socialmedia Archives - Good News 24x7 https://www.goodnews24x7.com/tag/socialmedia/ Kannada Tue, 24 Mar 2026 13:30:40 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg socialmedia Archives - Good News 24x7 https://www.goodnews24x7.com/tag/socialmedia/ 32 32 ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಗೆ ಮಿತಿ: ಡಿಜಿಟಲ್ ಬಳಕೆ ಕರಡು ನೀತಿ ಪ್ರಕಟ, ದಿನಕ್ಕೆ 1 ಗಂಟೆ ಮಾತ್ರ ಮೊಬೈಲ್ ಬಳಕೆ ಶಿಫಾರಸು. https://www.goodnews24x7.com/limit-social-media-usage-for-school-children-draft-policy-on-digital-usage-released-recommends-only-1-hour-of-mobile-usage-per-day/ Tue, 24 Mar 2026 13:30:40 +0000 https://www.goodnews24x7.com/?p=8979 ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅವಲಂಬನೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು, ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯ ಅನಂತರ ರೂಪುಗೊಂಡ ಈ ನೀತಿ, 16 ವರ್ಷದೊಳಗಿನ…

The post ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಗೆ ಮಿತಿ: ಡಿಜಿಟಲ್ ಬಳಕೆ ಕರಡು ನೀತಿ ಪ್ರಕಟ, ದಿನಕ್ಕೆ 1 ಗಂಟೆ ಮಾತ್ರ ಮೊಬೈಲ್ ಬಳಕೆ ಶಿಫಾರಸು. appeared first on Good News 24x7.

]]>

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅವಲಂಬನೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು, ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯ ಅನಂತರ ರೂಪುಗೊಂಡ ಈ ನೀತಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸೂಚಿಸುತ್ತದೆ.

ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬೇಕು ಎಂದು ಶಿಫಾರಸು ಮಾಡಲಾಗಿದೆ. ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ’ ಜಾರಿಗೊಳಿಸುವುದಕ್ಕೂ ಸೂಚನೆ ನೀಡಲಾಗಿದೆ. ಪ್ರತಿ ಶಾಲೆಯೂ ತನ್ನದೇ ಡಿಜಿಟಲ್ ಬಳಕೆ ನೀತಿಯನ್ನು ರೂಪಿಸಿ, ಡಿಜಿಟಲ್ ವೆಲ್ನೆಸ್ ಸಮಿತಿ ಸ್ಥಾಪಿಸುವುದು ಕಡ್ಡಾಯವಾಗಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಶಿಕ್ಷಣ ಇಲಾಖೆ ಹಾಗೂ ತಜ್ಞರ ಸಹಭಾಗಿತ್ವದಲ್ಲಿ ರೂಪುಗೊಂಡ ಈ ನೀತಿ, ಸೈಬರ್ ಬುಲಿಯಿಂಗ್ ತಡೆ, ಸುರಕ್ಷಿತ ಡಿಜಿಟಲ್ ಬಳಕೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ರಕ್ಷಣೆಗೆ ವಿಶೇಷ ಒತ್ತು ನೀಡುತ್ತದೆ. ಜೊತೆಗೆ, ಪೋಷಕರಿಗೂ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಆಫ್‌ಲೈನ್ ಚಟುವಟಿಕೆಗಳನ್ನು ಉತ್ತೇಜಿಸುವ ಜವಾಬ್ದಾರಿ ನೀಡಲಾಗಿದೆ.

The post ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಗೆ ಮಿತಿ: ಡಿಜಿಟಲ್ ಬಳಕೆ ಕರಡು ನೀತಿ ಪ್ರಕಟ, ದಿನಕ್ಕೆ 1 ಗಂಟೆ ಮಾತ್ರ ಮೊಬೈಲ್ ಬಳಕೆ ಶಿಫಾರಸು. appeared first on Good News 24x7.

]]>
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! https://www.goodnews24x7.com/bigg-boss-house-full-of-allegations-against-ghilli-actor/ Sun, 02 Nov 2025 12:46:31 +0000 https://www.goodnews24x7.com/?p=8017 ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.…

The post ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! appeared first on Good News 24x7.

]]>

ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

 

ಗಿಲ್ಲಿ ಹವಾ
ಬಿಗ್​ಬಾಸ್​ (Bigg Boss)ನಲ್ಲಿ ಸದ್ಯ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಇವರೇ ಈ ಬಾರಿಯ ವಿನ್ನರ್​ ಎನ್ನುವಷ್ಟರ ಮಟ್ಟಿಗೆ ಇವರು ಹವಾ ಸೃಷ್ಟಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಗಿಲ್ಲಿ ನಟನ ಬಗ್ಗೆ ದನಿ ಜೋರಾಗಿಯೇ ನಡೆಯುತ್ತಿದೆ.

ಹಾಸ್ಯದಿಂದ ತಿರುಗೇಟು
ತಮ್ಮ ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದವರು ಗಿಲ್ಲಿ ನಟ. ಕಾವ್ಯಾ ಜೊತೆ ರೊಮಾನ್ಸ್, ತಮ್ಮನ್ನು ಟೀಕಿಸಲು ಬರುವ ಅಶ್ವಿನಿ ಗೌಡ ಅವರಿಗೂ ಹಾಸ್ಯದಿಂದಲೇ ತಿರುಗೇಟು ನೀಡುವಲ್ಲಿ ಗಿಲ್ಲಿ ನಿಸ್ಸೀಮರು.

