South Africa Archives - Good News 24x7 https://www.goodnews24x7.com/tag/south-africa/ Kannada Sat, 28 Jun 2025 11:31:32 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg South Africa Archives - Good News 24x7 https://www.goodnews24x7.com/tag/south-africa/ 32 32 ಆಪತ್ಬಾಂಧವನಿಂದ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್…. ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಿದ mr. 360…. https://www.goodnews24x7.com/%e0%b2%86%e0%b2%aa%e0%b2%a4%e0%b3%8d%e0%b2%ac%e0%b2%be%e0%b2%82%e0%b2%a7%e0%b2%b5%e0%b2%a8%e0%b2%bf%e0%b2%82%e0%b2%a6-%e0%b2%95%e0%b3%8a%e0%b2%a8%e0%b3%86%e0%b2%97%e0%b3%82-%e0%b2%b8%e0%b2%bf%e0%b2%95/ Sat, 28 Jun 2025 11:31:32 +0000 https://www.goodnews24x7.com/?p=4757 2025 ರ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಗಳನ್ನು ಎಬಿ ಡಿವಿಲಿಯರ್ಸ್ ಮುನ್ನಡೆಸಲಿದ್ದಾರೆ. ಅಪ್ರತಿಮ ಬಹುಮುಖ ಪ್ರತಿಭೆ ಮತ್ತು ನಿರ್ಭೀತ ಬ್ಯಾಟಿಂಗ್ಗೆ ಹೆಸರುವಾಸಿಯಾದ ಡಿವಿಲಿಯರ್ಸ್ ಅವರ ಪುನರಾಗಮನವು ಕ್ರಿಕೆಟ್ ವಲಯದಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ದಕ್ಷಿಣ ಆಫ್ರಿಕಾದ ಐಕಾನ್ ಎಬಿ…

The post ಆಪತ್ಬಾಂಧವನಿಂದ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್…. ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಿದ mr. 360…. appeared first on Good News 24x7.

]]>

2025 ರ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಗಳನ್ನು ಎಬಿ ಡಿವಿಲಿಯರ್ಸ್ ಮುನ್ನಡೆಸಲಿದ್ದಾರೆ. ಅಪ್ರತಿಮ ಬಹುಮುಖ ಪ್ರತಿಭೆ ಮತ್ತು ನಿರ್ಭೀತ ಬ್ಯಾಟಿಂಗ್ಗೆ ಹೆಸರುವಾಸಿಯಾದ ಡಿವಿಲಿಯರ್ಸ್ ಅವರ ಪುನರಾಗಮನವು ಕ್ರಿಕೆಟ್ ವಲಯದಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ದಕ್ಷಿಣ ಆಫ್ರಿಕಾದ ಐಕಾನ್ ಎಬಿ ಡಿವಿಲಿಯರ್ಸ್ ಸುಮಾರು ನಾಲ್ಕು ವರ್ಷಗಳ ನಂತರ ಕ್ರೀಡೆಗೆ ಮರಳುವುದಾಗಿ ಘೋಷಿಸಿದಾಗ, ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ.

ಸಾರ್ವಕಾಲಿಕ ಅತ್ಯಂತ ನವೀನ ಮತ್ತು ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪೂಜಿಸಲ್ಪಡುವ ಡಿವಿಲಿಯರ್ಸ್, ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನ ಎರಡನೇ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಸೌತ್ ಆಫ್ರಿಕಾ ಚಾಂಪಿಯನ್ಸ್ ಅನ್ನು ಮುನ್ನಡೆಸಲಿದ್ದಾರೆ. ನಿವೃತ್ತ ಮತ್ತು ಗುತ್ತಿಗೆ ಪಡೆಯದ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡ ಪ್ರೀಮಿಯರ್ T20 ಪಂದ್ಯಾವಳಿಯು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಒಂದು ಉಲ್ಲಾಸಕರವಾದ ದೃಶ್ಯವನ್ನು ನೀಡುತ್ತದೆ.

