Sudeep Archives - Good News 24x7 https://www.goodnews24x7.com/tag/sudeep/ Kannada Mon, 31 Aug 2026 06:03:33 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Sudeep Archives - Good News 24x7 https://www.goodnews24x7.com/tag/sudeep/ 32 32 ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್! https://www.goodnews24x7.com/bigg-boss-kannada-13-grand-take-off-with-aviation-theme-from-this-sunday/ Mon, 31 Aug 2026 06:03:33 +0000 https://www.goodnews24x7.com/?p=9948 ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸತತ 12 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಮೊದಲ ಸೀಸನ್ ನೆನಪುಗಳು ಯಾವಾಗಲೂ ಅತ್ಯಂತ ಪ್ರಿಯವಾದವು. ಈ…

The post ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್! appeared first on Good News 24x7.

]]>

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸತತ 12 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಮೊದಲ ಸೀಸನ್ ನೆನಪುಗಳು ಯಾವಾಗಲೂ ಅತ್ಯಂತ ಪ್ರಿಯವಾದವು. ಈ ಬಾರಿಯೂ ಅವರೇ ಕಾರ್ಯಕ್ರಮದ ಸಾರಥ್ಯ ವಹಿಸಿದ್ದು, ಶೋಗೆ ಹೊಸ ಮೆರುಗು ನೀಡಲಿದ್ದಾರೆ.

ಈ ಬಾರಿಯ ಸೀಸನ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ‘ಅಗ್ನಿಪರೀಕ್ಷೆ’ ಸುತ್ತಿನಲ್ಲಿ ಗೆದ್ದು ಬಂದ ಮೂವರು ಜನಸಾಮಾನ್ಯರು, ವಿವಿಧ ರಂಗಗಳ ಸೆಲೆಬ್ರಿಟಿಗಳ ಜೊತೆಗೆ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಸಂಪೂರ್ಣವಾಗಿ ‘ಏವಿಯೇಷನ್’ (ವಿಮಾನಯಾನ) ಥೀಮ್ ಹೊಂದಿರುವ ಈ ಸೀಸನ್‌ಗೆ “Flight No. ಬಿಗ್ ಬಾಸ್ 13 Grand Take Offಗೆ Runway Ready!” ಎಂಬ ರೋಚಕ ಶೀರ್ಷಿಕೆ ನೀಡಲಾಗಿದೆ.

ಈ ಭಾನುವಾರ ಸಂಜೆ 7 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೋ ಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭವಾಗಲಿದೆ.

The post ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್! appeared first on Good News 24x7.

]]>
ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌ https://www.goodnews24x7.com/kichchas-daughter-raves-about-yashs-performance-in-toxic-saanvi-sudeep-says-there-is-magic-in-every-frame/ Sun, 30 Aug 2026 12:08:08 +0000 https://www.goodnews24x7.com/?p=9945 ‘ಟಾಕ್ಸಿಕ್‌’ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯ ಹಾಗೂ ವಿಭಿನ್ನ ಆವತಾರಕ್ಕೆ ಸ್ಯಾಂಡಲ್‌ವುಡ್‌ ಮಂದಿ ಫಿದಾ ಆಗಿದ್ದು, ಇದೀಗ ಕಿಚ್ಚ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಯಶ್ ಅವರ ಪರ್ಫಾರ್ಮೆನ್ಸ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಟಾಕ್ಸಿಕ್: ಎ…

The post ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌ appeared first on Good News 24x7.

]]>

‘ಟಾಕ್ಸಿಕ್‌’ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯ ಹಾಗೂ ವಿಭಿನ್ನ ಆವತಾರಕ್ಕೆ ಸ್ಯಾಂಡಲ್‌ವುಡ್‌ ಮಂದಿ ಫಿದಾ ಆಗಿದ್ದು, ಇದೀಗ ಕಿಚ್ಚ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಯಶ್ ಅವರ ಪರ್ಫಾರ್ಮೆನ್ಸ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ರಿಷಬ್‌ ಶೆಟ್ಟಿ, ರಕ್ಷಿತಾ ಪ್ರೇಮ್‌ ಹಾಗೂ ಸ್ವತಃ ಕಿಚ್ಚ ಸುದೀಪ್‌ ಸೇರಿದಂತೆ ಹಲವು ಗಣ್ಯರು ಸಿನಿಮಾದ ಅದ್ಧೂರಿ ಮೇಕಿಂಗ್‌ ಮತ್ತು ಯಶ್‌ ಪಟ್ಟ ಶ್ರಮವನ್ನು ಕೊಂಡಾಡಿದ್ದರು. ಈ ಸಾಲಿಗೆ ಸೇರಿರುವ ಸಾನ್ವಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯಶ್‌ ಅಭಿನಯವನ್ನು ವಿಶೇಷವಾಗಿ ಹೊಗಳಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಸಾನ್ವಿ, ಯಶ್ ಸಾಧನೆಯನ್ನು ‘ಅದ್ಭುತ’ ಎಂಬ ಒಂದೇ ಪದದಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಯಶ್ ಕೇವಲ ಅಭಿನಯಿಸಿಲ್ಲ, ಬದಲಿಗೆ ಸಿನಿಮಾದ ಪ್ರತಿಯೊಂದು ಫ್ರೇಮ್‌ನಲ್ಲೂ ತಮ್ಮದೇ ಆದ ಮ್ಯಾಜಿಕ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಬಂದ ಮೇಲೆಯೂ ಮನಸ್ಸಿನಲ್ಲಿ ಹಾಗೇ ಉಳಿದುಕೊಳ್ಳುವಂತಹ ಅಭಿನಯ ಅವರದ್ದು ಎಂದಿರುವ ಅವರು, ತಾನೊಬ್ಬ ಎಷ್ಟು ಶ್ರೇಷ್ಠ ಹಾಗೂ ಕೌಶಲಪೂರ್ಣ ನಟ ಎಂಬುದನ್ನು ಯಶ್ ವಿಶ್ವಕ್ಕೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವತಃ ಸುದೀಪ್‌ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ, ಅವರ ಪುತ್ರಿ ಸಾನ್ವಿ ಕೂಡ ಯಶ್‌ ಅವರ ಮಾಸ್‌ ಆವತಾರ ಹಾಗೂ ನಟನೆಯನ್ನು ಕೊಂಡಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

The post ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌ appeared first on Good News 24x7.

