ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನ ‘ಫೇಮಸ್ ಕಪಲ್’
ವಿಶ್ವದ ಪ್ರಮುಖ ನಾಯಕರು ಜಾಗತಿಕ ಸವಾಲುಗಳು ಮತ್ತು ರಾಜತಾಂತ್ರಿಕ ವಿಷಯಗಳ ಕುರಿತು ಚರ್ಚಿಸಲು ಜಿ7 ಶೃಂಗಸಭೆಯಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಗ್ರೂಪ್‌ ಫೋಟೋಗಾಗಿ ಸಾಲಾಗಿ ನಿಲ್ಲುತ್ತಿದ್ದಾಗ ಪ್ರಧಾನಿ ಮೋದಿ ಮತ್ತು ಮೆಲೋನಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮಾತುಕತೆಯ ಮಧ್ಯೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಭೇಟಿಗೆ ಸಿಗುವ ಜನಪ್ರಿಯತೆಯನ್ನು ಉಲ್ಲೇಖಿಸಿದಾಗ, ಜಾರ್ಜಿಯಾ ಮೆಲೋನಿ ಅವರು ಮುಗುಳ್ನಗುತ್ತಾ, “ಹೌದು, ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ!” ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರಧಾನಿ ಮೋದಿ ಕೂಡ ನಗುತ್ತಾ ಸಮ್ಮತಿಸಿದ ವೀಡಿಯೊ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಜಾಗತಿಕ ವೇದಿಕೆಯಲ್ಲಿ ‘ಮೆಲೋಡಿ’ ಮ್ಯಾಜಿಕ್
ಕಳೆದ ಬಾರಿಯ ಶೃಂಗಸಭೆಯಲ್ಲೂ ಈ ಜೋಡಿಯ ಭೇಟಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ.

ಜಾಗತಿಕ ನಾಯಕ: ಮೆಲೋನಿ ಅವರು ಮೋದಿ ಅವರನ್ನು “ಜಾಗತಿಕ ನಾಯಕ” ಎಂದು ಬಣ್ಣಿಸಿದ್ದು, ಆಧುನಿಕ ಭಾರತದ ಧ್ವನಿಯನ್ನು ಜಾಗತಿಕ ವೇದಿಕೆಯಲ್ಲಿ ಗಟ್ಟಿಗೊಳಿಸುವಲ್ಲಿ ಮೋದಿ ಅವರ ಪಾತ್ರ ಶ್ಲಾಘನೀಯ ಎಂದಿದ್ದಾರೆ.

ಮೆಲೋಡಿ ಚಾಕೊಲೇಟ್ ರಾಜತಾಂತ್ರಿಕತೆ: ಈ ಹಿಂದೆ ಪ್ರಧಾನಿ ಮೋದಿ ಅವರು ಇಟಲಿ ಪ್ರಧಾನಿಗೆ ಭಾರತದ ಜನಪ್ರಿಯ ‘ಮೆಲೋಡಿ’ ಚಾಕ್‌ಲೇಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಮೆಲೋನಿ ಅದರ ಸ್ವಾದವನ್ನು ಕೊಂಡಾಡಿದ್ದರು. ಭಾರತದಲ್ಲಿ ವಿರೋಧ ಪಕ್ಷಗಳು ಇದರ ಬಗ್ಗೆ ಟೀಕೆ ಮಾಡಿದರೂ, ಮೋದಿ ಬೆಂಬಲಿಗರು ಇದನ್ನು ಯಶಸ್ವಿ “ಮೆಲೋಡಿ ರಾಜತಾಂತ್ರಿಕತೆ” ಎಂದೇ ಕರೆದಿದ್ದರು.

ಒಟ್ಟಿನಲ್ಲಿ, ಜಿ7 ಶೃಂಗಸಭೆಯ ಗಂಭೀರ ರಾಜತಾಂತ್ರಿಕ ಚರ್ಚೆಗಳ ನಡುವೆಯೂ ಭಾರತ ಮತ್ತು ಇಟಲಿ ನಾಯಕರ ಈ ಆತ್ಮೀಯ ಕ್ಷಣಗಳು ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

The post ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ appeared first on Good News 24x7.

]]>
ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; https://www.goodnews24x7.com/%e0%b2%b9%e0%b3%88%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%b5%e0%b2%b0%e0%b3%8d%e0%b2%9a%e0%b3%81%e0%b2%b5%e0%b2%b2%e0%b3%8d-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3/ Fri, 27 Jun 2025 12:03:15 +0000 https://www.goodnews24x7.com/?p=4728 ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವರ್ಚುವಲ್ ಮೀಟಿಂಗ್ ದೈನಂದಿನ ಜೀವನದ ಭಾಗವಾಗಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿವೆ. ಆನ್ಲೈನ್ ಮೀಟಿಂಗ್ ಸಮಯದಲ್ಲಿ ಬೆಡ್ರೂಂನಿಂದ ವಿಡಿಯೊ ಕರೆಗಳಿಗೆ ಹಾಜರಾಗುವುದು, ಮೀಟಿಂಗ್ ವೇಳೆಯೂ ಬೇರೆ ಕೆಲಸ ಮಾಡುವುದು ಅಸಾಮಾನ್ಯವೇನಲ್ಲ.…

The post ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; appeared first on Good News 24x7.

