Tamil Nadu Archives - Good News 24x7 https://www.goodnews24x7.com/tag/tamil-nadu/ Kannada Thu, 02 Apr 2026 12:09:08 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Tamil Nadu Archives - Good News 24x7 https://www.goodnews24x7.com/tag/tamil-nadu/ 32 32 ತಮಿಳುನಾಡಿನ TVK ಪಕ್ಷದ ಅಧ್ಯಕ್ಷ ವಿಜಯ್ ಆಸ್ತಿ ಗೊತ್ತಾ ! https://www.goodnews24x7.com/tamil-nadu-tvk-party-president-vijays-assets-are-known/ Thu, 02 Apr 2026 12:07:01 +0000 https://www.goodnews24x7.com/?p=9077   ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸಂಪೂರ್ಣ ಆಸ್ತಿ ವಿವರ ನೀಡಿದ ದಳಪತಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಟಿವಿಕೆ ಅಧ್ಯಕ್ಷ ವಿಜಯ್, ತಮ್ಮ ಅಫಿಡವಿಟ್‌ನಲ್ಲಿ ಒಟ್ಟು 624 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.…

The post ತಮಿಳುನಾಡಿನ TVK ಪಕ್ಷದ ಅಧ್ಯಕ್ಷ ವಿಜಯ್ ಆಸ್ತಿ ಗೊತ್ತಾ ! appeared first on Good News 24x7.

]]>

 

ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸಂಪೂರ್ಣ ಆಸ್ತಿ ವಿವರ ನೀಡಿದ ದಳಪತಿ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಟಿವಿಕೆ ಅಧ್ಯಕ್ಷ ವಿಜಯ್, ತಮ್ಮ ಅಫಿಡವಿಟ್‌ನಲ್ಲಿ ಒಟ್ಟು 624 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ 404.58 ಕೋಟಿ ಚರ ಆಸ್ತಿ ಹಾಗೂ 220.15 ಕೋಟಿ ಸ್ಥಿರ ಆಸ್ತಿ ಸೇರಿದೆ.

ವಿಶೇಷವೆಂದರೆ, ವಿಜಯ್ ಅವರು ತಮ್ಮ ಕುಟುಂಬ ಸದಸ್ಯರಿಗೆ ಸಾಲ ನೀಡಿರುವುದಾಗಿ ತಿಳಿಸಿದ್ದು, ತಂದೆ ಎಸ್.ಎ. ಚಂದ್ರಶೇಖರ್ ಅವರಿಗೆ 3.02 ಕೋಟಿ, ತಾಯಿ ಶೋಭಾಗೆ 87.12 ಲಕ್ಷ, ಪತ್ನಿ ಸಂಗೀತಾ ಅವರಿಗೆ 12.6 ಕೋಟಿ ಹಾಗೂ ತಮ್ಮ ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದೇನೆ ಎಂದು ಹೇಳಿದ್ದಾರೆ.

ದಳಪತಿ ವಿಜಯ್ ಬಳಿ 883 ಗ್ರಾಂ ಚಿನ್ನ ಮತ್ತು 5 ಕಾರುಗಳಿದ್ದರೆ, ಪತ್ನಿ ಸಂಗೀತಾ ಹೆಸರಿನಲ್ಲಿ 3 ಕೆಜಿಗೂ ಅಧಿಕ ಚಿನ್ನ ಹಾಗೂ 134 ಕ್ಯಾರಟ್ ವಜ್ರಗಳಿವೆ. ತಮ್ಮನ್ನು ಸ್ವಯಂ ಉದ್ಯೋಗಿ ಎಂದು ಗುರುತಿಸಿಕೊಂಡಿರುವ ವಿಜಯ್ ಅವರಿಗೆ ಬಾಡಿಗೆ, ಬಡ್ಡಿ ಮತ್ತು ಟ್ರಸ್ಟ್‌ಗಳ ಮೂಲಕ ಆದಾಯ ಬರುತ್ತಿದ್ದು. ರಾಜಕೀಯ ಪ್ರವೇಶದ ಬೆನ್ನಲ್ಲೇ ಅವರ ಈ ಬೃಹತ್ ಆಸ್ತಿ ವಿವರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

The post ತಮಿಳುನಾಡಿನ TVK ಪಕ್ಷದ ಅಧ್ಯಕ್ಷ ವಿಜಯ್ ಆಸ್ತಿ ಗೊತ್ತಾ ! appeared first on Good News 24x7.

]]>
ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ…….. https://www.goodnews24x7.com/%e0%b2%97%e0%b2%a1%e0%b3%8d%e0%b2%a1%e0%b2%b5%e0%b2%bf%e0%b2%a6%e0%b3%86-%e0%b2%8e%e0%b2%82%e0%b2%a6%e0%b3%81-%e0%b2%95%e0%b2%be%e0%b2%b6%e0%b3%8d%e0%b2%ae%e0%b3%80%e0%b2%b0%e0%b2%bf-%e0%b2%b5/ Sat, 28 Jun 2025 11:49:30 +0000 https://www.goodnews24x7.com/?p=4762 ನೆಫ್ರಾಲಜಿ ಸ್ಪೆಷಲೈಸೇಷನ್ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ ಕೊಯಮತ್ತೂರಿನ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ ನಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಅನಿರೀಕ್ಷಿತ ಆಘಾತ ಎದುರಾಯಿತು. ತಮ್ಮ ಮೆಡಿಕಲ್ ಕಾಲೇಜಿನ ಡ್ರೆಸ್ ಕೋಡ್…

The post ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ…….. appeared first on Good News 24x7.

]]>

ನೆಫ್ರಾಲಜಿ ಸ್ಪೆಷಲೈಸೇಷನ್ಗೆ ಸ್ಪರ್ಧಾತ್ಮಕವಾದ NEET-SS ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದ ವೈದ್ಯ ಜುಬೈರ್ ಅಹ್ಮದ್ ತಮಿಳುನಾಡಿನ ಕೊಯಮತ್ತೂರಿನ ಕೊವಾಯ್ ಮೆಡಿಕಲ್ ಸೆಂಟರ್ ಆ್ಯಂಡ್ ಹಾಸ್ಪಿಟಲ್ ನಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಅನಿರೀಕ್ಷಿತ ಆಘಾತ ಎದುರಾಯಿತು. ತಮ್ಮ ಮೆಡಿಕಲ್ ಕಾಲೇಜಿನ ಡ್ರೆಸ್ ಕೋಡ್ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಲೇಜು ಅಧಿಕಾರಿಗಳು ಆ ವೈದ್ಯ ಗಡ್ಡ ಬೋಳಿಸಿಕೊಳ್ಳದ ಹೊರತು ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಹ್ಮದ್ ಅವರು ಗಡ್ಡ ಬೋಳಿಸುವೆನೆಂದು ಭರವಸೆಯನ್ನು ನೀಡಿದರೂ ತಮಿಳುನಾಡಿನ ಆಸ್ಪತ್ರೆ ಆಡಳಿತ ಸೀಟು ನೀಡಲು ನಿರಾಕರಿಸಿತು. ಅವರ 2 ಲಕ್ಷ ರೂ. ಅಡ್ಮಿಷನ್ ಡೆಪಾಸಿಟ್ ಅನ್ನು ಸಹ ತಡೆಹಿಡಿಯಿತು.