]]>
ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ https://www.goodnews24x7.com/sudeep-was-the-last-choice-for-the-film-eega-rajamouli/ Fri, 03 Jul 2026 06:37:27 +0000 https://www.goodnews24x7.com/?p=9753 ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಸೂಪರ್ ಹಿಟ್ ‘ಈಗ’ ಸಿನಿಮಾ ಇತ್ತೀಚೆಗೆ ವಿದೇಶದ ವಿಶೇಷ ಪ್ರದರ್ಶನದಲ್ಲೂ ಧೂಳೆಬ್ಬಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ, ‘ಈಗ’ ಚಿತ್ರದ ಜಟಿಲ ಖಳನಾಯಕನ ಪಾತ್ರಕ್ಕೆ ಸುದೀಪ್ ಅವರನ್ನೇ…

The post ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ appeared first on Good News 24x7.

]]>

ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಸೂಪರ್ ಹಿಟ್ ‘ಈಗ’ ಸಿನಿಮಾ ಇತ್ತೀಚೆಗೆ ವಿದೇಶದ ವಿಶೇಷ ಪ್ರದರ್ಶನದಲ್ಲೂ ಧೂಳೆಬ್ಬಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ, ‘ಈಗ’ ಚಿತ್ರದ ಜಟಿಲ ಖಳನಾಯಕನ ಪಾತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣ ಹಾಗೂ ಅಮಿತಾಭ್ ಬಚ್ಚನ್ ಎದುರು ಅವರ ನಟನೆ ನೋಡಿ ಬೆರಗಾದ ಕ್ಷಣವನ್ನು ರಾಜಮೌಳಿ ಬಿಚ್ಚಿಟ್ಟಿದ್ದಾರೆ.

ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಾಂಬಿನೇಶನ್‌ನ ‘ಈಗ’ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಸುದೀಪ್ ಅವರ ಅಪ್ರತಿಮ ಖಳನಾಯಕನ ನಟನೆಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ವಿದೇಶದಲ್ಲಿ ನಡೆದಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ಸಂದರ್ಶನದ ವಿಡಿಯೋವೊಂದರಲ್ಲಿ ರಾಜಮೌಳಿ ಅವರು, ‘ಈಗ’ ಚಿತ್ರಕ್ಕೆ ಸುದೀಪ್ ಅವರನ್ನೇ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣವನ್ನು ಬಹಿರಂಗಪಡಿಸಿದ್ದರು.

‘ಚಿತ್ರದಲ್ಲಿ ಅಷ್ಟು ಭಯಾನಕ ವಿಲನ್ ಆಗಿರುವ ವ್ಯಕ್ತಿ, ತನ್ನ ಮೊದಲ ಡೈಲಾಗ್‌ನಲ್ಲೇ ‘ಪ್ರತಿ ವಿಷಯಕ್ಕೂ ವೈಲೆನ್ಸ್ ಯಾಕೆ?’ ಅಂತಾನೆ. ಆಮೇಲೆ ಆತ ತುಂಬಾ ವೈಲೆಂಟ್ ಆಗಿ ಬದಲಾಗುತ್ತಾನೆ. ಮಧ್ಯದಲ್ಲಿ ಕಾಮಿಡಿ ಮಾಡುತ್ತಾನೆ, ರೋಮ್ಯಾಂಟಿಕ್ ಆಗುತ್ತಾನೆ, ನಂತರ ಹುಚ್ಚನಂತೆ ಆಡುತ್ತಾನೆ. ಇಷ್ಟೂ ಶೇಡ್‌ಗಳನ್ನು ನಟನೆಯಲ್ಲಿ ತೋರಿಸುವುದು ಕತ್ತಿಯ ಮೇಲಿನ ನಡಿಗೆಯಿದ್ದಂತೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದು ಓವರ್ ಆಕ್ಟಿಂಗ್ ಎನಿಸಿಕೊಳ್ಳುತ್ತದೆ’ ಎಂದು ರಾಜಮೌಳಿ ಆ ಪಾತ್ರದ ಗಾಂಭೀರ್ಯತೆಯನ್ನು ವಿವರಿಸಿದ್ದರು.