ಟಾರ್ಗೆಟ್​ ಆದ ಗಿಲ್ಲಿ
ಇಂತಿಪ್ಪ ಗಿಲ್ಲಿಯನ್ನು ಈಗ ಎಲ್ಲರೂ ಟಾರ್ಗೆಟ್​ ಮಾಡಿದ್ದಾರೆ. ಇವರ ವಿರುದ್ಧ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಇವರು ನನ್ನ ಟಾರ್ಗೆಟ್​ ಎಂದು ಯಾರು ಹೇಳುತ್ತೀರಿ ಎನ್ನುವ ಪ್ರಶ್ನೆಯನ್ನು ಸುದೀಪ್​ ಎದುರಿಗಿಟ್ಟಿದ್ದಾರೆ.

ನಂಬಿಕೆ ಇಟ್ಟು ಮೋಸ
ಆಗ ಗಿಲ್ಲಿ ವಿರುದ್ಧ ಕೆಲವರು ಆರೋಪ ಮಾಡಿದ್ದಾರೆ. ಗಿಲ್ಲಿ ನಂಬಿಕೆ ಇಟ್ಟು ಮೋಸ ಮಾಡ್ತಾರೆ. ಇದರಲ್ಲಿ ಅವರದ್ದು ಎತ್ತಿದ ಕೈ ಎಂದು ಎಂದು ಸ್ಪಂದನಾ ಸೋಮಣ್ಣ ಹೇಳಿದರು.

ಧನುಷ್​ ಏನಂದ್ರು?
ಅವನು ಕಾಮಿಡಿ ಮಾಡ್ತಾನೆ. ವಾಪಸ್​ ನಾವು ಮಾಡಿದ್ರೆ ಸೀರಿಯಸ್​ ಆಗಿ ತೆಗೆದುಕೊಳ್ತಾನೆ ಎಂದು ಧನುಷ್​ ಅಭಿಪ್ರಾಯ ಪಟ್ಟರು.

ನಾನು ಪರ್ಸನಲ್​ ಆಗಿ ಟಾರ್ಗೆಟ್​
ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನನ್ನನ್ನು ಪರ್ಸನಲ್​ ಆಗಿ ಟಾರ್ಗೆಟ್​ ಮಾಡ್ತಾ ಇದ್ದಾರೆ ಎನ್ನಿಸ್ತಿದೆ, ಗೇಮ್​ ಅಂತ ಬಂದಾಗಲು ಕೂಡ ತುಂಬಾ ಸ್ವಾರ್ಥಿ ಎಂದು ಅಶ್ವಿನಿ ಗೌಡ ಕೋಪದಿಂದ ನುಡಿದರು.

ವಿಭಿನ್ನ ಪರ್ಸನ್ಯಾಲಿಟಿ
ಜಂಟಿಯಾಗಿ ಬಂದಾಗ ಎರಡು ವಿಭಿನ್ನ ಪರ್ಸನ್ಯಾಲಿಟಿ. ಅವರು ಸೂಪರ್​ ಆ್ಯಕ್ಟೀವ್​ ಇದ್ದಾರೆ, ಆದರೆ ನನ್ನ ಒಂದು ಸ್ಟ್ಯಾಂಡ್ ಕಾಣಿಸ್ತಾ ಇರಲಿಲ್ಲ, ಹಾಗಾಗಿ ನಾನು ಕೂಡ ಗಿಲ್ಲಿ ವಿರುದ್ಧ ಎಂದಿದ್ದಾರೆ ಕಾವ್ಯಾ ಶೈವ

The post ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! appeared first on Good News 24x7.

]]>
ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ https://www.goodnews24x7.com/arjun-janya-sang-on-stage-like-nithyashri-like-a-flower-arrow/ Sun, 14 Sep 2025 08:21:25 +0000 https://www.goodnews24x7.com/?p=7518 ಸೋಶಿಯಲ್ ಮೀಡಿಯಾದಲ್ಲಿ ‘ಹೂವಿನ ಬಾಣದಂತೆ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಆಗಿರುವುದು ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ. ಆಕೆಯ ರೀತಿಯೇ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆ ಮಗು ತುಂಬ…

The post ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ appeared first on Good News 24x7.

]]>

ಸೋಶಿಯಲ್ ಮೀಡಿಯಾದಲ್ಲಿ ‘ಹೂವಿನ ಬಾಣದಂತೆ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಆಗಿರುವುದು ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ. ಆಕೆಯ ರೀತಿಯೇ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ’ ಎಂದು ಅರ್ಜುನ್ ಜನ್ಯ (Arjun Janya) ಆಶೀರ್ವಾದ ಮಾಡಿದ್ದಾರೆ.

The post ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ appeared first on Good News 24x7.

]]>
ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ https://www.goodnews24x7.com/woman-falls-on-road-to-avoid-pothole-lorry-runs-over-her/ Wed, 10 Sep 2025 10:27:44 +0000 https://www.goodnews24x7.com/?p=7462 ರಸ್ತೆಯ ತುಂಬೆಲ್ಲಾ ಗುಂಡಿಗಳು ಇದ್ದರೆ ಅದುವೇ ಮೃತ್ಯು ಕೂಪಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.…

The post ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ appeared first on Good News 24x7.