]]>

ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವರ್ಚುವಲ್ ಮೀಟಿಂಗ್ ದೈನಂದಿನ ಜೀವನದ ಭಾಗವಾಗಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿವೆ. ಆನ್ಲೈನ್ ಮೀಟಿಂಗ್ ಸಮಯದಲ್ಲಿ ಬೆಡ್ರೂಂನಿಂದ ವಿಡಿಯೊ ಕರೆಗಳಿಗೆ ಹಾಜರಾಗುವುದು, ಮೀಟಿಂಗ್ ವೇಳೆಯೂ ಬೇರೆ ಕೆಲಸ ಮಾಡುವುದು ಅಸಾಮಾನ್ಯವೇನಲ್ಲ. ಆದರೆ, ಗುಜರಾತ್ ಹೈಕೋರ್ಟ್ ವಿಚಾರಣೆಗೆ ಶೌಚಾಲಯದಿಂದಲೇ ವ್ಯಕ್ತಿಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಇಂತಹ ಘಟನೆಗಳು ಕಾನೂನಿಗೆ ಮಾಡುವ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಗುಜರಾತ್ ಹೈಕೋರ್ಟ್ನ ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠದ ಮುಂದೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ. ಆತ ಕುತ್ತಿಗೆಗೆ ಬ್ಲೂಟೂತ್ ಇಯರ್ಫೋನ್ ಧರಿಸಿರುವುದು ಕಂಡುಬಂದಿದೆ. ಕೋರ್ಟ್ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವನು ಆರಂಭದಲ್ಲಿ ತನ್ನ ಫೋನ್ ಅನ್ನು ದೂರದಲ್ಲಿ ಇರಿಸಿದನು. ಆಗ ಆತ ಟಾಯ್ಲೆಟ್ನಲ್ಲಿ ಕುಳಿತಿರುವುದು ಕಂಡಿತು. ಹಾಗೇ, ಬಾತ್ರೂಂನಿಂದ ಹೊರಬರುವ ಮೊದಲು ಅವನು ತನ್ನನ್ನು ತಾನು ಒರೆಸಿಕೊಳ್ಳುವುದನ್ನು ದೃಶ್ಯಗಳು ತೋರಿಸುತ್ತವೆ. ಅವನು ಮತ್ತೊಂದು ರೂಂನಲ್ಲಿ ಕುಳಿತು ವಿಚಾರಣೆಗೆ ಹಾಜರಾಗುವ ಮೊದಲು ಸ್ವಲ್ಪ ಹೊತ್ತು ಮೊಬೈಲನ್ನು ಮೇಜಿನ ಮೇಲಿಟ್ಟು ಕಣ್ಮರೆಯಾಗುತ್ತಾನೆ.

The post ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; appeared first on Good News 24x7.

]]>
ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಅರಿಶಿಣ ಪುಡಿ…….. https://www.goodnews24x7.com/%e0%b2%b8%e0%b3%8b%e0%b2%b6%e0%b2%bf%e0%b2%af%e0%b2%b2%e0%b3%8d-%e0%b2%ae%e0%b3%80%e0%b2%a1%e0%b2%bf%e0%b2%af%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%9f%e0%b3%8d/ Thu, 26 Jun 2025 11:39:55 +0000 https://www.goodnews24x7.com/?p=4675 ಭಾರತ ಏನ್​ ಮಾಡಿದ್ರು ಅದು ಮಾಸ್​​ ಆಗಿರುತ್ತದೆ. ಚಿಕ್ಕ ಚಿಕ್ಕ ವಿಷಯವನ್ನು ದೊಡ್ಡ ಮಟ್ಟದಲ್ಲಿ ಟ್ರೆಂಡ್​​ ಮಾಡುವ ಕಲೆ ಭಾರತೀಯರಿಗೆ ಗೊತ್ತಿದೆ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿರುವುದು ಅರಶಿನಪುಡಿಯನ್ನು ಗಾಜಿನ ಲೋಟಕ್ಕೆ ಹಾಕಿ ಸ್ಲೋಮೋಷನ್ ನಲ್ಲಿ…

The post ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಅರಿಶಿಣ ಪುಡಿ…….. appeared first on Good News 24x7.

]]>

ಭಾರತ ಏನ್​ ಮಾಡಿದ್ರು ಅದು ಮಾಸ್​​ ಆಗಿರುತ್ತದೆ. ಚಿಕ್ಕ ಚಿಕ್ಕ ವಿಷಯವನ್ನು ದೊಡ್ಡ ಮಟ್ಟದಲ್ಲಿ ಟ್ರೆಂಡ್​​ ಮಾಡುವ ಕಲೆ ಭಾರತೀಯರಿಗೆ ಗೊತ್ತಿದೆ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿರುವುದು ಅರಶಿನಪುಡಿಯನ್ನು ಗಾಜಿನ ಲೋಟಕ್ಕೆ ಹಾಕಿ ಸ್ಲೋಮೋಷನ್ ನಲ್ಲಿ ವಿಡಿಯೋ ಮಾಡುವುದು. ಈ ಬಗ್ಗೆ ನಿಮ್ಗೂ ಗೊತ್ತಿರಬಹುದು, ಜಗತ್ತಿನಲ್ಲಿ ಎಲ್ಲರೂ ಯುದ್ಧದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಭಾರತದ ಯುವಕರು ಅರಶಿನ ಪುಡಿಯನ್ನು ನೀರಿಗೆ ಹಾಕಿ ಟ್ರೆಂಡ್ ಆಗುತ್ತಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.

 

ಅರಶಿನ “ಮ್ಯಾಜಿಕಲ್ ಸ್ಪ್ಲಾಶ್” ಪ್ರಯೋಗ .ಇದೊಂದು ಮಾಂತ್ರಿಕ ವಿಜ್ಞಾನದಂತೆ ಕಾಣುತ್ತಿದೆ. ಇದನ್ನು ಮಾಡಲು ಒಂದು ಲೋಟ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದು ಫೋನ್ ಟಾರ್ಚ್ ಇದ್ರೆ ಸಾಕು.ಇವುಗಳನ್ನು ಬಳಸಿಕೊಂಡು ಕತ್ತಲೆ ಕೊಣೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಂಡು, ಅದನ್ನು ಮೊಬೈಲ್​​ ಟಾರ್ಚ್ ಮೇಲೆ ಇಟ್ಟು, ಆ ನೀರಿಗೆ ಅರಶಿನ ಪುಡಿ ಹಾಕಿ, ನಿಮ್ಮ ಮುಖವನ್ನು ಹತ್ತಿರ ತೆಗೆದುಕೊಂಡು ನೋಡಿ. ಅದರ ಲೈಟ್‌ಗೆ ನಿಮ್ಮ ಮುಖ ಹೊಳೆಯುತ್ತದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೊದಲು ಒಳ್ಳೆಯ ಮ್ಯೂಸಿಕ್ ಹಾಕಿ, ಎಡಿಟ್​ ಮಾಡಿ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡುತ್ತಿದ್ದಾರೆ.

The post ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಅರಿಶಿಣ ಪುಡಿ…….. appeared first on Good News 24x7.