ಈ ಘಟನೆಯು ಧಾರ್ಮಿಕ ತಾರತಮ್ಯದ ಆರೋಪಗಳನ್ನು ಹುಟ್ಟುಹಾಕಿದೆ. ಏಕೆಂದರೆ ಗಡ್ಡವು ಅನೇಕ ಮುಸ್ಲಿಂ ಪುರುಷರಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಇದೀಗ ಕಾಶ್ಮೀರದ ವಿದ್ಯಾರ್ಥಿ ಸಂಘವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮನವಿ ಸಲ್ಲಿಸಿದ್ದು, ಕಾಲೇಜಿನ ಕ್ರಮಗಳು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ. ತಮ್ಮ ಪತ್ರದಲ್ಲಿ ವಿದ್ಯಾರ್ಥಿ ಸಂಘವು, ಶಿಕ್ಷಣ ಸಂಸ್ಥೆಗಳು ಮೂಲಭೂತ ಹಕ್ಕುಗಳೊಂದಿಗೆ ಸಂಘರ್ಷಿಸುವ ಡ್ರೆಸ್ ಕೋಡ್ಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ. “ಈ ನಿರಾಕರಣೆ ಧಾರ್ಮಿಕ ಪೂರ್ವಾಗ್ರಹದಿಂದ ಉಂಟಾಗಿದ್ದು, ಅದು ಅಪಾಯಕಾರಿಯಾಗಿದೆ” ಎಂದು ಒಕ್ಕೂಟದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

 

 

The post ಗಡ್ಡವಿದೆ ಎಂದು ಕಾಶ್ಮೀರಿ ವೈದ್ಯನಿಗೆ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನಿರಾಕರಣೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ…….. appeared first on Good News 24x7.

]]>
ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. https://www.goodnews24x7.com/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf%e0%b2%97%e0%b2%b0-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%95%e0%b3%8d%e0%b2%95%e0%b3%86-%e0%b2%b8%e0%b2%bf%e0%b2%b2%e0%b3%81%e0%b2%95/ Thu, 05 Jun 2025 11:24:03 +0000 https://www.goodnews24x7.com/?p=4230 ‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು…

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>

‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು ಅಂದರೆ ಜೂನ್ 5 ಅಂದರೆ ರಿಲೀಸ್ ಆಗಿದೆ. ಈ ಸಿನಿಮಾನ ನೋಡಲು ಕನ್ನಡಿಗರೂ ಈ ಮೊದಲು ಕಾದಿದ್ದರು. ಆದರೆ, ಕಮಲ್ ಹಾಸನ್ ಅವರು ಯಾವಾಗ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದರೋ ಆ ಕ್ಷಣಕ್ಕೆ ಅವರು ಕನ್ನಡಿಗರ ವಿರೋಧ ಕಟ್ಟಿಕೊಂಡರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಿಲ್ಲ. ಹೀಗಿರುವಾಗಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ.

‘ಥಗ್ ಲೈಫ್’ ಚಿತ್ರದ ಈವೆಂಟ್ನಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಬಳಿಕ ಅವರು ಕ್ಷಮೆ ಕೇಳಿಯೇ ಇಲ್ಲ. ಏನೇ ಆದರೂ ನಾನು ಕನ್ನಡಿಗರ ಬಳಿ ಕ್ಷಮೆ ಕೇಳಲ್ಲ, ನಾನು ತಪ್ಪೇ ಮಾಡಿಲ್ಲ ಎಂದು ಧಿಮಾಕು ತೋರಿಸುತ್ತಿದ್ದರು. ಈ ಸಮಯದಲ್ಲಿ ತಮಿಳಿಗರ ಓಲೈಕೆ ಮಾಡಲು ಕೂಡ ಪ್ರಯತ್ನಿಸಿದ್ದರು. ಈಗ ಅವರಿಗೆ ತಮಿಳಿಗರೇ ಪಾಠ ಕಲಿಸಿದ್ದಾರೆ. ‘ಅತಿ ಕೆಟ್ಟ ಸಿನಿಮಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅನೇಕರು ‘ಥಗ್ ಲೈಫ್’ ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.‘ಥಗ್ ಲೈಫ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕತೆ ಹಾಗೂ ನಿರೂಪಣೆ ಯಾವುದೂ ಉತ್ತಮವಾಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮೊದಲ ದಿನದ ಗಳಿಕೆ ಮೇಲೆ ಈ ವಿಮರ್ಶೆ ಸಾಕಷ್ಟು ಪರಿಣಾಮ ಬೀರಲಿದೆ. ಇನ್ನು, ಕಮಲ್ ಕ್ಷಮೆ ಕೇಳಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆದರೂ ಯಶಸ್ಸು ಕಾಣೋದು ಅನುಮಾನವೇ. ಚಿತ್ರದ ಮುಂದಿನ ಕಲೆಕ್ಷನ್ ಯಾವ ರೀತಿ ಇರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

 

 

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>
ಪತಿಯ ಮೇಲಿದ್ದ ಅನುಮಾನಕ್ಕೆ,ಅವನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಪತ್ನಿ…. https://www.goodnews24x7.com/%e0%b2%aa%e0%b2%a4%e0%b2%bf%e0%b2%af-%e0%b2%ae%e0%b3%87%e0%b2%b2%e0%b2%bf%e0%b2%a6%e0%b3%8d%e0%b2%a6-%e0%b2%85%e0%b2%a8%e0%b3%81%e0%b2%ae%e0%b2%be%e0%b2%a8%e0%b2%95%e0%b3%8d%e0%b2%95%e0%b3%86/ Sun, 01 Jun 2025 08:38:11 +0000 https://www.goodnews24x7.com/?p=4200 ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆಂಡತಿ ತನ್ನ ಪತಿಯ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಘಟನೆ ನಡೆದಿದೆ. ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಹೆಂಡತಿ ಈ ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಗೆ…

The post ಪತಿಯ ಮೇಲಿದ್ದ ಅನುಮಾನಕ್ಕೆ,ಅವನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಪತ್ನಿ…. appeared first on Good News 24x7.