ಅಮಿತಾಭ್ ಬಚ್ಚನ್ ಮುಂದೆ ಸುದೀಪ್ ನಟನೆ ನೋಡಿ ಬೆರಗಾಗಿದ್ದರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರನ್’ ಚಿತ್ರದಲ್ಲಿ ಸುದೀಪ್ ಅವರ ನಟನೆಯನ್ನು ನೋಡಿ ತಾನು ಫುಲ್ ಫ್ಲಾಟ್ ಆಗಿದ್ದಾಗಿ ರಾಜಮೌಳಿ ನೆನಪಿಸಿಕೊಂಡಿದ್ದಾರೆ. ‘ರನ್ ಸಿನಿಮಾದಲ್ಲಿ ಸುದೀಪ್ ಅವರ ಸೂಕ್ಷ್ಮ ನಟನೆ ಹಾಗೂ ಮ್ಯಾನರಿಸಂ ಅದ್ಭುತವಾಗಿತ್ತು. ಅದರಲ್ಲೂ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರ ಮುಂದೆಯೇ ಅಷ್ಟು ಭರ್ಜರಿಯಾಗಿ ನಟಿಸುವುದನ್ನು ಕಂಡು, ಸುದೀಪ್ ನಿಜಕ್ಕೂ ಒಬ್ಬ ಗ್ರೇಟ್ ಆಕ್ಟರ್ ಎಂದು ನನಗೆ ಅನಿಸಿತ್ತು. ಹಾಗಾಗಿ ‘ಈಗ’ ಚಿತ್ರದ ಕ್ಯಾರೆಕ್ಟರ್ ರೆಡಿಯಾದ ತಕ್ಷಣ ನಮಗೆ ಮೊದಲು ನೆನಪಾಗಿದ್ದೇ ಸುದೀಪ್’ ಎಂದಿದ್ದರು ರಾಜಮೌಳಿ

ಸುದೀಪ್ ಅವರೇ ಫಸ್ಟ್… ಅವರೇ ಲಾಸ್ಟ್
ಸಂದರ್ಶನದ ಕೊನೆಯಲ್ಲಿ ನಿರೂಪಕರು, ‘ಹಾಗಾದರೆ ಈ ಪಾತ್ರಕ್ಕೆ ನಿಮ್ಮ ಮೊದಲ ಆಯ್ಕೆ ಸುದೀಪ್ ಅವರೇನಾ?’ ಎಂದು ಕೇಳಿದಾಗ, ರಾಜಮೌಳಿ ಅವರು ನಗುತ್ತಾ, ‘ಫಸ್ಟ್ ಚಾಯ್ಸ್ ಕೂಡ ಅವರೇ, ಲಾಸ್ಟ್ ಚಾಯ್ಸ್ ಕೂಡ ಅವರೇ! ಫೈನಲ್ ಆಗಿ ಎಲ್ಲವೂ ಅವರೇ ಆಗಿದ್ದರು’ ಎಂದು ಹೇಳುವ ಮೂಲಕ ಕಿಚ್ಚನ ಮೇಲಿರುವ ತಮ್ಮ ಗೌರವ ಹಾಗೂ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.

The post ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ appeared first on Good News 24x7.

]]>
ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ https://www.goodnews24x7.com/sudeep-gave-an-example-of-sangeeta-and-drone-to-ashwini-who-lost-the-task/ Sun, 23 Nov 2025 08:16:15 +0000 https://www.goodnews24x7.com/?p=8259 Bigg Boss: 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್…

The post ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ appeared first on Good News 24x7.

]]>

Bigg Boss: 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಟಾಸ್ಕ್​ಗಳು ನಡೆಯುವಾಗ ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಆಟವನ್ನು ಗೆಲ್ಲಬೇಕು ಎಂಬ ಭರದಲ್ಲಿ ಸಾಕಷ್ಟು ತಪ್ಪುಗಳು ನಡೆದು ಹೋಗುತ್ತವೆ. ಈ ವಾರವೂ ಕೆಲವು ತಪ್ಪುಗಳು ನಡೆದವು. ಅದನ್ನು ಸುದೀಪ್ ತಿದ್ದಿದ್ದಾರೆ. ಇನ್ನು, ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಅಶ್ವಿನಿ ಗೌಡ ಅವರಿಗೆ ಸುದೀಪ್ ಪಾಠ ಮಾಡಿದರು. 10ನೇ ಸೀಸನ್​ನ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಉದಾಹರಣೆಯನ್ನು ನೀಡಿದರು.

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ ರೇಸ್​ ಅಲ್ಲಿ ಕುಳಿತ ಅಶ್ವಿನಿ ಹಾಗೂ ಅಭಿಷೇಕ್ ಅವರನ್ನು ಡಿಸ್ಟ್ರಾಕ್ಟ್ ಮಾಡಬೇಕು. ಗಿಲ್ಲಿ ಅವರು ಅಶ್ವಿನಿ ಅವರ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ಸು ಆಗಿದೆ ಎಂದೇ ಹೇಳಿದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಗಿಲ್ಲಿ ಮಾತು ಕೇಳುತ್ತಾ ಕೇಳುತ್ತಾ ಅವರು ತಾವು 12 ನಿಮಿಷಕ್ಕೆ ಬೆಲ್ ಹೊಡೆಯಬೇಕು ಎಂಬುದನ್ನು ಮರೆತಿದ್ದರು. ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಳ್ಳಲು ಬಂದರು. ‘ಗಿಲ್ಲಿ ಮನಸ್ಸಲ್ಲಿ ಎಷ್ಟು ಕೆಟ್ಟ ಅಂಶಗಳು ಇವೆ ಎಂಬುದನ್ನು ನೋಡಬೇಕಿತ್ತು’ ಎಂದು ಅಶ್ವಿನಿ ಹೇಳಿದರು. ಇದನ್ನು ಸುದೀಪ್ ಒಪ್ಪಲಿಲ್ಲ. ‘10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಟಾಸ್ಕ್ ಆಡುವಾಗ ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಆಸ್ಪತ್ರೆಗೆ ಕೂಡ ಹೋಗಬೇಕಾಯಿತು. ಅಲ್ಲಿ ಆಟ ಆಡಿ ಗೆಲ್ಲೋದಷ್ಟೇ ಮುಖ್ಯ. ಹಾಗೆ ನೋಡಿದರೆ ಗಿಲ್ಲಿ-ಕಾವ್ಯಾ ಗೆದ್ದರು’ ಎಂದು ಹೇಳಿದರು.