]]>
ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. https://www.goodnews24x7.com/%e0%b2%b8%e0%b3%82%e0%b2%aa%e0%b2%b0%e0%b3%8d-%e0%b2%ae%e0%b2%be%e0%b2%b0%e0%b3%8d%e0%b2%95%e0%b3%86%e0%b2%9f%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%be%e0%b2%aa/ Sat, 07 Jun 2025 12:00:57 +0000 https://www.goodnews24x7.com/?p=4268 ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾದರೆ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಒಂದಲ್ಲ ಒಂದು ವಿಶೇಷವಾದ ಹಾಗೂ ಅಚ್ಚರಿಮೂಡಿಸುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಶಾಪಿಂಗ್ ಮಾಡಲು ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಅಷ್ಟೇ ಅಲ್ಲದೇ ತನಗೆ…

The post ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. appeared first on Good News 24x7.

]]>

ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾದರೆ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಒಂದಲ್ಲ ಒಂದು ವಿಶೇಷವಾದ ಹಾಗೂ ಅಚ್ಚರಿಮೂಡಿಸುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಶಾಪಿಂಗ್ ಮಾಡಲು ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಅಷ್ಟೇ ಅಲ್ಲದೇ ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಅಚ್ಚರಿಗೊಳಿಸಿದೆ.

ಆನೆಗಳು ನಿಜವಾಗಿಯೂ ಸಾಧು ಪ್ರಾಣಿಗಳು, ಸುಖಾ ಸುಮ್ಮನೆ ಯಾರ ತಂಟೆಗೂ ಹೋಗುವುದಿಲ್ಲ. ಒಂದು ವೇಳೆ ಸಿಟ್ಟು ಬಂದರೆ, ಮದವೇರಿದರೆ ಅದನ್ನು ನಿಯಂತ್ರಿಸುವುದೇ ಕಷ್ಟ. ಮನುಷ್ಯರನ್ನಷ್ಟೇ ಅಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ರಂಪಾಟ ಮಾಡುವುದಿದೆ. ಆದರೆ ಇದೀಗ ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿ ಶಾಪಿಂಗ್ ಮಾಡಿದೆ. ಹೌದು ಥೈಲ್ಯಾಂಡ್ ನ ಸೂಪರ್ ಮಾರ್ಕೆಟ್ ನಲ್ಲಿ ಇಂತಹದೊಂದು ಅಪರೂಪದ ದೃಶ್ಯ ಕಂಡು ಬಂದಿದ್ದು, ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಅಲ್ಲಿಂದ ಹೊರಟು ಹೋಗಿದೆ. ಇಂಡಿಪೆಂಡೆಂಟ್ ವರದಿಯ ಪ್ರಕಾರವಾಗಿ, ಈ ಆನೆಯು ಕಾವೋ ಯಾಯ್ ರಾಷ್ಟ್ರೀಯ ಉದ್ಯಾನವನದ ನಿವಾಸಿಯಾಗಿದ್ದು, ಪ್ಲಾಯ್ ಬಿಯಾಂಗ್ ಲೆಕ್ ಎಂದು ಗುರುತಿಸಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

The post ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. appeared first on Good News 24x7.

]]>
ಕಲಬುರಗಿಯಿಂದ 70 ವರ್ಷ ವಯಸ್ಸಿನ ವ್ಯಕ್ತಿ ಕೇದಾರನಾಥಕ್ಕೆ ಪಾದಯಾತ್ರೆ…. https://www.goodnews24x7.com/%e0%b2%95%e0%b2%b2%e0%b2%ac%e0%b3%81%e0%b2%b0%e0%b2%97%e0%b2%bf%e0%b2%af%e0%b2%bf%e0%b2%82%e0%b2%a6-70-%e0%b2%b5%e0%b2%b0%e0%b3%8d%e0%b2%b7-%e0%b2%b5%e0%b2%af%e0%b2%b8%e0%b3%8d%e0%b2%b8%e0%b2%bf/ Fri, 16 May 2025 12:03:16 +0000 https://www.goodnews24x7.com/?p=3910 ವಯಸ್ಸಾದ ನಂತರ ನಡೆದಾಡುವುದೇ ಕಷ್ಟ ಅಂತದರಲ್ಲಿ ಈ 70 ವರ್ಷದ ವ್ಯಕ್ತಿ, ಕಲಬುರಗಿ ಇಂದ ಕೇದಾರನಾಥಕ್ಕೆ ಪಾದಯಾತ್ರೆ ಹೋಗಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಕರ್ನಾಟಕದ ಕಲಬುರಗಿ ಜಿಲ್ಲೆಯ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳ ಅವಧಿಯಲ್ಲಿ ನೂರಾರು ಕಿಲೋಮೀಟರ್…

The post ಕಲಬುರಗಿಯಿಂದ 70 ವರ್ಷ ವಯಸ್ಸಿನ ವ್ಯಕ್ತಿ ಕೇದಾರನಾಥಕ್ಕೆ ಪಾದಯಾತ್ರೆ…. appeared first on Good News 24x7.

]]>

ವಯಸ್ಸಾದ ನಂತರ ನಡೆದಾಡುವುದೇ ಕಷ್ಟ ಅಂತದರಲ್ಲಿ ಈ 70 ವರ್ಷದ ವ್ಯಕ್ತಿ, ಕಲಬುರಗಿ ಇಂದ ಕೇದಾರನಾಥಕ್ಕೆ ಪಾದಯಾತ್ರೆ ಹೋಗಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಕರ್ನಾಟಕದ ಕಲಬುರಗಿ ಜಿಲ್ಲೆಯ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳ ಅವಧಿಯಲ್ಲಿ ನೂರಾರು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿ ಉತ್ತರಾಖಂಡದ ಕೇದಾರನಾಥ ತಲುಪಿದ್ದಾರೆ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಹ ಯಾತ್ರಿಕರ ಗುಂಪಿನೊಂದಿಗೆ ಮಾರ್ಚ್ 3 ರಂದು ಕಲಬುರಗಿಯಿಂದ ಪಾದಯಾತ್ರೆ ಪ್ರಾರಂಭಿಸಿದ್ದಾಗಿ 70 ರ್ಷ ವಯಸ್ಸಿನ ಭಕ್ತ ವೈರಲ್ ಆಗಿರುವ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಯಾತ್ರಿಕರ ತಂಡವು ಮೇ 1 ರಂದು ಪವಿತ್ರ ಕೇದಾರನಾಥ ದೇಗುಲವನ್ನು ತಲುಪಿತ್ತು ಎನ್ನಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ಈ ಯಾತ್ರಿಕರ ಗುಂಪು ಬಯಲು, ಕಾಡುಗಳು ಮತ್ತು ಪರ್ವತ ಪ್ರದೇಶಗಳ ಮೂಲಕ ಪಾದಯಾತ್ರೆ ಮಾಡಿ 2,200 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದೆ ಎನ್ನಲಾಗಿದೆ. ಈ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.