]]>

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆಂಡತಿ ತನ್ನ ಪತಿಯ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಘಟನೆ ನಡೆದಿದೆ. ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಹೆಂಡತಿ ಈ ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ಹೀನ ಕೃತ್ಯ ಎಸಗಿದ ಮಹಿಳೆಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಕೃಷ್ಣಪುರಂನ ಆಟೋ ಚಾಲಕ ಬಾಲಸುಬ್ರಮಣಿಯನ್ (42). ಆತನ ಪತ್ನಿ ಮುತ್ತುಲಕ್ಷ್ಮಿ (34). ಈ ದಂಪತಿಗೆ 3 ಹೆಣ್ಣು ಮತ್ತು ಒಬ್ಬ ಗಂಡು ಮಗ ಇದ್ದಾರೆ. ಗಂಡ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಅನುಮಾನಗೊಂಡಿದ್ದ ಮುತ್ತುಲಕ್ಷ್ಮಿ ಆತನೊಂದಿಗೆ ಈ ಹಿಂದೆ ಹಲವು ಬಾರಿ ಜಗಳ ಮಾಡಿದ್ದಾಳೆ. ಇತ್ತೀಚಿಗಷ್ಟೇ 25 ದಿನಗಳ ಹಿಂದೆಯೂ ಮುತ್ತುಲಕ್ಷ್ಮಿ ಜಗಳವಾಡಿ ತನ್ನ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಮುತ್ತುಲಕ್ಷ್ಮಿ ನಾಲ್ಕು ದಿನಗಳ ಹಿಂದೆ ತನ್ನ ಗಂಡನ ಮನೆಗೆ ಹೋಗಿದ್ದಾಳೆ. ಈ ಪರಿಸ್ಥಿತಿಯಲ್ಲಿ, ಮೇ 30 ರಂದು ಮತ್ತೆ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ತಾರಕಕ್ಕೇರಿದ್ದು, ಏಕಾಏಕಿ ಅಡುಗೆ ಮನೆಗೆ ಹೋದ ಮುತ್ತುಲಕ್ಷ್ಮಿ ಕೊತ ಕೊತ ಕುದಿಯುತ್ತಿದ್ದ ಎಣ್ಣೆಯನ್ನು ತದ್ದು ಸುಬ್ರಮಣಿಯನ್ ಮೇಲೆ ಹಾಕಿದ್ದಾಳೆ.

ಪರಿಣಾಮವಾಗಿ, ನೋವಿನಿಂದ ಕಿರುಚುತ್ತಿದ್ದ ಬಾಲಸುಬ್ರಮಣಿಯನ್ಯನ್ನು ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಂತಿಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುತ್ತುಲಕ್ಷ್ಮಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಬಾಲಸುಬ್ರಮಣಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಮುತ್ತುಲಕ್ಷ್ಮಿ ಹೇಳಿಕೊಂಡಿದ್ದಾಳೆ.

The post ಪತಿಯ ಮೇಲಿದ್ದ ಅನುಮಾನಕ್ಕೆ,ಅವನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಪತ್ನಿ…. appeared first on Good News 24x7.

]]>
ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! https://www.goodnews24x7.com/these-famous-indian-temples-do-not-allow-men/ Sun, 13 Apr 2025 05:37:20 +0000 https://www.goodnews24x7.com/?p=3189 ಭಾರತವು ತನ್ನ ಸನಾತನ ಧರ್ಮದ ಸಂಸ್ಕೃತಿಯಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಭಾರತವು ಎಣಿಕೆಗೂ ಮೀರಿದಷ್ಟು ದೇವಾಲಯಗಳನ್ನು ಒಳಗೊಂಡಿದೆ. ಆದಾಗ್ಯೂ, ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವಂತೆಯೇ, ಪುರುಷರಿಗೂ ವಿವಿಧ ಕಾರಣಗಳಿಗಾಗಿ ಕೆಲವು ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ…

The post ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! appeared first on Good News 24x7.

]]>

ಭಾರತವು ತನ್ನ ಸನಾತನ ಧರ್ಮದ ಸಂಸ್ಕೃತಿಯಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಭಾರತವು ಎಣಿಕೆಗೂ ಮೀರಿದಷ್ಟು ದೇವಾಲಯಗಳನ್ನು ಒಳಗೊಂಡಿದೆ. ಆದಾಗ್ಯೂ, ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವಂತೆಯೇ, ಪುರುಷರಿಗೂ ವಿವಿಧ ಕಾರಣಗಳಿಗಾಗಿ ಕೆಲವು ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಕಾಮಾಖ್ಯ ದೇವಸ್ಥಾನ, ಅಸ್ಸಾಂ

 

 

 

 

 

 

ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟದ ಮೇಲೆ ಕಾಮಾಖ್ಯ ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಕಾಮಾಕ್ಯ ದೇವಿಗಾಗಿ ಅಂಬುಬಾಚಿ ಮೇಳ ನಡೆಯುತ್ತದೆ. ಈ ಸಮಯದಲ್ಲಿ ದೇವಾಲಯವು ಮೂರು ದಿನಗಳ ಕಾಲ ಮುಚ್ಚಲ್ಪಡುತ್ತದೆ. ಆ ಅವಧಿಯಲ್ಲಿ ಪುರುಷರಿಗೆ ಪ್ರವೇಶವಿರಲಿಲ್ಲ.