ತಮ್ಮ ತಂಡಕ್ಕೆ ಮರಳಿದ್ದನ್ನು ನೆನಪಿಸಿಕೊಂಡು ಡಿವಿಲಿಯರ್ಸ್ ಹೀಗೆ ಹೇಳಿದರು: “ನಾಲ್ಕು ವರ್ಷಗಳ ಹಿಂದೆ, ನಾನು ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದೇನೆ ಏಕೆಂದರೆ ನನಗೆ ಇನ್ನು ಮುಂದೆ ಆಡಲು ಹಂಬಲವಿರಲಿಲ್ಲ. ಸರಿ, ಸಮಯ ಕಳೆದಿದೆ, ಮತ್ತು ನನ್ನ ಚಿಕ್ಕ ಮಕ್ಕಳು ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ನಾವು ತೋಟದಲ್ಲಿ ಹೆಚ್ಚು ಹೆಚ್ಚು ಬಾರಿ ಆಡುತ್ತಿದ್ದೇವೆ ಮತ್ತು, ಮತ್ತೆ ಒಂದು ರೀತಿಯ ಜ್ವಾಲೆ ಹೊತ್ತಿಕೊಂಡಂತೆ ಭಾಸವಾಗುತ್ತಿದೆ. ಹಾಗಾಗಿ, ನಾನು ಜಿಮ್ ಮತ್ತು ನೆಟ್ಗಳಿಗೆ ಹಿಂತಿರುಗುತ್ತಿದ್ದೇನೆ ಮತ್ತು ಜುಲೈನಲ್ಲಿ WCL ಗೆ ಸಿದ್ಧನಾಗುತ್ತೇನೆ.” ಎಂದು ಕ್ರಿಕೆಟ್ ಲೋಕದ ದಿಗ್ಗಜ ಮಿಸ್ಟರ್ 360 ಎಬಿಡಿ ಹೇಳಿದ್ದಾರೆ.

The post ಆಪತ್ಬಾಂಧವನಿಂದ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್…. ಕ್ರಿಕೆಟ್ ಲೋಕಕ್ಕೆ ಮತ್ತೆ ಮರಳಿದ mr. 360…. appeared first on Good News 24x7.

]]>
ಭಾರತ ಹಾಗೂ ಉಳಿದ ತಂಡಗಳಿಗೆ ಚಾಂಪಿಯನ್ ಟ್ರೋಫಿಯಲ್ಲಿ ದೊರೆತ ಹಣವೆಷ್ಟು?? https://www.goodnews24x7.com/%e0%b2%ad%e0%b2%be%e0%b2%b0%e0%b2%a4-%e0%b2%b9%e0%b2%be%e0%b2%97%e0%b3%82-%e0%b2%89%e0%b2%b3%e0%b2%bf%e0%b2%a6-%e0%b2%a4%e0%b2%82%e0%b2%a1%e0%b2%97%e0%b2%b3%e0%b2%bf%e0%b2%97%e0%b3%86-%e0%b2%9a/ Mon, 10 Mar 2025 10:55:21 +0000 https://www.goodnews24x7.com/?p=2712 2025ರ ಚಾಂಪಿಯನ್ ಟ್ರೋಫಿಯನ್ನು ಭಾರತವು ತನ್ನದಾಗಿಸಿಕೊಂಡಿದೆ. ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿ ಟ್ರೋಫಿ ಗೆದ್ದಿದೆ. 60 ಕೋಟಿ ರೂಗಳ ಒಟ್ಟು ಬಹುಮಾನದ ಗಾತ್ರದಲ್ಲಿ ಚಾಂಪಿಯನ್ ಭಾರತಕ್ಕೆ 19.5 ಕೋಟಿ ರೂಪಾಯಿ ಬಹುಮಾನ…

The post ಭಾರತ ಹಾಗೂ ಉಳಿದ ತಂಡಗಳಿಗೆ ಚಾಂಪಿಯನ್ ಟ್ರೋಫಿಯಲ್ಲಿ ದೊರೆತ ಹಣವೆಷ್ಟು?? appeared first on Good News 24x7.

]]>

2025ರ ಚಾಂಪಿಯನ್ ಟ್ರೋಫಿಯನ್ನು ಭಾರತವು ತನ್ನದಾಗಿಸಿಕೊಂಡಿದೆ. ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿ ಟ್ರೋಫಿ ಗೆದ್ದಿದೆ. 60 ಕೋಟಿ ರೂಗಳ ಒಟ್ಟು ಬಹುಮಾನದ ಗಾತ್ರದಲ್ಲಿ ಚಾಂಪಿಯನ್ ಭಾರತಕ್ಕೆ 19.5 ಕೋಟಿ ರೂಪಾಯಿ ಬಹುಮಾನ ದೊರೆತಿದೆ. ಉಳಿದಂತೆ ಬೇರೆ ತಂಡಗಳಿಗೆ ಎಷ್ಟು ಹಣ ದೊರೆತಿದೆ ಎಂಬುದರ ವಿವರ ಇಲ್ಲಿದೆ.

