society Archives - Good News 24x7 https://www.goodnews24x7.com/tag/society/ Kannada Wed, 22 Apr 2026 06:41:44 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg society Archives - Good News 24x7 https://www.goodnews24x7.com/tag/society/ 32 32 ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು https://www.goodnews24x7.com/the-number-of-criminal-cases-in-our-society-is-increasing-day-by-day-complex-cases-like-murder-property-disputes-and-marital-disputes-have-been-gathering-dust-in-the-courts-for-years-it-is-a-matter/ Wed, 22 Apr 2026 06:41:44 +0000 https://www.goodnews24x7.com/?p=9371 ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ…

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>

ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿ. ಕೆಲವು ಜಮೀನು ವಿವಾದಗಳಂತೂ ಎಷ್ಟು ಸುದೀರ್ಘವಾಗಿ ನಡೆಯುತ್ತವೆ ಎಂದರೆ, ಒಂದು ತಲೆಮಾರು ನ್ಯಾಯಾಲಯ ಅಲೆದು ಸುಸ್ತಾಗಿ, ಅಂತಿಮವಾಗಿ ಅವರ ಮಕ್ಕಳು ಹೋರಾಟವನ್ನು ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಸನ್ನಿವೇಶಗಳ ನಡುವೆ ಅಮಾನವೀಯ ಕೃತ್ಯ ಎಸಗಿದವರಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆಯಾದಾಗ ನ್ಯಾಯಾಂಗದ ಮೇಲೆ ತುಸು ನಂಬಿಕೆ ಮೂಡುತ್ತದೆ. ಆದರೂ, ಶಿಕ್ಷೆಗೊಳಗಾದವರು ಪ್ರಭಾವ ಬಳಸಿ ಅಥವಾ ಕ್ಷಮಾದಾನದ ಮೂಲಕ ಬಿಡುಗಡೆಯಾದಾಗ ಸಮಾಜದಲ್ಲಿ ಕೆಲವೊಮ್ಮೆ ಸಂಶಯಗಳು ಹುಟ್ಟಿಕೊಳ್ಳುವುದು ಸಹಜ.

ಇತ್ತೀಚಿನ ಕೆಲವು ಮಹತ್ವದ ತೀರ್ಪುಗಳು ಕಾನೂನಿನ ಶಕ್ತಿಯನ್ನು ಮರುಸ್ಥಾಪಿಸಿವೆ. ತಮಿಳುನಾಡಿನ ಸಾತಾಂಕುಳಂನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತಂದೆ ಜಯರಾಜ್ ಮತ್ತು ಮಗ ಬೆನಿಕ್ಸ್ ಎಂಬವರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರೇ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರೂ, ಅದೇ ಠಾಣೆಯ ಕಾನ್ಸ್ಟೇಬಲ್ ರೇವತಿ ಎಂಬವರು ಯಾವುದೇ ಬೆದರಿಕೆಗೆ ಬಗ್ಗದೆ ಸತ್ಯ ನುಡಿದ ಪರಿಣಾಮ ಒಂಬತ್ತು ಪೊಲೀಸರಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದು ಕರ್ತವ್ಯ ಪ್ರಜ್ಞೆ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ.

ಹಾಗೆಯೇ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ರಾಜಕೀಯ ಪ್ರಭಾವದ ನಡುವೆಯೂ ಸಿಬಿಐ ತನಿಖೆ ನಡೆದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ, ನಟ ದರ್ಶನ್ ಪ್ರಕರಣ ಹಾಗೂ ಜನಾರ್ದನ ರೆಡ್ಡಿ ಅವರ ಪ್ರಕರಣಗಳಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿವೆ. “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಮತ್ತು ತಪ್ಪೆಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ನ್ಯಾಯದ ಮುಂದೆ ತಲೆಬಾಗಲೇಬೇಕು ಎಂಬ ಆಶಾವಾದವನ್ನು ಈ ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಮೂಡಿಸಿವೆ.

The post ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು appeared first on Good News 24x7.

]]>
ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕ: ಸಾಹುಕಾರ ಸತೀಶ್‍ ಬಾಬು ಪ್ರತಿಪಾದನೆ. https://www.goodnews24x7.com/basavannas-philanthropic-ideals-are-timeless-sahukara-satish-babus-assertion/ Mon, 20 Apr 2026 10:25:46 +0000 https://www.goodnews24x7.com/?p=9335 ಬಳ್ಳಾರಿ: ನಗರದ ಪ್ರತಿಷ್ಠಿತ ವೀರಶೈವ ಕಾಲೇಜಿನಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಮಾನತೆಯ ಹರಿಕಾರ ಬಸವಣ್ಣ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಾಹುಕಾರ ಸತೀಶ್‍ ಬಾಬು ಮಾತನಾಡಿ, “893…

The post ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕ: ಸಾಹುಕಾರ ಸತೀಶ್‍ ಬಾಬು ಪ್ರತಿಪಾದನೆ. appeared first on Good News 24x7.