ತಮಿಳುನಾಡಿನ ಕುಮಾರಿ ಅಮ್ಮನ್ ದೇವಾಲಯ

 

 

 

 

ತಮಿಳುನಾಡಿನ ಕನ್ಯಾಕುಮಾರಿ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ಕನ್ಯಾಕುಮಾರಿಗೆ ಸಮರ್ಪಿತವಾದ ದೇವಾಲಯವಾಗಿದೆ. ದೇವಿಯ ವಿಗ್ರಹ ಇರುವ ಗರ್ಭಗುಡಿಯೊಳಗೆ ಪುರುಷರು, ವಿಶೇಷವಾಗಿ ವಿವಾಹಿತ ಪುರುಷರು ಪ್ರವೇಶಿಸಲು ಅವಕಾಶವಿಲ್ಲ. ಅಲ್ಲಿ ಮಹಿಳೆಯರು ಮಾತ್ರ ದೇವಿಯನ್ನು ನೇರವಾಗಿ ಪೂಜಿಸಬಹುದು. ದೇವಾಲಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ, ಸನ್ಯಾಸಿಗಳು ದೇವಾಲಯದ ದ್ವಾರದಿಂದ ಮಾತ್ರ ಭೇಟಿ ನೀಡಬಹುದು, ಆದರೆ ವಿವಾಹಿತ ಪುರುಷರು ದೂರದಿಂದ ಪ್ರಾರ್ಥನೆ ಸಲ್ಲಿಸಬಹುದು.

ಬ್ರಹ್ಮ ದೇವಾಲಯ, ಪುಷ್ಕರ್, ರಾಜಸ್ಥಾನ

 

 

 

 

 

ಒಂದು ಪುರಾಣದ ಕಾರಣದಿಂದಾಗಿ ವಿವಾಹಿತ ಪುರುಷರು ಈ ಬ್ರಹ್ಮ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ಬ್ರಹ್ಮ ದೇವರನ್ನು ಪೂಜಿಸುವ ವಾರ್ಷಿಕ ಉತ್ಸವ ನಡೆಯುತ್ತದೆ. ಬ್ರಹ್ಮನು ಗಾಯತ್ರಿ ದೇವಿಯನ್ನು ಮದುವೆಯಾಗುತ್ತಾನೆ. ಇದು ಸರಸ್ವತಿ ದೇವಿಯನ್ನು ಕೋಪಗೊಳಿಸಿತು. ಸರಸ್ವತಿ ದೇವಿಯು ಈ ದೇವಾಲಯಕ್ಕೆ ಶಾಪ ನೀಡಿದ್ದಾಳೆಂದು ಹೇಳಲಾಗುತ್ತದೆ, ವಿವಾಹಿತ ಪುರುಷರು ಈ ದೇವಾಲಯಕ್ಕೆ ಪ್ರವೇಶಿಸಿ ಅಲ್ಲಿ ಪೂಜೆ ಸಲ್ಲಿಸಿದರೆ, ಅದು ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಈ ದೇವಾಲಯದ ಗರ್ಭಗುಡಿಗೆ ಪುರುಷರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಅಟ್ಟುಕಲ್ ಭಗವತಿ ದೇವಸ್ಥಾನ, ಕೇರಳ

 

 

 

 

 

ಅಟ್ಟುಕಲ್ ಭಗವತಿ ದೇವಸ್ಥಾನವನ್ನು ಮಹಿಳೆಯರ ಶಬರಿಮಲೆ ಎಂದೂ ಕರೆಯುತ್ತಾರೆ. ಅಟ್ಟುಕಲ್ ಪೊಂಗಲ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳವು ಪ್ರಪಂಚದಾದ್ಯಂತದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸುವ ಅತಿದೊಡ್ಡ ವಾರ್ಷಿಕ ಆಚರಣೆಯಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದೆ. ಅಟ್ಟುಕಲ್ ಪೊಂಗಲ್ ಹಬ್ಬದ ಸಮಯದಲ್ಲಿ, ಪುರುಷರಿಗೆ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ.

ಜೋಧ್ಪುರದ ಸಂತೋಷಿ ಮಾತಾ ದೇವಾಲಯ

 

 

 

 

 

 

ಜೋಧ್ಪುರ ನಗರದಲ್ಲಿ ಪುರುಷರಿಗೆ ಒಳಗೆ ಪ್ರವೇಶವಿಲ್ಲ ಎಂಬ ಸಂತೋಷಿ ಮಾತಾ ದೇವಾಲಯವಿದೆ. ಶುಕ್ರವಾರ ತಾಯಿ ಸಂತೋಷಿಗೆ ಮೀಸಲಾದ ದಿನ. ಆದ್ದರಿಂದ, ಈ ದಿನದಂದು, ಮಹಿಳೆಯರು ಶಾಂತಿ ಮತ್ತು ಸಂತೋಷವನ್ನು ಅರಸುತ್ತಾ ದೇವಿಯನ್ನು ಭೇಟಿ ಮಾಡುತ್ತಾರೆ. ಮಹಿಳೆಯರು ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಿಸುತ್ತಾರೆ, ದೇವಾಲಯದ ಶಕ್ತಿಯು ಕುಟುಂಬ ಸಾಮರಸ್ಯ ಮತ್ತು ಸಂತೋಷಕ್ಕಾಗಿ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಈ ಸಮಯದಲ್ಲಿ, ಪುರುಷರಿಗೆ ಗರ್ಭಗುಡಿಯೊಳಗೆ ಪ್ರವೇಶವಿಲ್ಲ.

The post ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! appeared first on Good News 24x7.

]]>
ಮದುವೆ ದಿನವೇ ನವವಧು ಆತ್ಮಹ*! https://www.goodnews24x7.com/%e0%b2%ae%e0%b2%a6%e0%b3%81%e0%b2%b5%e0%b3%86-%e0%b2%a6%e0%b2%bf%e0%b2%a8%e0%b2%b5%e0%b3%87-%e0%b2%a8%e0%b2%b5%e0%b2%b5%e0%b2%a7%e0%b3%81-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4/ Sun, 02 Feb 2025 09:36:57 +0000 https://www.goodnews24x7.com/?p=2119 ಮದುವೆ ಎಂಬುದು ಎಲ್ಲರ ಜೀವನದಲ್ಲೂ ಒಂದು ಸುಂದರವಾದ ಕ್ಷಣವಾಗಿರುತ್ತದೆ. ಆದರೆ ಮದುವೆ ಬಳಿಕ ತವರು ಮನೆಗೆ ಬಂದ ನವವಧು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಆಂಡಿಪಟ್ಟಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ಹೌದು, ಈ…

The post ಮದುವೆ ದಿನವೇ ನವವಧು ಆತ್ಮಹ*! appeared first on Good News 24x7.

