T20League Archives - Good News 24x7 https://www.goodnews24x7.com/tag/t20league/ Kannada Sun, 24 Aug 2025 07:35:23 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg T20League Archives - Good News 24x7 https://www.goodnews24x7.com/tag/t20league/ 32 32 “ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. https://www.goodnews24x7.com/hardik-knew-there-would-be-criticism-rajeev-shukla-praises-hardik-pandya/ Sun, 24 Aug 2025 07:34:58 +0000 https://www.goodnews24x7.com/?p=6643 ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಐಪಿಎಲ್ 2024ರಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಬಿಡಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವ ನಿರ್ಧಾರ ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟಿಸಿತ್ತು. ಆದರೆ, ಈ ತೀವ್ರ ಒತ್ತಡದ ನಡುವೆಯೂ…

The post “ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. appeared first on Good News 24x7.

]]>

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಐಪಿಎಲ್ 2024ರಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಬಿಡಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವ ನಿರ್ಧಾರ ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟಿಸಿತ್ತು. ಆದರೆ, ಈ ತೀವ್ರ ಒತ್ತಡದ ನಡುವೆಯೂ ಹಾರ್ದಿಕ್ ಜವಾಬ್ದಾರಿಯಿಂದ ವರ್ತಿಸಿದ್ದಾರೆಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದರು.

“ಹಾರ್ದಿಕ್‌ಗಳಿಗೆ ಟೀಕೆಗೊಳಗಾಗುತ್ತೇನೆ ಎಂಬುದು ಮೊದಲೇ ಗೊತ್ತಿತ್ತು” ಯುಪಿ ಟಿ20 ಲೀಗ್ ಸಂದರ್ಭದಲ್ಲಿ ನಡೆದ ಟಾಕ್‌ ಶೋವೊಂದರಲ್ಲಿ ಮಾತನಾಡಿದ ರಾಜೀವ್ ಶುಕ್ಲಾ, “ಹಾರ್ದಿಕ್ ಗುಜರಾತ್ ಟೈಟನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಬಂದ ನಂತರ ನಾಯಕತ್ವದ ಹೊಣೆ ಹೊತ್ತರು. ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಳೆದುಕೊಂಡ ಘಟನೆ ಅಭಿಮಾನಿಗಳಿಗೆ ಅಸ್ವೀಕೃತವಾಗಿತ್ತು. ಹಾರ್ದಿಕ್ ಅವರ ಮೇಲೆ ಟೀಕೆಗಳ ಮಳೆಯಾಯ್ತು. ಆದರೆ ಅವರು ಅತ್ಯಂತ ಪ್ರಬುದ್ಧವಾಗಿ ವರ್ತಿಸಿದರು. ಅವರ ಸ್ಥೈರ್ಯ ಶ್ಲಾಘನೀಯ,” ಎಂದರು. ಬಿಸಿಸಿಐ ಆಟಗಾರರೊಂದಿಗೆ ಮಾತುಕತೆ ಮಾಡುತ್ತದೆ. ನಾಯಕತ್ವ ಬದಲಾವಣೆ ನಡೆದಾಗ ಬಿಸಿಸಿಐ ಆಟಗಾರರಿಗೆ ಮನೋಬಲ ನೀಡುತ್ತದೆ ಎಂದು ಶುಕ್ಲಾ ತಿಳಿಸಿದರು. “ಆಗ್ಯೂನಟೆಡ್ ತೀರ್ಮಾನ ತೆಗೆದುಕೊಳ್ಳುವಾಗ, ಬಿಸಿಸಿಐ ಆಟಗಾರರೊಂದಿಗೆ ಚರ್ಚೆ ನಡೆಸುತ್ತದೆ. ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ. ಹಾರ್ದಿಕ್ ಅವರ ಮನಸ್ಥಿತಿ ದೃಢವಾಗಿತ್ತು. ಅಭಿಮಾನಿಗಳ ಟೀಕೆಗಳ ನಡುವೆಯೂ ಅವರು ತಾಳ್ಮೆಯಿಂದ ನಡಿದರು,” ಎಂದು ಹೇಳಿದರು.

