suspended Archives - Good News 24x7 https://www.goodnews24x7.com/tag/suspended/ Kannada Tue, 28 Oct 2025 09:35:49 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg suspended Archives - Good News 24x7 https://www.goodnews24x7.com/tag/suspended/ 32 32 ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್… ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ https://www.goodnews24x7.com/mud-special-tahsildar-k-v-rajashekar-suspended-allegedly-issued-purchase-order-illegally/ Tue, 28 Oct 2025 09:35:49 +0000 https://www.goodnews24x7.com/?p=7899 ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(MDA) ದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಲತಾ ರವರ ಆದೇಶದ ಮೇರೆಗೆ ಮುಡಾ…

The post ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್… ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ appeared first on Good News 24x7.

]]>

ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(MDA) ದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಲತಾ ರವರ ಆದೇಶದ ಮೇರೆಗೆ ಮುಡಾ ಆಯುಕ್ತರು ಸಸ್ಪೆಂಡ್ ಆರ್ಡರ್ ಹೊರಡಿಸಿದ್ದಾರೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ನೀಡಿದ ದೂರಿನ ಅನ್ವಯದಂತೆ ದಾಖಲೆಗಳನ್ನ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮೈಸೂರಿನ ಗೋಕುಲಂ ಬಡಾವಣೆ 3 ನೇ ಹಂತ ಮನೆ ಸಂಖ್ಯೆ 867 ಕ್ಕೆ 02-04-1982 ರಂದು ಲಿಲಿಯನ್ ಶಾರದಾ ಜೋಸೆಫ್ w/o ಅನ್ನಿ ಜೋಸೆಫ್ ಎಂಬುವರಿಗೆ ಮುಡಾ ದಿಂದ 30*40 ವಿಸ್ತೀರ್ಣ ನಿವೇಶನ ಮಂಜೂರಾಗಿದೆ.ಇದಕ್ಕೆ ಕರಾರು ಪತ್ರ ಸಹ ನೀಡಲಾಗಿದೆ.03-09-1983 ರಲ್ಲಿ ಲಿಲಿಯನ್ ಜೋಸೆಫ್ ಮರಣ ಹೊಂದಿರುತ್ತಾರೆ.06-04-2024 ರ ವರೆಗೂ ಸದರಿ ಸ್ವತ್ತು ಯಾರಿಗೂ ವರ್ಗಾವಣೆ ಆಗಿರುವುದಿಲ್ಲ.ಆದರೆ 26-03-2024 ರಂದು ಕ್ರಮಬದ್ದ ವಾರಸುದಾರರಲ್ಲದವರಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ರವರ ಹೆಸರಿಗೆ ಕ್ರಮಬದ್ದ ವಂಶವೃಕ್ಷ ಪಡೆಯದೆ ಪೌತಿಖಾತೆ ವರ್ಗಾವಣೆ ಮಾಡಿ ಜೊತೆಗೆ ತುಂಡು ಜಾಗವನ್ನೂ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿದೆ.ಈ ಅಕ್ರಮದ ಬಗ್ಗೆ ಆರ್.ಟಿ.ಐ.ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ರವರು ದಾಖಲೆಗಳನ್ನ ಪಡೆದು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿ ದೂರು ನೀಡಿದ್ದರು.

ಈ ಸಂಬಂಧ ಪರಿಶೀಲನೆ ನಡೆಸಿದಾಗ ಮುಡಾದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರು ರವರ ಕೈವಾಡ ಇರುವುದು ಬೆಳಕಿಗೆ ಬಂದಿದೆ.ಮುಡಾದಲ್ಲಿ ಯಾವುದೇ ಕ್ರಯಪತ್ರ ನೀಡುವ ಹಾಗೂ ಅನುಮೋದಿಸುವ ಅಧಿಕಾರ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿ ಆದೇಶವಾಗಿರುತ್ತದೆ.ಆದರೆ ಈ ಇಬ್ಬರು ಅಧಿಕಾರಿಗಳು ಕಾರ್ಯದರ್ಶಿಯವರಿಂದ ಅನುಮೋದನೆ ಪಡೆಯಲು ಕಡತಗಳನ್ನು ಮಂಡಿಸದೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ಮಾಡಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.ಈ ಅಕ್ರಮದ ಹಿನ್ನಲೆ ಈಗಾಗಲೇ ವ್ಯವಸ್ಥಾಪಕರಾದ ಸೋಮಸುಂದ್ರ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ.ವಿಶೇಷ ತಹಸೀಲ್ದಾರ್ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂದು ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ಸ್ಪಂದನೆ ದೊರೆತಿದೆ.ಮುಡಾ ಕಾರ್ಯದರ್ಶಿಗಳು ಅಕ್ರಮ ನಡೆದಿರುವುದಾಗಿ ವರದಿಯನ್ನೂ ಸಹ ನೀಡಿದ್ದಾರೆ.

ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಆದೇಶದಂತೆ ಮುಡಾ (MDA) ಆಯುಕ್ತರು ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರನ್ನ ಅಮಾನತ್ತಿನಲ್ಲಿ ಇಡುವಂತೆ ಆದೇಶ ಹೊರಡಿಸಿದ್ದಾರೆ…

The post ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್… ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ appeared first on Good News 24x7.

]]>
ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? https://www.goodnews24x7.com/intelligence-department-hanging-over-is-the-government-bowing-to-opposition-pressure/ Fri, 06 Jun 2025 07:38:52 +0000 https://www.goodnews24x7.com/?p=4257 ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ…

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>

ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಈ ಒತ್ತಾಯ ಮಾಡಿದ್ದಾರೆ.


ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ, ಆದರೆ, ಬೇಜವಬ್ದಾರಿತನ ಎದ್ದು ಕಾಣುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಕೆಸರೆರಚಾಟ ಸರಿಯಲ್ಲ. ಈ ಕಾರಣಕ್ಕೆ ನಾವು ಯಾರು ನೆನ್ನೆ ಚರ್ಚಸಿರಲಿಲ್ಲ. ಆದರೆ, ನೆನ್ನೆ ನಡೆದ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಕಪ್ ಗೆದ್ದ ಬಳಿಕ ರಾತ್ರಿಯಿಡೀ ವಿಜಯೋತ್ಸವ ನಡೆದಿದೆ. ಮರುದಿನ ಕೂಡ ವಿಜಯೋತ್ಸವ ನಡೆದು ದುರಂತ ನಡೆದಿದೆ. ಹಲವು ಅಮೂಲ್ಯ ಜೀವಗಳನ್ನ ಕಳೆದುಕೊಂಡಿದ್ದೇವೆ. ಆ ಘಟನೆ ಕುರಿತು ಚಿಂತನೆ ನಡೆಸುವ ಅಗತ್ಯವಿದೆ.

ನೆನ್ನೆ ಐದು ಮಂದಿ ಪೊಲೀಸರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದೀರಿ, ಇದು ನಿಮ್ಮ ಮನಃಸಾಕ್ಷಿ ಒಪ್ಪಿತ್ತದೆಯೆ? ಇದು ಉದ್ದೇಶ ಪೂರ್ವಕ ಘಟನೆಯಲ್ಲ, ಇದು ನೆಗ್ಲಿಜೆನ್ಸಿಯಿಂದ ನಡೆದಿದೆ . ರಾಜ್ಯದ ಜನರ ಕಣ್ಣೊರೆಸುವ ತಂತ್ರ ಇದು. ಮೊದಲು ಇಂಟೆಲಿಜೆನ್ಸ್ ಐಜಿ ಏನ್ ಮಾಡ್ತಿದ್ರು? ಅವರು ನಿಮಗೆ ರಿಪೋರ್ಟ್ ಕೊಡಲಿಲ್ಲವೇ? ಗೃಹ ಇಲಾಖೆ ಕಾರ್ಯದರ್ಶಿ‌ಏನ್ ಮಾಡುತ್ತಿದ್ದರು? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡುವ ತಂತ್ರ ಯಾಕೆ?

ಅಮಾನತ್ತು ಆದೇಶ ವಾಪಸ್ ಪಡೆಯಿರಿ, ಕಮಿಷನರ್ ದಯಾನಂದ್, ಡಿಸಿಪಿ ಶೇಖರ್ ಏನ್ ತಪ್ಪು ಮಾಡಿದ್ದಾರೆ? ನೀವು ಕ್ರಮ ತೆಗೆದುಕೊಳ್ಳುವುದಾದರೆ ಇಂಟೆಲಿಜೆನ್ಸ್ ಐಜಿ ವಿರುದ್ಧ ತೆಗೆದುಕೊಳ್ಳಿ. ಕಾಂಗ್ರೆಸ್ ಪಕ್ಷದ ಸೋತ ಅಭ್ಯರ್ಥಿ ಗಂಡ ಎಂಬ ಕಾರಣಕ್ಕೆ ಬಿಟ್ಟಿದ್ದೀರಾ? ಈ ಘಟನೆಗೆ ಅವರೇ ನೇರ ಹೊಣೆ ಎಂದು ದೂಷಿಸಿದರು.