]]>

ಮದುವೆ ಎಂಬುದು ಎಲ್ಲರ ಜೀವನದಲ್ಲೂ ಒಂದು ಸುಂದರವಾದ ಕ್ಷಣವಾಗಿರುತ್ತದೆ. ಆದರೆ ಮದುವೆ ಬಳಿಕ ತವರು ಮನೆಗೆ ಬಂದ ನವವಧು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಆಂಡಿಪಟ್ಟಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಹೌದು, ಈ ಘಟನೆಗೆ ಸಂಬಂಧಪಟ್ಟವರು ತೇಣಿ ಜಿಲ್ಲೆ, ಆಂಡಿಪಟ್ಟಿ ಹತ್ತಿರದ ಕದಿರ್ನರಸಿಂಗಪುರದವರು. ಪರಮೇಶ್ವರನ್ (56). ಸರ್ಕಾರಿ ಬಸ್ಸಿನಲ್ಲಿ ಚಾಲಕರಾಗಿದ್ದಾರೆ.ಇವರ ಮಗಳು ಸೌಮ್ಯಾ (24). ಪೆರಿಯಕುಳಂ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾಳೆ. ಕಂಬಂ ಪುದುಪಟ್ಟಿಯ ರವಿಚಂದ್ರನ್ ಮಗ ಪಾಲಾಜಿ (27) ಜೊತೆ ಸೌಮ್ಯಾಳ ಮದುವೆ ನಿಶ್ಚಯ ಆಗಿತ್ತಂತೆ ಎಂದು ತಿಳಿದು ಬರುತ್ತದೆ.

ನಂತರದಲ್ಲಿ ಮದುವೆ ತಯಾರಿ ಜೋರಾಗಿ ನಡೀತಿತ್ತು. ಆದ್ರೆ ಸೌಮ್ಯಾಗೆ ಈ ಮದುವೆಯಲ್ಲಿ ಇಷ್ಟ ಇರಲಿಲ್ಲವಂತೆ ಅದ್ಯಾಗೂ ಪೋಷಕರು ಜನವರಿ 31 ರಂದು ಕಂಬಂನಲ್ಲಿರುವ ಖಾಸಗಿ ಮದುವೆ ಮಂಟಪದಲ್ಲಿ ಮಗಳಿಗೆ ಮದುವೆ ಮಾಡಿದ್ದಾರೆ.ಅದರಂತೆಯೇ ಮದುವೆ ಮನೆಯವರು ವಧುವನ್ನು ಕದಿರ್ನರಸಿಂಗಪುರಕ್ಕೆ ಕರೆದುಕೊಂಡು ಹೋದರು. ಮನೆಗೆ ಬಂದ ಸೌಮ್ಯಾ ಬಾತ್ರೂಮ್ಗೆ ಹೋಗಬೇಕು ಅಂದ್ರಂತೆ. ಬೆಡ್ರೂಮ್ಗೆ ಹೋದ ಸೌಮ್ಯಾ ಬಾಗಿಲು ಹಾಕಿಕೊಂಡ್ಳು. ಬಾಗಿಲು ತೆಗೆಯದಿದ್ದಾಗ ಮನೆಯವರು ಬಾಗಿಲು ಒಡೆದು ನೋಡಿದಾಗ ಸೌಮ್ಯಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ. ಹೌದು ಇಂತಹದೊಂದು ಆಘಾತಕಾರಿ ಘಟನೆ ನಡೆದಿದೆ.

ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಯ್ತು. ಸೌಮ್ಯಾಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯ್ತು. ಪೊಲೀಸರು ತನಿಖೆ ಮಾಡ್ತಿದ್ದಾರೆ. ತನಿಖೆ ವೇಳೆ ತಿಳಿದುಬಂದಿದ್ದು ಏನೆಂದರೆ ಸೌಮ್ಯಾಗೆ ಮದುವೆ ಇಷ್ಟ ಇರಲಿಲ್ಲ, ಆಕೆ ಕನ್ಯಾಸ್ತ್ರೀ ಆಗಿ ಉಳಿಬೇಕು ಅಂದುಕೊಂಡಿದ್ದಳಂತೆ. ಅಂದರೆ ಮದುವೆಯಾಗದೇ ಜೀವನ ಕಳೆಯಬೇಕು ಎಂಬ ಆಸೆ ಇತ್ತಂತೆ ಆದರೆ ಪೋಷಕರು ಮದುವೆ ಮಾಡಿದ ಕಾರಣ ಬೇಸರಗೊಂಡು ಜೀವಕ್ಕೆ ಅಂತ್ಯ ತಂದುಕೊಂಡಿದ್ದಾಳೆಂದು ಹೇಳಲಾಗಿದೆ. ಆದ್ಯಾಗೂ ಪೊಲೀಸರು ಆತ್ಮಹತ್ಯೆಯ ನಿಖರ ಕಾರಣವೇನು ಎಂದು ತಿಳಿಯಲು ತನಿಖೆ ಮುಂದುವರಿಸಿದ್ದಾರೆ. ತನಿಖೆ ಮುಗಿದ ನಂತರವೇ ಎಲ್ಲಾ ಮಾಹಿತಿ ಲಭ್ಯವಾಗುವುದು.

The post ಮದುವೆ ದಿನವೇ ನವವಧು ಆತ್ಮಹ*! appeared first on Good News 24x7.

]]>
ನಟ ಧನುಷ್ ಪರವಾಗಿ ಕೋರ್ಟ್ನಲ್ಲಿ ತೀರ್ಪು:ನಯನಾತಾರಾಗೆ ಭಾರೀ ಹಿನ್ನಡೆ! https://www.goodnews24x7.com/%e0%b2%a8%e0%b2%9f-%e0%b2%a7%e0%b2%a8%e0%b3%81%e0%b2%b7%e0%b3%8d-%e0%b2%aa%e0%b2%b0%e0%b2%b5%e0%b2%be%e0%b2%97%e0%b2%bf-%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d%e0%b2%a8%e0%b2%b2/ Tue, 28 Jan 2025 11:08:35 +0000 https://www.goodnews24x7.com/?p=1972 ನಟಿ ನಯನತಾರ ಮತ್ತು ನಟ ಧನುಷ್ ಇಬ್ಬರು ಸಹ ಭಾರತೀಯ ಚಿತ್ರರಂಗದ ಸ್ಟಾರ್ CC ಹಾಗೂ ನಟಿಯರು. ಇಬ್ಬರೂ ಸಹ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಇಬ್ಬರಿಗೂ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಇದೆ. ಧನುಷ್ ಅವರು ಕೋರ್ಟ್ನಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಕೆ ಮಾಡಿದ್ದರು.…

The post ನಟ ಧನುಷ್ ಪರವಾಗಿ ಕೋರ್ಟ್ನಲ್ಲಿ ತೀರ್ಪು:ನಯನಾತಾರಾಗೆ ಭಾರೀ ಹಿನ್ನಡೆ! appeared first on Good News 24x7.

