Test cricket Archives - Good News 24x7 https://www.goodnews24x7.com/tag/test-cricket/ Kannada Thu, 26 Jun 2025 12:27:50 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Test cricket Archives - Good News 24x7 https://www.goodnews24x7.com/tag/test-cricket/ 32 32 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. https://www.goodnews24x7.com/%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/ Thu, 26 Jun 2025 12:27:50 +0000 https://www.goodnews24x7.com/?p=4680 ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ…

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>

ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ ಮುಂತಾದ ಪ್ರಮುಖ ಬದಲಾವಣೆಗಳನ್ನು ಐಸಿಸಿ ಘೋಷಿಸಿದೆ. ಲಾಲಾರಸ ಹಚ್ಚುವುದರಿಂದ ಚೆಂಡು ಬದಲಾಗುವುದಿಲ್ಲ ಎಂಬುದು ಮತ್ತೊಂದು ಮಹತ್ವದ ಬದಲಾವಣೆ.ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಜಾರಿಗೆ ತಂದ ಒಂದು ವರ್ಷದ ನಂತರ, ಇದೀಗ ಈ ನಿಯಮವನ್ನು ಟೆಸ್ಟ್‌ನಲ್ಲೂ ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಟೆಸ್ಟ್‌ಗಳಲ್ಲಿ ನಿಧಾನಗತಿಯ ಓವರ್ ದರವು ಒಂದು ದೊಡ್ಡ ಸಮಸ್ಯೆಯಾಗಿದೆ. ಈಗ ಹೊಸ ಐಸಿಸಿ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ, ತಂಡಕ್ಕೆ ಅಂಪೈರ್‌ನಿಂದ ಎರಡು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಇದರ ನಂತರವೂ ಬೌಲಿಂಗ್ ತಂಡ ನಿಧಾನ ಮಾಡಿದರೆ, ಪ್ರತಿ ಬಾರಿಯೂ ಐದು ರನ್‌ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. 80 ಓವರ್‌ಗಳ ನಂತರ ಎಚ್ಚರಿಕೆಗಳನ್ನು ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

ಐಸಿಸಿ ಕೂಡ ಶಾರ್ಟ್ ರನ್​ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿದರೆ ಐದು ರನ್​ಗಳ ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಕದಿಯಲು ರನ್ ಪೂರ್ಣಗೊಳಿಸದಿದ್ದರೆ (ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್ ಎರಡನೇ ರನ್ ಕದಿಯುವ ಯತ್ನದಲ್ಲಿ ನಾನ್ ಸ್ಟ್ರೈಕ್ ತುದಿಯನ್ನು ಮುಟ್ಟದೆ ವಾಪಸ್ ಆಗಿದ್ದರೆ), ಅಂಪೈರ್ ಫೀಲ್ಡಿಂಗ್ ತಂಡವನ್ನು ಯಾವ ಬ್ಯಾಟ್ಸ್​ಮನ್ ಸ್ಟ್ರೈಕ್​ನಲ್ಲಿ ಇರಬೇಕೆಂದು ಕೇಳುತ್ತಾರೆ. ಫೀಲ್ಡಿಂಗ್ ತಂಡ ಯಾವ ಆಟಗಾರನ ಹೆಸರನ್ನು ಹೇಳುತ್ತದೋ ಆತ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಶಾರ್ಟ್ ರನ್ ಮಾಡಿದ ಬ್ಯಾಟ್ಸ್​ಮನ್ ತಂಡಕ್ಕೆ ಐದು ರನ್​ಗಳ ದಂಡ ವಿಧಿಸಲಾಗುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧ ಮುಂದುವರಿಯಲಿದೆ. ಈ ಹಿಂದೆ ಬೌಲರ್‌ಗಳಿಗೆ ಹೊಸ ಚೆಂಡು ಅಗತ್ಯವಿದ್ದಾಗ, ಅವರು ಚೆಂಡಿನ ಮೇಲೆ ಲಾಲಾರಸವನ್ನು ಹಚ್ಚುತ್ತಿದ್ದರು. ಲಾಲಾರಸವನ್ನು ಹಚ್ಚುವುದರಿಂದ ಚೆಂಡು ಹಾಳಾಗುತ್ತಿತ್ತು. ಆ ನಂತರ ಬೌಲರ್​ಗಳು ಬೌಲಿಂಗ್ ಸಮಯದಲ್ಲಿ ತಮಗೆ ಅನುಕೂಲವಾಗುವಂತೆ ಅಂಪೈರ್‌ಗಳಿಂದ ಹೊಸ ಚೆಂಡನ್ನು ಕೇಳುತ್ತಿದ್ದರು. ಆದರೀಗ ಹೊಸ ನಿಯಮದ ಪ್ರಕಾರ, ಚೆಂಡಿನ ಮೇಲೆ ಲಾಲಾರಸ ಬಿದ್ದರೆ ಅಂಪೈರ್‌ಗಳು ಅದನ್ನು ಬದಲಾಯಿಸುವುದು ಕಡ್ಡಾಯವಲ್ಲ. ಚೆಂಡು ಸಂಪೂರ್ಣವಾಗಿ ಒದ್ದೆಯಾಗಿ ಕಂಡುಬಂದಾಗ ಅಥವಾ ಹಾನಿಗೊಳಗಾದಾಗ ಮಾತ್ರ ಅದನ್ನು ಬದಲಾಯಿಸಲಾಗುತ್ತದೆ. ಚೆಂಡನ್ನು ಬದಲಾಯಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅಂಪೈರ್‌ಗಳ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಅಂಪೈರ್‌ಗಳಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ.