]]>

ರಸ್ತೆಯ ತುಂಬೆಲ್ಲಾ ಗುಂಡಿಗಳು ಇದ್ದರೆ ಅದುವೇ ಮೃತ್ಯು ಕೂಪಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.
ಮಂಗಳೂರು: ಕೆಲವರು ವಾಹನ ಕೈಗೆ ಸಿಕ್ಕೊಡನೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವೇಗವಾಗಿ ವಾಹನ ಓಡಿಸುತ್ತಾರೆ. ಅದಲ್ಲದೇ, ಅತೀ ವೇಗವಾಗಿ ವಾಹನ ಓಡಿಸಿ ಅಪಘಾತಗಳಾಗಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ತುಂಬೆಲ್ಲಾ ಗುಂಡಿಗಳು ಬೀಳುತ್ತಿದ್ದು, ಇದುವೇ ಮೃತ್ಯು ಕೂಪಗಳಾಗುತ್ತಿದೆ. ಮಂಗಳೂರಿನ ಕೂಳೂರಿನಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಉರುಳಿಬಿದ್ದಿದೆ. ಈ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಅಪಘಾತದ ದೃಶ್ಯವನ್ನು ಕಾಣಬಹುದು. ದ್ವಿಚಕ್ರ ವಾಹನ ಓಡಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ವಾಹನದೊಂದಿಗೆ ರಸ್ತೆಗೆ ಉರುಳಿ ಬೀಳುವುದನ್ನು ಕಾಣಬಹುದು. ಈ ವೇಳೆಯಲ್ಲಿ ಲಾರಿಯೊಂದು ಅತಿ ವೇಗದಿಂದ ಬಂದು ರಸ್ತೆಯ ಮೇಲೆ ಬಿದ್ದಿದ್ದ ಮಹಿಳೆಯ ಮೇಲಿನಿಂದ ಸಾಗಿರುವುದನ್ನು ಕಾಣಬಹುದು. ಸೆಪ್ಟೆಂಬರ್ 9ರ ಬೆಳಗ್ಗೆ 8-30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮೃತ ಪಟ್ಟ ಮಹಿಳೆಯನ್ನು ಮಾಧವಿ (44) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕ ಮೊಹಮ್ಮದ್ ಫಾರೂಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಈ ಅಪಘಾತಕ್ಕೆ ರಸ್ತೆಯ ದುಸ್ಥಿತಿಯೇ ಕಾರಣ ಎಂದು ರಾಜಕಾರಣಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಹೆದ್ದಾರಿಗಳ ನಿರಂತರ ನಿರ್ಲಕ್ಷ್ಯ ಹಾಗೂ ಕಳಪೆ ನಿರ್ವಹಣೆ, ಇತ್ತೀಚೆಗಿನ ದಿನಗಳಲ್ಲಿ ಪುನರಾವರ್ತಿತ ಅಪಘಾತಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಈ ನಿರ್ಲಕ್ಷ್ಯಕ್ಕಾಗಿ NHAI ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಇಂತಹ ಹೃದಯವಿದ್ರಾವಕ ಜೀವಹಾನಿಯನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಗುಂಡಿಯಿಂದ ಮತ್ತೊಂದು ಬಲಿ ದುರಂತ ನಷ್ಟ ಎಂದಿದ್ದಾರೆ. ಮತ್ತೊಬ್ಬರು, ಎಂತಹ ನಾಚಿಕೆಗೇಡು ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

The post ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ appeared first on Good News 24x7.

]]>
2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ https://www.goodnews24x7.com/cm-siddaramaiah-pays-rs-2500-fine/ Sat, 06 Sep 2025 07:22:41 +0000 https://www.goodnews24x7.com/?p=7407 ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿಸಿದ್ದಾರೆ. ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್…

The post 2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿಸಿದ್ದಾರೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ 7 ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರು ನಿತ್ಯ ಸಂಚಾರ ಮಾಡುವ ಫಾರ್ಚೂನರ್ ಕಾರು 2024ರಿಂದ ಈವರೆಗೂ 7 ಬಾರಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿರುವುದು ಇದೆ. ಈ ಪೈಕಿ 6 ಪ್ರಕರಣಗಳು ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ ಕೇಸ್ ಆಗಿವೆ. ಇವು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್​ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ದಂಡ ಪಾವತಿ ಆಗಿದೆ. ಸದ್ಯ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುತ್ತಿದ್ದಾರೆ. ಇದೇ ಆಫರ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿಗಳು 2,500 ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್​ಗಳು ಕ್ಲೀಯರ್ ಆಗಿವೆ.

ಈ ವರ್ಷ ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಏರ್​ಪೋರ್ಟ್ ಎಕ್ಸ್​ಪ್ರೆಸ್ ಕಾರಿಡಾರ್​ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಟೀಡಾಗಿ ಚಲಾಯಿಸಿ ನಿಯಮ ಉಲ್ಲಂಘಿಸಿತ್ತು.2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಒಲ್ಡ್ ಏರ್​ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿಲ್ಲ. ಅದೇ ಜಂಕ್ಷನ್​ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್​ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್​​ನಲ್ಲಿ ಚಂದ್ರಿಕಾ ಹೋಟೆಲ್​ ಜಂಕ್ಷನ್ ಹಾಗೂ ಆಗಸ್ಟ್​ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್​ಕುಮಾರ್ ಪ್ರತಿಮೆ ಜಂಕ್ಷನ್​ಗಳ ಬಳಿ ಸೀಟು ಬೆಲ್ಟ್ ಧರಿಸಿದೇ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಾಖಲಾಗಿದ್ದವು.