]]>

ಬಳ್ಳಾರಿ: ನಗರದ ಪ್ರತಿಷ್ಠಿತ ವೀರಶೈವ ಕಾಲೇಜಿನಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಸಮಾನತೆಯ ಹರಿಕಾರ ಬಸವಣ್ಣ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಾಹುಕಾರ ಸತೀಶ್‍ ಬಾಬು ಮಾತನಾಡಿ, “893 ವರ್ಷಗಳ ಹಿಂದೆಯೇ ಬಸವಣ್ಣನವರು ತುಳಿತಕ್ಕೊಳಗಾದವರನ್ನು ಮೇಲೆತ್ತುವ ಮೂಲಕ ಸಮಾಜದಲ್ಲಿ ಸಮಾನತೆ ತಂದರು. ಇದು ಚರಿತ್ರೆಯಲ್ಲಿ ದಾಖಲಾದ ಅಸಾಮಾನ್ಯ ಮಾನವೀಯ ಪವಾಡ. ಅವರ ವಚನಗಳು ಇಂದಿಗೂ ವಿಶ್ವದಾದ್ಯಂತ ಪ್ರಚಲಿತದಲ್ಲಿದ್ದು, ಅವರ ತತ್ವಾದರ್ಶಗಳು ಸಾರ್ವಕಾಲಿಕವಾಗಿವೆ. ಇವುಗಳನ್ನು ನಾವೆಲ್ಲರೂ ಜೀವನದ ಮಾರ್ಗಸೂಚಿಗಳಾಗಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಸೌಹಾರ್ದ ಸಮಾಜದ ನಿರ್ಮಾಣ:
ಕಾಲೇಜಿನ ಪ್ರಾಚಾರ್ಯರಾದ ಜಿ. ಮಲ್ಲನಗೌಡ ಮಾತನಾಡಿ, “ಸರ್ವರನ್ನು ಒಳಗೊಂಡ ಸೌಹಾರ್ದಯುತ ಸಮಾಜ ಕಟ್ಟುವಲ್ಲಿ ಬಸವೇಶ್ವರರು ಹಾಕಿಕೊಟ್ಟ ಮೇಲ್ಪಂಕ್ತಿ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕವಾಗಿದೆ. ಜಾತಿ ಭೇದ ಮರೆತು ಅವರು ತೋರಿಸಿದ ಭಕ್ತಿ ಮಾರ್ಗದಲ್ಲಿ ಸಾಗುವ ಮೂಲಕ ನಾವು ಪುನೀತರಾಗೋಣ” ಎಂದು ತಿಳಿಸಿದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ವೀರಶೈವ ಮಹಾವಿದ್ಯಾಲಯದ ಪ್ರಮುಖರಾದ ಡಾ. ಜಿ. ಮನೋಹರ, ಡಾ. ರಾಜಶ್ರೀ ಪಾಟೀಲ್, ಡಾ. ಶ್ಯಾಮೂರ್ತಿ ಜಿ., ಡಾ. ಕವಿತ ಎಂ., ಡಾ. ವಿನೋದ್ ಕುಮಾರ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕ: ಸಾಹುಕಾರ ಸತೀಶ್‍ ಬಾಬು ಪ್ರತಿಪಾದನೆ. appeared first on Good News 24x7.

]]>
45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ https://www.goodnews24x7.com/45-minute-survey-cm-siddaramaiah-calmly-gave-details/ Thu, 16 Oct 2025 12:45:37 +0000 https://www.goodnews24x7.com/?p=7744 ಕಾವೇರಿ ನಿವಾಸದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಕ್ಕೂ ಹೆಚ್ಚು ಕಾಲ ಸಮಾಧಾನದಿಂದ ಉತ್ತರಿಸಿದರು.ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು. ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ…

The post 45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಕಾವೇರಿ ನಿವಾಸದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಕ್ಕೂ ಹೆಚ್ಚು ಕಾಲ ಸಮಾಧಾನದಿಂದ ಉತ್ತರಿಸಿದರು.ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು.

ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಾಗಿ ನನ್ನ ಮನೆಗೆ ಭೇಟಿನೀಡಿದ ಸಿಬ್ಬಂದಿಗಳಿಗೆ ಮಾಹಿತಿ ನೀಡಿ, ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು, ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಆಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿಯ ಬಗೆಗೆ ನಿಖರ ಮಾಹಿತಿ ದೊರೆತು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ.

ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ, ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವೈಜ್ಞಾನಿಕ ಪ್ರಯತ್ನ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಖಂಡಿತಾ ಆಗದು. ಚಿಂತೆ ಬಿಟ್ಟು, ಧೈರ್ಯವಾಗಿ ಸಿಬ್ಬಂದಿಗಳ ಜೊತೆ ಮಾಹಿತಿ ಹಂಚಿಕೊಳ್ಳಿ.

