SSLC exam Archives - Good News 24x7 https://www.goodnews24x7.com/tag/sslc-exam/ Kannada Fri, 02 May 2025 10:43:00 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg SSLC exam Archives - Good News 24x7 https://www.goodnews24x7.com/tag/sslc-exam/ 32 32 ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ; 15 ನೇ ಸ್ಥಾನಕ್ಕೆ ಕುಸಿದ ಮೈಸೂರು. https://www.goodnews24x7.com/sslc-exam-results-mysore-falls-to-15th-position/ Fri, 02 May 2025 10:43:00 +0000 https://www.goodnews24x7.com/?p=3558 ಮೈಸೂರು : ಇಂದು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು 15 ನೇ ಸ್ಥಾನಕ್ಕೆ ಕುಸಿದಿದೆ.           ಈ ಬಾರಿ ಎಸ್ ಎಸ್…

The post ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ; 15 ನೇ ಸ್ಥಾನಕ್ಕೆ ಕುಸಿದ ಮೈಸೂರು. appeared first on Good News 24x7.

]]>

ಮೈಸೂರು : ಇಂದು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು 15 ನೇ ಸ್ಥಾನಕ್ಕೆ ಕುಸಿದಿದೆ.

 

 

 

 

 

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ 68.39 ರೊಂದಿಗೆ ಮೈಸೂರು 15ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 35,264 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 24,116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷ ಮೈಸೂರು ಜಿಲ್ಲೆ 7 ಸ್ಥಾನ ಪಡೆದಿತ್ತು ಈ ಬಾರಿ ದಿಢೀರ್ 15ನೇ ಸ್ಥಾನಕ್ಕೆ ಕುಸಿದಿದೆ. ಮೈಸೂರಿನ ಭಾರತೀಯ ವಿದ್ಯಾಮಂದಿರ ತಾನ್ಯ, ಮರಿಮಲ್ಲಪ್ಪ ಶಾಲೆಯ ಧನುಷ್ 625 ಕ್ಕೆ 625 ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಜವರೇಗೌಡ ಮಾಹಿತಿ ನೀಡಿದರು.

The post ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ; 15 ನೇ ಸ್ಥಾನಕ್ಕೆ ಕುಸಿದ ಮೈಸೂರು. appeared first on Good News 24x7.

]]>
ಬೆಳಗ್ಗೆ SSLC ಪರೀಕ್ಷೆ, ರಾತ್ರಿ ತಂದೆ ಸಾ*ವು ;ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ!….. https://www.goodnews24x7.com/%e0%b2%ac%e0%b3%86%e0%b2%b3%e0%b2%97%e0%b3%8d%e0%b2%97%e0%b3%86-sslc-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf-%e0%b2%a4/ Sat, 22 Mar 2025 09:54:50 +0000 https://www.goodnews24x7.com/?p=2858 ನಿನ್ನೆ ರಾತ್ರಿಯೇ ಏಕಾಏಕಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ ತಂದೆ ನೂರಹಸನ.ತಂದೆಯ ಆಸೆ ಈಡೇರಿಸಲು ದುಃಖದಲ್ಲೂ ನಿರ್ಧಾರ ಮಾಡಿದ ವಿದ್ಯಾರ್ಥಿನಿ.ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು.ತಂದೆ ಸಾವಿನ ದುಃಖದಲ್ಲೂ ಮಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮನಕಲಕುವ ಘಟನೆ ಧಾರವಾಡ ಜಿಲ್ಲೆಯ…

The post ಬೆಳಗ್ಗೆ SSLC ಪರೀಕ್ಷೆ, ರಾತ್ರಿ ತಂದೆ ಸಾ*ವು ;ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ!….. appeared first on Good News 24x7.

]]>

ನಿನ್ನೆ ರಾತ್ರಿಯೇ ಏಕಾಏಕಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ ತಂದೆ ನೂರಹಸನ.ತಂದೆಯ ಆಸೆ ಈಡೇರಿಸಲು ದುಃಖದಲ್ಲೂ ನಿರ್ಧಾರ ಮಾಡಿದ ವಿದ್ಯಾರ್ಥಿನಿ.ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು.ತಂದೆ ಸಾವಿನ ದುಃಖದಲ್ಲೂ ಮಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮನಕಲಕುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಶಬಾನಾ ಪಟಾಸು ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಶಬಾನಾ ಚೆನ್ನಾಗಿ ಓದಬೇಕು ಅನ್ನೋದು ಶಬಾನಾ ತಂದೆ ನೂರಹಸನ ಅವರ ಆಸೆಯಾಗಿತ್ತು. ಆದರೆ ಕಳೆದ ಗುರುವಾರ ರಾತ್ರಿ ಏಕಾಏಕಿ ಹೊಟ್ಟೆ ನೋವು ಬಂದು ಮೃತಪಟ್ಟಿದ್ದಾರೆ.ಶುಕ್ರವಾರ ಬೆಳಗ್ಗೆ ಮಗಳಿಗೆ SSLC ಪರೀಕ್ಷೆ ಇತ್ತು. ಗುರುವಾರ ರಾತ್ರಿ ತಂದೆ ನೂರಹಸನ ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು. ಆದರೆ ಗುರುವಾರ ರಾತ್ರಿಯೇ ವಿದ್ಯಾರ್ಥಿನಿ ತಂದೆ ಪ್ರಾಣ ಬಿಟ್ಟಿದ್ದಾರೆ.ತಂದೆಯ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಶಬಾನಾ ಪಟಾಸು SSLC ಪರೀಕ್ಷೆಗೆ ಗೈರಾಗುತ್ತಿದ್ದರು. ಇದನ್ನು ತಿಳಿದ ಶಿಕ್ಷಕರು ವಿದ್ಯಾರ್ಥಿನಿಯ ಮನ ಒಲಿಸಿದ್ದಾರೆ. ಶಿಕ್ಷಕರ ಮನವಿ, ತಂದೆಯ ಆಸೆ ಈಡೇರಿಸಲು ನಿರ್ಧರಿಸಿದ ಶಬಾನಾ ಪರೀಕ್ಷೆಗೆ ಹಾಜರಾಗಿದ್ದಾರೆ.
ಈ ವಿಷಯ ತಿಳಿದ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಗೆ ವಾಹನ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟಿದೆ. ತಂದೆಯ ಪ್ರೇರಣೆಯಿಂದಲೇ ಶಾಲೆಗೆ ಬರುತ್ತಿರುವುದಾಗಿ ಹೇಳಿರುವ ವಿದ್ಯಾರ್ಥಿನಿ ದುಃಖದಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.

The post ಬೆಳಗ್ಗೆ SSLC ಪರೀಕ್ಷೆ, ರಾತ್ರಿ ತಂದೆ ಸಾ*ವು ;ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ!….. appeared first on Good News 24x7.

]]>