‘ನೀವು ಟ್ರಿಗರ್ ಆಗದೆ 12 ನಿಮಿಷದ ಲೆಕ್ಕಾಚಾರಕ್ಕೆ ಬೆಲ್ ಹೊಡೆದಿದ್ದರೆ ಮೊದಲ ಮಹಿಳಾ ಕ್ಯಾಪ್ಟನ್ ಆಗುತ್ತಿದ್ದಿರಿ ಅಲ್ಲವೇ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆದರೂ ಅಶ್ವಿನಿ ಅವರು ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಲು ಬಂದರು. 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

 

The post ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ appeared first on Good News 24x7.

]]>
ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ https://www.goodnews24x7.com/sudeep-asks-ashwini-directly-who-are-you-to-protect-her-honor/ Sun, 23 Nov 2025 06:43:44 +0000 https://www.goodnews24x7.com/?p=8250 Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು.…

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು. ಇದೇ ವಿಷಯದ ಬಗ್ಗೆ ಸುದೀಪ್, ಅಶ್ವಿನಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​​ಬಾಸ್ (Bigg Boss) ಸ್ಪರ್ಧಿ ಅಶ್ವಿನಿ ಅವರ ನಟಿ ಆಗಿರುವ ಜೊತೆಗೆ ಕನ್ನಡಪರ ಹೋರಾಟಗಾರ್ತಿಯೂ ಹೌದು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಪರ ಸಂಘಟನೆಗಳ ಸಕ್ರಿಯ ಸದಸ್ಯೆ ಆಗಿರುವ ಅಶ್ವಿನಿ ಅವರು ಸಾಕಷ್ಟು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ಆಗುವ ಕಾರ್ಯವನ್ನು ಮಾಡಿದ್ದಾರಂತೆ. ಬಿಗ್​​ಬಾಸ್ ಮನೆಯಲ್ಲಿಯೂ ಸಹ ತಮ್ಮ ಹೋರಾಟದ ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಇರುತ್ತಾರೆ. ಅದರಲ್ಲೂ ಕೆಲವೊಮ್ಮೆ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ ಅವರು ಬೇರೆಯವರ ಪರವಾಗಿ ದನಿ ಎತ್ತುವುದುಂಟು. ಆದರೆ ಇದೇ ಅವರಿಗೆ ಮುಳುವಾಗಿದೆ.

ಅಶ್ವಿನಿ ಅವರು ಬಿಗ್​​ಬಾಸ್ ಮನೆಯಲ್ಲಿ ಮಹಿಳೆಯರ ಪರವಾಗಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅದರಲ್ಲೂ ಗಿಲ್ಲಿ, ರಘು ಅವರೊಟ್ಟಿಗೆ ಜಗಳವಾದಾಗ ಮಹಿಳೆಗೆ ನೀನು ಹಾಗೆ ಮಾತನಾಡಬೇಡ, ಹೆಣ್ಣುಮಕ್ಕಳಿಗೆ ಎಂದಿಗೂ ಹಾಗೆ ಅನ್ನಬೇಡ, ಅವರ ಗೌರವಕ್ಕೆ ಧಕ್ಕೆ ತರಬೇಡ ಎಂದೆಲ್ಲ ಜಗಳದ ಮಧ್ಯೆ ವಾಕ್ಯಗಳನ್ನು ಬಳಸುತ್ತಿರುತ್ತಾರೆ. ಇಂದು ಸುದೀಪ್ ಅವರು ಈ ಬಗ್ಗೆ ಅಶ್ವಿನಿ ಅವರಿಗೆ ಸ್ಪಷ್ಟವಾಗಿ ಒಂದು ಕ್ಲಾಸ್ ತೆಗೆದುಕೊಂಡರು ಮತ್ತು ಬಿಗ್​​ಬಾಸ್ ಮನೆಯಲ್ಲಿ ಮಹಿಳಾ ಕಾರ್ಡ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಬಿಗ್​​ಬಾಸ್ ಮನೆಯ ಮಹಿಳೆಯರಿಗೆ ಎಚ್ಚರಿಕೆ ನೀಡಿದರು.

‘ಅಶ್ವಿನಿ ಅವರೇ ಬಿಗ್​​ಬಾಸ್ ಮನೆಯ ಮಹಿಳೆಯರ ಮಾನ, ಗೌರವ ಕಾಪಾಡುವ ನೀವು ಗುತ್ತಿಗೆ ನೀವು ಪಡೆದಿದ್ದೀರ? ಏಕೆ ಅವರ ಹಿತವನ್ನು ಅವರು ಕಾಪಾಡಿಕೊಳ್ಳುವಷ್ಟು ಧೈರ್ಯ, ಶಕ್ತಿ ಬಿಗ್​​ಬಾಸ್ ಮನೆಯಲ್ಲಿ ಬೇರೆ ಮಹಿಳೆಯರಿಗೆ ಇಲ್ಲವಾ? ಅಥವಾ ಅವರೇ ಅವರ ಗೌರವ, ಮರ್ಯಾದೆಗಳನ್ನು ಕಾಪಾಡುವಂತೆ ನಿಮ್ಮ ಬಳಿ ಕೇಳಿಕೊಂಡಿದ್ದಾರಾ?’ ಎಂದು ಪ್ರಶ್ನೆ ಮಾಡಿದರು. ಅದೇ ಪ್ರಶ್ನೆಯನ್ನು ಮನೆಯ ಇತರೆ ಮಹಿಳಾ ಸದಸ್ಯರಿಗೂ ಮಾಡಿದ ಸುದೀಪ್, ‘ನಿಮ್ಮ ಮರ್ಯಾದೆಗಳನ್ನು ನೀವುಗಳು ಕಾಪಾಡಿಕೊಳ್ಳದಷ್ಟು ದುರ್ಬಲರಾ ನೀವು? ಎಂದು ಕೇಳಿದರು.