ಚಾಂಪಿಯನ್ ಟ್ರೋಫಿಯ ಫೈನಲ್ಸ್ ನಲ್ಲಿ , ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದು, ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಲ್ಲದೆ, ಚಾಂಪಿಯನ್ಸ್ ಕೂಡ ಆಗಿದ್ದಾರೆ. ನಾಯಕ ರೋಹಿತ್ ಶರ್ಮ ಆಡಿದ ಮೌಲ್ಯಯುತ ಇನ್ನಿಂಗ್ಸ್ ಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಈ ಚಾಂಪಿಯನ್ ಟ್ರೋಫಿಯ ವಿಶೇಷ ಏನಪ್ಪಾ ಅಂದ್ರೆ, ಭಾರತ ಆಡಿದ ಯಾವುದೇ ಒಂದು ಪಂದ್ಯಾವಳಿಯನ್ನು ಸಹ ಸೋತಿಲ್ಲ. 2002 ಹಾಗೂ 2013ರಲ್ಲಿಯೂ ಇದೇ ರೀತಿಯಾಗಿ ಪಂದ್ಯವನ್ನ ಆಡಿ ಭಾರತ ಗೆದ್ದಿತ್ತು. ಮತ್ತೊಂದು ಮುಖ್ಯವಾದ ಅಂಶವೆಂದರೆ ಈ ಸಾಧನೆಯನ್ನು ಮಾಡಲು ಯಾವ ದೇಶಗಳಿಗೂ ಸಹ ಸಾಧ್ಯವಾಗಿಲ್ಲ. ಆದರೆ ಭಾರತ ಮೂರು ಬಾರಿ ಐಸಿಸಿ ಟ್ರೋಫಿಯನ್ನು ಗೆಲ್ಲುವುದರ ಮುಖಾಂತರ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ಕೇವಲ 9 ತಿಂಗಳುಗಳ ಅಂತರದಲ್ಲಿ ಎರಡನೇ ಐಸಿಸಿ ಟ್ರೋಫಿಯನ್ನು ತನ್ನ ಖಾತೆಗೆ ಹಾಕಿಕೊಂಡಿರುವ ರೋಹಿತ್ ಪಡೆಗೆ ಐಸಿಸಿಯಿಂದ ಭಾರಿ ಮೊತ್ತವನ್ನು ಬಹುಮಾನವನ್ನಾಗಿ ನೀಡಲಾಗಿದೆ. ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತ ತಂಡಕ್ಕ 2.4 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸರಿಸುಮಾರು 19.5 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಹಾಗೆಯೇ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ $1.12 ಮಿಲಿಯನ್ ಅಂದರೆ ಸುಮಾರು 9.72 ಕೋಟಿ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಹಾಗೆಯೇ ಸೆಮಿಫೈನಲ್ನಲ್ಲಿ ಹೊರಬಿದ್ದ ಎರಡೂ ತಂಡಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ 4.86 ಕೋಟಿ ರೂ ಹಣ ಸಿಗಲಿದೆ.