 

ಪ್ರದರ್ಶನವಲ್ಲದ ಸಮಯ, ಬಳಿಕದ ಪಲಟು. ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಪ್ರತಿಷ್ಠಿತ ನಾಯಕರಾಗಿದ್ದರೂ, ಮುಂಬೈ ಇಂಡಿಯನ್ಸ್ ತಂಡ ಕೊನೆಯ ಸ್ಥಾನದಲ್ಲಿ ಮುಕ್ತಾಯಗೊಳಿಸಿತು. ಹಾರ್ದಿಕ್ ಅವರ ವೈಯಕ್ತಿಕ ಪ್ರದರ್ಶನವೂ ಗಮನಸೆಳೆಯಲಿಲ್ಲ. ಆದರೆ ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಅವರು ಭಾರತ ತಂಡದ ಗೆಲುವಿಗೆ ಬಲ ನೀಡಿದರು. ದಕ್ಷಿಣ ಆಫ್ರಿಕಾವನ್ನು ಎದುರಿಸಿದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್‌ನ ವಿಕೆಟ್ ಪಡೆದು ಭಾರತಕ್ಕೆ ಜಯ ತಂದರು. ಆ ಕ್ಷಣದಲ್ಲಿ ಹಾರ್ದಿಕ್ ಕಣ್ಣೀರಿಟ್ಟರು – ಅಭಿಮಾನಿಗಳ ಹೃದಯವೂ ಗೆದ್ದರು.“ಮುಂದಿನ ಐಪಿಎಲ್‌ನಲ್ಲಿ ಮತ್ತೆ ಬೆಂಬಲ ಸಿಗಲಿದೆ” ಈ ಸಂದರ್ಭವನ್ನೆಲ್ಲಾ ವಿವರಿಸಿದ ರಾಜೀವ್ ಶುಕ್ಲಾ, “ಅಭಿಮಾನಿಗಳು ಕೂಡಾ ಅವರ ಧೈರ್ಯ ಮತ್ತು ಸಮರ್ಪಣೆಯನ್ನೊಬ್ಬಿಸಿ, ಮುಂದೆ ಹಾರ್ದಿಕ್‌ಗೆ ಮತ್ತೆ ಬೆಂಬಲ ನೀಡುವ ನಿರೀಕ್ಷೆ ಇದೆ,” ಎಂದು ಅಭಿಪ್ರಾಯಪಟ್ಟರು.

The post “ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. appeared first on Good News 24x7.

]]>
ಟಿ-20 ಕ್ರಿಕೆಟ್​​ ಲೀಗ್​ನಿಂದ ಬ್ಯಾನ್ ಆದ ಯಶ್ ದಯಾಳ್​​ https://www.goodnews24x7.com/shock-for-yash-dayal-ban-from-this-t-20-cricket-league/ Sun, 17 Aug 2025 07:43:23 +0000 https://www.goodnews24x7.com/?p=6280 ಇಂದಿನಿಂದ ಉತ್ತರ ಪ್ರದೇಶ ಟಿ20 ಲೀಗ್ (UP T-20 League) ಆರಂಭವಾಗುತ್ತಿದೆ. ಮೊದಲ ಪಂದ್ಯ ಮೀರತ್ ಮಾವರಿಕ್ಸ್ ಮತ್ತು ಕಾನ್ಪುರ್ ಸೂಪರ್‌ಸ್ಟಾರ್ಸ್ ನಡುವೆ ನಡೆಯಲಿದೆ. ಟೂರ್ನಿ ಆರಂಭವಾಗುವ ಮುನ್ನವೇ ಆರ್​ಸಿಬಿ ಸ್ಟಾರ್ ಯಶ್ ದಯಾಳ್​ಗೆ (RCB star Yash Dayal) ದೊಡ್ಡ…

The post ಟಿ-20 ಕ್ರಿಕೆಟ್​​ ಲೀಗ್​ನಿಂದ ಬ್ಯಾನ್ ಆದ ಯಶ್ ದಯಾಳ್​​ appeared first on Good News 24x7.

