Superstar Archives - Good News 24x7 https://www.goodnews24x7.com/tag/superstar/ Kannada Sun, 24 Aug 2025 05:26:47 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Superstar Archives - Good News 24x7 https://www.goodnews24x7.com/tag/superstar/ 32 32 ‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. https://www.goodnews24x7.com/after-the-hit-of-coolie-a-scam-in-the-name-of-rajinikanth-warning-issued-by-the-thalaiva-team/ Sun, 24 Aug 2025 05:26:47 +0000 https://www.goodnews24x7.com/?p=6606 ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬ್ಲಾಕ್‌ಬಸ್ಟರ್ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಭಾರತವಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಹೆಸರು ಬಳಸಿಕೊಂಡು, ಕೆಲವರು ತಪ್ಪು ಮಾಹಿತಿಯಿಂದ ಹಣ ಗಳಿಸುವ ಯತ್ನ ಮಾಡುತ್ತಿದ್ದಾರೆ. ಮಲೇಷ್ಯಾದಲ್ಲಿ ನಕಲಿ…

The post ‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. appeared first on Good News 24x7.

]]>

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬ್ಲಾಕ್‌ಬಸ್ಟರ್ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಭಾರತವಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಹೆಸರು ಬಳಸಿಕೊಂಡು, ಕೆಲವರು ತಪ್ಪು ಮಾಹಿತಿಯಿಂದ ಹಣ ಗಳಿಸುವ ಯತ್ನ ಮಾಡುತ್ತಿದ್ದಾರೆ.

ಮಲೇಷ್ಯಾದಲ್ಲಿ ನಕಲಿ “Meet & Greet” ಆಫರ್

ಮಲೇಷ್ಯಾದ Malik Streams ಎಂಬ ಸಂಸ್ಥೆ, ‘ಕೂಲಿ’ ಸಿನಿಮಾ ವೀಕ್ಷಿಸಿ ಲಕ್ಕಿ ಡ್ರಾ ಗೆಲ್ಲಿದವರಿಗೆ ರಜನಿಕಾಂತ್ ಅವರನ್ನು ಭೇಟಿ ಮಾಡುವ ಅವಕಾಶವಿದೆ ಎಂಬ ನಕಲಿ ಆಫರ್ ನೀಡಿದೆ. ಈ ಆಫರ್ ನಿಜ ಎನ್ನುವ ಮುನ್ನ, ತಕ್ಷಣವೇ ತಲೈವಾ ತಂಡ ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣ ವಂಚನೆ ಮತ್ತು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನಡೆದಿರುವ ಕಾರ್ಯವೆಂದು ಘೋಷಿಸಿದೆ.

ರಜನಿಕಾಂತ್ ತಂಡದ ಸ್ಪಷ್ಟನೆ

ರಜನಿಕಾಂತ್ ಅವರ ವೈಯಕ್ತಿಕ ಪಿಆರ್‌ಒ ರಿಯಾಜ್ ಕೆ ಆಹಮದ್ ಟ್ವೀಟ್ ಮೂಲಕ ತಿಳಿಸಿದ್ದಾರೆ:

“ಮಲೇಷ್ಯಾದ Malik Streams ಪ್ರಸ್ತುತ ಪ್ರಚಾರ ಮಾಡುತ್ತಿರುವ ‘Meet & Greet Thalaivar’ ಸ್ಪರ್ಧೆಯು ನಕಲಿ ಮತ್ತು ಅನಧಿಕೃತವಾಗಿದೆ. ರಜನಿಕಾಂತ್ ಅವರಿಂದ ಯಾವುದೇ ಅನುಮತಿ ಪಡೆಯದೇ ಈ ಕಾರ್ಯಕ್ರಮ ಘೋಷಿಸಲಾಗಿದೆ. ಅಭಿಮಾನಿಗಳು ಇಂತಹ ವಂಚನೆಗಳಿಗೆ ಒಳಗಾಗಬಾರದು.”

ಅಭಿಮಾನಿಗಳು ಮತ್ತು ಸಾರ್ವಜನಿಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಇದನ್ನು ಹೆಚ್ಚಿನವರು ತಿಳಿದುಕೊಳ್ಳಲು ಶೇರ್ ಮಾಡುವಂತೆ ಮನವಿ ಮಾಡಲಾಗಿದೆ.