The post 2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>
ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬಿಸಲು ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿಗೆ ಮೊಸ https://www.goodnews24x7.com/couple-who-ordered-sarees-by-trusting-an-advertisement-to-start-a-new-business-for-ganesh-festival-gets-scammed/ Wed, 27 Aug 2025 06:52:33 +0000 https://www.goodnews24x7.com/?p=6785 ರಾಯಚೂರಿನ ಮಾನ್ವಿ ಪಟ್ಟಣದ ಮಹಾದೇವ್ ಮತ್ತು ಕಾಳಮ್ಮ ದಂಪತಿಗಳು ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ ನೋಡಿದ ಸೀರೆಗಳನ್ನು ಆರ್ಡರ್ ಮಾಡಿದ್ದಾರೆ. 10,000 ರೂ. ಪಾವತಿಸಿ ಸೀರೆಗಳನ್ನು ಆರ್ಡರ್ ಮಾಡಿದ್ದ ಅವರಿಗೆ ಹರಿದ ಮತ್ತು ದುರ್ವಾಸನೆಯ ಸೀರೆಗಳು ಬಂದಿವೆ. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ…

The post ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬಿಸಲು ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿಗೆ ಮೊಸ appeared first on Good News 24x7.

]]>

ರಾಯಚೂರಿನ ಮಾನ್ವಿ ಪಟ್ಟಣದ ಮಹಾದೇವ್ ಮತ್ತು ಕಾಳಮ್ಮ ದಂಪತಿಗಳು ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ ನೋಡಿದ ಸೀರೆಗಳನ್ನು ಆರ್ಡರ್ ಮಾಡಿದ್ದಾರೆ. 10,000 ರೂ. ಪಾವತಿಸಿ ಸೀರೆಗಳನ್ನು ಆರ್ಡರ್ ಮಾಡಿದ್ದ ಅವರಿಗೆ ಹರಿದ ಮತ್ತು ದುರ್ವಾಸನೆಯ ಸೀರೆಗಳು ಬಂದಿವೆ. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಅವರು ಮನವಿ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿನ ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿ ಮೊಸ ಹೋಗಿದ್ದಾರೆ. ಮನೆಯಲ್ಲೇ ಕುಳಿತು ಸೀರೆ ಬ್ಯುಸಿನೆಸ್ ಮಾಡಬೇಕು, ಗೌರಿ-ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬೇಕು ಎಂದು ರಾಯಚೂರಿನ ಮಾನ್ವಿ ಪಟ್ಟಣದ ನಿವಾಸಿ ಮಹಾದೇವ್ ಹಾಗೂ ಕಾಳಮ್ಮ ದಂಪತಿ ಕನಸು ಕಂಡಿದ್ದರು. ಹೀಗಿರುವಾಗ, ದಂಪತಿ ಸಾಮಾಜಿಕ ಜಾಲತಾಣದಲ್ಲಿ 100 ರೂ.ಗೆ 3 ಸಾರಿ ಎಂಬ ಜಾಹಿರಾತು ನೋಡಿದ್ದಾರೆ. ಜಾಹಿರಾತಿದಲ್ಲಿ ಇದ್ದ ಸೀರೆಗಳ ಬಣ್ಣ, ವೆರೈಟಿ ಡಿಸೈನ್​ಗಳನ್ನು ನೋಡಿ ಫಿದಾ ಆಗಿದ್ದಾರೆ.

ನಂತರ, ಜಾಹಿರಾತು ನೀಡಿದವರನ್ನು ಸಂಪರ್ಕಿಸಿ, 10 ಸಾವಿರ ರೂ. ಹಣವನ್ನು ಆನ್​ಲೈನ್​ ಮೂಲಕ ಪೇ ಮಾಡಿ 70 ಸೀರೆ ಆರ್ಡರ್ ಮಾಡಿದ್ದಾರೆ. ಒಂದು ವಾರದ ಬಳಿಕ ಮನೆಗೆ ಬಂದಿದ್ದ ಪಾರ್ಸಲ್ ನೋಡಿ ದಂಪತಿ ಕಕ್ಕಾಬಿಕ್ಕಿಯಾಗಿದ್ದಾರೆ. ಆರ್ಡರ್​ ಮಾಡಿದ್ದ ಅಷ್ಟೂ ಸೇರೆಗಳು ಹರಿದು ಹೋಗಿದ್ದವು. ಇದಷ್ಟೇ ಅಲ್ಲದೆ ಸೀರೆಗಳು ದುರ್ವಾಸನೆ ಬರುತ್ತಿದ್ದವು. ಇದರಿಂದ ಕಕ್ಕಾಬಿಕ್ಕಿಯಾದ ದಂಪತಿಗಳು ಆನ್​ಲೈನ್​ ಮಾರಾಟಗಾರನನ್ನು ಸಂಪರ್ಕಿಸಿದಾಗ ಮಾರಾಟಗಾರ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯಿಸಿದ್ದಾನೆ. ತಾವು ಮೋಸ ಹೋದ ಬಗ್ಗೆ ದೂರು ನೀಡಲು ಹೋದರೂ ಮಾನ್ವಿ ಠಾಣೆ ಪೊಲೀಸರು ದೂರು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಅಂತ ಮಹದೇವ ದಂಪತಿ ಮನವಿ ಮಾಡಿದ್ದಾರೆ.