 

The post ಕಲಬುರಗಿಯಿಂದ 70 ವರ್ಷ ವಯಸ್ಸಿನ ವ್ಯಕ್ತಿ ಕೇದಾರನಾಥಕ್ಕೆ ಪಾದಯಾತ್ರೆ…. appeared first on Good News 24x7.

]]>
ಮಾನವೀಯತೆಗೆ ಮಾದರಿಯಾದ ಮಾನವ…. ದೇವರಂತೆ ಬಂದು ಅಜ್ಜಿ ಹಾಗೂ ಗೋವಿನ ಹಸಿವು ನೀಗಿಸಿದ ವ್ಯಕ್ತಿ… https://www.goodnews24x7.com/%e0%b2%ae%e0%b2%be%e0%b2%a8%e0%b2%b5%e0%b3%80%e0%b2%af%e0%b2%a4%e0%b3%86%e0%b2%97%e0%b3%86-%e0%b2%ae%e0%b2%be%e0%b2%a6%e0%b2%b0%e0%b2%bf%e0%b2%af%e0%b2%be%e0%b2%a6-%e0%b2%ae%e0%b2%be%e0%b2%a8%e0%b2%b5/ Sat, 03 May 2025 11:40:03 +0000 https://www.goodnews24x7.com/?p=3586 ಇದು ಕಲಿಯುಗ, ಎಂತಹ ಚಿತ್ರ ವಿಚಿತ್ರ ಘಟನೆಗಳನ್ನು ನಾವು ನೋಡ್ತಾ ಇರ್ತೀವಿ ಹಾಗೂ ಕೇಳ್ತಾ ಇರ್ತೀವಿ. ಹೆತ್ತ ತಂದೆ ತಾಯಿಗಳನ್ನೇ ನೋಡಿಕೊಳ್ಳಲು ಹಿಂಜರಿಯುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ತರಕಾರಿ ಮಾರುವ ಅಜ್ಜೀ ಹಾಗೂ ಹಸುವಿನ ಹೊಟ್ಟೆ ತುಂಬಿಸಿದ್ದಾನೆ.ಕೆಲವರು ಏನು ಪ್ರತಿಫಲ ಅಪೇಕ್ಷಿಸದೇ…

The post ಮಾನವೀಯತೆಗೆ ಮಾದರಿಯಾದ ಮಾನವ…. ದೇವರಂತೆ ಬಂದು ಅಜ್ಜಿ ಹಾಗೂ ಗೋವಿನ ಹಸಿವು ನೀಗಿಸಿದ ವ್ಯಕ್ತಿ… appeared first on Good News 24x7.

]]>

ಇದು ಕಲಿಯುಗ, ಎಂತಹ ಚಿತ್ರ ವಿಚಿತ್ರ ಘಟನೆಗಳನ್ನು ನಾವು ನೋಡ್ತಾ ಇರ್ತೀವಿ ಹಾಗೂ ಕೇಳ್ತಾ ಇರ್ತೀವಿ. ಹೆತ್ತ ತಂದೆ ತಾಯಿಗಳನ್ನೇ ನೋಡಿಕೊಳ್ಳಲು ಹಿಂಜರಿಯುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ತರಕಾರಿ ಮಾರುವ ಅಜ್ಜೀ ಹಾಗೂ ಹಸುವಿನ ಹೊಟ್ಟೆ ತುಂಬಿಸಿದ್ದಾನೆ.ಕೆಲವರು ಏನು ಪ್ರತಿಫಲ ಅಪೇಕ್ಷಿಸದೇ ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಇಂತಹ ಕೆಲವು ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ದುಡಿಯುವ ಕೈಗೆ ಆಸರೆಯಾಗದ್ದು, ಹಸಿದ ಗೋವಿಗೆ ಅನ್ನದಾತನಾಗಿದ್ದು, ಅದರಲ್ಲೇ ಸಂತೋಷ ಕಂಡುಕೊಂಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಹೃದಯಶ್ರೀಮಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗಿನ ಕಾಲದಲ್ಲಿ ಮಾನವೀಯತೆ ಹಾಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಗಳನ್ನು ನೋಡುವುದೇ ಕಷ್ಟ. ಒಬ್ಬರ ಹಸಿವನ್ನು ನೀಗಿಸುವುದು ಹಾಗೂ ಮುಖದಲ್ಲಿ ನಗು ತರಿಸುವುದು ಅಷ್ಟು ಸುಲಭವಲ್ಲ. ಈಗಿನ ಕಾಲದಲ್ಲಿ ಎಲ್ಲರಿಗೂ ಇಂತಹ ಮನಸ್ಸು ಇರುವುದಿಲ್ಲ. ಆದರೆ ಕಷ್ಟಕ್ಕೆ ಮರುಗುವ, ಇನ್ನೊಬ್ಬರಿಗೆ ಸಾಹಸ ಮಾಡುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಲ್ಲೊಬ್ಬ ಮಹಾನುಭಾವ ಗೋವಿನ ಹಸಿವನ್ನು ನೀಗಿಸಿ, ಹಿರಿ ಜೀವಕ್ಕೆ ಆಸರೆಯಾಗುವ ಮೂಲಕ ಅಜ್ಜಿಯ ಮುಖದಲ್ಲಿ ನಗುವನ್ನು ಮೂಡಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯೂ ಗುಣವನ್ನು ಕೊಂಡಾಡಿದ್ದಾರೆ.

