State President Archives - Good News 24x7 https://www.goodnews24x7.com/tag/state-president/ Kannada Wed, 05 Feb 2025 10:07:30 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg State President Archives - Good News 24x7 https://www.goodnews24x7.com/tag/state-president/ 32 32 ರೈತರು ಜಾಗೃತರಾದರೆ ಅಪಾಯ ಕಡಿಮೆ. ಶೋಷಣೆ ಮೆಟ್ಟಿ ನಿಲ್ಲಬಹುದು : ರಾಜ್ಯಾಧ್ಯಕ್ಷ ಶಾಂತಕುಮಾರ್. https://www.goodnews24x7.com/%e0%b2%b0%e0%b3%88%e0%b2%a4%e0%b2%b0%e0%b3%81-%e0%b2%9c%e0%b2%be%e0%b2%97%e0%b3%83%e0%b2%a4%e0%b2%b0%e0%b2%be%e0%b2%a6%e0%b2%b0%e0%b3%86-%e0%b2%85%e0%b2%aa%e0%b2%be%e0%b2%af-%e0%b2%95%e0%b2%a1/ Wed, 05 Feb 2025 10:07:30 +0000 https://www.goodnews24x7.com/?p=2251 ಇಂದು ಕೆರಗಳ್ಳಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಘಟಕ ತೆಂಗಿನ ಗಿಡ ನೆಡುವ ಮೂಲಕ ಉದ್ಘಾಟಿಸಿದ ರಾಜ್ಯಾಧ್ಯಕ್ಷ ರೈತರತ್ನ ಕುರುಬುರ್ ಶಾಂತಕುಮಾರ್ ಮಾತನಾಡುತ್ತ ರೈತ ಕೃಷಿಯಲ್ಲಿ ಜೂಜಾಟ ಆಡುತ್ತಿದ್ದಾನೆ ಪ್ರಕೃತಿ ಮುನಿದಾಗ ಜೂಜಾಟದಲ್ಲಿ ಸೋಲುತ್ತಿದ್ದಾನೆ ಎಂದು ತಿಳಿಸಿದರು. ಕಳೆದ ವರ್ಷ ಶುಂಠಿ…

The post ರೈತರು ಜಾಗೃತರಾದರೆ ಅಪಾಯ ಕಡಿಮೆ. ಶೋಷಣೆ ಮೆಟ್ಟಿ ನಿಲ್ಲಬಹುದು : ರಾಜ್ಯಾಧ್ಯಕ್ಷ ಶಾಂತಕುಮಾರ್. appeared first on Good News 24x7.

]]>

ಇಂದು ಕೆರಗಳ್ಳಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಘಟಕ ತೆಂಗಿನ ಗಿಡ ನೆಡುವ ಮೂಲಕ ಉದ್ಘಾಟಿಸಿದ ರಾಜ್ಯಾಧ್ಯಕ್ಷ ರೈತರತ್ನ ಕುರುಬುರ್ ಶಾಂತಕುಮಾರ್ ಮಾತನಾಡುತ್ತ ರೈತ ಕೃಷಿಯಲ್ಲಿ ಜೂಜಾಟ ಆಡುತ್ತಿದ್ದಾನೆ ಪ್ರಕೃತಿ ಮುನಿದಾಗ ಜೂಜಾಟದಲ್ಲಿ ಸೋಲುತ್ತಿದ್ದಾನೆ ಎಂದು ತಿಳಿಸಿದರು.