ಐಸಿಸಿ ಡಿಆರ್‌ಎಸ್ ಪ್ರೋಟೋಕಾಲ್‌ನಲ್ಲಿಯೂ ದೊಡ್ಡ ಬದಲಾವಣೆಯನ್ನು ಮಾಡಿದೆ. ಒಬ್ಬ ಬ್ಯಾಟ್ಸ್‌ಮನ್‌ಗೆ ಕ್ಯಾಚ್ ಔಟ್ ನೀಡಿದರೆ ಅವನು ರಿವ್ಯೂ ಕೇಳುತ್ತಾನೆ ಎಂದು ಭಾವಿಸೋಣ. ಅಲ್ಟ್ರಾಎಡ್ಜ್‌ನಲ್ಲಿ ಚೆಂಡು ಬ್ಯಾಟ್ ಅನ್ನು ತಾಗದೆ ಪ್ಯಾಡ್‌ಗೆ ತಗುಲಿದೆ ಎಂದು ತೋರಿಸುತ್ತದೆ. ಕ್ಯಾಚ್ ಔಟ್ ಎಂದು ಘೋಷಿಸಿದ ನಂತರ, ಟಿವಿ ಅಂಪೈರ್ ಈಗ ಮತ್ತೊಂದು ಔಟ್ ಮೋಡ್ ಅನ್ನು ಪರಿಶೀಲಿಸುತ್ತಾರೆ (ಉದಾಹರಣೆಗೆ ಎಲ್‌ಬಿಡಬ್ಲ್ಯೂ). ಈ ಹಿಂದೆ, ಕ್ಯಾಚ್ ಔಟ್ ಆಗದಿದ್ದರೆ, ಎಲ್‌ಬಿಡಬ್ಲ್ಯೂಗೆ ಡೀಫಾಲ್ಟ್ ನಿರ್ಧಾರವು “ನಾಟ್ ಔಟ್” ಆಗಿತ್ತು. ಆದರೆ ಹೊಸ ನಿಯಮದಲ್ಲಿ, ಎಲ್‌ಬಿಡಬ್ಲ್ಯೂಗಾಗಿ ಬಾಲ್-ಟ್ರ್ಯಾಕಿಂಗ್ ಗ್ರಾಫಿಕ್ ಅನ್ನು ತೋರಿಸಲಾಗುತ್ತದೆ ಮತ್ತು ಬ್ಯಾಟ್ಸ್‌ಮನ್ ಇಲ್ಲಿ ಔಟ್ ಎಂದು ಕಂಡುಬಂದರೆ, ಅವನು ಪೆವಿಲಿಯನ್‌ಗೆ ಹಿಂತಿರುಗಬೇಕಾಗುತ್ತದೆ.

