taxi Archives - Good News 24x7 https://www.goodnews24x7.com/tag/taxi/ Kannada Tue, 05 Aug 2025 08:30:32 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg taxi Archives - Good News 24x7 https://www.goodnews24x7.com/tag/taxi/ 32 32 ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! https://www.goodnews24x7.com/a-man-booked-a-taxi-for-exactly-%e2%82%b912000/ Tue, 05 Aug 2025 08:29:40 +0000 https://www.goodnews24x7.com/?p=5351 ಬೆಂಗಳೂರು :- ಬಸ್‌ ಸಂಚಾರ ಬಹುತೇಕ ಸ್ತಬ್ಧವಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ತಬ್ಧಗೊಂಡಿದೆ. ಹೀಗಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು…

The post ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! appeared first on Good News 24x7.

]]>

ಬೆಂಗಳೂರು :- ಬಸ್‌ ಸಂಚಾರ ಬಹುತೇಕ ಸ್ತಬ್ಧವಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ತಬ್ಧಗೊಂಡಿದೆ.

ಹೀಗಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದಕ್ಕೆ ಬರೋಬ್ಬರಿ ₹12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್​ ಮಾಡಿದ್ದಾನೆ. ​​ಇಂದು ಸಾರಿಗೆ ನೌಕರರ ಮುಷ್ಕರದ ಹಿನ್ನೆಯಲ್ಲಿ ಯಾವುದೇ ಬಸ್​ಗಳು ರಸ್ತೆಗೆ ಇಳಿದಿಲ್ಲ.

https://youtu.be/S-u-vqsfrpQ?si=hlca96xKfHRg33T0 ನಾನು ದರ್ಶನ್ ಸರ್ ಗೆ ಸಪೋರ್ಟ್ ಮಾಡೋದು!

ಅಲ್ಲದೇ ಮಂಗಳೂರಿಗೆ ಹೋಗಲು ಬಸ್ ಇಲ್ಲದ ಕಾರಣ ವ್ಯಕ್ತಿಯೊಬ್ಬ ರಾತ್ರಿ ತನಕ ಕಾಯೋದಕ್ಕೆ ಆಗಲ್ಲ. ರಾತ್ರಿ ಬಸ್ ಇರುತ್ತೆ ಅನ್ನೋದು ಕನ್ಫರ್ಮ್ ಇಲ್ಲ ಅಂತ 12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಈತ ಮೂರು ದಿನ ರಜೆಯ ಕಾರಣಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ. ಏರ್ಪೋರ್ಟ್​ನಿಂದ ಬಸ್ ವ್ಯವಸ್ಥೆ ಇದ್ದ ಕಾರಣ ಮೆಜೆಸ್ಟಿಕ್​​ಗೆ ಬಂದಿದ್ದಾನೆ. ಆದ್ರೆ, ಮೆಜೆಸ್ಟಿಕ್​ನಿಂದ ಊರಿಗೆ ಹೋಗಲು ಬಸ್ ಇಲ್ಲದೆ ವ್ಯಕ್ತಿ ಕಂಗಾಲಾಗಿದ್ದ ಪರಿಣಾಮ 12 ಸಾವಿರಕ್ಕೆ ಟ್ಯಾಕ್ಸಿ ಮಾಡಿ ಮಂಗಳೂರಿಗೆ ಹೊರಟಿದ್ದಾನೆ.

The post ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! appeared first on Good News 24x7.

]]>
ಕೇವಲ 180 ಮೀಟರ್‌ ಹತ್ತಿರದಲ್ಲಿರುವ ಮನೆಗೆ ಟ್ಯಾಕ್ಸಿ ಬುಕ್ ಮಾಡಿದ ಯುವತಿ; ಕಾರಣ ಕೇಳಿದರೆ ಶಾಕ್ ಆಗ್ತೀರಾ!!! https://www.goodnews24x7.com/%e0%b2%95%e0%b3%87%e0%b2%b5%e0%b2%b2-180-%e0%b2%ae%e0%b3%80%e0%b2%9f%e0%b2%b0%e0%b3%8d-%e0%b2%b9%e0%b2%a4%e0%b3%8d%e0%b2%a4%e0%b2%bf%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf/ Sun, 08 Jun 2025 10:52:49 +0000 https://www.goodnews24x7.com/?p=4285 ಮನುಷ್ಯರು ಎಲ್ಲದರಲ್ಲೂ ಸುಲಭವಾದುದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈಕೆ ಈ ನಿರ್ಧಾರವನ್ನು ಏಕೆ ತೆಗೆದುಕೊಂಡಳು ಎಂಬ ಕಾರಣವನ್ನು ಕೇಳಿದರೆ ನೀವು ಖಂಡಿತವಾಗಿಯೂ ಶಾಕ್ ಆಗ್ತಿರಾ.ಹೋಗುವ ಸ್ಥಳಕ್ಕೆ 5 ರಿಂದ 10 ನಿಮಿಷದಲ್ಲಿ ತಲುಪುತ್ತೇವೆ ಎಂದಾದ್ರೆ ಜನ ಟ್ಯಾಕ್ಸಿ ದುಡ್ಡು ಉಳಿಸುವ ಸಲುವಾಗಿ…

The post ಕೇವಲ 180 ಮೀಟರ್‌ ಹತ್ತಿರದಲ್ಲಿರುವ ಮನೆಗೆ ಟ್ಯಾಕ್ಸಿ ಬುಕ್ ಮಾಡಿದ ಯುವತಿ; ಕಾರಣ ಕೇಳಿದರೆ ಶಾಕ್ ಆಗ್ತೀರಾ!!! appeared first on Good News 24x7.

