SPVishnuvardhana Archives - Good News 24x7 https://www.goodnews24x7.com/tag/spvishnuvardhana/ Kannada Fri, 12 Sep 2025 05:42:38 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SPVishnuvardhana Archives - Good News 24x7 https://www.goodnews24x7.com/tag/spvishnuvardhana/ 32 32 ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ https://www.goodnews24x7.com/a-wife-who-killed-her-husband-for-the-sake-of-money/ Fri, 12 Sep 2025 05:42:38 +0000 https://www.goodnews24x7.com/?p=7472 ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ. ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ…

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>

ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ.
ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ ರವಿಕುಮಾರ್ ಮತ್ತು ಅರುಣ್‌ ಕುಮಾ‌ರ್ ಅವರ ಮಾಲೀಕತ್ವದ್ದು. ಇಲ್ಲಿ ಕೆಲಸ ಮಾಡಿಕೊಂಡು. ಇಲ್ಲಿಯೇ ವಾಸವಿದ್ದ ಈ ದಂಪತಿ ಪೈಕಿ ಕಳೆದ ಸೋಮವಾರ ಮಧ್ಯರಾತ್ರಿ ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರಬಂದ ಪತಿ ವೆಂಕಟಸ್ವಾಮಿ ನಾಪತ್ತೆ. ತೀವ್ರ ಆತಂಕಗೊಂಡ ಪತ್ನಿ ಸಲ್ಲಾ ಪುರಿ, ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ತನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ಇನ್ಸ್ಪೆಕ್ಟರ್ ಮುನಿಯಪ್ಪ ಅವರಿಗೆ ದೂರು ಸಲ್ಲಿಸಿ ದ್ದಾಳೆ. ಆಕೆ ತನ್ನ ದೂರಿನಲ್ಲಿ, ಸೋಮವಾರ ಮಧ್ಯರಾತ್ರಿ ಮನೆಯ ಹೊರಗೆ ಹುಲಿ ಘರ್ಜನೆ ಕೇಳಿಸಿತು. ಆಗ ಪತಿ ವೆಂಕಟ ಸ್ವಾಮಿ ಎದ್ದು, ಮನೆ ಬಾಗಿಲು ಹಾಕಿಕೋ ಎಂದು ತಿಳಿಸಿ, ಹೊರ ಹೋದರು.ಅವರು ಇದುವರೆಗೂ ವಾಪಸ್ ಬಂದಿಲ್ಲ. ಅವರನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದಳು.