 

ಐಸಿಸಿ ಅಂಪೈರ್ ಮತ್ತು ಆಟಗಾರರ ವಿಮರ್ಶೆ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರರ್ಥ ಮೊದಲು ಟಿವಿ ಅಂಪೈರ್ ಮೊದಲು ಅಂಪೈರ್ ವಿಮರ್ಶೆಯನ್ನು ಮತ್ತು ನಂತರ ಆಟಗಾರನ ವಿಮರ್ಶೆಯನ್ನು ಪರಿಗಣಿಸುತ್ತಿದ್ದರು, ಆದರೆ ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಮೊದಲ ಘಟನೆಯಲ್ಲಿಯೇ ಔಟ್ ಆಗಿದ್ದರೆ, ಚೆಂಡು ಡೆಡ್ ಆಗುತ್ತದೆ. ಎರಡನೇ ರಿವ್ಯೂ ಅನ್ನು ಪರಿಶೀಲಿಸಲಾಗುವುದಿಲ್ಲ. ಉದಾಹರಣೆಗೆ, ಎಲ್‌ಬಿಡಬ್ಲ್ಯೂಗೆ ಮೇಲ್ಮನವಿ ಸಲ್ಲಿಸಿ ರನ್ ಔಟ್ ಆಗಿದ್ದರೆ, ಟಿವಿ ಅಂಪೈರ್ ಮೊದಲು ಎಲ್‌ಬಿಡಬ್ಲ್ಯೂ ಅನ್ನು ಪರಿಶೀಲಿಸುತ್ತಾರೆ, ಏಕೆಂದರೆ ಅದು ಮೊದಲು ಸಂಭವಿಸಿತು. ಬ್ಯಾಟ್ಸ್‌ಮನ್ ಔಟ್ ಆಗಿದ್ದರೆ, ಚೆಂಡು ಅಲ್ಲಿಯೇ ಡೆಡ್ ಆಗುತ್ತದೆ.

 

ಕ್ಯಾಚ್‌ಗಳಿಗೆ ಸಂಬಂಧಿಸಿದಂತೆ ಐಸಿಸಿ ಒಂದು ದೊಡ್ಡ ನಿಯಮವನ್ನು ಸಹ ಬದಲಾಯಿಸಿದೆ. ಪ್ರಸ್ತುತ ಫೀಲ್ಡ್ ಅಂಪೈರ್‌ಗಳಿಗೆ ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲದಿದ್ದಾಗ ಟಿವಿ ಅಂಪೈರ್ ಮೊರೆ ಹೋಗುತ್ತಿದ್ದರು. ಇದನ್ನು ಮೂರನೇ ಅಂಪೈರ್ ಪರಿಶೀಲಿಸಿದ ಸಮಯದಲ್ಲಿ ಅದು ನೋ ಬಾಲ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಸಿಗುತ್ತಿತ್ತು ಮತ್ತು ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ಈಗ ಮೂರನೇ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುತ್ತಾರೆ. ಕ್ಯಾಚ್ ಸರಿಯಾಗಿದ್ದರೆ, ಬ್ಯಾಟಿಂಗ್ ತಂಡವು ನೋ-ಬಾಲ್‌ಗೆ ಕೇವಲ ಒಂದು ಹೆಚ್ಚುವರಿ ರನ್ ಮಾತ್ರ ಪಡೆಯುತ್ತದೆ. ಆದರೆ ಕ್ಯಾಚ್ ಪೂರ್ಣಗೊಂಡಿಲ್ಲದಿದ್ದರೆ, ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ರನ್​ಗಾಗಿ ಓಡಿದ್ದರೆ, ಆಗ ನೋ ಬಾಲ್​ ಜೊತೆಗೆ ಬ್ಯಾಟ್ಸ್​ಮನ್​ಗಳು ಎಷ್ಟು ರನ್​ಗಳನ್ನು ಓಡಿರುತ್ತಾರೋ ಅಷ್ಟು ರನ್​ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.

