Techie Archives - Good News 24x7 https://www.goodnews24x7.com/tag/techie/ Kannada Mon, 28 Sep 2026 08:11:08 +0000 en-US hourly 1 https://wordpress.org/?v=7.1.2 ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ! https://www.goodnews24x7.com/bengaluru-techie-loses-%e2%82%b91-9-crore-after-trusting-advertisement/ Mon, 28 Sep 2026 08:11:08 +0000 https://www.goodnews24x7.com/?p=10139 ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು, ಹೂಡಿಕೆ ಮಾಡಿಸಿ ಮೋಸ ಮಾಡುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಫೇಸ್​ಬುಕ್ ಜಾಹೀರಾತು ನಂಬಿ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.…

The post ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ! appeared first on Good News 24x7.

]]>
ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು, ಹೂಡಿಕೆ ಮಾಡಿಸಿ ಮೋಸ ಮಾಡುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಫೇಸ್​ಬುಕ್ ಜಾಹೀರಾತು ನಂಬಿ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂತ್ರಸ್ತರು ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ ನಡೆದಿದ್ದೇನು?
ಕಳೆದ ಫೆಬ್ರವರಿ ತಿಂಗಳಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಆನ್‌ಲೈನ್ ಟ್ರೇಡಿಂಗ್ ಜಾಹೀರಾತಿನ ಲಿಂಕ್ ಮೇಲೆ ವ್ಯಕ್ತಿ ಕ್ಲಿಕ್ ಮಾಡಿದ್ದರು. ತಕ್ಷಣವೇ ಸೈಬರ್ ವಂಚಕರು ಹೂಡಿಕೆ ಸಲಹೆಗಾರರು ಹಾಗೂ ಪ್ರತಿನಿಧಿಗಳ ಸೋಗಿನಲ್ಲಿ ಸಂತ್ರಸ್ತನನ್ನು ಸಂಪರ್ಕಿಸಿ ‘Proxtrend’ ಎಂಬ ಹೂಡಿಕೆ ಪ್ಲಾಟ್‌ಫಾರ್ಮ್‌ಗೆ ಸೇರಲು ಪ್ರಚೋದಿಸಿದ್ದರು. ವಂಚಕರ ಮಾತನ್ನು ನಂಬಿದ ವ್ಯಕ್ತಿ, [http://www.proxtrendltd.com](http://www.proxtrendltd.com?utm_source=gemini) ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆದಿದ್ದರು. ಕೊಮೊರೊಸ್ ದ್ವೀಪದ ಮ್ವಾಲಿಯಲ್ಲಿ ನೋಂದಾಯಿತ ಸಂಸ್ಥೆ ಎಂದು ಈ ವೆಬ್‌ಸೈಟ್‌ನಲ್ಲಿ ನಕಲಿ ಮಾಹಿತಿ ಪ್ರದರ್ಶಿಸಲಾಗಿತ್ತು. ಫೆಬ್ರವರಿ 27 ರಿಂದ ಸೆಪ್ಟೆಂಬರ್ 9 ರ ಅವಧಿಯಲ್ಲಿ ರಾಜಾ ಎಸ್., ವಿನಯ್ ಶರ್ಮಾ, ಜಾರ್ಜ್ ಟೈಸನ್ ಸೇರಿದಂತೆ ವಿವಿಧ ಹೆಸರುಗಳಲ್ಲಿ ಮಾತನಾಡಿದ ಅಕೌಂಟ್ ಮ್ಯಾನೇಜರ್‌ಗಳು ವ್ಯಕ್ತಿ‌ಗೆ ನಿರಂತರವಾಗಿ ಟ್ರೇಡಿಂಗ್ ಸಲಹೆ ನೀಡುತ್ತಾ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಆರಂಭದಲ್ಲಿ ಆ್ಯಪ್‌ನಲ್ಲಿ ಲಾಭ ಬಂದಂತೆ ನಕಲಿ ಬ್ಯಾಲೆನ್ಸ್ ತೋರಿಸಿ ವಿಶ್ವಾಸ ಗಳಿಸಿದ್ದ ವಂಚಕರು, ಸಂತ್ರಸ್ತರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 1.9 ಕೋಟಿ ರೂ. ಜಮೆ ಮಾಡಿಸಿಕೊಂಡಿದ್ದರು.

ಸಂತ್ರಸ್ತರು ತಮ್ಮಲ್ಲಿದ್ದ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಯತ್ನಿಸಿದಾಗ ನಿಜವಾದ ವಂಚನೆ ಬಯಲಾಗಿದೆ. ಆರಂಭದಲ್ಲಿ ಸಣ್ಣ ಮೊತ್ತವನ್ನು ಡ್ರಾ ಮಾಡಲು ಅವಕಾಶ ನೀಡಿದ್ದ ಕಂಪನಿ, ಸೆಪ್ಟೆಂಬರ್ 9 ರಂದು ಒಟ್ಟಾರೆ ಹಣ ಹಿಂಪಡೆಯಲು ಕೋರಿದಾಗ ವಿಫಲಗೊಳಿಸಿತು. ಹಣ ಬಿಡುಗಡೆ ಮಾಡಬೇಕಾದರೆ ಪ್ರಕ್ರಿಯೆ ಸಂಕೀರ್ಣವಾಗಿದೆ ಎಂದು ಹೇಳಿ, ಹೆಚ್ಚುವರಿಯಾಗಿ 50 ಲಕ್ಷ ರೂ. ಹಾಗೂ 20 ಲಕ್ಷ ರೂ. ಕಟ್ಟುವಂತೆ ಒತ್ತಾಯಿಸಲು ಆರಂಭಿಸಿದರು.ತಾನು ಮೋಸ ಹೋಗಿರುವುದನ್ನು ಮನಗಂಡ ಟೆಕ್ಕಿ ತಕ್ಷಣವೇ ಸೈಬರ್ ಹೆಲ್ಪ್‌ಲೈನ್ 1930 ಗೆ ದೂರು ನೀಡಿದ್ದು, ಬಳಿಕ ಈಸ್ಟ್ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಬಳಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ.

 

The post ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ! appeared first on Good News 24x7.

]]>