]]>

ಮನುಷ್ಯರು ಎಲ್ಲದರಲ್ಲೂ ಸುಲಭವಾದುದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈಕೆ ಈ ನಿರ್ಧಾರವನ್ನು ಏಕೆ ತೆಗೆದುಕೊಂಡಳು ಎಂಬ ಕಾರಣವನ್ನು ಕೇಳಿದರೆ ನೀವು ಖಂಡಿತವಾಗಿಯೂ ಶಾಕ್ ಆಗ್ತಿರಾ.ಹೋಗುವ ಸ್ಥಳಕ್ಕೆ 5 ರಿಂದ 10 ನಿಮಿಷದಲ್ಲಿ ತಲುಪುತ್ತೇವೆ ಎಂದಾದ್ರೆ ಜನ ಟ್ಯಾಕ್ಸಿ ದುಡ್ಡು ಉಳಿಸುವ ಸಲುವಾಗಿ ಕಾಲ್ನಡಿಗೆಯಲ್ಲೇ ಆ ಸ್ಥಳಕ್ಕೆ ಹೋಗ್ತಾರೆ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, 180 ಮೀಟರ್ ಕ್ರಮಿಸಲು ಅಂದ್ರೆ ಕೇವಲ 2 ನಿಮಿಷದ ದಾರಿಗೆ ಯುವತಿಯೊಬ್ಬಳು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಬೀದಿ ನಾಯಿಗಳ ಹಾವಳಿಗೆ ಹೆದರಿ ಆಕೆ ಮನೆಗೆ ತಲುಪಲು ಕೇವಲ 2 ನಿಮಿಷದ ದಾರಿಯಿದ್ದರೂ ಟ್ಯಾಕ್ಸಿ ಬುಕ್ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಬೀದಿ ನಾಯಿಗಳ ಹಾವಳಿಗೆ ಹೆದರಿ ಯುವತಿಯೊಬ್ಬಳು ರೈಡ್-ಹೀಲಿಂಗ್ ಆಪ್ಲಿಕೇಶನ್ ಮೂಲಕ ಬರೀ 180 ಮೀ. ಕ್ರಮಿಸಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಕೇವಲ 2 ನಿಮಿಷದ ದಾರಿಗೆ ಟ್ಯಾಕ್ಸಿ ಬುಕ್ ಮಾಡಿದ್ದನ್ನು ಕಂಡು ರೈಡರ್ ಶಾಕ್ ಆಗಿದ್ದು, ಇದು ಸರಿಯಾದ ವಿಳಾಸ ತಾನೇ ಎಂದು ಕೇಳಿದ್ದಾನೆ. ಬೀದಿನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಾನು ಎರಡು ನಿಮಿಷದ ದಾರಿಗೆ ಟ್ಯಾಕ್ಸಿ ಬುಕ್ ಮಾಡಿದ್ದು ಎಂದು ಆ ಯುವತಿ ಹೇಳಿಕೊಂಡಿದ್ದು, ಆಕೆಯ ಕಾರಣ ಕೇಳಿ ರೈಡರ್ ನಸು ನಕ್ಕಿದ್ದಾನೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೈಕ್ ಟ್ಯಾಕ್ಸಿ ರೈಡರ್ ಕೇವಲ 180 ಮೀ. ದೂರ ಕ್ರಮಿಸಲು ಟ್ಯಾಕ್ಸಿ ಬುಕ್ ಮಾಡಿದ್ದಾ, ಲೊಕೇಷನ್ ಸರಿಯಾಗಿದೆ ತಾನೇ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಆಗ ಆ ಯುವತಿ ಬೀದಿ ನಾಯಿಗಳೆಂದರೆ ನನಗೆ ತುಂಬಾ ಭಯ, ಅದಕ್ಕಾಗಿ ನಾನು 2 ನಿಮಿಷಗಳ ದಾರಿಗೂ ಟ್ಯಾಕ್ಸಿ ಬುಕ್ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ. ಈ ಕಾರಣ ಕೇಳಿ ಟ್ಯಾಕ್ಸಿ ರೈಡರ್ ನಸು ನಕ್ಕಿದ್ದು, ನಂತರ ಸೇಫ್ ಆಗಿ ಆಕೆಯನ್ನು ಮನೆಗೆ ಬಿಟ್ಟು ಬಂದಿದ್ದಾನೆ.

The post ಕೇವಲ 180 ಮೀಟರ್‌ ಹತ್ತಿರದಲ್ಲಿರುವ ಮನೆಗೆ ಟ್ಯಾಕ್ಸಿ ಬುಕ್ ಮಾಡಿದ ಯುವತಿ; ಕಾರಣ ಕೇಳಿದರೆ ಶಾಕ್ ಆಗ್ತೀರಾ!!! appeared first on Good News 24x7.

]]>