 

ಏಕದಿನ ಕ್ರಿಕೆಟ್‌ನಲ್ಲಿ 35 ನೇ ಓವರ್ ನಂತರ ಒಂದೇ ಹೊಸ ಚೆಂಡನ್ನು ಬಳಸಲು ಐಸಿಸಿ ಅವಕಾಶ ನೀಡಿದೆ. ಇದು ಈಗ ಡೆತ್ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಬೌಂಡರಿಯಲ್ಲಿನ ಕ್ಯಾಚ್‌ಗಳ ಬಗ್ಗೆಯೂ ಐಸಿಸಿ ಬದಲಾವಣೆಗಳನ್ನು ಮಾಡಿದೆ. ಬೌಂಡರಿಯ ಹೊರಗಿನಿಂದ ಆಟಗಾರನು ಚೆಂಡನ್ನು ಸ್ಪರ್ಶಿಸಿದರೆ, ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಫೀಲ್ಡರ್‌ಗಳು ಬೌಂಡರಿಯ ಹೊರಗಿನಿಂದ ಒಮ್ಮೆ ಮಾತ್ರ ಬೌನ್ಸ್ ಮಾಡುವ ಮೂಲಕ ಚೆಂಡನ್ನು ಹಿಡಿಯಬಹುದು.

 

 

 

 

 

 

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>
‘ರೂಟ್’ ಕಿತ್ತರೆ ರೂಟ್ ಕ್ಲಿಯರ್; ಭಾರತ ಸರಣಿ ಗೆಲ್ಲಬಹುದು..! https://www.goodnews24x7.com/%e0%b2%b0%e0%b3%82%e0%b2%9f%e0%b3%8d-%e0%b2%95%e0%b2%bf%e0%b2%a4%e0%b3%8d%e0%b2%a4%e0%b2%b0%e0%b3%86-%e0%b2%b0%e0%b3%82%e0%b2%9f%e0%b3%8d-%e0%b2%95%e0%b3%8d%e0%b2%b2%e0%b2%bf/ Fri, 20 Jun 2025 12:26:04 +0000 https://www.goodnews24x7.com/?p=4555 ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 153 ಪಂದ್ಯಗಳನ್ನಾಡಿದ್ದು, ಈ ವೇಳೆ 279 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದರ ನಡುವೆ 22612 ಎಸೆತಗಳನ್ನು ಎದುರಿಸಿರುವ ಜೋ ರೂಟ್ ಒಟ್ಟು 13006 ರನ್ ಕಲೆಹಾಕಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್…

The post ‘ರೂಟ್’ ಕಿತ್ತರೆ ರೂಟ್ ಕ್ಲಿಯರ್; ಭಾರತ ಸರಣಿ ಗೆಲ್ಲಬಹುದು..! appeared first on Good News 24x7.

]]>

ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 153 ಪಂದ್ಯಗಳನ್ನಾಡಿದ್ದು, ಈ ವೇಳೆ 279 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದರ ನಡುವೆ 22612 ಎಸೆತಗಳನ್ನು ಎದುರಿಸಿರುವ ಜೋ ರೂಟ್ ಒಟ್ಟು 13006 ರನ್ ಕಲೆಹಾಕಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರೂಟ್ 5ನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಅವರನ್ನು ಸಾಧ್ಯವಾದಷ್ಟು ಬೇಗನೆ ಔಟ್ ಮಾಡಲೇಬೇಕು. ಏಕೆಂದರೆ ಇಂಡೊ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇರುವುದು ರೂಟ್ ಹೆಸರಿನಲ್ಲಿ. ಬಲಗೈ ದಾಂಡಿಗ ಈಗಾಗಲೇ ಲೆಜೆಂಡ್ ಸುನಿಲ್ ಗವಾಸ್ಕರ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ವಿರುದ್ಧ ಈವರೆಗೆ 30 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 55 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 2846 ರನ್​ಗಳು. ಅಂದರೆ ಪ್ರತಿ ಪಂದ್ಯದ ರನ್ ಸರಾಸರಿ ಬರೋಬ್ಬರಿ 58.08 ರನ್​ಗಳು. ಇದರ ನಡುವೆ 10 ಶತಕಗಳು ಹಾಗೂ 11 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ವಿರುದ್ಧ ಜೋ ರೂಟ್ ಎದುರಿಸಿರುವ ಎಸೆತಗಳು. ಅಂದರೆ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೂಟ್ ಈವರೆಗೆ 5171 ಎಸೆತಗಳನ್ನು ಎದುರಿಸಿದ್ದಾರೆ. ಅಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ 5 ಸಾವಿರಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿರುವುದು ಕೇವಲ 3 ಬ್ಯಾಟರ್​ಗಳು ಮಾತ್ರ.

ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಲೆಜೆಂಡ್ ಸುನಿಲ್ ಗವಾಸ್ಕರ್ (6245 ಬಾಲ್ಸ್) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟರ್ ಕುಕ್ (5374 ಬಾಲ್ಸ್) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಈ ಶತಮಾನದಲ್ಲಿ ಟೀಮ್ ಇಂಡಿಯಾ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದ ಏಕೈಕ ಬ್ಯಾಟರ್ ಜೋ ರೂಟ್. ಇದಕ್ಕೆ ಸಾಕ್ಷಿ ಭಾರತದ ವಿರುದ್ಧ 5171 ಎಸೆತಗಳಲ್ಲಿ ಕ್ರೀಸ್ ಕಚ್ಚಿ ನಿಂತು 2846 ರನ್ ಕಲೆಹಾಕಿರುವುದು. ಹಾಗೆಯೇ ಟೀಮ್ ಇಂಡಿಯಾ ವಿರುದ್ಧ 55 ಟೆಸ್ಟ್ ಇನಿಂಗ್ಸ್ ಆಡಿರುವ ಜೋ ರೂಟ್ ಶೂನ್ಯಕ್ಕೆ ಔಟಾಗಿರುವುದು ಕೇವಲ ಒಂದು ಬಾರಿ ಎಂದರೆ ನಂಬಲೇಬೇಕು. ಹೀಗಾಗಿಯೇ ಈ ಬಾರಿಯ ಸರಣಿಯನ್ನು ಜೋ ರೂಟ್ vs ಟೀಮ್ ಇಂಡಿಯಾ ಬೌಲರ್ಸ್ ಎಂದು ಬಿಂಬಿಸಲಾಗುತ್ತಿದೆ. ಈ ಕದನದಲ್ಲಿ ಅಂತಿಮವಾಗಿ ಗೆಲ್ಲುವವರು ಯಾರೆಂಬುದನ್ನು ಕಾದು ನೋಡೋಣ.

The post ‘ರೂಟ್’ ಕಿತ್ತರೆ ರೂಟ್ ಕ್ಲಿಯರ್; ಭಾರತ ಸರಣಿ ಗೆಲ್ಲಬಹುದು..! appeared first on Good News 24x7.

]]>
RCB ಅಭಿಮಾನಿಗಳ ಅಭಿಮಾನಕ್ಕೆ ಕೊಂಚ ಭಾವುಕರಾದ ವಿರಾಟ್ ಕೊಹ್ಲಿ… https://www.goodnews24x7.com/rcb-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%bf%e0%b2%97%e0%b2%b3-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b3%8a/ Sun, 18 May 2025 08:34:29 +0000 https://www.goodnews24x7.com/?p=3965 ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಈ ರದ್ದಾಗುವಿಕೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಂಪು ಕೋಟೆ ಶನಿವಾರ ಸಂಪೂರ್ಣ ಶ್ವೇತಮಯವಾಗಿತ್ತು.…

The post RCB ಅಭಿಮಾನಿಗಳ ಅಭಿಮಾನಕ್ಕೆ ಕೊಂಚ ಭಾವುಕರಾದ ವಿರಾಟ್ ಕೊಹ್ಲಿ… appeared first on Good News 24x7.

]]>

ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಈ ರದ್ದಾಗುವಿಕೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಂಪು ಕೋಟೆ ಶನಿವಾರ ಸಂಪೂರ್ಣ ಶ್ವೇತಮಯವಾಗಿತ್ತು. ಹೀಗೆ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಶ್ವೇತಮಯವಾಗಿಸಿದ್ದು ವಿರಾಟ್ ಕೊಹ್ಲಿಯ ಅಭಿಮಾನಿಗಳು. ತಮ್ಮ ನೆಚ್ಚಿನ ಆಟಗಾರನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಗೌರವಯುತ ವಿದಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ, ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಆಗಮಿಸಿದ್ದರು.ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಯನ್ನು ತಾವೆಷ್ಟು ಪ್ರೀತಿಸುತ್ತಿದ್ದೇವು ಎಂಬುದನ್ನು ಅಭಿಮಾನಿಗಳು ಸಾರಿ ಹೇಳಿದ್ದರು.