ವ್ಯಕ್ತಿಯೊಬ್ಬನು ಕ್ಯಾರೆಟ್ ತಿನ್ನುತ್ತಾ ನಿಂತಿರುವುದನ್ನು ನೋಡಬಹುದು. ಆ ಬಳಿಕ ಗೋವೊಂದು ಈತನ ಬಳಿ ಬಂದು ಕೈಯಲ್ಲಿದ್ದ ಕ್ಯಾರೆಟ್ ತಿಂದಿದೆ. ತದನಂತರದಲ್ಲಿ ರಸ್ತೆಯ ಬಳಿ ಕ್ಯಾರೆಟ್ ಮಾರಾಟ ಮಾಡುತ್ತಿದ್ದ ಅಜ್ಜಿಯ ಬಳಿ ಹೋಗಿದ್ದು ಆಕೆಯ ಬಳಿಯಿದ್ದ ಎಲ್ಲಾ ಕ್ಯಾರೆಟನ್ನು ತಾನೇ ಖರೀದಿಸಿದ್ದಾನೆ. ಅಜ್ಜಿಯ ಕೈಗೆ ಒಂದಿಷ್ಟು ಹಣವನ್ನು ಇಟ್ಟು ಅಲ್ಲಿಂದ ಹೊರಟಿದ್ದಾನೆ. ತದನಂತರದಲ್ಲಿ ತಾನು ಖರೀದಿಸಿರುವ ಕ್ಯಾರೆಟ್ ಎಲ್ಲವನ್ನು ಅಲ್ಲೇ ಇದ್ದ ಹಸುಗಳಿಗೆ ತಿನ್ನಲು ಇಟ್ಟು ಅವುಗಳ ಹಸಿವನ್ನು ನೀಗಿಸಿರುವುದನ್ನು ನೀವಿಲ್ಲಿ ನೋಡಬಹುದು.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈತನ ಮಾಡಿದ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಪ್ರಾಣಿಗಳು ಒಳ್ಳೆಯ ವ್ಯಕ್ತಿಗಳನ್ನು ಬಹುಬೇಗನೇ ಗುರುತಿಸುತ್ತವೆ’ ಎಂದಿದ್ದಾರೆ. ಇನ್ನೊಬ್ಬರು, ‘ಇಂತಹ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಸ್ವಾರ್ಥಿಗಳ ಪ್ರಪಂಚದಲ್ಲಿ ಈ ವ್ಯಕ್ತಿ ಮಾಡುವ ಕೆಲಸಗಳು ಎಲ್ಲರಿಗೂ ಮಾದರಿ’ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈ ಜಗತ್ತಿನ ಎಲ್ಲಾ ಗೌರವವು ನಿಮ್ಮಂತಹ ವ್ಯಕ್ತಿಗೆ ಸಿಗಬೇಕು’ಎಂದಿದ್ದಾರೆ.

The post ಮಾನವೀಯತೆಗೆ ಮಾದರಿಯಾದ ಮಾನವ…. ದೇವರಂತೆ ಬಂದು ಅಜ್ಜಿ ಹಾಗೂ ಗೋವಿನ ಹಸಿವು ನೀಗಿಸಿದ ವ್ಯಕ್ತಿ… appeared first on Good News 24x7.

]]>
ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ, ಕುಣಿದು ಕುಪ್ಪಳಿಸಿದ ಯುವತಿ. https://www.goodnews24x7.com/a-young-man-who-fell-at-the-feet-of-his-lover-a-young-woman-who-danced-and-danced/ Thu, 01 May 2025 10:54:18 +0000 https://www.goodnews24x7.com/?p=3550 ಪ್ರೀತಿ ಯೇ ಹಾಗೆ, ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಈ ಜಗತ್ತೇ ಕಾಣುವುದಿಲ್ಲ. ಪ್ರೇಮಿಗಳು ತನ್ನನ್ನು ಪ್ರೀತಿಸುವ ಜೀವದ ಖುಷಿಗಾಗಿ ಏನು ಬೇಕಾದರೂ ಕೂಡ ಮಾಡಿಬಿಡುತ್ತಾರೆ. ಅದರಲ್ಲಿಯೂ ಈ ಹುಡುಗ ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದರೆ ತನ್ನವಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ. ಇದೀಗ ಪ್ರೇಮಿಯೊಬ್ಬನು…

The post ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ, ಕುಣಿದು ಕುಪ್ಪಳಿಸಿದ ಯುವತಿ. appeared first on Good News 24x7.

]]>

ಪ್ರೀತಿ ಯೇ ಹಾಗೆ, ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಈ ಜಗತ್ತೇ ಕಾಣುವುದಿಲ್ಲ. ಪ್ರೇಮಿಗಳು ತನ್ನನ್ನು ಪ್ರೀತಿಸುವ ಜೀವದ ಖುಷಿಗಾಗಿ ಏನು ಬೇಕಾದರೂ ಕೂಡ ಮಾಡಿಬಿಡುತ್ತಾರೆ. ಅದರಲ್ಲಿಯೂ ಈ ಹುಡುಗ ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದರೆ ತನ್ನವಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ. ಇದೀಗ ಪ್ರೇಮಿಯೊಬ್ಬನು ಮೆಟ್ರೋ ನಿಲ್ದಾಣದಲ್ಲಿ ತನ್ನ ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ಈ ಬಗೆಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