The post ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬಿಸಲು ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿಗೆ ಮೊಸ appeared first on Good News 24x7.

]]>
ಪ್ರಧಾನಿಗೆ ಪತ್ರ ಬರೆದ 5 ವರ್ಷದ ಬಾಲಕಿ. https://www.goodnews24x7.com/5-year-old-girl-writes-letter-to-pm/ Mon, 11 Aug 2025 08:37:40 +0000 https://www.goodnews24x7.com/?p=5806 ಬೆಂಗಳೂರು: ರಸ್ತೆಗಳ ಬಗ್ಗೆ ಐದು ವರ್ಷದ ಬಾಲಕಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವಂತೆ ಆಕೆ ಪತ್ರದಲ್ಲಿ ಕೇಳಿಕೊಂಡಿದ್ದಾಳೆ. ಪ್ರಧಾನಿ ಮೋದಿ ಆಗಸ್ಟ್ 11 ರಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ…

The post ಪ್ರಧಾನಿಗೆ ಪತ್ರ ಬರೆದ 5 ವರ್ಷದ ಬಾಲಕಿ. appeared first on Good News 24x7.

]]>

ಬೆಂಗಳೂರು: ರಸ್ತೆಗಳ ಬಗ್ಗೆ ಐದು ವರ್ಷದ ಬಾಲಕಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವಂತೆ ಆಕೆ ಪತ್ರದಲ್ಲಿ ಕೇಳಿಕೊಂಡಿದ್ದಾಳೆ. ಪ್ರಧಾನಿ ಮೋದಿ ಆಗಸ್ಟ್ 11 ರಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಸ್ತೆಗುಂಡಿ ಸಮಸ್ಯೆ ಇಂದಿನದ್ದಲ್ಲ, ಚುನವಾವಣೆ ಸಮಯದಲ್ಲಿ ಎಷ್ಟೇ ಸರಿ ಡಾಂಬರು ಹಾಕಿಸಿದರೂ ಕೆಲವೇ ದಿನದಲ್ಲಿ ಅದು ಕಿತ್ತುಬಂದು ಸಮಸ್ಯೆ ಉಂಟಾಗುತ್ತದೆ. ರಸ್ತೆಗುಂಡಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ, ಮೃತಪಟ್ಟಿದ್ದ ಘಟನೆಯೂ ನಡೆದಿತ್ತು. ಇನ್ನು ಟ್ರಾಫಿಕ್‌ನಿಂದ ಅಂತೂ ಕೇಳೋದೆ ಬೇಡ. ಇದರಿಂದ ಕಚೇರಿಗಳಿಗೆ ಶಾಲಾ ಕಾಲೇಜಿಗೆ ಲೇಟಾಗಿ ಹೋಗಿದ್ದು ಇದೆ. ಸದ್ಯ ಈ ಪುಟ್ಟ ಹುಡುಗಿಯ ಲೆಟರ್‌ ಭಾರಿ ವೈರಲ್‌ ಆಗಿದೆ.

ಬೆಂಗಳೂರಿನ ನಿವಾಸಿ ಅಭಿರೂಪ್ ಅವರ ಮಗಳು ಆರ್ಯ ಎಂಬ ಐದು ವರ್ಷದ ಹುಡುಗಿ ಈ ಪತ್ರ ಬರೆದಿದ್ದಾಳೆ. ಆರ್ಯಳ ಪತ್ರ ಸಾರ್ವಜನಿಕರ ಗಮನ ಸೆಳೆದಿದೆ. ಆನ್‌ಲೈನ್‌ನಲ್ಲಿ ಅನೇಕರು ಆಕೆಗೆ ಬೆಂಬಲ ನೀಡಿದ್ದಾರೆ.

ಆರ್ಯ ತನ್ನ ಪತ್ರದಲ್ಲಿ ಏನಿದೆ?
ನರೇಂದ್ರ ಮೋದಿ ಜೀ, ಬೆಂಗಳೂರಿನಲ್ಲಿ ತುಂಬಾ ಟ್ರಾಫಿಕ್ ಇದೆ. ನಾವು ಶಾಲೆ ಮತ್ತು ಕಚೇರಿಗಳಿಗೆ ತಡವಾಗಿ ಹೋಗುತ್ತಿದ್ದೇವೆ. ರಸ್ತೆಗಳು ತುಂಬಾ ಕೆಟ್ಟದಾಗಿವೆ. ದಯವಿಟ್ಟು ಇದನ್ನು ಸರಿಪಡಿಸಲು ಸಹಾಯ ಮಾಡಿ” ಎಂದು ಆರ್ಯ ಮೋದಿಗೆ ಪತ್ರ ಬರೆದಿದಾಳೆ .

ಆರ್ಯ ಮೋದಿಗೆ ಬರೆದ ಪತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿ, ಐದು ವರ್ಷದ ಬಾಲಕಿಯ ಆಸೆ ಈಡೇರುತ್ತದೆ ಎಂದಿದರೆ. ಮತ್ತೊಬ್ಬ ಬಳಕೆದಾರರು 15 ವರ್ಷಗಳ ಹಿಂದೆ ತಮ್ಮ ಮಗಳು ಮುಂಬೈನಲ್ಲಿ ಶಬ್ದ ಮಾಲಿನ್ಯದ ಬಗ್ಗೆ ರಾಷ್ಟ್ರಪತಿಗಳಿಗೆ ಬರೆದಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ತಿಳಿಯಲಾಗಿದೆ.