ಸುಮಾರು 60 ಕೋಟಿ ರೂಗಳು ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಗಾತ್ರವಾಗಿದ್ದು, ಚಾಂಪಿಯನ್, ರನ್ನರ್ ಅಪ್ ಹಾಗೂ ಸೆಮಿಫೈನಲ್ನಿಂದ ಹೊರಬಿದ್ದ ತಂಡಗಳನ್ನು ಹೊರತುಪಡಿಸಿ, ಗುಂಪು ಹಂತದಲ್ಲಿ ಪ್ರತಿ ಪಂದ್ಯದ ಗೆಲುವಿಗೆ 30 ಲಕ್ಷ ರೂ. ಬಹುಮಾನ ದೊರೆಯಲಿದೆ.ಟೂರ್ನಿಯಲ್ಲಿ ಐದು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸುಮಾರು 3 ಕೋಟಿ ರೂ. ಬಹುಮಾನ ಪಡೆದರೆ, ಏಳು ಮತ್ತು ಎಂಟನೇ ಸ್ಥಾನ ಪಡೆದ ತಂಡಗಳು ಸುಮಾರು 1.2 ಕೋಟಿ ರೂ ಮೊತ್ತವನ್ನು ಪಡೆಯಲಿದೆ. ಇದಲ್ಲದೆ, ಈ ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಎಂಟು ತಂಡಗಳಿಗೆ ತಲಾ 1.08 ಕೋಟಿ ರೂ ಹಣ ಸಿಗಲಿದೆ. ಈ ರೀತಿಯಾಗಿ 60 ಕೋಟಿ ರೂಪಾಯಿಗಳನ್ನು ಭಾಗಿಸಿ, ಎಲ್ಲಾ ತಂಡಗಳಿಗೂ ಸೇರುವಂತೆ ಮಾಡಿದ್ದಾರೆ. ಟ್ರೋಫಿಯನ್ನು ಗೆದ್ದ ತಂಡ ಹಾಗೂ ರನ್ನರ್ ಅಪ್ ಆದ ತಂಡಗಳಿಗೆ ಇತರ ತಂಡಗಳಿಗೆ ಹೋಲಿಸಿದರೆ ಹೆಚ್ಚಿನ ಮೊತ್ತ ದೊರಕಿದೆ.

 

 

The post ಭಾರತ ಹಾಗೂ ಉಳಿದ ತಂಡಗಳಿಗೆ ಚಾಂಪಿಯನ್ ಟ್ರೋಫಿಯಲ್ಲಿ ದೊರೆತ ಹಣವೆಷ್ಟು?? appeared first on Good News 24x7.

]]>
ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ಟೀಂ ಇಂಡಿಯಾ.! https://www.goodnews24x7.com/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a4%e0%b2%bf-%e0%b2%a8%e0%b2%bf%e0%b2%95%e0%b2%bf-%e0%b2%aa%e0%b3%8d%e0%b2%b0%e0%b2%b8%e0%b2%be%e0%b2%a6%e0%b3%8d-%e0%b2%a8%e0%b2%be%e0%b2%af/ Mon, 03 Feb 2025 05:33:15 +0000 https://www.goodnews24x7.com/?p=2173 ಕೌಲಾಲಂಪುರ :- ಐಸಿಸಿ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್ಗಳಿಂದ ಮಣಿಸಿದ ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದ ಭಾರತ ತಂಡ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ಮೂಲಕ ಅಂಡರ್-19…

The post ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ಟೀಂ ಇಂಡಿಯಾ.! appeared first on Good News 24x7.

]]>

ಕೌಲಾಲಂಪುರ :- ಐಸಿಸಿ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್ಗಳಿಂದ ಮಣಿಸಿದ ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದ ಭಾರತ ತಂಡ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ಮೂಲಕ ಅಂಡರ್-19 ಟಿ20 ವಿಶ್ವ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ. ಭಾನುವಾರ ಇಲ್ಲಿನ ಬೇಯು ಮಾಸ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ಗಳಲ್ಲಿ 82 ರನ್ ಗಳಿಸಿ ಸರ್ವಪತನ ಕಂಡಿತು.

ದಕ್ಷಿಣ ಆಫ್ರಿಕಾ ನೀಡಿದ 83 ರನ್ಗಳ ಅಲ್ಪ ಗುರಿ ಬೆನ್ನಟ್ಟಿದ ಭಾರತ 11.2 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಗುರಿ ತಲುಪಿತು. ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಜೇಯ ತಂಡಗಳಾಗಿ ಫೈನಲ್ ಪ್ರವೇಶಿಸಿದ್ದವು. ಅಂತಿಮ ಹಣಾಹಣಿ 1ur ಯಲ್ಲಿ ಮೊದಲು ಬ್ಯಾಟ್ ಮಾಡಿದದ.
ಆಫ್ರಿಕಾ ಆಟಗಾರರು ನಿರೀಕ್ಷೆಗೆ ತಕ್ಕ ಬ್ಯಾಟ್ ಬೀಸುವಲ್ಲಿ ವಿಫಲರಾಗಿ ಭಾರತೀ ಯರ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ದಕ್ಷಿಣ ಆಫ್ರಿಕಾ ಪರ ಮೀಕೆ ವ್ಯಾನ್ ವೂರ್ಸ್ಟ್ 23, ಜೆಮ್ಮಾ ಬೋಥಾ 16, ಫೇ ಕೌಲಿಂಗ್ 15, ಕರಾಬೊ ಮೆಸೊ 10 ರನ್ ಗಳಿಸಿದ್ದು ಬಟ್ಟರೇ ಉಳಿದವರು ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗದೇ ಪರದಾಡಿ ದರು. ಅಂತಿಮವಾಗಿ ಡಿಯಾರಾ ರಾಮ್ಲಕಾನ್ 3. ಕೈಲಾ ರೇನಕೆ 7 ರನ್ ಗಳಿಸಿದರು. ಭಾರತದ ಪರ ಗೊಂಗಡಿ ತ್ರಿಶಾ 3, ವೈಷ್ಣವಿ ಶರ್ಮಾ, ಆಯುಷಿ ಶುಕ್ರಾಮತ್ತು ಪಾರುಣಿಕ ಸಿಸೋಡಿಯಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಶಬ್ಬಮ್ ಶಕೀಲ್ 1 ವಿಕೆಟ್ ಕಬಳಿಸಿದರು.