Satendra prathap ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ‘ಅಖಿಲ ಭಾರತ ಖಾಂತಿ ಮರ್ದ್ ಅಸೋಸಿಯೇಶನ್ನ ರಾಷ್ಟ್ರೀಯ ಅಧ್ಯಕ್ಷನಾಗಿರುವ ನಾನುಈ ಯುವಕನ ಪುರುಷ ಪ್ರಮಾಣಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುತ್ತೇನೆ. ಈ ಯುವಕನು ಗಂಡಸು ಜಾತಿಗೆ ಅವಮಾನ. ಈ ಪುರುಷರ ಸಂಘದಿಂದ ಈತನನ್ನು ಅಮಾನತ್ತುಗೊಳಿಸಬೇಕೆಂದು ಅಗ್ರಹಿಸುತ್ತೇನೆ. ಇಂತಹ ಯುವಕರು ನಮ್ಮ ಪುರುಷ ಸಮಾಜಕ್ಕೆ ಕಳಂಕ. ಇಂದು ಆಕೆಯ ಕಾಲಿಗೆ ನಮಸ್ಕರಿಸಿದ್ದಾನೆ. ನಾಳೆ ಆಕೆಯ ಕೈ-ಕಾಲುಗಳನ್ನು ಒತ್ತುತ್ತಾನೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿರುವ ಕಟ್ಟೆಯಲ್ಲಿ ಯುವಕನು ಕುಳಿತುಕೊಂಡಿರುವುದನ್ನು ಕಾಣಬಹುದು. ಎದುರಿಗೆ ಆತನ ಪ್ರೇಯಸಿಯೂ ನಿಂತುಕೊಂಡಿದ್ದು ಆತನು ಆಕೆಯ ಪಾದಗಳನ್ನು ಮೂರು ಸಲ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುತ್ತಿರುವುದನ್ನು ಕಾಣಬಹುದು. ಆ ಬಳಿಕ ಕೆಲ ನಿಮಿಷಗಳ ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ. ವಿಡಿಯೋದಲ್ಲಿ ಯುವತಿ ಕೈಯಲ್ಲಿ ಕ್ಯಾಂಡಿ ಹಿಡಿದುಕೊಂಡಿರುವ ಈ ಯುವತಿಯೂ ಕುಣಿಯುತ್ತಿರುವುದನ್ನು ಕಾಣಬಹುದು.

https://www.facebook.com/share/r/16QjyDmRij/

ಈ ವಿಡಿಯೋ ಈಗಾಗಲೇ 283.2 ಕೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಬಳಕೆದಾರrರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ‘ಈಗಲೇ ಈ ಯುವಕನ ಪರಿಸ್ಥಿತಿ ನೋಡಲಾಗುತ್ತಿಲ್ಲ, ಮದುವೆಯಾದ ಮೇಲೆ ಈ ಯುವಕನಿಗೆ ದೇವರೇ ಗತಿ’ ಎಂದಿದ್ದಾರೆ. ಇನ್ನೊಬ್ಬರು, ‘ಹೆಣ್ಣು ಗಂಡು ಸಮಾನರು ಎಂದ ಮೇಲೆ ಪಾದ ಮುಟ್ಟಿ ಸ್ಪರ್ಶಿಸುವುದರಲ್ಲಿ ಏನು ತಪ್ಪಿಲ್ಲ. ಪ್ರೀತಿಯಲ್ಲಿ ಇಬ್ಬರೂ ಸೋಲಬೇಕು. ಆಗ ಮಾತ್ರ ಈ ಪ್ರೀತಿಯೂ ಉಳಿಯಲು ಸಾಧ್ಯ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರ, ‘ಅಣ್ಣ ಅವನು ಅವಳಿಗೆ ಸಂಪೂರ್ಣವಾಗಿ ಶರಣಾಗಿದ್ದಾನೆ. ಆಗಿದ್ದಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಇಲ್ಲದಿದ್ದರೆ ದಿನಾಲೂ ಆಕೆಯೊಂದಿಗೆ ಕಿತ್ತಾಡಿ ಸಾಯಬೇಕಾಗುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.

The post ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ, ಕುಣಿದು ಕುಪ್ಪಳಿಸಿದ ಯುವತಿ. appeared first on Good News 24x7.

]]>
ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. https://www.goodnews24x7.com/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b5%e0%b2%82%e0%b2%9a%e0%b2%95%e0%b2%a8%e0%b2%a8%e0%b3%8d%e0%b2%a8%e0%b3%81-%e0%b2%af%e0%b2%be%e0%b2%ae%e0%b2%be%e0%b2%b0%e0%b2%bf%e0%b2%b8%e0%b2%bf/ Wed, 16 Apr 2025 12:31:58 +0000 https://www.goodnews24x7.com/?p=3310 ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು…

The post ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. appeared first on Good News 24x7.

]]>

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೈಬರ್ ವಂಚಕರನ್ನೇ ಯಾಮಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆಯ ಬುದ್ಧಿವಂತಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಲಮಾನ ಬದಲಾದಂತೆ ಎಲ್ಲವೂ ಬದಲಾಗುತ್ತಲೇ ಇದೆ. ಅದರಲ್ಲಿ ಸೈಬರ್ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್ ಕಾರ್ಡ್ಅಪ್‌ಡೇಟ್ ಮಾಡಿಕೊಡುವುದಾಗಿ ಹಾಗೂ ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ ಹೀಗೆ ನಾನಾ ರೀತಿಯ ನೆಪ ಹೇಳಿಕೊಂಡು ಕರೆ ಮಾಡುವ ಸೈಬರ್ ವಂಚಕರ ಜಾಲಕ್ಕೆ ಕೆಲವರು ಅರಿವಿಲ್ಲದೇನೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳಿಗೆ ತಂದೆಯ ಸ್ನೇಹಿತ ಎಂದು ಹೇಳಿಕೊಂಡು ಬಂದ ಸೈಬರ್ ವಂಚಕನನ್ನು ಹೇಗೆ ಯಾಮಾರಿಸಿದ್ದಾಳೆ ಎಂದು ನೋಡಬಹುದು.

ವಿಡಿಯೋದಲ್ಲಿ ಯುವತಿಗೆ ಕರೆಯೊಂದು ಬಂದಿದೆ. ಅದರಲ್ಲಿ, ಸೈಬರ್ ವಂಚಕನು ಯುವತಿಗೆ, ನಾನು ನಿನ್ನ ತಂದೆಯ ಸ್ನೇಹಿತ, ನಿನ್ನ ತಂದೆ ನನಗೆ ಹಣ ಬೇಕೆಂದು ಕೇಳಿದ್ದರು, ನಿನ್ನ ಮೊಬೈಲ್ ಗೆ ಹಣ ಹಾಕುತ್ತೇನೆ ಎಂದು ಹೇಳುವುದನ್ನು ನೋಡಬಹುದು. ಆ ವೇಳೆಯಲ್ಲಿ ಈತನು ಸೈಬರ್ ವಂಚಕ ಎಂದು ಅರಿವಿಗೆ ಬರುತ್ತಿದ್ದಂತೆ ಯುವತಿ ಕೂಡ ತನ್ನ ತಲೆ ಉಪಯೋಗಿಸಿದ್ದಾಳೆ. ಹೌದು, ಈ ಯುವತಿಯೂ ಆತನಿಗೆ ಹಣ ಹಾಕಿ ಎಂದು ಹೇಳಿದ್ದಾಳೆ. ಆ ವ್ಯಕ್ತಿಯೂ ಯುವತಿ ಖಾತೆಗೆ ಹತ್ತು ರೂಪಾಯಿ ಹಾಕಿದ್ದು,ಹಣ ಬಂದಿದೆಯೇ ಎಂದು ನೋಡಲು ಹೇಳಿದ್ದಾನೆ. ಯುವತಿ ಕೂಡ ಈ ಸ್ಕ್ಯಾಮರ್ ಹೇಳಿದ್ದಂತೆ ಹಣ ಬಂದಿದೆ ಎಂದು ಹೇಳುತ್ತಿದ್ದಂತೆ ಆಕೆಯ ಖಾತೆಗೆ ಹತ್ತು ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿದ್ದಾನೆ.