ಇತ್ತ ಇಂತಹದೊಂದು ಅಭಿಮಾನವನ್ನು ನೋಡಿದ ವಿರಾಟ್ ಕೊಹ್ಲಿ ಭಾವುಕರಾಗಿ ಕಂಡು ಬಂದರು. ಗ್ಯಾಲರಿ ಪೂರ್ತಿ ವೈಟ್ ಜೆರ್ಸಿ ರಾರಾಜಿಸುತ್ತಿರುವುದು ಬಿಗ್ ಸ್ಕ್ರೀನ್ನಲ್ಲಿ ತೋರಿಸುತ್ತಿದ್ದಂತೆ, ಇತ್ತ ಕೊಹ್ಲಿ ಏಕಾಂತವಾಗಿ ಭಾವುಕತೆಯಿಂದ ನೋಡುತ್ತಾ ಕೂತಿದ್ದರು. ಆದರೆ ವಿಧಿಯಾಟ, ಮಳೆಯ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಡುವಣ ಪಂದ್ಯವು ರದ್ದಾಯಿತು. ಇಲ್ಲದಿದ್ದರೆ, ಕಿಂಗ್ ಕೊಹ್ಲಿ ಬ್ಯಾಟಿಂಗ್ಗೆ ಬರುತ್ತಿದ್ದಂತೆ ವಿಶೇಷ ಗೌರವ ಸಲ್ಲಿಸಲು ಆರ್ಸಿಬಿ ಫ್ಯಾನ್ಸ್ ನಿರ್ಧರಿಸಿದ್ದರು.

ಇತ್ತ ಆರ್ಸಿಬಿ ಫ್ರಾಂಚೈಸಿ ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಮಳೆಯಿಂದಾಗಿ ಎಲ್ಲವೂ ಹಾಳಾಯಿತು ಎನ್ನಬಹುದು. ಇದಾಗ್ಯೂ ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಸಹ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಮೇ 23 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಗೆ ಟೆಸ್ಟ್ ಬೀಳ್ಕೊಡುಗೆ ನೀಡಲು ಮತ್ತೆ ವೈಟ್ ಜೆರ್ಸಿಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ ಆರ್ಸಿಬಿ ಕಡೆಯಿಂದಲೂ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಿಗಲಿದೆ.

The post RCB ಅಭಿಮಾನಿಗಳ ಅಭಿಮಾನಕ್ಕೆ ಕೊಂಚ ಭಾವುಕರಾದ ವಿರಾಟ್ ಕೊಹ್ಲಿ… appeared first on Good News 24x7.

]]>
RCB ಅಭಿಮಾನಿಗಳ ಈ ಅಭಿಮಾನಕ್ಕೆ ಕೊನೆಯೇ ಇಲ್ಲ…. https://www.goodnews24x7.com/rcb-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%bf%e0%b2%97%e0%b2%b3-%e0%b2%88-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%95/ Sun, 18 May 2025 08:23:15 +0000 https://www.goodnews24x7.com/?p=3958 ವಿರಾಟ್ ಕೊಹ್ಲಿ ,ತಮ್ಮ ವಿಶೇಷವಾದ ಬ್ಯಾಟಿಂಗ್ ಶೈಲಿ, ರೂಡಿಸಿಕೊಂಡಿದ್ದಂತಹ ನಿಯಮಗಳು, ಆಟದ ಮೇಲೆ ಇರುವ ಮಾನದಂಡಗಳು, ಯಾವುದೇ ಕ್ಲಿಷ್ಟಕರ ಸಂದರ್ಭವನ್ನು ಅಳವಡಿಸಿಕೊಳ್ಳುತ್ತಿದ್ದ ರೀತಿ, ಉತ್ತಮ ನಾಯಕರಾಗಿ ಮುನ್ನಡೆಸುತ್ತಿದ್ದ ರೀತಿ ಇವೆಲ್ಲವೂ ಸಹ ಇಂಡಿಯನ್ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಹುರುಪನ್ನು ತಂದುಕೊಟ್ಟಿತು.…

The post RCB ಅಭಿಮಾನಿಗಳ ಈ ಅಭಿಮಾನಕ್ಕೆ ಕೊನೆಯೇ ಇಲ್ಲ…. appeared first on Good News 24x7.