]]>

ನಟಿ ನಯನತಾರ ಮತ್ತು ನಟ ಧನುಷ್ ಇಬ್ಬರು ಸಹ ಭಾರತೀಯ ಚಿತ್ರರಂಗದ ಸ್ಟಾರ್ CC ಹಾಗೂ ನಟಿಯರು. ಇಬ್ಬರೂ ಸಹ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಇಬ್ಬರಿಗೂ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಇದೆ. ಧನುಷ್ ಅವರು ಕೋರ್ಟ್ನಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಅವರ ಪರವಾಗಿ ದೊಡ್ಡ ತೀರ್ಪು ಹೊರ ಬಂದಿದೆ.ನಟಿ ನಯನತಾರಾ ಅವರು ತಮ್ಮ ವಿವಾಹ ಡಾಕ್ಯುಮೆಂಟರಿಗೆ ‘ನಾನುಂ ರೌಡಿ ದಾನ್’ ಚಿತ್ರದ ದೃಶ್ಯವನ್ನು ಒಪ್ಪಿಗೆ ಇಲ್ಲದೆ ಬಳಕೆ ಮಾಡಿಕೊಂಡಿದ್ದರು. ಈ ಸಂಬಂಧ ಧನುಷ್ ಅವರು ಕೋರ್ಟ್ನಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಡಾಕ್ಯುಮೆಂಟರಿ ಪ್ರಸಾರ ಮಾಡಿದ್ದ ‘ನೆಟ್ಫ್ಲಿಕ್ಸ್ ಇಂಡಿಯಾ’ ಅರ್ಜಿಯನ್ನು ರದ್ದು ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಯನತಾರಾ, ಅವರ ಪತಿ ವಿಘ್ನೇಶ್ ಶಿವನ್ ಹಾಗೂ ಇವರ ನಿರ್ಮಾಣ ಸಂಸ್ಥೆ ‘ರೌಡಿ ಪಿಕ್ಚರ್ಸ್’ ವಿರುದ್ಧ ಧನುಷ್ ಅವರು ಕೇಸ್ ಹಾಕಿದ್ದರು. ಧನುಷ್ ಅವರು ನಿರ್ಮಾಣ ಮಾಡಿದ ‘ನಾನುಂ ರೌಡಿ ದಾನ್’ ಚಿತ್ರದ 3 ಸೆಕೆಂಡ್ ದೃಶ್ಯವನ್ನು ‘ನೆಟ್ಫ್ಲಿಕ್ಸ್’ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರೀಟೇಲ್’ನಲ್ಲಿ ಬಳಕೆ ಮಾಡಿದ್ದಾಗಿ ಆರೋಪಿಸಿದ್ದರು.

ಆದ ಕಾರಣ ‘ಒಪ್ಪಿಗೆ ಇಲ್ಲದೆ ಬಳಸಿದ ದೃಶ್ಯವನ್ನು 24 ಗಂಟೆಯಲ್ಲಿ ತೆಗೆಯದೇ ಇದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು’ ಎಂದು ಧನುಷ್ ಎಚ್ಚರಿಸಿದ್ದರು. ಆದಾಗ್ಯೂ ದೃಶ್ಯವನ್ನು ತೆಗೆದಿರಲಿಲ್ಲ. ಹೀಗಾಗಿ, ಧನುಷ್ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಧನುಷ್ ನಿರ್ಮಾಣ ಸಂಸ್ಥೆ ‘ವುಂಡಬಾರ್ ಫಿಲ್ಮ್ಸ್’ ನಷ್ಟ ಭರಿಸಬೇಕು ಎಂದು ಕೂಡ ಕೋರಿತ್ತು. ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ನಟ ಧನುಷ್ ಹಾಗೂ ನಟಿ ನಯನತಾರಾ ವಿರುದ್ಧ ಕಿತ್ತಾಟಕ್ಕೂ ಇದು ಕಾರಣ ಆಗಿತ್ತು. ಈಗ ಈ ಅರ್ಜಿಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಆದಾಗ್ಯೂ ನಟಿ ನಯನತಾರಾ ‘ನಾನೂಮ್ ರೌಡಿ ದಾನ್’ ಸಿನಿಮಾದ ಹಾಡು, ವಿಡಿಯೋ ತುಣುಕು ಬಳಸಿಕೊಳ್ಳಲು ಎರಡು ವರ್ಷಗಳ ಹಿಂದೇ ಅನುಮತಿ ಕೋರಿದ್ದರು. ಆದರೆ, ಅದಕ್ಕೆ ಧನುಷ್ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಅದೇ ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದರು. ಆದ ಕಾರಣ ಮೂರು ಸೆಕೆಂಡ್ ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ನೊಟೀಸ್ನ ಧನುಷ್ ಕಳುಹಿಸಿದ್ದರು. ಹಾಗಾಗಿ ನಟ ಧನುಷ್ ಪರ ಕೋರ್ಟು ತೀರ್ಪು ನೀಡಿದೆ.

The post ನಟ ಧನುಷ್ ಪರವಾಗಿ ಕೋರ್ಟ್ನಲ್ಲಿ ತೀರ್ಪು:ನಯನಾತಾರಾಗೆ ಭಾರೀ ಹಿನ್ನಡೆ! appeared first on Good News 24x7.

]]>
ಒಂದೇ ಕುಟುಂಬದ ನಾಲ್ವರು ಆತ್ಮಹ* ; ತಿರುವಣ್ಣಾಮಲೈಯ ಬಾಡಿಗೆಗಿದ್ದ ಫಾರ್ಮ್ಹೌಸ್ನಲ್ಲಿ ಘಟನೆ. https://www.goodnews24x7.com/%e0%b2%92%e0%b2%82%e0%b2%a6%e0%b3%87-%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%a6-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%b0%e0%b3%81-%e0%b2%86%e0%b2%a4%e0%b3%8d/ Sun, 29 Dec 2024 07:19:23 +0000 https://www.goodnews24x7.com/?p=1360 ತಮಿಳುನಾಡು : ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿರುವ ತೋಟದ ಮನೆಯಲ್ಲಿ ಬಾಡಿಗೆಗೆ ತಂಗಿದ್ದ ಚೆನ್ನೈ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿ ಅನೇಕ ವಸತಿ ನಿಲಯಗಳು, ಅಪಾರ್ಟ್ಮೆಂಟ್ಗಳು ಹಾಗೂ ಫಾರ್ಮ್ಹೌಸ್ಗಳಿವೆ. ಹೊರ ಜಿಲ್ಲೆ…

The post ಒಂದೇ ಕುಟುಂಬದ ನಾಲ್ವರು ಆತ್ಮಹ* ; ತಿರುವಣ್ಣಾಮಲೈಯ ಬಾಡಿಗೆಗಿದ್ದ ಫಾರ್ಮ್ಹೌಸ್ನಲ್ಲಿ ಘಟನೆ. appeared first on Good News 24x7.

