T20 Match Archives - Good News 24x7 https://www.goodnews24x7.com/tag/t20-match/ Kannada Sun, 29 Jun 2025 07:38:34 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg T20 Match Archives - Good News 24x7 https://www.goodnews24x7.com/tag/t20-match/ 32 32 ಮಹಿಳಾ ಕ್ರಿಕೆಟ್ ಗೆ ವರದಾನ ; ಸ್ಮೃತಿ ಮಂಧಾನ : ಒಂದೇ ಪಂದ್ಯದಲ್ಲಿ ಹಲವಾರು ದಾಖಲೆಗಳು ಉಡೀಸ್…. https://www.goodnews24x7.com/%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d-%e0%b2%97%e0%b3%86-%e0%b2%b5%e0%b2%b0%e0%b2%a6%e0%b2%be%e0%b2%a8-%e0%b2%b8/ Sun, 29 Jun 2025 07:38:34 +0000 https://www.goodnews24x7.com/?p=4787 ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಇನಿಂಗ್ಸ್ ಆರಂಭಿಸಿದ ಸ್ಮೃತಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಂಗ್ಲ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಟೀಮ್…

The post ಮಹಿಳಾ ಕ್ರಿಕೆಟ್ ಗೆ ವರದಾನ ; ಸ್ಮೃತಿ ಮಂಧಾನ : ಒಂದೇ ಪಂದ್ಯದಲ್ಲಿ ಹಲವಾರು ದಾಖಲೆಗಳು ಉಡೀಸ್…. appeared first on Good News 24x7.

]]>

ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಇನಿಂಗ್ಸ್ ಆರಂಭಿಸಿದ ಸ್ಮೃತಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಂಗ್ಲ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಟೀಮ್ ಇಂಡಿಯಾ ನಾಯಕಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳನ್ನು ಬಾರಿಸಿದರು. ಈ ಮೂಲಕ 62 ಎಸೆತಗಳಲ್ಲಿ 15 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 112 ರನ್ ಕಲೆಹಾಕಿದ್ದಾರೆ. ಈ ಶತಕದೊಂದಿಗೆ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

ಸೆಂಚುರಿ ಸರದಾರಿಣಿ: ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ಏಕೈಕ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಸ್ಮೃತಿ ನಿರ್ಮಿಸಿದ್ದಾರೆ. ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಭಾರತದ ಪರ ಯಾವುದೇ ಮಹಿಳಾ ಬ್ಯಾಟರ್ ಮೂರೂ ಸ್ವರೂಪಗಳಲ್ಲಿ ಸೆಂಚುರಿ ಬಾರಿಸಿಲ್ಲ.

ಭರ್ಜರಿ ಸೆಂಚುರಿ: ಟೀಮ್ ಇಂಡಿಯಾ ಪರ ಮಹಿಳಾ ಕ್ರಿಕೆಟ್ನಲ್ಲಿ ಟಿ20 ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹರ್ಮನ್ಪ್ರೀತ್ ಕೌರ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.

ಗರಿಷ್ಠ ಸ್ಕೋರ್: ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಹರ್ಮನ್ಪ್ರೀತ್ ಕೌರ್ ಹೆಸರಿನಲ್ಲಿತ್ತು. 2018 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಹರ್ಮನ್ಪ್ರೀತ್ 103 ರನ್ ಬಾರಿಸಿದ್ದರು. ಇದೀಗ 112 ರನ್ಗಳೊಂದಿಗೆ ಸ್ಮೃತಿ ಮಂಧಾನ ಈ ದಾಖಲೆ ಮುರಿದಿದ್ದಾರೆ.

The post ಮಹಿಳಾ ಕ್ರಿಕೆಟ್ ಗೆ ವರದಾನ ; ಸ್ಮೃತಿ ಮಂಧಾನ : ಒಂದೇ ಪಂದ್ಯದಲ್ಲಿ ಹಲವಾರು ದಾಖಲೆಗಳು ಉಡೀಸ್…. appeared first on Good News 24x7.