ಮಾತೆತ್ತಿದರೆ ‘ಯಾವ ಹೆಣ್ಣಿಗೂ ಹೀಗೆ ಮಾಡಬೇಡಿ’, ‘ಹೆಣ್ಣಿಗೆ ಗೌರವ ಕೊಡಿ’ ಎನ್ನುತ್ತೀರಿ. ಹೆಣ್ಣಿಗೆ ಈ ಮನೆಯಲ್ಲಿ ಎಂದೂ ಗೌರವ ಕಡಿಮೆ ಆಗಿಲ್ಲ. ಹೆಣ್ಣುಮಕ್ಕಳಿಗೆ ಅವಮಾನ ಆಗದಂತೆ ನಾವು ಕಾವಲು ಕಾಯುತ್ತಿದ್ದೇವೆ. ಎಲ್ಲಿಯಾದರೂ ಸಣ್ಣ ತಪ್ಪು ನಡೆದರೂ ಸಹ ನಾವು ಅದಕ್ಕೆ ಶೀಘ್ರವೇ ಆಕ್ಷನ್ ತೆಗೆದುಕೊಳ್ಳುತ್ತೇವೆ. ಅಷ್ಟು ಮಾತ್ರವೇ ಅಲ್ಲ, ಯಾರಾದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ವರ್ತಿಸಿದರೆ, ಕೆಟ್ಟ ಉದ್ದೇಶದಿಂದ ಮಾತನಾಡಿದರೆ, ಮುಟ್ಟಿದರೆ ಅದು ಮೊದಲಿಗೆ ಗೊತ್ತಾಗುವುದು ಆ ಮಹಿಳೆಗೆ. ಹಾಗೇನಾದರೂ ಆಗಿದ್ದರೆ ಕೂಡಲೇ ಹೇಳಿ, ಈಗಲೇ ಕ್ರಮ ಕೈಗೊಳ್ಳೋಣ. ನೀವುಗಳು ಹೀಗೆ ಮಾತನಾಡುವುದರಿಂದ ಮನೆಯಲ್ಲಿರುವ ಗಂಡಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ’ ಎಂದರು ಸುದೀಪ್.

‘ಈ ಮನೆಯಲ್ಲಿ ಯಾರೂ ವುಮೆನ್ ಕಾರ್ಡ್ ಪ್ಲೇ ಮಾಡಬೇಡಿ. ಅದು ಕೆಟ್ಟದಾಗಿ ಕಾಣುತ್ತದೆ. ಅಲ್ಲದೆ ನಿಮ್ಮ ಗೌರವ, ಮರ್ಯಾದೆಗಳನ್ನು ನೀವೇ ಕಾಪಾಡಿಕೊಳ್ಳಿ, ಅವುಗಳನ್ನು ಕಾಪಾಡುವ ಹೊಣೆಯನ್ನು ಬೇರೆ ಸ್ಪರ್ಧಿಗಳಿಗೆ ಕೊಡಬೇಡಿ. ಯಾಕೆ ನೀವು ಅಷ್ಟೋಂದು ವೀಕಾ? ನಿಮಗೆ ಶಕ್ತಿ, ಧೈರ್ಯ ಇಲ್ಲವಾ’ ಎಂದು ಸುದೀಪ್ ಮಹಿಳಾ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದರು.

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>
ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ https://www.goodnews24x7.com/kiccha-sudeep-takes-a-class-for-gilli-rakshita/ Sun, 16 Nov 2025 06:43:49 +0000 https://www.goodnews24x7.com/?p=8179 ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ…

The post ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ appeared first on Good News 24x7.

]]>

ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ.

ಗಿಲ್ಲಿ ಈ ವಾರದ ಟಾಸ್ಕ್‌ಗಳಲ್ಲಿ ಸೇಫ್‌ ಟೀಂನಲ್ಲಿದ್ದರೆ, ರಕ್ಷಿತಾ ನಾಮಿನೇಟೆಡ್‌ ಟೀಂನಲ್ಲಿದ್ದರು. ಆದರೆ ಯಾವಾಗ ನಾಮಿನೇಟೆಡ್‌ ಟೀಂ ವಿನ್‌ ಆಗಿ ತಮ್ಮ ಟೀಂನಿಂದ ಸೇಫ್‌ ಟೀಂಗೆ ಒಬ್ಬರನ್ನು ಕಳುಹಿಸಬೇಕು ಅಲ್ಲಿಂದ ಒಬ್ಬರನ್ನು ತಮ್ಮ ಟೀಂಗೆ ಕರೆಸಿಕೊಳ್ಳಬೇಕು ಎನ್ನುವ ಪ್ರಶ್ನೆ ಬಂದಿತ್ತೋ ಆಗ ರಕ್ಷಿತಾ ತಮ್ಮ ಟೀಂನ ನಿರ್ಧಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಇದೇ ವೇಳೆ ಗಿಲ್ಲಿ ಕೂಡ ರಕ್ಷಿತಾ ತಮ್ಮ ವಂಶದ ಕುಡಿ ಹಾಗೆ ಸರಳವಾಗಿ ಸೋಲಲ್ಲ ಎಂದು ಹೇಳಿದ್ದರು.