ಕಳೆದ ವರ್ಷ ಶುಂಠಿ ಬೆಲೆ 12 ಸಾವಿರ ಇತ್ತು ಈಗ 1ಸಾವಿರ ರೂಗೆ ಇಳಿದಿದೆ. ರೈತರ ಒತ್ತಾಯಕ್ಕೆ ಈಗ ರಾಜ್ಯ ಸರ್ಕಾರ 7,000 ರೂಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಕೇಂದ್ರಕ್ಕೆ ವರದಿ ಸಲ್ಲಿಸುತ್ತಿದೆ ರೈತರು ದಳ್ಳಾಳಿಗೆಗೆ ಮಾರಾಟ ಮಾಡದೆ ಸ್ವಲ್ಪ ದಿನ ಕಾಯುವಂತಾಗಬೇಕು ಇಂದು ಮಧ್ಯವರ್ತಿಗಳು ದಲ್ಲಾಳಿಗಳು ಬಂಡವಾಳ ಶಾಹಿಗಳು. ಭೂ ಮಾಫಿಯಾದವರು ರೈತರನ್ನ ಒಕ್ಕಲಿಬ್ಬಿಸುವ ಕಾರ್ಯದಲ್ಲಿ ಮುಂದಾಗುತ್ತಿದ್ದಾರೆ. ಸರ್ಕಾರದ ಇಬ್ಬಗೆಯ ನೀತಿಗಳು ರೈತರನ್ನ ಸಂಕಷ್ಟಕ್ಕೆ ತಳ್ಳುತ್ತಿವೆ. ತೊಗರಿ ಬೆಳೆಗೆ ಹೆಚ್ಚುವರಿ 500ರೂ ಪ್ರೋತ್ಸಾಹ ಧನ ನೀಡಿದ ರಾಜ್ಯ ಸರ್ಕಾರ ರಾಜ್ಯದಲ್ಲಿ 20 ಲಕ್ಷ ರೈತರು ಭತ್ತ ಬೆಳೆಯುತ್ತಿದ್ದರು ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆಯಿಂದ ಖರೀದಿ ಕೇಂದ್ರಗಳು ಆರಂಭವಾಗದೆ ಹೆಚ್ಚುವರಿ ಪ್ರೋತ್ಸಾದನ ನೀಡದೇ ಇದ್ದ ಕಾರಣ ಭತ್ತ ಬೆಳೆದ ರೈತರು ಎಂ ಎಸ್ ಪಿ ಗಿಂತ ಕಡಿಮೆ ಬೆಲೆಗೆ ಬತ್ತ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಯಿತು. ಇಂತಹ ಇಬ್ಬಂದಿ ನೀತಿಗಳು ರೈತರನ್ನ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ ದೆಹಲಿ ರೈತರ ಹೋರಾಟ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭೂ ಮಾಫಿಯಾದವರು ರೈತರ ಜಮೀನು ಖರೀದಿಸಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಸಂಘಟನೆ ಕಾರ್ಯಕ್ರಮ ರೂಪಿಸುತ್ತದೆ ಎಂದು ತಿಳಿಸಿದರು.
ಕೇರಗಳ್ಳಿ ಘಟಕ ಅಧ್ಯಕ್ಷ ಸತೀಶ್ ರವರು ಮಾತನಾಡಿ ರಾಜ್ಯ ಸರ್ಕಾರ ಹಾಲು ಉತ್ಪಾದಕರ ಪ್ರೂತ್ಸಹ ಧನ 5 ರೂ ಬಿಡುಗಡೆಗೆ ಒತ್ತಾಯಿಸಿದರು. ತಾಲೂಕ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಸಿಎಂ ಸಿದ್ದರಾಮಯ್ಯ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ


ಉಪಾಧ್ಯಕ್ಷ ವಾಜಮಂಗಲ ಮಹದೇವ್. ನೀಲಕಂಠಪ್ಪ. ಕೇರಗಹಳ್ಳಿಘಟಕದ ಗೌರವ ಅಧ್ಯಕ್ಷ ನಾಗರಾಜು.ಶಿವಕುಮಾರ.ಬಾಲು. ವಿಜೇಯೆಂದ್ರ. ಮಹದೇವಸ್ವಾಮಿ ವರಕೂಡ ನಾಗೇಶ. ಮಂಜುನಾಥ. ಉಪಾಧ್ಯಕ್ಷರು ಬಾಲು ಆರ್, ಉಪಾಧ್ಯಕ್ಷರು ಶಿವಕುಮಾರ್. ಬಿ ಸಂದೀಪ್ ಸಿ ಕಾರ್ಯದರ್ಶಿ, ಅಭಿಷೇಕ್ ಎಂ ಖಜಾಂಚಿ, ಮಂಜುನಾಥ್ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಾಮದ ಯಜಮಾನರು ಬಸವರಾಜ್, ಬಸವಗೌಡ,ಶಿವಪ್ಪ, ಮಲ್ಲೇಶ, ಬಸವರಾಜು, ದೊಳೇಗೌಡ್ರು, ನಾಗಣ್ಣ ಮುಂತಾದವರು ಇದ್ದರು.

The post ರೈತರು ಜಾಗೃತರಾದರೆ ಅಪಾಯ ಕಡಿಮೆ. ಶೋಷಣೆ ಮೆಟ್ಟಿ ನಿಲ್ಲಬಹುದು : ರಾಜ್ಯಾಧ್ಯಕ್ಷ ಶಾಂತಕುಮಾರ್. appeared first on Good News 24x7.

]]>