]]>

ತಮಿಳುನಾಡು : ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿರುವ ತೋಟದ ಮನೆಯಲ್ಲಿ ಬಾಡಿಗೆಗೆ ತಂಗಿದ್ದ ಚೆನ್ನೈ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿ ಅನೇಕ ವಸತಿ ನಿಲಯಗಳು, ಅಪಾರ್ಟ್ಮೆಂಟ್ಗಳು ಹಾಗೂ ಫಾರ್ಮ್ಹೌಸ್ಗಳಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅಣ್ಣಾಮಲೈ ದೇವರ ದರ್ಶನಕ್ಕೆ ಬರುವ ಭಕ್ತರು ಇಲ್ಲಿ ತೋಟದ ಮನೆಗಳನ್ನು ಬಾಡಿಗೆ ಪಡೆಯುವುದು ಸಾಮಾನ್ಯ. ಹೀಗೆ ಡಿ.26ರಂದು ಚೆನ್ನೈನ ವ್ಯಾಸರಪಾಡಿಯ ಈ ನಾಲ್ವರು ಆನ್ಲೈನ್ ಮೂಲಕ ಗಿರಿವಾಲಂ ಪಾಥ್ನಲ್ಲಿರುವ ಫಾರ್ಮ್ ಹೌಸ್ ಬುಕ್ ಮಾಡಿದ್ದು, ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ತೋಟದ ಮನೆಗೆ ಚೆಕ್ಇನ್ ಆಗಿದ್ದರು.

ಶನಿವಾರ ಬೆಳಗ್ಗೆ ಫಾರ್ಮ್ಹೌಸ್ ಸಿಬ್ಬಂದಿ ಅವರು ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದು, ಎಷ್ಟೋ ಸಮಯವಾದರೂ ಬಾಗಿಲು ತೆರೆದಿರಲಿಲ್ಲ. ಎಷ್ಟೋ ಹೊತ್ತು ಬಡಿದರೂ ಬಾಗಿಲು ತೆರೆಯದ ಕಾರಣ ಬುಕ್ಕಿಂಗ್ ವೇಳೆ ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದರು. ಫೋನ್ ರಿಂಗಾಗುತ್ತಲೇ ಇತ್ತು. ಆದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಬಳಿಕ ಕೊಠಡಿಯ ಕಿಟಕಿಯಿಂದ ನೋಡಿದಾಗ ನಾಲ್ವರು ಪ್ರಜ್ಞೆಹೀನ ಸ್ಥಿತಿಯಲ್ಲಿ ಮಲಗಿರುವ ಹಾಗೆ ಬಂದಿತ್ತು. ಇದರಿಂದ ಗಾಬರಿಗೊಂಡ ಫಾರ್ಮ್ ಹೌಸ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡುತ್ತಿದ್ದಂತೆ ತಿರುವಣ್ಣಾಮಲೈ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ತಂಗಿದ್ದ ಕೊಠಡಿಯ ಬೀಗ ಒಡೆದು ಒಳಗೆ ಹೋಗಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, “ಕೊಠಡಿಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ನಾಲ್ವರೂ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ರುಕ್ಮಿಣಿ ಪ್ರಿಯಾ (45), ಮಹಾಕಾಳ ವ್ಯಾಸ (55), ಮುಕುಂದ್ ಆಕಾಶ್ ಕುಮಾರ್ (17) ಮತ್ತು ಜಲಂಧರಿ (20) ಎಂದು ಗುರುತಿಸಲಾಗಿದೆ. ನಾಲ್ವರೂ ಶಿವಗಂಗೈ ಜಿಲ್ಲೆಯವರಾಗಿದ್ದು, ಚೆನ್ನೈನಲ್ಲಿ ನೆಲೆಸಿದ್ದಾರೆ. ಚೆನ್ನೈನಿಂದ ತಿರುವಣ್ಣಾಮಲೈಗೆ ಬಂದಿದ್ದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದೇವೆ” ಎಂದು ತಿಳಿಸಿದರು.
“ಅವರು ತಂಗಿದ್ದ ಕೊಠಡಿಯಲ್ಲಿ ಡೆತ್ ನೋಟ್ ಹಾಗೂ ವಿಡಿಯೋ ದೊರೆತಿದೆ. ಅದರಲ್ಲಿರುವ ಮಾಹಿತಿ ಪ್ರಕಾರ ತಿರುವಣ್ಣಾಮಲೈನಲ್ಲಿ ಸಾವನ್ನಪ್ಪಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಅವರ ಸಂಬಂಧಿಕರು ಹಾಗೂ ಸ್ನೇಹಿತರನ್ನು ಕೂಡ ಈ ಕುರಿತು ವಿಚಾರಣೆ ನಡೆಸಲಾಗುವುದು” ಎಂದು ಮಾಹಿತಿ ನೀಡಿದರು.

The post ಒಂದೇ ಕುಟುಂಬದ ನಾಲ್ವರು ಆತ್ಮಹ* ; ತಿರುವಣ್ಣಾಮಲೈಯ ಬಾಡಿಗೆಗಿದ್ದ ಫಾರ್ಮ್ಹೌಸ್ನಲ್ಲಿ ಘಟನೆ. appeared first on Good News 24x7.

]]>
ಲೈಂಗಿಕ ದೌರ್ಜನ್ಯ ವಿರುದ್ಧ ಚಾಟಿಯಿಂದ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ ಅಣ್ಣಾಮಲೈ..! https://www.goodnews24x7.com/%e0%b2%b2%e0%b3%88%e0%b2%82%e0%b2%97%e0%b2%bf%e0%b2%95-%e0%b2%a6%e0%b3%8c%e0%b2%b0%e0%b3%8d%e0%b2%9c%e0%b2%a8%e0%b3%8d%e0%b2%af-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7/ Fri, 27 Dec 2024 07:30:04 +0000 https://www.goodnews24x7.com/?p=1273 ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದರು. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ ಭೀಷ್ಮ ಶಪತ ಕೈಗೊಂಡಿದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ…

The post ಲೈಂಗಿಕ ದೌರ್ಜನ್ಯ ವಿರುದ್ಧ ಚಾಟಿಯಿಂದ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ ಅಣ್ಣಾಮಲೈ..! appeared first on Good News 24x7.