‘ಕೂಲಿ’ ಬಾಕ್ಸಾಫೀಸ್ ಸ್ಥಿತಿ

ಚಿತ್ರ ಬಿಡುಗಡೆಯ ಮೊದಲ ನಾಲ್ಕು ದಿನಗಳಲ್ಲಿ ‘ಕೂಲಿ’ ಚಿತ್ರವು ವಿಶ್ವದಾದ್ಯಂತ ₹404 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ನಂತರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಕಡಿಮೆಯಾಗಿದ್ದು, ಪ್ರತಿ ವೀಕೆಂಡ್‌ನಲ್ಲಿ ಮಾತ್ರ ಹೆಚ್ಚಳ ಕಂಡುಬರುತ್ತಿದೆ ಎನ್ನಲಾಗುತ್ತಿದೆ.

The post ‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ. appeared first on Good News 24x7.

]]>
‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ https://www.goodnews24x7.com/dimple-queen-in-coolie-movie-rachita-shared-a-photo-with-rajini/ Sat, 16 Aug 2025 06:29:01 +0000 https://www.goodnews24x7.com/?p=6175 ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ…

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>

ಆಗಸ್ಟ್​ 14 ಸೂಪರ್​ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು. ಸೂಪರ್​ ಸ್ಟಾರ್​ನನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಆಗಸ್ಟ್​ 14 ಸೂಪರ್​ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿತ್ತು.

ಅಷ್ಟೇ ಅಲ್ಲದೇ ಕೂಲಿ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಹೌದು, ಸರ್​ಪ್ರೈಸ್​ ಎಂಬಂತೆ ಕೂಲಿ ಸಿನಿಮಾದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ನಟಿ ರಚಿತಾ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊದ ಮೊದಲು ಪಾಪದ ಹುಡುಗಿಯಾಗಿ ಕಾಣಿಸಿಕೊಂಡ ರಚ್ಚು ತದನಂತರ ರೆಬೆಲ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲು ಬಾರಿಗೆ ರಚಿತಾ ರಾಮ್​ ಅವರ ನಟನೆಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ಕೊಡುತ್ತಿದ್ದಾರೆ.
ಸಿನಿಮಾ ರಿಲೀಸ್​ ಆಗಿರೋ ಖುಷಿಯಲ್ಲಿ ನಟಿ ರಚಿತಾ ರಾಮ್​ ಸೂಪರ್ ಸ್ಟಾರ್​ ಜೊತೆಗೀನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಜಿನಿ ಜೊತೆಗೆ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋ ಜೊತೆಗೆ ‘‘ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಇದನ್ನೂ ಹಂಚಿಕೊಳ್ಳಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್​ ಯೂ’’ ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಇದೇ ಫೋಟೋ ಜೊತೆಗೆ ರಚಿತಾ ರಾಮ್​ ಅಭಿನಯದ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್​ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೂಲಿಯಲ್ಲಿ ಅದ್ಭುತ ಅಭಿನಯ, ನೀವು ಹಾಗೇ ಅಭಿನಯಿಸುತ್ತೀರಾ ಅಂತ ಎಂದಿಗೂ ನಿರೀಕ್ಷಿಸಿರಲಿಲ್ಲ ಮೇಡಂ, ಅಳುವುವವರನ್ನು ಯಾವತ್ತು ನಂಬಬಾರದು ಅಂತ ನಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ನೂ, 2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ ಈಗ ಕನ್ನಡದ ಬಹು ಬೇಡಿಕೆಯ ನಟಿ ಎನಿಸಿಕೊಂಡರು. 2022ರಲ್ಲಿ ಟಾಲಿವುಡ್‌ಗೆ ಪ್ರವೇಶಿಸಿದ್ದ ಅವರು ಈ ವರ್ಷ ಕೂಲಿ ಸಿನಿಮಾ ಮೂಲಕ ಕಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ.

The post ‘ಕೂಲಿ’ ಸಿನಿಮಾದಲ್ಲಿ ಡಿಂಪಲ್​​ ಕ್ವೀನ್​​.. ರಜಿನಿ ಜತೆ​ ಫೋಟೋ ಶೇರ್ ಮಾಡಿದ ರಚಿತ appeared first on Good News 24x7.

]]>