ದಿನವಿಡೀ ಕೂಂಬಿಂಗ್: ವೆಂಕಟಸ್ವಾಮಿಯನ್ನು ಹುಲಿ ಹೊತ್ತೊಯ್ದಿರಬಹುದು ಎಂದಾಗ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ ತಕ್ಷಣವೇ ಆರಣ್ಯ ಇಲಾಖೆಗೆ ಮಾಹಿತಿ
ವೆಂಕಟಸ್ವಾಮಿ ನೀಡಿದರು. ಮಂಗಳವಾರ ರಾತ್ರಿಯಿಂದಲೇ ಹುಲಿ ಹಾಗೂ ವೆಂಕಟಸ್ವಾಮಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಸಂಜೆವರೆವಿಗೂ ಅಡಿಕೆ ತೋಟ ಹಾಗೂ ಸುಮಾರು 3 ಕಿ.ಮೀ. ಸುತ್ತಳತೆ ಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದರೂ ಯಾವುದೇ ಕುರುಹು ದೊರೆಯಲಿಲ್ಲ. ಹುಲಿ ಇರಲಿ, ನಾಪತ್ತೆಯಾದ ವೆಂಕಟ ಸ್ವಾಮಿ ಮೃತದೇಹವಿರಲಿ, ಅಡಿಕೆ ತೋಟಕ್ಕೆ ಯಾವುದೇ ವನ್ಯಜೀವಿ ಬಂದು ಹೋಗಿರು ವುದರ ಕುರುಹು ಸಿಗಲಿಲ್ಲ. ಸೋಮವಾರ ಮಳೆ ಬಿದ್ದಿದ್ದರಿಂದ ಯಾವುದೇ ವನ್ಯಜೀವಿ ಅಡಿಕೆ ತೋಟಕ್ಕೆ ಬಂದಿದ್ದರೂ, ಅದರ ಹೆಜ್ಜೆ ಗುರುತು ಇರಲೇಬೇಕಿತ್ತು. ಅಂತಹ ಯಾವುದೇ ಗುರುತು ಪತ್ತೆಯಾಗಲಿಲ್ಲ.ಆದರೆ ಇದ್ದಕ್ಕಿದ್ದಂತೆ ಸಲ್ಲಾಪುರಿ ಆನೆ ಹೆಜ್ಜೆ ಗುರುತನ್ನು ತೋರಿಸಿ ಆನೆ ಬಂದಿರ ಬಹುದು ಎಂದು ಹೇಳಿದ್ದಾಳೆ. ಆದರೆ ಅಷ್ಟರ ಲ್ಲಾಗಲೇ ತೋಟಕ್ಕೆ ಬಂದಿದ್ದ ಅದರ ಮಾಲೀಕರು, ನಮ್ಮ ತೋಟಕ್ಕೆ ಸುಮಾರು ಎರಡು ತಿಂಗಳ ಹಿಂದೆ ಆನೆ ಬಂದಿತ್ತು ನಂತರ ಯಾವುದೇ ಆನೆ ಬಂದಿಲ್ಲ ಎಂದರು. ಅದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಆನೆ ಹೆಜ್ಜೆ ಗುರುತು ಬಹಳ ಹಳೆಯದು ಎಂಬುದನ್ನು ಖಚಿತಪಡಿಸಿದರು.

ಮನೆಯಿಂದ ತಿಪ್ಪೇಗುಂಡಿವರೆಗೆ ಏನೋ ಎಳೆದೊಯ್ದ ಗುರುತು: ಮಂಗಳವಾರ ರಾತ್ರಿ ಯಿಂದ ಬುಧವಾರ ಸಂಜೆವರೆಗೆ ಅಡಿಕೆ ತೋಟಕ್ಕೆ ಹೊಂದಿಕೊಂಡಿರುವ ಕಾಡಿನಲ್ಲಿ ಅಲೆದು ಸುಸ್ತಾಗಿದ್ದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ತೋಟದ ಮನೆ ಬಳಿ ಬಂದಾಗ ಮನೆಯಿಂದ ತಿಪ್ಪೆಗುಂಡಿವರೆಗೆ ಏನೋ ಎಳೆದೊಯ್ದಿದ್ದ ಗುರುತು ಕಣ್ಣಿಗೆ ಬಿತ್ತು. ಆದರೆ ಮನುಷ್ಯನನ್ನು ಯಾವುದೇ ಪ್ರಾಣಿ ಎಳೆದೊಯ್ದರೆ ಉಂಟಾಗುವ ಗುರುತಂತೂ ಇದಾಗಿರಲಿಲ್ಲ. ಹಾಗಾಗಿ ಸಂಶಯ ಗೊಂಡ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಆ ಗುರುತಿನ ಬಗ್ಗೆ ಸಲ್ಲಾಪುರಿ ಪ್ರಶ್ನಿಸಲಾರಂಭಿ ಸಿದರು. ಆದರೆ ಆಕೆ ಗಳಿಗೆಗೊಂದು ಉತ್ತರ ಹೇಳುತ್ತಿದ್ದಾಗ ಅವಳ ಮೇಲೆ ಸಂಶಯ ಹೆಚ್ಚಾಗತೊಡಗಿತು.