ಇದು ನಾಮಿನೇಟೆಡ್‌ ಟೀಂನವರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇನ್ನೊಂದು ಟಾಸ್ಕ್‌ನ ಆರಂಭಕ್ಕೂ ಮೊದಲೇ ಗಿಲ್ಲಿ ರಕ್ಷಿತಾ ಕಿವಿಯಲ್ಲಿ ಏನೋ ಹೇಳಿದ್ದು ಕೂಡ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಇದನ್ನೇ ಇಟ್ಟುಕೊಂಡು ಸುದೀಪ್‌ ಶನಿವಾರದ ಎಪಿಸೋಡ್‌ನಲ್ಲಿ ಗಿಲ್ಲಿ ಹಾಗೂ ರಕ್ಷಿತಾಗೆ ಕ್ಲಾಸ್‌ ತಗೊಂಡಿದ್ದಾರೆ.

ಅವರ ನಡವಳಿಕೆಯನ್ನು ಸಮರ್ಥಿಸಿಕೊಳ್ಳೋಕೆ ಹೇಳಿದ್ದಾರೆ. ಅಲ್ಲದೇ ಇವರಿಬ್ಬರ ಈ ನಡವಳಿಕೆ ಒಂದು ಟೀಂ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನೂ ಹೇಳಿದ್ದಾರೆ. ಇಬ್ಬರಿಗೂ ಸರಿಯಾಗೇ ಕ್ಲಾಸ್‌ ತಗೊಂಡಿದ್ದು, ಇಲ್ಲಿವರೆಗೂ ಇನೋಸೆಂಟ್‌ ತರ ಕಾಣಿಸುತ್ತಿದ್ದ ರಕ್ಷಿತಾ ಮೊದಲ ಬಾರಿ ತಾವೇ ಮಾಡಿದ್ದ ಗುಂಡಿಗೆ ಬಿದ್ದ ಹಾಗೆ ಆಗಿದ್ದಾರೆ. ಇನ್ನಾದ್ರೂ ತಪ್ಪನ್ನು ಅರಿತುಕೊಂಡು ಇವರಿಬ್ಬರು ತಿದ್ದಿಕೊಳ್ತಾರಾ? ಮುಂದಿನ ದಿನಗಳಲ್ಲಿ ನೋಡಬೇಕಷ್ಟೆ.

 

The post ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ appeared first on Good News 24x7.

]]>
ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? https://www.goodnews24x7.com/bigg-boss-contestant-rakshita-is-facing-legal-trouble-did-rakshita-do-wrong-by-speaking-against-ashwini-gowda/ Sun, 02 Nov 2025 11:54:42 +0000 https://www.goodnews24x7.com/?p=8009 ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ…

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>

ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ.

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಕುಶಲ ಕಲಾ ವೃಂದದಿಂದ ಕಂಪ್ಲೆಂಟ್ ಕೊಡಲು ನಿರ್ಧಾರ ಮಾಡಿದೆ. ಅಶ್ವಿನಿ ಗೌಡ ವಾರದ ಕಥೆಯಲ್ಲಿ ಸುದೀಪ್ ಎದುರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು.

ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ಜಗಳ ಆಡುತ್ತಿದ್ದರು. ಜೋರಾಗಿ ಕಿತ್ತಾಡುವಾಗ ಕಾವ್ಯ ಪರ ಬ್ಯಾಟ್ ಬೀಸಲು ರಕ್ಷಿತಾ ಶೆಟ್ಟಿ ಬಂದಿದ್ದಾರೆ. ಆಗ ರಕ್ಷಿತಾ ಶೆಟ್ಟಿ ನಿಮ್ಮ ಧಾರಾವಾಹಿಯನ್ನು ಹೊರಗೆ ಮಾಡಿ. ಬಿಗ್​ಬಾಸ್ ಮನೆಯಲ್ಲಿ ಅಲ್ಲ ಎಂದು ಕೂಗಿದ್ದಾರೆ. ಅದಕ್ಕೆ ಅಶ್ವಿನಿ ಗೌಡ, ಬೆಟ್ಟು ಮಾಡುತ್ತ ಕಲಾವಿದರಿಗೆ ಅವಮಾನ ಮಾಡಬೇಡ ಎಂದು ರಕ್ಷಿತಾ ಕಡೆ ತಿರುಗಿದ್ದಾರೆ. ನಿಂಗೆ ಅದ್ರಲ್ಲೇ ಹೊಡೀತಾರೆ ಹುಷಾರ್ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಗೌಡ, ಮಾಡ್ತೀನಿ, ಮಾಡ್ತೀನಿ ಎಂದು ಜೋರಾಗಿ ಕೂಗಿದ್ದಾರೆ.

ಈ ವಿಚಾರದ ಬಗ್ಗೆ ಕಾವ್ಯ ಶೈವ ಸುದೀಪ್ ಎದುರು ಸ್ಪಷ್ಟನೆ ನೀಡಿದ್ದಾರೆ. ನಾನು ಜಗಳ ಆಡಬೇಕಾದರೆ ರಕ್ಷಿತಾ ಬಂದಿದ್ದು ನಿಜ. ಇದು ಸೀರಿಯಲ್ ಅಲ್ಲ, ನಾಟಕವಾಡಬೇಡಿ ಎಂಬ ಉದ್ದೇಶದಲ್ಲಿ ರಕ್ಷಿತಾ ಹೇಳಿದ್ದಾರೆ. ಆದರೆ ಅಶ್ವಿನಿ ಅವರು ಆ ಸ್ಟೇಟ್​ಮೆಂಟ್ ಅನ್ನು ತಿರುಚಿರೋದನ್ನು ಕಣ್ಣಾರೆ ನೋಡಿದೆ. ಕಲಾವಿದರ ಬಗ್ಗೆ ಕಮ್ಮಿ ಮಾತಾಡ್ತಾ ಇದ್ದೀಯಾ.. ಕಲಾವಿದರನ್ನ ಕೆಳಗೆ ಇಟ್ಟು ಮಾತಾಡ್ತೀಯಾ ಎಂದು ಹೇಳಿದರು. ಆದರೆ ರಕ್ಷಿತಾ ಮಾತಾಡಿದ್ದ ಉದ್ದೇಶವೇ ಬೇರೆ ಆಗಿತ್ತು ಎಂದು ಕಾವ್ಯ ಹೇಳಿದ್ದಾರೆ. ಇದೀಗ ಅಶ್ವಿನಿ ಗೌಡ ಮಾಡಿದ ಆರೋಪಕ್ಕೆ ಸಂಬಂಧಿಸಿ ಕುಶಲ ಕಲಾ ವೃಂದ ರಕ್ಷಿತಾ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>
ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! https://www.goodnews24x7.com/bigbas-sisan12-arambha-yavaga-dina%e1%b9%85ka-rivil-ma%e1%b8%8dida-kicca-biggbosskicchasudeepsudeepsandalwoodmysorebaadshah-52ne-vasantakke-kali%e1%b9%ad%e1%b9%adiruva-sudip-avaru-ondina-mod/ Tue, 02 Sep 2025 06:08:03 +0000 https://www.goodnews24x7.com/?p=7258 52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.…