The post 45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಸಿದ್ದರಾಮಯ್ಯ appeared first on Good News 24x7.

]]>
ಸರ್ಕಾರಿ ಶಾಲಾ ಪ್ರಾರಂಭೋತ್ಸವ : ಶಾಸಕ ಕೆ .ಹರೀಶ್ ಗೌಡರು ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. https://www.goodnews24x7.com/government-school-commencement-ceremony-mla-k-harish-gowda-wishes-students-well/ Fri, 30 May 2025 09:51:24 +0000 https://www.goodnews24x7.com/?p=4143 ಬೇಸಿಗೆ ರಜೆ ಕಳೆದು ಇಂದಿನಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗಿದ್ದು ಮೊದಲ ದಿನವೇ ಹರ್ಷದಿಂದ ಶಾಲೆಯತ್ತ ಹೆಜ್ಜೆ ಹಾಕಿರುವ ವಿದ್ಯಾರ್ಥಿಗಳನ್ನು ಶಾಸಕ ಕೆ .ಹರೀಶ್ ಗೌಡರು ಸ್ವಾಗತಿಸಿದರು. ಚಾಮರಾಜ ಕ್ಷೇತ್ರದ ಕುಂಬಾರಕೊಪ್ಪಲಿನ ಸರ್ಕಾರಿ ಶಾಲೆ ಹಾಗು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಶಾಲೆಯಲ್ಲಿ…

The post ಸರ್ಕಾರಿ ಶಾಲಾ ಪ್ರಾರಂಭೋತ್ಸವ : ಶಾಸಕ ಕೆ .ಹರೀಶ್ ಗೌಡರು ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. appeared first on Good News 24x7.

]]>

ಬೇಸಿಗೆ ರಜೆ ಕಳೆದು ಇಂದಿನಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗಿದ್ದು ಮೊದಲ ದಿನವೇ ಹರ್ಷದಿಂದ ಶಾಲೆಯತ್ತ ಹೆಜ್ಜೆ ಹಾಕಿರುವ ವಿದ್ಯಾರ್ಥಿಗಳನ್ನು ಶಾಸಕ ಕೆ .ಹರೀಶ್ ಗೌಡರು ಸ್ವಾಗತಿಸಿದರು.


ಚಾಮರಾಜ ಕ್ಷೇತ್ರದ ಕುಂಬಾರಕೊಪ್ಪಲಿನ ಸರ್ಕಾರಿ ಶಾಲೆ ಹಾಗು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಶಾಲೆಯಲ್ಲಿ 2025-2026 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶೈಕ್ಷಣಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ, ಪಠ್ಯಪುಸ್ತಕ ಹಾಗು ಸಮವಸ್ತ್ರವನ್ನು ಸಾಂಕೇತಿಕವಾಗಿ ನೀಡಿ ಮಕ್ಕಳನ್ನು ಸ್ವಾಗತಿಸಿ ಮಾತನಾಡಿದ ಅವರು

ವಿದ್ಯಾರ್ಥಿಗಳಲ್ಲಿ ಜ್ಞಾನದ ಬೆಳಕು ಹೆಚ್ಚಾಗಲಿ ಶಿಕ್ಷಣವೇ ಶಕ್ತಿ, ಶಿಕ್ಷಣ ಕಲಿತ ವ್ಯಕ್ತಿ ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವರು, ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಶು-ಸಾಕ್ಸು, ಬಿಸಿಯೂಟ ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆಯಬೇಕೆಂದರು, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಸ್ಥಾನಗಳನ್ನು ಅಲಂಕರಿಸಿ ದೇಶಕ್ಕೆ ತುಂಬಾ ಕೊಡುಗೆ ನೀಡಿದ್ದಾರೆ ಎಂದರು ,

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇವಣ್ಣ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕುಂದು ಕೊರತೆಗಳಿದ್ದರೆ ತಕ್ಷಣ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ಸರ್ಕಾರಿ ಶಾಲಾ ಪ್ರಾರಂಭೋತ್ಸವ : ಶಾಸಕ ಕೆ .ಹರೀಶ್ ಗೌಡರು ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. appeared first on Good News 24x7.

]]>
ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. https://www.goodnews24x7.com/dargahs-have-no-caste-or-religion-limit-cm-siddaramaiah/ Sat, 17 May 2025 07:24:39 +0000 https://www.goodnews24x7.com/?p=3919 ಮಂಗಳೂರು : ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ…

The post ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. appeared first on Good News 24x7.

]]>

ಮಂಗಳೂರು : ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು ಎಂದರು.

ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ. ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.

The post ದರ್ಗಾಗಳಿಗೆ ಜಾತಿ, ಧರ್ಮದ ಮಿತಿ ಇಲ್ಲ: ಸಿ.ಎಂ.ಸಿದ್ದರಾಮಯ್ಯ. appeared first on Good News 24x7.

]]>