ವೆಂಕಟಸ್ವಾಮಿ ಎಳೆದೊಯ್ದದ್ದು ಹುಲಿಯಲ್ಲ,ಪತ್ನಿ: ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರ ಹೋದ ವೆಂಕಟಸ್ವಾಮಿಯನ್ನು ಹುಲಿ ಎಳೆದೊಯ್ದಿರಬಹುದು ಎಂದು ಪೊಲೀಸರಿಗೆ ಹೇಳಿದ್ದ ಪತ್ನಿ ಸಲ್ಲಾಪುರಿಯೇ ತನ್ನ ಪತಿಯ ಮೃತದೇಹವನ್ನು ಮನೆಯಿಂದ ತಿಪ್ಪೆಗುಂಡಿ ವರೆಗೆ ಎಳೆದೊಯ್ದಿದ್ದಳು. ಅದರ ಗುರುತೇ ಇದು ಎಂಬುದು ತೀವ್ರ ವಿಚಾರಣೆ ವೇಳೆ ತಿಳಿದು ಬಂದಿದೆ. ತಿಪ್ಪೇಗುಂಡಿಯನ್ನು ಅಗೆದಾಗ ಸುಮಾರು 2 ಅಡಿ ಆಳದಲ್ಲಿ ವೆಂಕಟಸ್ವಾಮಿಯ ಕೈ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಹುಣ ಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್ ಸಮ್ಮುಖದಲ್ಲಿ ವೆಂಕಟಸ್ವಾಮಿ ದೇಹವನ್ನು ಹೊರ ತೆಗೆದು ಸರ್ಕಾರಿ ವೈದ್ಯರನ್ನು ಸ್ಥಳಕ್ಕೇ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

ಪರಿಹಾರದ ಹಣದಾಸೆಗಾಗಿ ಪತಿಯನ್ನೇ ಮುಗಿಸಿದಳು: ನಂತರ ಪೊಲೀಸರು ಸಲ್ಲಾಪುರಿ ಯನ್ನು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ತನ್ನ ಪತಿ ವೆಂಕಟಸ್ವಾಮಿಯನ್ನು ಹುಲಿ ಕೊಂದು ಹಾಕಿದೆ ಎಂದು ಹೇಳಿದರೆ ಆರಣ್ಯ ಇಲಾಖೆ ಯಿಂದ 15 ಲಕ್ಷ ರೂ. ಪರಿಹಾರ ದೊರೆಯು ತ್ತದೆ ಎಂದು ಪರಿಹಾರದ ಆಸೆಗಾಗಿ ಪತಿಯನ್ನ ಕೊಂದು ಹುಲಿ ಎಳೆದೊಯ್ದಿರಬಹುದು ಎಂದು ಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.

ಪರಿಹಾರದ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಮಾಹಿತಿ ಪಡೆದಿದ್ದಳು: ಕಳೆದ 11 ತಿಂಗಳಿಂದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈಕೆ, ವನ್ಯಮೃಗಗಳಿಗೆ ಮನುಷ್ಯರು ಬಲಿಯಾದರೆ, ಲಕ್ಷಾಂತರ ರೂ. ಪರಿಹಾರ ಸಿಗುತ್ತದೆ ಎಂಬುದನ್ನು ಸಮೀಪದ ಗ್ರಾಮ ಪಂಚಾಯ್ತಿಯಿಂದ ತಿಳಿದು ಕೊಂಡಿದ್ದಳು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.

ಊಟಕ್ಕೆ ವಿಷ: ಪತಿ ವೆಂಕಟಸ್ವಾಮಿಯನ್ನು ಕೊಂದು ತಿಪ್ಪೆಗುಂಡಿಯಲ್ಲಿ ಹೂತು ಹಾಕಲು ನಿರ್ಧಾರ ಮಾಡಿಕೊಂಡಿದ್ದ ಸಲ್ಲಾಪುರಿ, ಸೋಮವಾರ ರಾತ್ರಿ ಊಟದಲ್ಲಿ ಪತಿ ವೆಂಕಟಸ್ವಾಮಿಗೆ ವಿಷ ಹಾಕಿ ಕೊಟ್ಟಿದ್ದಳು. ಆತ ಪ್ರಜ್ಞೆ ತಪ್ಪಿದಾಗ ಆತನ ಖಾಸಗಿ ಅಂಗಾಂಗಕ್ಕೆ ಒದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ. ನಂತರ ತಾನೇ ಮನೆಯಿಂದ ಪತಿಯ ಮೃತದೇಹವನ್ನು ತಿಪ್ಪೆಗುಂಡಿಯ ವರೆಗೆ ಎಳೆದೊಯ್ದು, ಮೂರಾಲ್ಕು ಅಡಿ ಹಳ್ಳ ತೆಗೆದು ಅದರಲ್ಲಿ ದೇಹವನ್ನು ಹೂತುಹಾಕಿದ್ದಳು.

