states Archives - Good News 24x7 https://www.goodnews24x7.com/tag/states/ Kannada Sun, 10 Aug 2025 04:38:12 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg states Archives - Good News 24x7 https://www.goodnews24x7.com/tag/states/ 32 32 ಯಲ್ಲಮ್ಮ ದೇವಿ ಮೂಲ ವಿಗ್ರಹಕ್ಕೆ ಜಲ ದಿಗ್ಬಂಧನ. https://www.goodnews24x7.com/water-blockade-for-the-original-idol-of-yallamma-devi/ Sun, 10 Aug 2025 04:38:12 +0000 https://www.goodnews24x7.com/?p=5669 ಬೆಳಗಾವಿ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ತಡರಾತ್ರಿ ಮಳೆಗೆ ಯಲ್ಲಮ್ಮವಾಡಿ ಕೆರೆ ತುಂಬಿ ಸುಕ್ಷೇತ್ರ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ…

The post ಯಲ್ಲಮ್ಮ ದೇವಿ ಮೂಲ ವಿಗ್ರಹಕ್ಕೆ ಜಲ ದಿಗ್ಬಂಧನ. appeared first on Good News 24x7.

]]>

ಬೆಳಗಾವಿ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ತಡರಾತ್ರಿ ಮಳೆಗೆ ಯಲ್ಲಮ್ಮವಾಡಿ ಕೆರೆ ತುಂಬಿ ಸುಕ್ಷೇತ್ರ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಸುಕ್ಷೇತ್ರ ಯಲ್ಲಮ್ಮದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿದೆ. ಹಳ್ಳದ ಪಕ್ಕದಲ್ಲಿ ದೇವಸ್ಥಾನ ಇರುವುದರಿಂದ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಪರಿಣಾಮ ದೇವಸ್ಥಾನ ನೀರಿನಿಂದ ಸುತ್ತುವರೆದಿದೆ. ದೂರದಿಂದಲೇ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ಉಭಯ ರಾಜ್ಯಗಳ ಈ ದೇವಾಲಯಕ್ಕೆ ಭಕ್ತರ ಆಗಮನ ಅಧಿಕ ಇರುವುದರಿಂದ, ಅದರಲ್ಲೂ ಶ್ರಾವಣ ಮಾಸ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ಜಲಾವ್ರತ ಹಿನ್ನೆಲೆ ದೂರದಿಂದಲೇ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಮೂರು ವರ್ಷದಲ್ಲಿ ಈ ವರ್ಷ ಅಪಾರ ಮಳೆಯಾಗಿದ್ದು, ಮೊದಲ ಬಾರಿಗೆ ದೇವಿಯ ವಿಗ್ರಹ ಮುಳುಗಡೆಯಾಗಿದೆ. ಗಡಿನಾಡು ಶಕ್ತಿ ದೇವತೆ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದೆ. ಮುಂಜಾಗ್ರತೆಯಾಗಿ ಐಗಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್​ ಅಳವಡಿಸಿದ್ದಾರೆ.

ನೀರಿನ ಮಧ್ಯದಲ್ಲೂ ಕೂಡ ದೇವಿಗೆ ಪೂಜಾ ಕೈಂಕರ್ಯಗಳು ಹಾಗೂ ಶ್ರಾವಣ ಮಾಸ ಪ್ರಯುಕ್ತ ಪಂಚಾಮೃತ ಅಭಿಷೇಕವನ್ನು ಮುಂದುವರಿಸಲಾಗುವುದೆಂದು ದೇವಸ್ಥಾನದ ಅರ್ಚಕ ರಾಹುಲ್ ಪೂಜಾರಿ ಅವರು  ಮಾಹಿತಿ ನೀಡಿದ್ದಾರೆ.

The post ಯಲ್ಲಮ್ಮ ದೇವಿ ಮೂಲ ವಿಗ್ರಹಕ್ಕೆ ಜಲ ದಿಗ್ಬಂಧನ. appeared first on Good News 24x7.

]]>
ಸಿಎಂ ಬದಲಾವಣೆ ವಿಚಾರ ಮೈಸೂರಿನ ಸಿಎಂ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ. https://www.goodnews24x7.com/cm-change-issue-mlc-yathindra-siddaramaiah-son-of-mysore-cm-states/ Wed, 11 Jun 2025 09:13:27 +0000 https://www.goodnews24x7.com/?p=4308 ಮೈಸೂರು : ಸಿಎಂ ಕುರ್ಚಿಗೆ ಯಾವುದೇ ಗಂಡಾಂತರ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಎಂ.ಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷಗಳ ಕಾಲ…

The post ಸಿಎಂ ಬದಲಾವಣೆ ವಿಚಾರ ಮೈಸೂರಿನ ಸಿಎಂ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ. appeared first on Good News 24x7.

]]>

ಮೈಸೂರು : ಸಿಎಂ ಕುರ್ಚಿಗೆ ಯಾವುದೇ ಗಂಡಾಂತರ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಎಂ.ಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷಗಳ ಕಾಲ ಅವರೇ ಮುಂದುವರಿಯುತ್ತಾರೆ. ಹೈಕಮಾಂಡ್ ಯಾವುದೇ ಗಡುವು ನೀಡಿಲ್ಲ. ಇದರ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ ಎಂದರು.


ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಡಿಮ್ಯಾಂಡ್: ಅಹವಾಲು ಪತ್ರ ಕೊಡಲು ಮುಗಿಬಿದ್ದ ಜನರು ಮೈಸೂರಿನಲ್ಲಿ ಎಂಎಲ್ ಸಿ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಜಿಲ್ಲಾ ಪಂಚಾಯತಿ ಕಚೇರಿಗೆ ಆಗಮಿಸುತ್ತಿದಂತೆ ಅವರ ಸುತ್ತ ಸಾರ್ವಜನಿಕರು ಅಹವಾಲು ಸಲ್ಲಿಸಲು ಸುತ್ತುವರೆದರು.

ಅಭಿವೃದ್ದಿ ಪರಿಶೀಲನಾ ಸಭೆಗಾಗಿ ಡಾ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪಂಚಾಯತ್ ಗೆ ಆಗಮಿಸಿದರು. ಈ ವೇಳೆ ಜನರು ಯತೀಂದ್ರ ಸಿದ್ದರಾಮಯ್ಯರಿಗೆ ಅಹವಾಲು ನೀಡಲು ಮುಗಿಬಿದ್ದರು. ಸಾವಧಾನವಾಗಿಯೇ ಎಲ್ಲರ ಅರ್ಜಿ ಸ್ವೀಕರಿಸಿದ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.

The post ಸಿಎಂ ಬದಲಾವಣೆ ವಿಚಾರ ಮೈಸೂರಿನ ಸಿಎಂ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ. appeared first on Good News 24x7.

]]>