The post ಪ್ರಧಾನಿಗೆ ಪತ್ರ ಬರೆದ 5 ವರ್ಷದ ಬಾಲಕಿ. appeared first on Good News 24x7.

]]>
ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ https://www.goodnews24x7.com/supreme-court-refuses-to-block-media-broadcasting-supreme-court-orders-fresh-determination-of-harshendra-kumars-petition/ Sat, 09 Aug 2025 12:13:34 +0000 https://www.goodnews24x7.com/?p=5662 ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಹರ್ಷೇಂದ್ರ ಕುಮಾರ್ ಅವರು ಸುಪ್ರೀಂಗೆ ಸಲ್ಲಿಸಿದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. “ದಿನೇ ದಿನೇ ಸುದ್ದಿ…

The post ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ appeared first on Good News 24x7.

]]>

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಹರ್ಷೇಂದ್ರ ಕುಮಾರ್ ಅವರು ಸುಪ್ರೀಂಗೆ ಸಲ್ಲಿಸಿದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

“ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಿಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ” ಎಂದು ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರು.
ವಿಚಾರ ಆಲಿಸಿದ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿಂದ ಪೀಠವು “ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ, ಗ್ಯಾಗ್ ಆದೇಶ ಹೊರಡಿಸಲಾಗುತ್ತದೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನು ಹತ್ತಿಕುತ್ತವೆ. ನಾವು ತಡೆಯಾಗ್ನೇ ನೀಡಿದರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿತು

ವಿಚಾರಣೆ ವೇಳೆ ಮಾತನಾಡಿದ ಹೊರಟಗಿಯವರು “ಮಾಧ್ಯಮ ನಿರ್ಬಂಧದ ತೆರವು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಬ್ಬ ವ್ಯಕ್ತಿ ಅಷ್ಟೇ, ಅವರಿಗಷ್ಟೇ ಪರಿಹಾರ ಸಿಗಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಉಳಿದ 299 ಮಂದಿಗೂ ಅಂದರೆ ಮಾಧ್ಯಮ ಸಂಸ್ಥೆಗಳಿಗೂ ಸಹ ಲಾಭ ದೊರೆತಿದ್ದು ಹೇಗೆ? ಹೀಗಾಗಿ ಪೀಠವು ಏನಾದರೂ ಒಂದು ರಕ್ಷಣೆಯನ್ನು ನೀಡಬೇಕು” ಎಂದು ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದರು .

ವಾದ ಆಲಿಸಿದ ಸುಪ್ರೀಂ ಕೋರ್ಟ್ ಅಂತಿಮವಾಗಿ ಮಧ್ಯಂತರ ನಿರ್ಬಂಧಕ ಆದೇಶವನ್ನು ಕೋರಿರುವ ದೇವಾಲಯ ಆಡಳಿತದ ಅರ್ಜಿಯನ್ನು ಹೊಸದಾಗಿ ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು

The post ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ appeared first on Good News 24x7.

]]>
ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಈ ಶ್ವಾನದ ಶಿವ ಭಕ್ತಿಗೆ ನೆಟ್ಟಿಗರು ಫಿದಾ ! https://www.goodnews24x7.com/have-you-ever-seen-a-dog-fasting-netizens-are-in-awe-of-this-dogs-devotion-to-lord-shiva/ Thu, 07 Aug 2025 06:11:47 +0000 https://www.goodnews24x7.com/?p=5486 ಶ್ರಾವಣ ಮಾಸದಲ್ಲಿ ಉಪವಾಸವನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ನೀವು ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಮಧ್ಯಪ್ರದೇಶದ ಉಜ್ಜಯಿನಿಯ ‘ಮ್ಯಾಕ್ಸಿ’ ಎಂಬ ಹೆಣ್ಣು ಶ್ವಾನ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಮ್ಯಾಕ್ಸಿ ಪ್ರತಿ ಶ್ರಾವಣ…

The post ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಈ ಶ್ವಾನದ ಶಿವ ಭಕ್ತಿಗೆ ನೆಟ್ಟಿಗರು ಫಿದಾ ! appeared first on Good News 24x7.

]]>

ಶ್ರಾವಣ ಮಾಸದಲ್ಲಿ ಉಪವಾಸವನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ನೀವು ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಮಧ್ಯಪ್ರದೇಶದ ಉಜ್ಜಯಿನಿಯ ‘ಮ್ಯಾಕ್ಸಿ’ ಎಂಬ ಹೆಣ್ಣು ಶ್ವಾನ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಮ್ಯಾಕ್ಸಿ ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತಿದ್ದು, ಮ್ಯಾಕ್ಸಿ ಶಿವನ ಭಕ್ತೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಶ್ವಾನ ಪ್ರತಿ ಸೋಮವಾರ ಉಪವಾಸ ಮಾಡುತ್ತದೆಯಂತೆ. ಇದು ಸಾಮಾನ್ಯ ಶ್ವಾನವಲ್ಲ, ಬದಲಾಗಿ ಉಜ್ಜಯಿನಿ ನಾನಾಖೇಡಾ ಪೊಲೀಸ್ ಠಾಣೆಯಲ್ಲಿ ನೇಮಿಸಲಾಗಿರುವ ಪೊಲೀಸ್​ ಶ್ವಾನ.