]]>
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. https://www.goodnews24x7.com/%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/ Thu, 26 Jun 2025 12:27:50 +0000 https://www.goodnews24x7.com/?p=4680 ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ…

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>

ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ ಮುಂತಾದ ಪ್ರಮುಖ ಬದಲಾವಣೆಗಳನ್ನು ಐಸಿಸಿ ಘೋಷಿಸಿದೆ. ಲಾಲಾರಸ ಹಚ್ಚುವುದರಿಂದ ಚೆಂಡು ಬದಲಾಗುವುದಿಲ್ಲ ಎಂಬುದು ಮತ್ತೊಂದು ಮಹತ್ವದ ಬದಲಾವಣೆ.ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಜಾರಿಗೆ ತಂದ ಒಂದು ವರ್ಷದ ನಂತರ, ಇದೀಗ ಈ ನಿಯಮವನ್ನು ಟೆಸ್ಟ್‌ನಲ್ಲೂ ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಟೆಸ್ಟ್‌ಗಳಲ್ಲಿ ನಿಧಾನಗತಿಯ ಓವರ್ ದರವು ಒಂದು ದೊಡ್ಡ ಸಮಸ್ಯೆಯಾಗಿದೆ. ಈಗ ಹೊಸ ಐಸಿಸಿ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ, ತಂಡಕ್ಕೆ ಅಂಪೈರ್‌ನಿಂದ ಎರಡು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಇದರ ನಂತರವೂ ಬೌಲಿಂಗ್ ತಂಡ ನಿಧಾನ ಮಾಡಿದರೆ, ಪ್ರತಿ ಬಾರಿಯೂ ಐದು ರನ್‌ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. 80 ಓವರ್‌ಗಳ ನಂತರ ಎಚ್ಚರಿಕೆಗಳನ್ನು ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

ಐಸಿಸಿ ಕೂಡ ಶಾರ್ಟ್ ರನ್​ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿದರೆ ಐದು ರನ್​ಗಳ ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಕದಿಯಲು ರನ್ ಪೂರ್ಣಗೊಳಿಸದಿದ್ದರೆ (ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್ ಎರಡನೇ ರನ್ ಕದಿಯುವ ಯತ್ನದಲ್ಲಿ ನಾನ್ ಸ್ಟ್ರೈಕ್ ತುದಿಯನ್ನು ಮುಟ್ಟದೆ ವಾಪಸ್ ಆಗಿದ್ದರೆ), ಅಂಪೈರ್ ಫೀಲ್ಡಿಂಗ್ ತಂಡವನ್ನು ಯಾವ ಬ್ಯಾಟ್ಸ್​ಮನ್ ಸ್ಟ್ರೈಕ್​ನಲ್ಲಿ ಇರಬೇಕೆಂದು ಕೇಳುತ್ತಾರೆ. ಫೀಲ್ಡಿಂಗ್ ತಂಡ ಯಾವ ಆಟಗಾರನ ಹೆಸರನ್ನು ಹೇಳುತ್ತದೋ ಆತ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಶಾರ್ಟ್ ರನ್ ಮಾಡಿದ ಬ್ಯಾಟ್ಸ್​ಮನ್ ತಂಡಕ್ಕೆ ಐದು ರನ್​ಗಳ ದಂಡ ವಿಧಿಸಲಾಗುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧ ಮುಂದುವರಿಯಲಿದೆ. ಈ ಹಿಂದೆ ಬೌಲರ್‌ಗಳಿಗೆ ಹೊಸ ಚೆಂಡು ಅಗತ್ಯವಿದ್ದಾಗ, ಅವರು ಚೆಂಡಿನ ಮೇಲೆ ಲಾಲಾರಸವನ್ನು ಹಚ್ಚುತ್ತಿದ್ದರು. ಲಾಲಾರಸವನ್ನು ಹಚ್ಚುವುದರಿಂದ ಚೆಂಡು ಹಾಳಾಗುತ್ತಿತ್ತು. ಆ ನಂತರ ಬೌಲರ್​ಗಳು ಬೌಲಿಂಗ್ ಸಮಯದಲ್ಲಿ ತಮಗೆ ಅನುಕೂಲವಾಗುವಂತೆ ಅಂಪೈರ್‌ಗಳಿಂದ ಹೊಸ ಚೆಂಡನ್ನು ಕೇಳುತ್ತಿದ್ದರು. ಆದರೀಗ ಹೊಸ ನಿಯಮದ ಪ್ರಕಾರ, ಚೆಂಡಿನ ಮೇಲೆ ಲಾಲಾರಸ ಬಿದ್ದರೆ ಅಂಪೈರ್‌ಗಳು ಅದನ್ನು ಬದಲಾಯಿಸುವುದು ಕಡ್ಡಾಯವಲ್ಲ. ಚೆಂಡು ಸಂಪೂರ್ಣವಾಗಿ ಒದ್ದೆಯಾಗಿ ಕಂಡುಬಂದಾಗ ಅಥವಾ ಹಾನಿಗೊಳಗಾದಾಗ ಮಾತ್ರ ಅದನ್ನು ಬದಲಾಯಿಸಲಾಗುತ್ತದೆ. ಚೆಂಡನ್ನು ಬದಲಾಯಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅಂಪೈರ್‌ಗಳ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಅಂಪೈರ್‌ಗಳಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ.