 

ಪೊಲೀಸರ ಮುಂದೆ ಕಟ್ಟುಕತೆ: ಸೋಮವಾರ ರಾತ್ರಿಯೇ ಗಂಡನನ್ನು ತಿಪ್ಪೆಗುಂಡಿಯಲ್ಲಿ ಸಮಾಧಿ ಮಾಡಿದ ಸಲ್ಲಾಪುರಿ, ಪತಿಯನ್ನು ಹುಲಿ ಕೊಂದು ಹಾಕಿದೆ ಎಂಬುದರ ಬಗ್ಗೆ ಕಟ್ಟುಕತೆ ರೂಪಿಸಲು ಒಬ್ಬಳೇ ಕುಳಿತು ಮಂಗಳ ವಾರ ಸಂಜೆವರೆಗೂ ಯೋಜನೆ ರೂಪಿಸಿ ನಂತರ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ಪತಿ ನಾಪತ್ತೆ ದೂರು ನೀಡಿದ್ದಲ್ಲದೇ, ಹೆಚ್ಚುವರಿಯಾಗಿ ಆತನನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಕತೆ ಕಟ್ಟಿದ್ದಾಳೆ.ಆದರೆ ಇವಳ ಕತೆಯನ್ನು ಆರಂಭದಲ್ಲಿ ನಂಬಿದ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ದಿನವಿಡೀ ಕೂಂಬಿಂಗ್ ನಡೆಸಿ, ಬಸವಳಿದಿದ್ದೇ ಆಯ್ತು. ಆದರೆ, ಅವರಿಗೆ ಅಡಿಕೆ ತೋಟಕ್ಕೆ ಯಾವುದೇ ವನ್ಯಮೃಗ ಬಂದಿದ್ದಕ್ಕೆ ಹೆಜ್ಜೆ ಗುರುತು ಗಳು ಸಿಗಲಿಲ್ಲವಾದರೂ, ಈಕೆಯೇ ಗಂಡನ ಶವವನ್ನು ಎಳೆದೊಯ್ದಿದ್ದ ಗುರುತಂತೂ ದೊರೆತು ಸಲ್ಲಾ ಪುರಿಯನ್ನು ಜೈಲಿಗೆ ಕಳುಹಿಸುವಂತಾಯಿತು.
ವಿಷಯ ಬಯಲಾಗುತ್ತಿದ್ದಂತೆಯೇ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸ ರು ಸಲ್ಲಾಪುರಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಎಸ್ಪಿ ವಿಷ್ಣುವರ್ಧನ ನಿರ್ದೇಶನದಂತೆ ಅಡಿಷನಲ್ ಎಸ್ಪಿ ಸಿ.ಮಲ್ಲಿಕ್, ಹುಣಸೂರು ಉಪ ವಿಭಾಗದ ಡಿವೈಎಸ್‌ಪಿ ಗೋಪಾಲ ಕೃಷ್ಣ, ಹುಣಸೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧಾ, ಜಿಲ್ಲಾ ಬೆರಳಚ್ಚು ಘಟಕದ ಇನ್ಸ್‌ಪೆಕ್ಟರ್ ಎಂ.ಆರ್.ಬಾಲಸುಬ್ರಹ್ಮಣ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹೆಚ್.ಆರ್. ಹರೀಶ್, ಹೆಡ್ ಕಾನ್ಸ್ ಟೇಬಲ್ ಹೆಚ್.ಮಧು ಚಂದ್ರ, ಸೀನ್ ಆಫ್ ಕ್ರೈಮ್ ಅಧಿಕಾರಿಗಳಾದ ಆದರ್ಶ ಮತ್ತು ಮೋಹಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>