ಮ್ಯಾಕ್ಸಿ ಉಜ್ಜಯಿನಿ ಪೊಲೀಸ್ ಇಲಾಖೆಯ ವಿಶೇಷ ಸ್ನಿಫರ್ ನಾಯಿಯಾಗಿದ್ದು, ಅನೇಕ ದೊಡ್ಡ ಪ್ರಕರಣಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಿದೆ. ಆದರೆ ಈ ಬಾರಿ ಈ ಶ್ವಾನ ತನ್ನ ಧಾರ್ಮಿಕ ನಂಬಿಕೆಯಿಂದಾಗಿ ಸುದ್ದಿಯಲ್ಲಿದೆ. ಇದರ ನಿರ್ವಾಹಕರ ಪ್ರಕಾರ, ಪ್ರತಿ ವರ್ಷ ಶ್ರಾವಣ ಬಂದ ತಕ್ಷಣ, ಮ್ಯಾಕ್ಸಿ ತನ್ನ ಆಹಾರ ಮತ್ತು ಪಾನೀಯ ಸೇವನೆಯನ್ನು ಕಡಿಮೆ ಮಾಡುತ್ತೆ ಮತ್ತು ಶಿವ ದೇವಾಲಯದ ಹೊರಗೆ ಸದ್ದಿಲ್ಲದೆ ಕುಳಿತಿರುತ್ತದೆ.

https://www.youtube.com/live/Czl2OqGU7D8?si=5zTRfWLVURiOP-Kb ವಿನಯ್ ಗುರೂಜಿ ಸಂಕಷ್ಟದಿಂದ ಪಾರು ಮಾಡಿದ್ದೆ ಈ ಅಘೋರಿ.. ಚಿಕ್ಕಮಗಳೂರಿನ ಈ ಅಘೊರಿ ಪೂಜೆಗೆ ಯಾಕಿಷ್ಟು ಶಕ್ತಿ

ಪ್ರತಿ ಶ್ರಾವಣ ಸೋಮವಾರ ಉಪವಾಸ ಮಾಡುವ ಮ್ಯಾಕ್ಸಿ:
ಪ್ರತಿ ಶ್ರಾವಣ ಸೋಮವಾರ, ಮ್ಯಾಕ್ಸಿ ಆಹಾರ ಸೇವಿಸುವುದಿಲ್ಲ. ಪೊಲೀಸ್ ಇಲಾಖೆಯ ರಿಸರ್ವ್ ಇನ್ಸ್‌ಪೆಕ್ಟರ್ ರಂಜಿತ್ ಸಿಂಗ್ ಹೇಳುವಂತೆ, ಇತರ ದಿನಗಳಲ್ಲಿ ಮ್ಯಾಕ್ಸಿ ಸಾಮಾನ್ಯವಾಗಿ ಆಹಾರವನ್ನು ತಿನ್ನುತ್ತದ, ಆದರೆ ಸೋಮವಾರ ಬಂದ ತಕ್ಷಣ, ಆಹಾರವನ್ನು ಬಿಟ್ಟು ಹಾಲು ಅಥವಾ ನೀರನ್ನು ಮಾತ್ರ ಸೇವಿಸುತ್ತದೆ ಮತ್ತು ತನ್ನ ದಿನವನ್ನು ಸದ್ದಿಲ್ಲದೆ ಕಳೆಯುತ್ತದೆ. ಇದಲ್ಲದೇ ಈ ಮಾಸದಲ್ಲಿ ಹಸಿರು ತರಕಾರಿಗಳನ್ನು ತಿನ್ನಲು ಪ್ರಾರಂಭಿಸುತ್ತದೆ ಮತ್ತು ಮಾಂಸಾಹಾರದಿಂದ ಸಂಪೂರ್ಣವಾಗಿ ದೂರ ಸರಿಯುತ್ತದೆ. ಈ ಅಭ್ಯಾಸವು ಕಳೆದ 2 ವರ್ಷಗಳಿಂದ ಮುಂದುವರೆದಿದೆ.

ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​:
ಮ್ಯಾಕ್ಸಿಯ ಈ ಭಕ್ತಿಯನ್ನು ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಅವನನ್ನು “ಶಿವನ ನಿಜವಾದ ಭಕ್ತೆ” ಎಂದು ಕರೆಯುತ್ತಿದ್ದಾರೆ, ಆದರೆ ಕೆಲವರು ಈ ನಾಯಿಗೆ ಮನುಷ್ಯರಿಗಿಂತ ಹೆಚ್ಚಿನ ನಂಬಿಕೆ ಇದೆ ಎಂದು ಹೇಳಿದ್ದಾರೆ. ಉಜ್ಜಯಿನಿಯ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಇದರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ.

The post ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಈ ಶ್ವಾನದ ಶಿವ ಭಕ್ತಿಗೆ ನೆಟ್ಟಿಗರು ಫಿದಾ ! appeared first on Good News 24x7.

]]>
ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್. https://www.goodnews24x7.com/after-actress-ramya-sonu-shetty-also-received-obscene-comments/ Thu, 07 Aug 2025 05:36:33 +0000 https://www.goodnews24x7.com/?p=5481 ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ. ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ…

The post ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್. appeared first on Good News 24x7.