]]>

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದರು. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ ಭೀಷ್ಮ ಶಪತ ಕೈಗೊಂಡಿದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಇಂದು ಬೆಳಗ್ಗೆ ಅವರ ನಿವಾಸದ ಮುಂದೆ ಚಾಟಿಯಿಂದ ಹೊಡೆದುಕೊಂಡು ತಮಗೆ ತಾವೇ ನೋವು ಮಾಡಿಕೊಂಡಿದ್ದಾರೆ. ಅಣ್ಣಾ ಯೂನಿರ್ವಸಿಟಿಯಲ್ಲಿ ಓದುತ್ತಿದ್ದ ಇಂಜಿನಿಯರಿಂಗ್ ವಿಧ್ಯಾರ್ಥಿನಿಯ ಮೇಲೆ ಕಾಲೇಜು ಕ್ಯಾಂಪಸ್ನಲ್ಲಿ ಅತ್ಯಾಚಾರ ನಡೆದಿದೆ. ಇದರ ವಿರುದ್ಧ ವಿಧ್ಯಾರ್ಥಿನಿ ಪೊಲೀಸರಿಗೆ ದೂರನ್ನು ನೀಡಿದ್ದರು.

ಪೊಲೀಸರು ಜ್ಞಾನಶೇಖರನ್ ಎಂಬಾತನನ್ನು ಬಂಧಿಸಿದ್ದರು. ಈತ ಯುವತಿಯ ಖಾಸಗಿ ವಿಡೀಯೋ ಚಿತ್ರಿಕರಿಸಿಕೊಂಡು ಬ್ಲಾಕ್ಮೇಲ್ ಮಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು ಎಂಬ ಆರೋಪವಿದೆ. ಆರೋಪಿಯ ಮೇಲೆ 2011ರಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು. ಈತನ ವಿರುದ್ದ ಸುಮಾರು 17 ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆದರೂ ಈ ಆರೋಪಿ ಸ್ವತಂತ್ರ್ಯವಾಗಿ ಓಡಾಡುತ್ತಿದ್ದಾನೆ.
ಡಿಎಂಕೆ ಸರ್ಕಾರದ ಆಡಳಿತದಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ 48 ದಿನಗಳ ಸುದೀರ್ಘ ಉಪವಾಸ ಕೈಗೊಂಡಿರುವ ಅಣ್ಣಾಮಲೈ , ಆರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ .

The post ಲೈಂಗಿಕ ದೌರ್ಜನ್ಯ ವಿರುದ್ಧ ಚಾಟಿಯಿಂದ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ ಅಣ್ಣಾಮಲೈ..! appeared first on Good News 24x7.

]]>
ತಮಿಳುನಾಡಿನಲ್ಲಿ ಮತ್ತೆ ಭಾರಿ ಮಳೆ : ಶಾಲೆಗಳಿಗೆ ರಜೆ , ಯೆಲ್ಲೋ – ಆರೆಂಜ್ Alert ಘೋಷಣೆ https://www.goodnews24x7.com/%e0%b2%a4%e0%b2%ae%e0%b2%bf%e0%b2%b3%e0%b3%81%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ad%e0%b2%be%e0%b2%b0/ Thu, 12 Dec 2024 07:46:33 +0000 https://www.goodnews24x7.com/?p=1073 ತಮಿಳುನಾಡು: ಬುಧವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆಯಿಂದಾಗಿ ತಮಿಳುನಾಡು ಸರ್ಕಾರ ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದೆ. ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ರಾಮನಾಥಪುರಂ, ದಿಂಡಿಗಲ್, ಕಡಲೂರು ಮತ್ತು ಪುದುಕ್ಕೊಟ್ಟೈ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.…

The post ತಮಿಳುನಾಡಿನಲ್ಲಿ ಮತ್ತೆ ಭಾರಿ ಮಳೆ : ಶಾಲೆಗಳಿಗೆ ರಜೆ , ಯೆಲ್ಲೋ – ಆರೆಂಜ್ Alert ಘೋಷಣೆ appeared first on Good News 24x7.

]]>

ತಮಿಳುನಾಡು: ಬುಧವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆಯಿಂದಾಗಿ ತಮಿಳುನಾಡು ಸರ್ಕಾರ ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದೆ. ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ರಾಮನಾಥಪುರಂ, ದಿಂಡಿಗಲ್, ಕಡಲೂರು ಮತ್ತು ಪುದುಕ್ಕೊಟ್ಟೈ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಗುರುವಾರ ಮಳೆ ಪೀಡಿತ ಪ್ರದೇಶದ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಪ್ರಸ್ತುತ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ ಎಂದು ಗುರುತಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಶ್ರೀಲಂಕಾ-ತಮಿಳುನಾಡು ಕರಾವಳಿಯ ಕಡೆಗೆ ಚಂಡಮಾರುತವು ಚಲಿಸುವ ನಿರೀಕ್ಷೆಯಿದೆ.
ಇದರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರ್, ತಿರುಚ್ಚಿ, ಶಿವಗಂಗಾ, ರಾಮನಾಥಪುರಂ, ಮೈಲಾಡುತುರೈ, ನಾಗಪಟ್ಟಿಣಂ, ಕೊಯಮತ್ತೂರು, ತಿರುಪುರ್, ಕರೂರ್, ಥೇಣಿ, ದಿಂಡಿಗಲ್, ಮಧುರೈ, ವಿರುದುಕುಡಿನಗರ, ಟಿ.ವಿರುದುಕುಡಿನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೆಲವು ಜಿಲ್ಲೆಗಳಿಗೆ ಯೆಲ್ಲೋ- ಆರೇಂಜ್ ಅಲರ್ಟ್ ಘೋಷಣೆ
ಪ್ರಾದೇಶಿಕ ಹವಾಮಾನ ಕೇಂದ್ರ (RMC) ಗುರುವಾರ ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬುಧವಾರ, ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ಒದಗಿಸಿದೆ.

The post ತಮಿಳುನಾಡಿನಲ್ಲಿ ಮತ್ತೆ ಭಾರಿ ಮಳೆ : ಶಾಲೆಗಳಿಗೆ ರಜೆ , ಯೆಲ್ಲೋ – ಆರೆಂಜ್ Alert ಘೋಷಣೆ appeared first on Good News 24x7.

]]>