ಐಸಿಸಿ ಡಿಆರ್‌ಎಸ್ ಪ್ರೋಟೋಕಾಲ್‌ನಲ್ಲಿಯೂ ದೊಡ್ಡ ಬದಲಾವಣೆಯನ್ನು ಮಾಡಿದೆ. ಒಬ್ಬ ಬ್ಯಾಟ್ಸ್‌ಮನ್‌ಗೆ ಕ್ಯಾಚ್ ಔಟ್ ನೀಡಿದರೆ ಅವನು ರಿವ್ಯೂ ಕೇಳುತ್ತಾನೆ ಎಂದು ಭಾವಿಸೋಣ. ಅಲ್ಟ್ರಾಎಡ್ಜ್‌ನಲ್ಲಿ ಚೆಂಡು ಬ್ಯಾಟ್ ಅನ್ನು ತಾಗದೆ ಪ್ಯಾಡ್‌ಗೆ ತಗುಲಿದೆ ಎಂದು ತೋರಿಸುತ್ತದೆ. ಕ್ಯಾಚ್ ಔಟ್ ಎಂದು ಘೋಷಿಸಿದ ನಂತರ, ಟಿವಿ ಅಂಪೈರ್ ಈಗ ಮತ್ತೊಂದು ಔಟ್ ಮೋಡ್ ಅನ್ನು ಪರಿಶೀಲಿಸುತ್ತಾರೆ (ಉದಾಹರಣೆಗೆ ಎಲ್‌ಬಿಡಬ್ಲ್ಯೂ). ಈ ಹಿಂದೆ, ಕ್ಯಾಚ್ ಔಟ್ ಆಗದಿದ್ದರೆ, ಎಲ್‌ಬಿಡಬ್ಲ್ಯೂಗೆ ಡೀಫಾಲ್ಟ್ ನಿರ್ಧಾರವು “ನಾಟ್ ಔಟ್” ಆಗಿತ್ತು. ಆದರೆ ಹೊಸ ನಿಯಮದಲ್ಲಿ, ಎಲ್‌ಬಿಡಬ್ಲ್ಯೂಗಾಗಿ ಬಾಲ್-ಟ್ರ್ಯಾಕಿಂಗ್ ಗ್ರಾಫಿಕ್ ಅನ್ನು ತೋರಿಸಲಾಗುತ್ತದೆ ಮತ್ತು ಬ್ಯಾಟ್ಸ್‌ಮನ್ ಇಲ್ಲಿ ಔಟ್ ಎಂದು ಕಂಡುಬಂದರೆ, ಅವನು ಪೆವಿಲಿಯನ್‌ಗೆ ಹಿಂತಿರುಗಬೇಕಾಗುತ್ತದೆ.