ಬೆಂಗಳೂರಿನ್ಲಲಿ ಮಾತನಾಡಿದ ವಿಜಯೇಂದ್ರ :- ಕಾಲ್ತುಳಿತ ಪ್ರಕರಣದಲ್ಲಿ ೧೧ ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಈ ಘಟನೆಗೆ ರಾಜ್ಯ ಸರಕಾರ ಹೊಣೆ, ಆದರೆ ಕೋರ್ಟ್ ಚಾಟಿ ಬೀಸಿದ ಮೇಲೆ ಕೆಎಸ್ಸಿಎ , ಆರ್ಸಿಬಿ ಹಾಗೂ ಡಿಎನ್ ಎ ಸಂಸ್ಥೆಯವರ ವಿರುದ್ಧ ಎಫ್. ಐ. ಆರ್ ದಾಖಲಿಸಲಾಗಿದೆ. ಜತೆಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಐವರನ್ನು ಅಮಾನತುಗೊಳಿಸಿದ್ದೀರಿ..? ಇದು ಸರಿನಾ..? ಈ ಪೊಲೀಸರನ್ನು ಯಾಕೆ ಹರಕೆಯ ಕುರಿಯನ್ನಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಈ ದುರ್ಘಟನೆಗೆ ಪ್ರಮುಖ ಕಾರಣ ಗುಪ್ತಚರ ಇಲಾಖೆ ವೈಫಲ್ಯ . ಈ ಸತ್ಯ ತಿಳಿದಿದ್ದರು ಈ ತನಕ ಯಾಕೆ ಇಂಟಲಿಜೆನ್ಸ್ ವಿಂಗ್ ಮುಖ್ಯಸ್ಥರನ್ನು ಅಮಾನತುಗೊಳಿಸಿಲ್ಲ. ಯಾಕೆ ಅವರನ್ನು ಅಮಾನತು ಮಾಡಿದರೆ ತಮ್ಮ ಬುಡಕ್ಕೆ ಬರುತ್ತೆ ಅಂಥ ಭಯನಾ ಸಿಎಂ ಸಿದ್ದರಾಮಯ್ಯ ಅವರೇ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>
ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. https://www.goodnews24x7.com/government-responsible-for-11-deaths-in-stampede-r-ashok-attacks/ Fri, 06 Jun 2025 07:17:05 +0000 https://www.goodnews24x7.com/?p=4251 ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.…

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದರು.


ಈ ವೇಳೆ ಮಾತನಾಡಿದ ಆರ್.ಅಶೋಕ್, ಐಪಿಎಲ್ ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ ಫೋಟೊಗೆ ಫೋಸ್ ನೀಡಿದ್ದು ಕೆಪಿಸಿಸಿ ತಂಡ . ಇವರು ಕುರುಡು ಮುಖ್ಯಮಂತ್ರಿ. ಇಲ್ಲಿ ಸರ್ಕಾರ ಅಪರಾಧಿ. ತಪ್ಪಿತಸ್ಥರು ಸರ್ಕಾರ. ಪೊಲೀಸರನನ್ನ ಹರಕೆಯ ಕುರಿಯನ್ನಾಗಿಸಿದಿರಿ. ಮೊಸರನ್ನು ನೀವು ತಿಂದು ಪೊಲೀಸರ ಮೂತಿಗೆ ಒರೆಸಿದ್ರಿ ಸಿಎಂ ರನ್ ಔಟ್ ಮಾಡಲು ಡಿಕೆಶಿ ಯತ್ನಿಸುತ್ತಿದ್ದು , ಸಾರ್ವಜನಿಕರು ಪೊಲೀಸರ ಪರ ಇದ್ದಾರೆ ಎಂದರು.

ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ನಾಚಿಕೆ ಬೇಡವಾ? ನಮ್ಮದೇನು ತಪ್ಪಿಲ್ಲ ಅಂತ ಸಿಎಂ ಪ್ರೆಸ್ ಮೀಟ್ ಮಾಡಿದ್ರಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಆಗಿದ್ದಾರೆ. ರಾಜ್ಯದ ಜನರು ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಅನಧಿಕೃತ ಕಾರ್ಯಕ್ರಮ ಎಂದು ನೀವೆ ಎಫ್ ಐಆರ್ ನಲ್ಲಿ ಹೇಳಿದ್ದೀರಾ? ಹಾಗಾದರೆ ಸಿಎಂ ಮನೆಗೆ ಪ್ರಾಂಚೈಸಿ ಅವರನ್ನ ಕರೆದುಕೊಂಡು ಹೋಗಿದ್ದು ಯಾರು. ಕಮಿಷನರ್ ಅನುಮತಿ ಕೊಟ್ಟಿಲ್ಲ ಅಂತಾ ಸಿಎಂಗೆ ಹೇಳಿದವರು ಯಾರು? ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಸಿಎಂ ಹೇಳಿದ್ದಾರೆ. ಆಗಾದರೆ ಸ್ಟೇಡಿಯಂ ಏನು ಕರ್ನಾಕಟದಲ್ಲಿ ಇಲ್ವಾ ಎಂದು ಅಶೋಕ್ ಪ್ರಶ್ನಿಸಿದರು.

 

 

The post ಕಾಲ್ತುಳಿತದ 11 ಜನರ ಸಾ*ವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ವಾಗ್ದಾಳಿ. appeared first on Good News 24x7.

]]>