The post ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! appeared first on Good News 24x7.

]]>

52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.

ಸ್ಯಾಂಡಲ್​ವುಡ್​ ಬಾದಷಾ, ವೀರ ಮದಕರಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮಾಚರಣೆ. 52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಕಿಚ್ಚ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.

ಕನ್ನಡದ ಬಿಗ್​ಬಾಸ್- 12 ಯಾವಾಗ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಇದ್ದಾರೆ. ಈ ಸೀಸನ್ ಯಾವಾಗ ಶುರುವಾಗುತ್ತೆಂದು, ಈ ಬಗ್ಗೆ ಅಪ್​ಡೇಟ್ಸ್​ ಯಾವಾಗ ಸಿಗುತ್ತವೆ ಎನ್ನುವುದು ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗುತ್ತಿದೆ. ಸೀಸನ್​ 12ಕ್ಕೆ ಸುದೀಪ್ ನಿರೂಪಣೆ ಮಾಡಲ್ಲ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಸುದೀಪ್ ಅವರೇ ನಿರೂಪಣೆ ಮಾಡೋದು ಕನ್​ಫರ್ಮ್ ಆಗೋಗಿದೆ. ಜೊತೆಗೆ ಮೊನ್ನೆ ಮೊನ್ನೆ ಬಿಗ್​ಬಾಸ್​- 12ರ ಲೋಗೋ ಕೂಡ ರಿಲೀಸ್ ಮಾಡಲಾಗಿದೆ.

ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ಬರ್ತ್​ಡೇ ಸೆಲೆಬ್ರೆಷನ್​ ಆಯೋಜನೆ ಮಾಡಲಾಗಿತ್ತು. ವಿಶ್ ಮಾಡಲು ಆಗಮಿಸಿದ್ದ ಕಿಚ್ಚ ಇದೇ ವೇಳೆ ಬಿಗ್​​ಬಾಸ್​ ಬಗ್ಗೆ ದೊಡ್ಡ ಅಪ್​ಡೇಟ್ ಕೊಟ್ಟಿದ್ದಾರೆ. ಕಿಚ್ಚನನ್ನ ನೋಡುತ್ತಿದ್ದಂತೆ ಫ್ಯಾನ್ಸ್​ ಸಂತಸ ದುಪ್ಪಟ್ಟು ಆಗಿತ್ತು. ಇದೇ ವೇಳೆ ಅಭಿಮಾನಿಗಳಿಗೆ ಸಂದೇಶ ಕೊಟ್ಟ ಸುದೀಪ್ ಅತಿ ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.

ಇದೇ ಸೆಪ್ಟೆಂಬರ್ 28 ರಿಂದ ಟಿವಿಯಲ್ಲಿ ನಿಮಗೆ ಸಿಗುತ್ತೇನೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದರ ಅರ್ಥ ಬಿಗ್​ಬಾಸ್​- 12 ಇದೇ ಸೆಪ್ಟೆಂಬರ್ 28 ರಿಂದ ಆರಂಭವಾಗುವುದು ಪಕ್ಕಾ ಆದಂತೆ ಆಗಿದೆ. ಸುದೀಪ್ ಅವರೇ ಬಿಗ್​ಬಾಸ್​- 12 ಆರಂಭದ ದಿನಾಂಕವನ್ನು ರಿವೀಲ್ ಮಾಡಿದಂತೆ ಆಗಿದೆ. ಇನ್ನು ಕೇವಲ 26 ದಿನಗಳ ಬಳಿಕ ಕಿರುತೆರೆ ಮೇಲೆ ಕಿಚ್ಚ ಸುದೀಪ್​ ಅವರನ್ನು ನೋಡಬಹುದು.

ಇನ್ನು ಕಳೆದ ಸೀಸನ್​​, ಬಿಗ್​ಬಾಸ್​- 11ರಲ್ಲಿ ಹಳ್ಳಿ ಹುಡುಗ ಹನುಮಂತು ಮೊದಲ ಸ್ಥಾನದಲ್ಲಿ ಪ್ರಶಸ್ತಿ ಪಡೆದುಕೊಂಡರೇ, ತ್ರಿವಿಕ್ರಮ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಮನೆಯಲ್ಲಿ ಸಾಕಷ್ಟು ಟ್ವಿಸ್ಟ್​ ಟರ್ನ್ಸ್​, ಜಗಳ, ನಾಮಿನೇಷನ್, ಎಲಿಮಿನೆಷನ್, ಕಿಚ್ಚನ ಚಪ್ಪಾಳೆ, ಮನೆಯಲ್ಲಿನ ಆಟ ಎಲ್ಲವೂ ವೀಕ್ಷಕರನ್ನು ರಜಿಸಿದ್ದವು. ಅದರಂತೆ ಈ ಬಾರಿಯೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಂಟೇಸ್ಟೆಂಟ್​ಗಳು ಯಾರು ಯಾರು ಎನ್ನುವುದು ಇನ್ನು ನಿಗೂಢವಾಗಿದೆ.