ಹಣ ಬಂದಿದ್ಯಾ ಎಂದು ಕೇಳಿದ್ದು ಯುವತಿಯೂ ಕೂಡ ಹೌದು ಎಂದಿದ್ದಾಳೆ. ಆ ಬಳಿಕ ಪುನಃ 2 ಸಾವಿರ ಹಾಕುವುದಾಗಿ ಸೈಬರ್ ವಂಚಕ ಹೇಳುವುದನ್ನು ನೋಡಬಹುದು. ಯುವತಿಯೂ ಓಕೆ ಎನ್ನುತ್ತಿದ್ದಂತೆ ಎರಡು ರೂಪಾಯಿ ಬದಲು ಇಪ್ಪತ್ತು ಸಾವಿರ ರೂಪಾಯಿ ಖಾತೆಗೆ ವರ್ಗಾಯಿಸಿದ್ದಾನೆ. ಈ ವಂಚಕನು ಪ್ಲ್ಯಾನ್ ಮಾಡಿ, ತಾನು ಮಿಸ್ ಆಗಿ ಇಪ್ಪತ್ತು ಸಾವಿರ ಹಣ ಹಾಕುವುದಾಗಿ ಹೇಳಿದ್ದಾನೆ. ಹೆಚ್ಚುವರಿ ಹಣವನ್ನು ಫೋನ್ ಪೇ ಮೂಲಕ ವಾಪಾಸ್ ಹಾಕುವುದಾಗಿ ಈ ವಂಚಕನು ಯುವತಿಗೆ ಹೇಳಿದ್ದಾನೆ. ಈ ವೇಳೆ ಚಾಲಾಕಿ ಯುವತಿಯೂ ತಾನು ಫೋನ್ ಪೇ ಓಪನ್ ಮಾಡಿರುವಂತೆ ನಾಟಕ ಮಾಡಿದ್ದು, ಕೊನೆಗೆ ಆತ ಈ ಹಿಂದೆ ಕಳುಹಿಸಿದ್ದ ನಕಲಿ ಸಂದೇಶವನ್ನೇ ಆತನಿಗೆ ಕಳುಹಿಸಿದ್ದಾಳೆ. ಆತನು ಹಣ ಬಂದಿಲ್ಲ ಎನ್ನುತ್ತಿದ್ದಂತೆ ಯುವತಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಕೊನೆಗೆ ತಾನು ಸೈಬರ್ ವಂಚಕನು ಎಂದು ಹೇಳಿ ಕೊನೆಗೆ ಕರೆ ಕಟ್ ಮಾಡಿದ್ದಾನೆ.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ,ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ‘ಈ ಯುವತಿ ಬಳಸಿದ ಟ್ರಿಕ್ಸ್ ನೋಡಿ ನಿಜಕ್ಕೂ ಖುಷಿಯಾಯಿತು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಈ ರೀತಿಯಾಗಿ ಸೈಬರ್ ಕ್ರೈಂ ಆಗದಂತೆ ನೋಡಿಕೊಳ್ಳಿ. ಮುಂಜಾಗ್ರತೆಯಿಂದ ನಿಮ್ಮ ಜೀವನವನ್ನು ನಡೆಸಿ.

The post ಸೈಬರ್ ವಂಚಕನನ್ನು ಯಾಮಾರಿಸಿದ ಯುವತಿ, ವೈರಲ್ ಆಯ್ತು ವಿಡಿಯೋ…. appeared first on Good News 24x7.

]]>
ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. https://www.goodnews24x7.com/%e0%b2%87%e0%b2%a8%e0%b3%8d%e0%b2%ae%e0%b3%81%e0%b2%82%e0%b2%a6%e0%b3%86-16-%e0%b2%b5%e0%b2%b0%e0%b3%8d%e0%b2%b7%e0%b2%a6%e0%b3%8a%e0%b2%b3%e0%b2%97%e0%b2%bf%e0%b2%a8-%e0%b2%ae%e0%b2%95%e0%b3%8d/ Sat, 12 Apr 2025 12:02:22 +0000 https://www.goodnews24x7.com/?p=3180 ಈ ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ತಿಳಿದಿಲ್ಲದವರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ ಬಳಸುತ್ತಾರೆ. ಟಿಕ್ ಟಾಕ್ ನಿಷೇಧವಾದ ಬಳಿಕ ಇನ್ಸ್ಟಾಗ್ರಾಮ್ ನಂಬಲಾಗದಷ್ಟು ಜನಪ್ರಿಯವಾಯಿತು. ಆದರೆ, ಇದರಲ್ಲಿ ಬರುವ ವಿವಿಧ ರೀಲ್ಸ್, ವಿಡಿಯೋಗಳು ಮಕ್ಕಳ ಮೇಲೆ…

The post ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. appeared first on Good News 24x7.

]]>

ಈ ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ತಿಳಿದಿಲ್ಲದವರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ ಬಳಸುತ್ತಾರೆ. ಟಿಕ್ ಟಾಕ್ ನಿಷೇಧವಾದ ಬಳಿಕ ಇನ್ಸ್ಟಾಗ್ರಾಮ್ ನಂಬಲಾಗದಷ್ಟು ಜನಪ್ರಿಯವಾಯಿತು. ಆದರೆ, ಇದರಲ್ಲಿ ಬರುವ ವಿವಿಧ ರೀಲ್ಸ್, ವಿಡಿಯೋಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದನ್ನು ಗಮನಿಸಿದ ಇನ್ಸ್ಟಾಗ್ರಾಮ್, ಪ್ಲಾಟ್ಫಾರ್ಮ್ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಅವಕಾಶ ಇರುವುದಿಲ್ಲ.