 

ಐಸಿಸಿ ಅಂಪೈರ್ ಮತ್ತು ಆಟಗಾರರ ವಿಮರ್ಶೆ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರರ್ಥ ಮೊದಲು ಟಿವಿ ಅಂಪೈರ್ ಮೊದಲು ಅಂಪೈರ್ ವಿಮರ್ಶೆಯನ್ನು ಮತ್ತು ನಂತರ ಆಟಗಾರನ ವಿಮರ್ಶೆಯನ್ನು ಪರಿಗಣಿಸುತ್ತಿದ್ದರು, ಆದರೆ ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಮೊದಲ ಘಟನೆಯಲ್ಲಿಯೇ ಔಟ್ ಆಗಿದ್ದರೆ, ಚೆಂಡು ಡೆಡ್ ಆಗುತ್ತದೆ. ಎರಡನೇ ರಿವ್ಯೂ ಅನ್ನು ಪರಿಶೀಲಿಸಲಾಗುವುದಿಲ್ಲ. ಉದಾಹರಣೆಗೆ, ಎಲ್‌ಬಿಡಬ್ಲ್ಯೂಗೆ ಮೇಲ್ಮನವಿ ಸಲ್ಲಿಸಿ ರನ್ ಔಟ್ ಆಗಿದ್ದರೆ, ಟಿವಿ ಅಂಪೈರ್ ಮೊದಲು ಎಲ್‌ಬಿಡಬ್ಲ್ಯೂ ಅನ್ನು ಪರಿಶೀಲಿಸುತ್ತಾರೆ, ಏಕೆಂದರೆ ಅದು ಮೊದಲು ಸಂಭವಿಸಿತು. ಬ್ಯಾಟ್ಸ್‌ಮನ್ ಔಟ್ ಆಗಿದ್ದರೆ, ಚೆಂಡು ಅಲ್ಲಿಯೇ ಡೆಡ್ ಆಗುತ್ತದೆ.

 

ಕ್ಯಾಚ್‌ಗಳಿಗೆ ಸಂಬಂಧಿಸಿದಂತೆ ಐಸಿಸಿ ಒಂದು ದೊಡ್ಡ ನಿಯಮವನ್ನು ಸಹ ಬದಲಾಯಿಸಿದೆ. ಪ್ರಸ್ತುತ ಫೀಲ್ಡ್ ಅಂಪೈರ್‌ಗಳಿಗೆ ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲದಿದ್ದಾಗ ಟಿವಿ ಅಂಪೈರ್ ಮೊರೆ ಹೋಗುತ್ತಿದ್ದರು. ಇದನ್ನು ಮೂರನೇ ಅಂಪೈರ್ ಪರಿಶೀಲಿಸಿದ ಸಮಯದಲ್ಲಿ ಅದು ನೋ ಬಾಲ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಸಿಗುತ್ತಿತ್ತು ಮತ್ತು ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ಈಗ ಮೂರನೇ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುತ್ತಾರೆ. ಕ್ಯಾಚ್ ಸರಿಯಾಗಿದ್ದರೆ, ಬ್ಯಾಟಿಂಗ್ ತಂಡವು ನೋ-ಬಾಲ್‌ಗೆ ಕೇವಲ ಒಂದು ಹೆಚ್ಚುವರಿ ರನ್ ಮಾತ್ರ ಪಡೆಯುತ್ತದೆ. ಆದರೆ ಕ್ಯಾಚ್ ಪೂರ್ಣಗೊಂಡಿಲ್ಲದಿದ್ದರೆ, ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ರನ್​ಗಾಗಿ ಓಡಿದ್ದರೆ, ಆಗ ನೋ ಬಾಲ್​ ಜೊತೆಗೆ ಬ್ಯಾಟ್ಸ್​ಮನ್​ಗಳು ಎಷ್ಟು ರನ್​ಗಳನ್ನು ಓಡಿರುತ್ತಾರೋ ಅಷ್ಟು ರನ್​ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.