The post ಬಿಗ್​ಬಾಸ್- ಸೀಸನ್12 ರ ಆರಂಭ ಯಾವಾಗ ? ದಿನಾಂಕ ರಿವೀಲ್ ಮಾಡಿದ ಕಿಚ್ಚ ! appeared first on Good News 24x7.

]]>
ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! https://www.goodnews24x7.com/new-movie-teaser-released-for-sudeeps-birthday/ Tue, 02 Sep 2025 05:50:42 +0000 https://www.goodnews24x7.com/?p=7254 ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ. ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್​ಗೆ ಇಂದು ಹುಟ್ಟು ಹಬ್ಬದ…

The post ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! appeared first on Good News 24x7.

]]>

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ.

ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಂದು ಸ್ಯಾಂಡಲ್​ವುಡ್​ ಸ್ಟಾರ್​ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿಚ್ಚನ ಅಭಿಮಾನಿಗಳು ಮಧ್ಯರಾತ್ರಿಯೇ ಹಬ್ಬದ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಕಿಚ್ಚ ಸುದೀಪ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಅನೌನ್ಸ್​ ಆಗಿದೆ.

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಒಂದಿನ ಮೊದಲೇ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ. ಈವರೆಗೂ ಕೆ-47 ಎನ್ನುವ ಹೆಸರಿನಲ್ಲೇ ಶೂಟಿಂಗ್ ಮಾಡಿ ಪೂರ್ಣಗೊಳಿಸಲಾಗಿದೆ. ಕಿಚ್ಚನ ಹೊಸ ಸಿನಿಮಾ ರಿಲೀಸ್​ಗೂ ರೆಡಿಯಾಗಿದ್ದು ಡಿಸೆಂಬರ್​ನಲ್ಲಿ ಅಂದರೆ ಕ್ರಿಸ್​ಮಸ್​ಗೆ ಅಭಿಮಾನಿಗಳು ಈ ಸಿನಿಮಾವನ್ನು ಬಿಗ್​ ಸ್ಕ್ರೀನ್​ನಲ್ಲಿ ನೋಡಬಹುದು.

ಹೆಸರಿಡದ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಕಿಚ್ಚನ ಬರ್ತ್​ಡೇಗೂ ಒಂದಿನ ಮೊದಲೇ ಮೂವಿಯ ಟೈಟಲ್​ ಟೀಸರ್​ ರಿಲೀಸ್ ಮಾಡಲಾಗಿದೆ. ಮಾರ್ಕ್​ ಎನ್ನುವುದು ಮೂವಿಯ ಹೆಸರು ಆಗಿದೆ. ಸುದೀಪ್ ಕೂಡ ಮಾರ್ಕ್​ ಟೀಸರ್​ನಲ್ಲಿ ರಗಡ್​ ಅಂದರೆ ಫುಲ್ ರಗಡ್​ ಲುಕ್​ನಲ್ಲಿ ಕಾಣಿಸಿದ್ದಾರೆ. ಮಾರ್ಕ್​ ಸಿನಿಮಾದ ಬ್ಯಾಗ್ರೌಂಡ್ ಮ್ಯೂಸಿಕ್​ ಅಂತೂ ಮೈನವಿರೇಳಿಸುವಂತೆ ಇದೆ.

ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಕಿಚ್ಚನ ಕಾಂಬೋದಲ್ಲಿ ಬರುತ್ತಿರುವ ಇದು 2ನೇ ಮೂವಿ ಆಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಮ್ಯಾಕ್ಸ್​ ಸಿನಿಮಾ ತೆರೆ ಮೇಲೆ ಅಬ್ಬರಿಸಿತ್ತು. ಅಭಿಮಾನಿಗಳಿಗೂ ಸಖತ್ ಮನರಂಜನೆ ನೀಡಿತ್ತು. ಇದು ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯನ ಮೊದಲ ವಿಜಯ ಆಗಿತ್ತು. ಅದರಂತೆ ಮತ್ತೊಂದು ಜಯಭೇರಿ ಬಾರಿಸಲು ಇಬ್ಬರು ರೆಡಿಯಾಗಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಗೆ ಬರಲಿದೆ.

ಈ ಮಾರ್ಕ್​ ಸಿನಿಮಾಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಮ್ಯೂಸಿಕ್ ಇದಕ್ಕಿದೆ. ಸತ್ಯಜ್ಯೋತಿ ಫಿಲಂ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ಈ ಮೂವಿಗೆ ಬಂಡವಾಳ ಹಾಕಿದ್ದು ಲಾಭದ ನಿರೀಕ್ಷೆಯಲ್ಲಿವೆ. ಕಿಚ್ಚನ ಬರ್ತ್​ಡೇಗೆ ಸದ್ಯ ಟೈಟಲ್​ ಟೀಸರ್​ ಒಂದೇ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಯಾರು ಯಾರು ಅಭಿನಯ ಮಾಡುತ್ತಿದ್ದಾರೆ, ಹೀರೋಯಿನ್ ಯಾರು, ಪೋಷಕ ಪಾತ್ರಗಳ ಹೆಸರು ರಿವೀಲ್ ಆಗಬೇಕಿದೆ ಅಷ್ಟೇ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ.

The post ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! appeared first on Good News 24x7.

]]>