ಇನ್ಸ್ಟಾಗ್ರಾಮ್ ಮಾಡಿದ ಬದಲಾವಣೆಗಳ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡಲು ಮೊದಲು ಪೋಷಕರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿಯಿಲ್ಲದೆ ಲೈವ್ ಆಯ್ಕೆಯನ್ನು ಬಳಸಲಾಗುವುದಿಲ್ಲ. ಪೋಷಕರ ಅನುಮತಿಯಿಲ್ಲದೆ 16 ವರ್ಷ ವಯಸ್ಸಿನವರಿಗೆ ನೇರ ಸಂದೇಶಗಳಲ್ಲಿ ನಗ್ನತೆಯನ್ನು ಹೊಂದಿರುವ ವಿಷಯವು ಗೋಚರಿಸುವುದಿಲ್ಲ. ಮೆಟಾ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಇದನ್ನು ಬಹಿರಂಗಪಡಿಸಿದೆ.
16 ವರ್ಷದೊಳಗಿನ ಹದಿಹರೆಯದವರು ತಮ್ಮ ಪೋಷಕರ ಅನುಮತಿ ನೀಡದ ಹೊರತು ಇನ್ಸ್ಟಾ ಲೈವ್ ಅನ್ನು ಬಳಸುವಂತಿಲ್ಲ. ನೇರ ಸಂದೇಶಗಳಲ್ಲಿ, “ನಗ್ನತೆಯಿರುವ ಚಿತ್ರಗಳನ್ನು ಮಸುಕುಗೊಳಿಸಲಾಗುತ್ತದೆ. ನೀವು ಅದನ್ನು ವೀಕ್ಷಿಸಲು ಪ್ರಯತ್ನಿಸಿದರೂ, ನಿಮಗೆ ಸಾಧ್ಯವಾಗುವುದಿಲ್ಲ. ಅದನ್ನು ಆಫ್ ಮಾಡಲು ಯಾವುದೇ ಆಯ್ಕೆಯಿಲ್ಲ,” ಎಂದು ಮೆಟಾ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ, ಇದಕ್ಕೆ ಪೋಷಕರ ಅನುಮತಿಯೂ ಬೇಕಾಗುತ್ತದೆ.
16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ಫೇಸ್ಬುಕ್ ಮತ್ತು ಮೆಸೆಂಜರ್ಗೆ ವಿಸ್ತರಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮ ಕಂಪನಿ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮಗಳು ಯುವಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ.

ಪೋಷಕರು ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡಲು ಮೆಟಾ ಸೆಪ್ಟೆಂಬರ್ನಲ್ಲಿ ಇನ್ಸ್ಟಾಗ್ರಾಮ್ಗಾಗಿ ತನ್ನ ಹದಿಹರೆಯದ ಖಾತೆ ಎಂಬ ಪ್ರೊಗ್ರಾಂ ಪ್ರಾರಂಭಿಸಿತು.
ಸಾಮಾಜಿಕ ಮಾಧ್ಯಮದ ಹಾನಿಯಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕಿಡ್ಸ್ ಆನ್ಲೈನ್ ಸೇಫ್ಟಿ ಆಕ್ಟ್ ನಂತಹ ಕಾನೂನುಗಳನ್ನು ಜಾರಿಗೆ ತರುವಲ್ಲಿ ಕೆಲವು ಯುಎಸ್ ಶಾಸಕರು ಬಹಳ ಸಕ್ರಿಯರಾಗಿರುವ ಸಮಯದಲ್ಲಿ ಮೆಟಾದಿಂದ ಈ ನಿರ್ಧಾರವು ಬಂದಿದೆ. ಮೆಟಾ ಜೊತೆಗೆ, ಟಿಕ್ಟಾಕ್ ಮತ್ತು ಯೂಟ್ಯೂಬ್ ನಂತಹ ಕಂಪನಿಗಳು ಸಾಮಾಜಿಕ ಮಾಧ್ಯಮ ವ್ಯಸನಕ್ಕೆ ಸಂಬಂಧಿಸಿದಂತೆ ಮಕ್ಕಳು ಮತ್ತು ಶಾಲೆಗಳಿಂದ ನೂರಾರು ಮೊಕದ್ದಮೆಗಳನ್ನು ಎದುರಿಸುತ್ತಿವೆ.
ಮಾಹಿತಿಯ ಪ್ರಕಾರ, 2023 ರಲ್ಲಿ, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ಸೇರಿದಂತೆ 33 ಯುಎಸ್ ರಾಜ್ಯಗಳು ಮೆಟಾ ತನ್ನ ಪ್ಲಾಟ್ಫಾರ್ಮ್ಗಳ ಅಪಾಯಕಾರಿ ಸ್ವರೂಪದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದ್ದವು.
ಸದ್ಯ ಮೆಟಾ ಪ್ಲಾಟ್ಫಾರ್ಮ್ಗಳು ಈಗ ಫೇಸ್ಬುಕ್ ಮತ್ತು ಮೆಸೆಂಜರ್ನಲ್ಲಿ ಕೂಡ ತನ್ನ ‘ಟೀನ್ ಅಕೌಂಟ್ಸ್’ ವೈಶಿಷ್ಟ್ಯವನ್ನು ಜಾರಿಗೆ ತಂದಿವೆ. ಆನ್ಲೈನ್ ಅಪಾಯಗಳಿಂದ ಯುವ ಬಳಕೆದಾರರನ್ನು ರಕ್ಷಿಸಲು ಮೆಟಾ ಏನನ್ನೂ ಮಾಡುತ್ತಿಲ್ಲ ಎಂದು ಬಹಳ ಸಮಯದಿಂದ ಆರೋಪ ಕೇಳಿ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

The post ಇನ್ಮುಂದೆ 16 ವರ್ಷದೊಳಗಿನ ಮಕ್ಕಳು Instagram ಬಳಕೆ ಮಾಡಲು ಹೊಸ ನಿಯಮ. appeared first on Good News 24x7.

]]>