 

ಏಕದಿನ ಕ್ರಿಕೆಟ್‌ನಲ್ಲಿ 35 ನೇ ಓವರ್ ನಂತರ ಒಂದೇ ಹೊಸ ಚೆಂಡನ್ನು ಬಳಸಲು ಐಸಿಸಿ ಅವಕಾಶ ನೀಡಿದೆ. ಇದು ಈಗ ಡೆತ್ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಬೌಂಡರಿಯಲ್ಲಿನ ಕ್ಯಾಚ್‌ಗಳ ಬಗ್ಗೆಯೂ ಐಸಿಸಿ ಬದಲಾವಣೆಗಳನ್ನು ಮಾಡಿದೆ. ಬೌಂಡರಿಯ ಹೊರಗಿನಿಂದ ಆಟಗಾರನು ಚೆಂಡನ್ನು ಸ್ಪರ್ಶಿಸಿದರೆ, ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಫೀಲ್ಡರ್‌ಗಳು ಬೌಂಡರಿಯ ಹೊರಗಿನಿಂದ ಒಮ್ಮೆ ಮಾತ್ರ ಬೌನ್ಸ್ ಮಾಡುವ ಮೂಲಕ ಚೆಂಡನ್ನು ಹಿಡಿಯಬಹುದು.

 

 

 

 

 

 

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>
ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯ https://www.goodnews24x7.com/india-vs-england-4th-t20-match-today/ Fri, 31 Jan 2025 04:59:45 +0000 https://www.goodnews24x7.com/?p=1989 ಭಾರತ ತಂಡ ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯವನ್ನು ಆಡಲಿದೆ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಒಂದು ವೇಳೆ ಟೀಂ ಇಂಡಿಯಾ ನಾಲ್ಕನೇ ಟಿ20 ಗೆದ್ದರೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳಲಿದೆ.ಇತ್ತ ಇಂಗ್ಲೆಂಡ್‌ ಗೆದ್ದರೆ ಸರಣಿ 2-2…

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯ appeared first on Good News 24x7.

]]>

ಭಾರತ ತಂಡ ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯವನ್ನು ಆಡಲಿದೆ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಒಂದು ವೇಳೆ ಟೀಂ ಇಂಡಿಯಾ ನಾಲ್ಕನೇ ಟಿ20 ಗೆದ್ದರೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳಲಿದೆ.ಇತ್ತ ಇಂಗ್ಲೆಂಡ್‌ ಗೆದ್ದರೆ ಸರಣಿ 2-2 ರಿಂದ ಸಮಬಲವಾಗಲಿದೆ.


ಭಾರತ ತಂಡ: ಸಂಜು ಸ್ಯಾಮ್ಸನ್(W), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(C), ಧ್ರುವ ಜುರೆಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ರಿಂಕು ಸಿಂಗ್, ಶಿವಂ ದುಬೆ , ರಮಣದೀಪ್ ಸಿಂಗ್, ಹರ್ಷಿತ್ ರಾಣಾ.

ಇಂಗ್ಲೆಂಡ್ ತಂಡ : ಬೆನ್ ಡಕೆಟ್, ಫಿಲಿಪ್ ಸಾಲ್ಟ್(W), ಜೋಸ್ ಬಟ್ಲರ್(C), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್, ಗಸ್ ಅಟ್ಕಿನ್ಸನ್, ಜೇಮೀ ಸ್ಮಿತ್, ರೆಹಾನ್ ಅಹ್ಮದ್.

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯ appeared first on Good News 24x7.

]]>