ದಕ್ಷಿಣ ಆಫ್ರಿಕಾ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಭಾರತ, ತಂಡದ ಮೊತ್ತ 36 ರನ್ ಆಗಿದ್ದ ವೇಳೆ 8 ರನ್ ಗಳಿಸಿದ್ದ ಜಿ.ಕಮಲಿನಿ ಅವರ ವಿಕೆಟ್ ಕಳೆದು ಕೊಂಡು ಆರಂಭಿಕ ಆಘಾತ ಎದುರಿಸಿ ತು. ಬಳಿಕ 2ನೇ ವಿಕೆಟ್ಗೆ ಜೊತೆಯಾದ ಗೊಂಗಡಿ ತ್ರಿಶಾ ಮತ್ತು ಸಾನಿಕಾ ಚಲ್ಕೆ 48 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೊಂಗಡಿ ತ್ರಿಷಾ 44, ಸಾನಿಕಾ ಚಲೈ 26 ರನ್ ಗಳಿಸಿ ಅಜೇಯ ರಾಗುಳಿದರು. ದಕ್ಷಿಣ ಆಫ್ರಿಕಾ ಪರ ಕೈಲಾ ರೇನಕೆ ಒಂದು ವಿಕೆಟ್ ಕಬಳಿಸಿದರು. ಪಂದ್ಯ ಹಾಗೂ ಸರಣಿಯಲ್ಲಿ
ಅತ್ಯುತ್ತಮ ಪ್ರದರ್ಶನ ನೀಡಿದ ತ್ರಿಶಾ ಪಂದ್ಯಶ್ರೇಷ್ಠ ಹಾಗೂ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಾನವೀಯತೆ ಮೆರೆದ ಶಾಸಕ ಅನಿಲ್ ಚಿಕ್ಕಮಾದು2023ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತೀಯ ಮಹಿಳಾ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಭಾರತ ತಂಡವನ್ನು ಕರ್ನಾಟಕದ ನಿಕಿ ಪ್ರಸಾದ್ ಮುನ್ನಡೆಸಿದ್ದು, ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 19 ವರ್ಷದೊಳಗಿನ ಮಹಿಳಾ ಏಷ್ಯಾಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ನಿಕಿ 18 ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್ ಗಳಿಂದ ಮಣಿಸಿ ತಂಡವನ್ನು ಚಾಂಪಿ ಯನ್ ಪಟ್ಟಕ್ಕೇರಿಸಿದ್ದರು.

The post ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ಟೀಂ ಇಂಡಿಯಾ.! appeared first on Good News 24x7.

]]>
ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ https://www.goodnews24x7.com/today-is-the-second-t20i-match-against-india-vs-south-africa/ Sun, 10 Nov 2024 09:18:39 +0000 https://www.goodnews24x7.com/?p=985 ಗ್ಕೆಬರ್ಹಾದಲ್ಲಿ (Gqeberha) ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ 61 ರನ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ದಕ್ಷಿಣ ಆಫ್ರಿಕಾ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ. ಭಾರತ ತಂಡ…

The post ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ appeared first on Good News 24x7.

]]>

ಗ್ಕೆಬರ್ಹಾದಲ್ಲಿ (Gqeberha) ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ 61 ರನ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ದಕ್ಷಿಣ ಆಫ್ರಿಕಾ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ.

ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(w), ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ಯಶ್ ದಯಾಳ್, ರವಿ ಬಿಷ್ಣೋಯ್, ರಮಣದೀಪ್ ಸಿಂಗ್ , ಜಿತೇಶ್ ಶರ್ಮಾ

ದಕ್ಷಿಣ ಆಫ್ರಿಕಾ ತಂಡ : ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್ (W), ಐಡೆನ್ ಮಾರ್ಕ್ರಾಮ್ (C), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ನ್ಕಾಬಯೋಮ್ಜಿ ಪೀಟರ್, ಒಟ್ನೀಲ್ ಬಾರ್ಟ್‌ಮ್ಯಾನ್, ಡೊನೊವನ್ ಪ್ಯಾಟ್ರಿಕ್ ಎಂಪೆಲಿಂಗ್ ಕ್ರುಗರ್

The post ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ appeared first on Good News 24x7.

]]>
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 61 ರನ್​ಗಳ ಭರ್ಜರಿ ಗೆಲುವು https://www.goodnews24x7.com/india-won-by-61-runs-against-south-africa/ Sat, 09 Nov 2024 03:21:50 +0000 https://www.goodnews24x7.com/?p=979 ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ T20 ಪಂದ್ಯ ಡರ್ಬನ್​​ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ 61 ರನ್‌ಗಳಿಂದ ಸೋಲಿಸಿದೆ. ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 202 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು…

The post ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 61 ರನ್​ಗಳ ಭರ್ಜರಿ ಗೆಲುವು appeared first on Good News 24x7.

]]>

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ T20 ಪಂದ್ಯ ಡರ್ಬನ್​​ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ 61 ರನ್‌ಗಳಿಂದ ಸೋಲಿಸಿದೆ. ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 202 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಆತಿಥೇಯ ದಕ್ಷಿಣ ಆಫ್ರಿಕಾ, 141 ರನ್‌ಗಳಿಗೆ ಆಲೌಟ್ ಆಗಿದೆ.

ಸಂಜು ಸ್ಯಾಮ್ಸನ್ ಭರ್ಜರಿ ಶತಕ, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಅವರ ಮಾರಕ ಬೌಲಿಂಗ್ ದಾಳಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಸ್ಯಾಮ್ಸನ್ 107 ರನ್ ಗಳಿಸಿದರೆ, ಬಿಷ್ಣೋಯ್ ಮತ್ತು ಚಕ್ರವರ್ತಿ ತಲಾ 3 ವಿಕೆಟ್ ಕಬಳಿಸಿದರು. ಸಂಜು ಸ್ಯಾಮ್ಸನ್ ಟಿ20 ಪಂದ್ಯದಲ್ಲಿ ಸತತ ಎರಡನೇ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 107 ರನ್ ಗಳಿಸಿದರು.

The post ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 61 ರನ್​ಗಳ ಭರ್ಜರಿ ಗೆಲುವು appeared first on Good News 24x7.

]]>
ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ https://www.goodnews24x7.com/t20-series-between-india-vs-south-africa-from-today/ Fri, 08 Nov 2024 05:28:15 +0000 https://www.goodnews24x7.com/?p=971 ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯ ಇವತ್ತು ಡರ್ಬನ್​​ನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್​​ 18 ಮತ್ತು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ನೋಡಬಹುದಾಗಿದೆ. ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು…

The post ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ appeared first on Good News 24x7.

]]>

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯ ಇವತ್ತು ಡರ್ಬನ್​​ನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್​​ 18 ಮತ್ತು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ನೋಡಬಹುದಾಗಿದೆ.

ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(w), ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ಯಶ್ ದಯಾಳ್, ರವಿ ಬಿಷ್ಣೋಯ್, ರಮಣದೀಪ್ ಸಿಂಗ್ , ಜಿತೇಶ್ ಶರ್ಮಾ

ದಕ್ಷಿಣ ಆಫ್ರಿಕಾ ತಂಡ : ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್ (W), ಐಡೆನ್ ಮಾರ್ಕ್ರಾಮ್ (C), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ನ್ಕಾಬಯೋಮ್ಜಿ ಪೀಟರ್, ಒಟ್ನೀಲ್ ಬಾರ್ಟ್‌ಮ್ಯಾನ್, ಡೊನೊವನ್ ಪ್ಯಾಟ್ರಿಕ್ ಎಂಪೆಲಿಂಗ್ ಕ್ರುಗರ್

The post ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ appeared first on Good News 24x7.

]]>