]]>

ಇಂದಿನಿಂದ ಉತ್ತರ ಪ್ರದೇಶ ಟಿ20 ಲೀಗ್ (UP T-20 League) ಆರಂಭವಾಗುತ್ತಿದೆ. ಮೊದಲ ಪಂದ್ಯ ಮೀರತ್ ಮಾವರಿಕ್ಸ್ ಮತ್ತು ಕಾನ್ಪುರ್ ಸೂಪರ್‌ಸ್ಟಾರ್ಸ್ ನಡುವೆ ನಡೆಯಲಿದೆ. ಟೂರ್ನಿ ಆರಂಭವಾಗುವ ಮುನ್ನವೇ ಆರ್​ಸಿಬಿ ಸ್ಟಾರ್ ಯಶ್ ದಯಾಳ್​ಗೆ (RCB star Yash Dayal) ದೊಡ್ಡ ಆಘಾತವಾಗಿದ್ದು, ಟೂರ್ನಿಯಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.


ವರದಿಗಳ ಪ್ರಕಾರ.. ಅವರು ಇನ್ಮುಂದೆ ಈ ಲೀಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲ್ಲ. ಗೋರಖ್‌ಪುರ ಲಯನ್ಸ್ ತಂಡವು ಹರಾಜಿನಲ್ಲಿ ಯಶ್ ಅವರನ್ನು 7 ಲಕ್ಷ ರೂಪಾಯಿಗೆ ಖರೀದಿಸಿದೆ. ಕಳೆದ 2 ವರ್ಷಗಳಲ್ಲಿ ಯಶ್ ದಯಾಳ್​​ಗೆ ತುಂಬಾನೇ ಬೇಡಿಕೆ ಇತ್ತು. ಐಪಿಎಲ್ 2025 ನಂತರ ಯಶ್ ದಯಾಳ್ ಕೆಟ್ಟ ದಿನಗಳನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟ್ ಅಲ್ಲ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು. ಗಾಜಿಯಾಬಾದ್‌ನ ಹುಡುಗಿಯೊಬ್ಬಳು ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಜೈಪುರದಲ್ಲಿ ಮತ್ತೊಬ್ಬ ಹುಡುಗಿ ಗಂಭೀರ ಆರೋಪ ಮಾಡಿದ್ದಾಳೆ.

 

 

ಉತ್ತರ ಪ್ರದೇಶ ಟಿ20 ಲೀಗ್‌ನಿಂದ ಬ್ಯಾನ್ ಉತ್ತರ ಪ್ರದೇಶ ಟಿ20 ಲೀಗ್ ಅವರನ್ನು ಆಡದಂತೆ ನಿಷೇಧಿಸಿದೆ. ದಯಾಳ್ ನಿಷೇಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಅವರು ಉತ್ತರ ಪ್ರದೇಶ ಟಿ20 ಲೀಗ್​ನಿಂದ ಹೊರಬಿದ್ದಿರೋದು ಪಕ್ಕಾ ಎಂದು ವರದಿಗಳು ಹೇಳಿವೆ. ಆ ಮೂಲಕ ಯಶ್ ದಯಾಳ್ ಕ್ರಿಕೆಟ್ ವೃತ್ತಿಜೀವನ ಅಪಾಯದಲ್ಲಿದೆ ಅನ್ನೋದು ಸ್ಪಷ್ಟವಾಗಿದೆ.

The post ಟಿ-20 ಕ್ರಿಕೆಟ್​​ ಲೀಗ್​ನಿಂದ ಬ್ಯಾನ್ ಆದ ಯಶ್ ದಯಾಳ್​​ appeared first on Good News 24x7.

]]>