]]>

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ಜಾಮೀನು ಸಿಕ್ಕರೆ ಸಾಕು ದೇವರೇ ಅಂತ ದರ್ಶನ್​ ಅಂಡ್ ಗ್ಯಾಂಗ್​ ಕೋರ್ಟ್​ಗಳ ಸುತ್ತಾ ಅಲೆದಾಡ್ತಿದ್ರೆ, ಇತ್ತ ಅಶ್ಲೀಲ ಪದಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಂಟಕ ಹೆಚ್ಚಾಗ್ತಿದೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

https://youtu.be/3z6lK4bu4F4?si=WrYgYHV1zerXedbqಪಕ್ಷ ಅಧಿಕಾರಕ್ಕೆ ತರಲು 5 ವರ್ಷ ಕಷ್ಟ ಪಟ್ಟಿದ್ದು ನಾನು, SM ಕೃಷ್ಣ CM ಆದ್ರು : ಮಲ್ಲಿಕಾರ್ಜುನ ಖರ್ಗೆ

ಸೋನು ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹಾಟ್​ ಹಾಟ್​ ಲುಕ್ ಮೂಲಕವೇ ಸಾವಿರಾರು ಫಾಲೋವರ್ಸ್​ ಹೊಂದಿರೋ ರೂಪದರ್ಶಿ ಕಮ್ ಡಿಜಿಟಲ್ ಕ್ರಿಯೇಟರ್. ಅಷ್ಟೇ ಅಲ್ಲ, ಸೋನು ಶೆಟ್ಟಿ ಅಪ್ಪಟ ಕಿಚ್ಚ ಸುದೀಪ್ ಅಭಿಮಾನಿ ಅಂತಾ ಹೇಳಿಕೊಳ್ತಾರೆ. ಇಂತಹ ಸೋನು ಶೆಟ್ಟಿಗೆ ಇತ್ತೀಚೆಗೆ ದರ್ಶನ್​ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳು ಹೆಚ್ಚಾಗ್ತಿವೆ ಅಂತಾ ಈಕೆಯೂ ಸಿಡಿದೆದ್ದು ನಿಂತಿದ್ದಾರೆ.

3 ದಿನಗಳಿಂದ ಅಶ್ಲೀಲವಾದ ಕಮೆಂಟ್ಸ್​ ಮಾಡ್ತಿದ್ದಾರೆ. ಅವರ ಪದಗಳಲ್ಲಿ ಅಶ್ಲೀಲತೆ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಅದನ್ನ ನೋಡೋದಕ್ಕೂ ಆಗ್ತಿಲ್ಲ..ಅಷ್ಟೇ ಅಲ್ಲ…ನಾನು ಕಿಚ್ಚ ಸುದೀಪ್ ಅಭಿಮಾನಿಯಾಗಿರೋದ್ರಿಂದ ನನಗೆ ಈ ಥರಾ ಹಿಂಸೆ ಮಾಡ್ತಿದ್ದಾರೆ ಅನ್ನೋದು ಸೋನು ಶೆಟ್ಟಿಯ ಗಂಭೀರ ಆರೋಪ ಆಗಿದೆ.

ದರ್ಶನ್​ ಅಭಿಮಾನಿಗಳು ಸುದೀಪ್​ರನ್ನ ಟ್ರೋಲ್​ ಮಾಡ್ತಿದ್ರಂತೆ. ಅದನ್ನ ನೋಡೋದಕ್ಕಾಗದೇ, ಸೋನು ಅವರ ವಿರುದ್ಧ ರಿಯಾಕ್ಟ್​ ಮಾಡಿದ್ದಾರೆ. ಅವ್ರಿಗೆ ತಕ್ಕ ಪಾಠ ಕಲಿಸಲೇಬೇಕು ಅಂತಾ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ದರ್ಶನ್​ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು ಅಂತೆಲ್ಲಾ ಆ ವಿಡಿಯೋದಲ್ಲಿ ಸೋನು ಹೇಳಿದ್ದರು. ಅದ್ಯಾವಾಗ ದರ್ಶನ್​ ಫ್ಯಾನ್ಸ್​ನ ಹಿಯಾಳಿಸಿ ಈಕೆಯೂ ಟ್ರೋಲ್​ ಮಾಡೋದಕ್ಕೆ ಶುರುಮಾಡಿದ್ರೋ, ಈಕೆಯ ವಿರುದ್ಧ ಮತ್ತಷ್ಟು ಅಶ್ಲೀಲ ಪದಗಳ ದಾಳಿ ನಡೆಸಲಾಗಿದೆ. ತಾಯಿ ಬಗ್ಗೆ ಮಾತನಾಡಿದ್ದಾರೆ. ಅದ್ಯಾವಾಗ ತಾಯಿ ಬಗ್ಗೆ ಮಾತನಾಡೋದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವೋ.. ಮತ್ತೆ ಸೋನು ಒಂದು ವಿಡಿಯೋ ಮಾಡಿದ್ದಳು. ನಾನ್​ ನಿಮಗೆ ಠಕ್ಕರ್ ಕೊಡ್ತಾನೆ ಇರ್ತೀನಿ ಏನ್​ ಮಾಡ್ತೀರಾ ಮಾಡ್ಕೊಳ್ಳಿ ಅಂತಾನೇ ಹೇಳಿ ಮತ್ತೊಂದು ವಿಡಿಯೋ ಮಾಡಿ ಹಾಕಿದ್ದಾರೆ.

The post ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್. appeared first on Good News 24x7.

]]>