Tata Archives - Good News 24x7 https://www.goodnews24x7.com/tag/tata/ Kannada Wed, 09 Oct 2024 20:14:49 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Tata Archives - Good News 24x7 https://www.goodnews24x7.com/tag/tata/ 32 32 ಭಾರತದ ಶ್ರೀಮಂತ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ https://www.goodnews24x7.com/indias-richest-businessman-ratan-tata-is-no-more/ Wed, 09 Oct 2024 20:14:49 +0000 https://www.goodnews24x7.com/?p=793 ಭಾರತದ ಶ್ರೀಮಂತ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ ಭಾರತದ ಶ್ರೀಮಂತ ಉದ್ಯಮಿ ಮತ್ತು ಟಾಟಾ ಸನ್ಸ್‌ ಚೇರ್ಮನ್‌ ಆಗಿರೋ ರತನ್‌ ಟಾಟಾ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಐಸಿಯುನಲ್ಲಿ ಇಟ್ಟು ಟ್ರೀಟ್ಮೆಂಟ್​ ನೀಡಿದ್ರೂ ಚಿಕಿತ್ಸೆ ಫಲಿಸದೆ ರತನ್​​ ಟಾಟಾ ತಮ್ಮ ಜೀವನದ ಅಂತಿಮ…

The post ಭಾರತದ ಶ್ರೀಮಂತ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ appeared first on Good News 24x7.

]]>

ಭಾರತದ ಶ್ರೀಮಂತ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಶ್ರೀಮಂತ ಉದ್ಯಮಿ ಮತ್ತು ಟಾಟಾ ಸನ್ಸ್‌ ಚೇರ್ಮನ್‌ ಆಗಿರೋ ರತನ್‌ ಟಾಟಾ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಐಸಿಯುನಲ್ಲಿ ಇಟ್ಟು ಟ್ರೀಟ್ಮೆಂಟ್​ ನೀಡಿದ್ರೂ ಚಿಕಿತ್ಸೆ ಫಲಿಸದೆ ರತನ್​​ ಟಾಟಾ ತಮ್ಮ ಜೀವನದ ಅಂತಿಮ ಉಸಿರು ನಿಲ್ಲಿಸಿದ್ದಾರೆ.

ರತನ್‌ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಎಂದಿನಂತೆಯೇ ಜನರಲ್​ ಚೆಕಪ್​ಗಾಗಿ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಾವೇ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೀಗ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಿದ್ರೂ ಫಲಿಸದೆ ನಿಧನರಾಗಿದ್ದಾರೆ.

ರತನ್ ಟಾಟಾ ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ವಾಸ್ತುಶಿಲ್ಪದಲ್ಲಿ ಪದವಿ ಪಡೆದರು. ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಮ್ಯಾನೆಜ್‌ಮೆಂಟ್‌ ಓದಿದರು. 1961 ರಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ರತನ್‌ ಟಾಟಾ ಆರಂಭದಲ್ಲಿ ಕೆಳ ಹಂತದ ಕೆಲಸ ಮಾಡಿದರು. ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್‌ ಕಂಪನಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. 1991ರಲ್ಲಿ ರತನ್ ಟಾಟಾ ಅವರು ಟಾಟಾ ಸಮೂಹದ ಅಧ್ಯಕ್ಷರಾದರು. ಟಾಟಾ ಅವರ ನಾಯಕತ್ವದಲ್ಲಿ, ಸಮೂಹವು ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸಿತು.

The post ಭಾರತದ ಶ್ರೀಮಂತ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ appeared first on Good News 24x7.

]]>
ಆತಂಕ ಪಡುವಂಥದ್ದು ಏನೂ ಇಲ್ಲ, ಆರೋಗ್ಯವಾಗಿದ್ದೇನೆ : ರತನ್‌ ಟಾಟಾ https://www.goodnews24x7.com/nothing-to-worry-about-i-am-healthy-ratan-tata/ Mon, 07 Oct 2024 09:35:07 +0000 https://www.goodnews24x7.com/?p=759 ಆತಂಕ ಪಡುವಂಥದ್ದು ಏನೂ ಇಲ್ಲ, ಆರೋಗ್ಯವಾಗಿದ್ದೇನೆ : ರತನ್‌ ಟಾಟಾ ರತನ್ ಟಾಟಾ ಆರೋಗ್ಯ ಹದಗೆಟ್ಟು ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ. ಅದರ ಬೆನ್ನಲ್ಲೇ ಖುದ್ದಾಗಿ ರತನ್ ಟಾಟಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು…

The post ಆತಂಕ ಪಡುವಂಥದ್ದು ಏನೂ ಇಲ್ಲ, ಆರೋಗ್ಯವಾಗಿದ್ದೇನೆ : ರತನ್‌ ಟಾಟಾ appeared first on Good News 24x7.

]]>

ಆತಂಕ ಪಡುವಂಥದ್ದು ಏನೂ ಇಲ್ಲ, ಆರೋಗ್ಯವಾಗಿದ್ದೇನೆ : ರತನ್‌ ಟಾಟಾ

ರತನ್ ಟಾಟಾ ಆರೋಗ್ಯ ಹದಗೆಟ್ಟು ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ. ಅದರ ಬೆನ್ನಲ್ಲೇ ಖುದ್ದಾಗಿ ರತನ್ ಟಾಟಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು ಆರಾಮವಾಗಿದ್ದೇನೆ. ವಯೋಸಹಜ ಕಾರಣಕ್ಕೆ ವೈದ್ಯಕೀಯ ತಪಾಸಣೆ ಮಾಡಿಸುತ್ತಿದ್ದೇನೆ ಅಷ್ಟೇ. ಯಾರೂ ಆತಂಕ ಪಡಬೇಕಿಲ್ಲ ಎಂದು 86 ವರ್ಷದ ರತನ್ ಟಾಟಾ ಇನ್ಸ್​ಟಾಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

‘ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿರುವುದು ನನಗೆ ಗೊತ್ತಾಗಿದೆ. ಇದು ತಪ್ಪು ಮಾಹಿತಿ ಎಂದು ಹೇಳಬಯಸುತ್ತೇನೆ. ನನ್ನ ವಯೋಸಹಜ ವೈದ್ಯಕೀಯ ಸಮಸ್ಯೆಗಳ ಕಾರಣಕ್ಕೆ ಮೆಡಿಕಲ್ ಚೆಕಪ್ ಮಾಡಿಸುತ್ತಿದ್ದೇನೆ. ಆತಂಕ ಪಡುವಂಥದ್ದು ಏನೂ ಇಲ್ಲ. ಆರೋಗ್ಯವಾಗಿದ್ದೇನೆ. ಸುಳ್ಳು ಮಾಹಿತಿ ಹರಡದಂತೆ ಎಚ್ಚರವಹಿಸಬೇಕೆಂದು ಮಾಧ್ಯಮ ಹಾಗೂ ಜನರಿಗೆ ಕೋರುತ್ತೇನೆ,’ ಎಂದು ರತನ್ ಟಾಟಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

The post ಆತಂಕ ಪಡುವಂಥದ್ದು ಏನೂ ಇಲ್ಲ, ಆರೋಗ್ಯವಾಗಿದ್ದೇನೆ : ರತನ್‌ ಟಾಟಾ appeared first on Good News 24x7.

]]>