]]>

ವಿರಾಟ್ ಕೊಹ್ಲಿ ,ತಮ್ಮ ವಿಶೇಷವಾದ ಬ್ಯಾಟಿಂಗ್ ಶೈಲಿ, ರೂಡಿಸಿಕೊಂಡಿದ್ದಂತಹ ನಿಯಮಗಳು, ಆಟದ ಮೇಲೆ ಇರುವ ಮಾನದಂಡಗಳು, ಯಾವುದೇ ಕ್ಲಿಷ್ಟಕರ ಸಂದರ್ಭವನ್ನು ಅಳವಡಿಸಿಕೊಳ್ಳುತ್ತಿದ್ದ ರೀತಿ, ಉತ್ತಮ ನಾಯಕರಾಗಿ ಮುನ್ನಡೆಸುತ್ತಿದ್ದ ರೀತಿ ಇವೆಲ್ಲವೂ ಸಹ ಇಂಡಿಯನ್ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಹುರುಪನ್ನು ತಂದುಕೊಟ್ಟಿತು. ಅಲ್ಲದೆ ಕೋಟ್ಯಾಂತರ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅವರು ಆದರ್ಶ ವ್ಯಕ್ತಿಯಾದರು. ಅವರ ವ್ಯಕ್ತಿತ್ವ ಚಿರಕಾಲ ಸ್ಮರಿಸುವಂಥದ್ದು, ಅದರಿಂದಲೇ ಅವರು ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಟೆಸ್ಟ್ ಕ್ರಿಕೆಟ್ ಗೆ ವಿದಾಯವನ್ನು ಘೋಷಿಸಿದ್ದು, ಅಭಿಮಾನಿಗಳು ನಮ್ಮ ನೆಚ್ಚಿನ ಆಟಗಾರನಿಗೆ ಅತ್ಯಂತ ಗೌರವಪೂರ್ಣವಾಗಿ ಬಿಳ್ಕೊಡುಗೆಯನ್ನು ನೀಡಿದ್ದಾರೆ.

ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್. ಹೀಗೆ ಅಂದಿರುವುದು ಮತ್ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್. ಅಂತಹದೊಂದು ವಿಶೇಷ ಅಭಿಮಾನಿಗಳ ಬಳಗವನ್ನೇ ಆರ್ಸಿಬಿ ಸಂಪಾದಿಸಿಕೊಂಡಿದೆ. ಈ ಅಭಿಮಾನಿಗಳೇ ಇದೀಗ ಮತ್ತೊಮ್ಮೆ ಅಭಿಮಾನಿಗಳೆಂದರೆ ಹೇಗಿರಬೇಕೆಂದು ಇಡೀ ವಿಶ್ವಕ್ಕೆ ಸಾರಿದೆ. ಅದು ಕೂಡ ತನ್ನ ನೆಚ್ಚಿನ ಆಟಗಾರನಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ. ಹೌದು, ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ದೀರ್ಘಾವಧಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ನಿವೃತ್ತಿ ಘೋಷಣೆ ಮೂಡಿಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ. ಅದಕ್ಕಾಗಿ ಫ್ಯಾನ್ಸ್ ಗಳು ಸಹ ಬಿಳಿ ಜರ್ಸಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿ ವಿರಾಟ್ ಕೊಹ್ಲಿಯವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

14 ವರ್ಷಗಳ ಕಾಲ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ ವಿದಾಯ ಪಂದ್ಯದ ಮೂಲಕ ಗುಡ್ ಬೈ ಹೇಳಬೇಕಿತ್ತು. ಆದರೆ ಬಿಸಿಸಿಐ ಅಂತಹದೊಂದು ಪಂದ್ಯವನ್ನು ಏರ್ಪಡಿಸಲಿಲ್ಲ. ಹೀಗಾಗಿಯೇ ಆರ್ಸಿಬಿ ಅಭಿಮಾನಿಗಳು ತನ್ನ ನೆಚ್ಚಿನ ಟೆಸ್ಟ್ ಆಟಗಾರನಿಗೆ ಗೌರವಪೂರ್ವಕ ವಿದಾಯ ಹೇಳಲು ಯೋಜನೆ ರೂಪಿಸಿದರು. ಅದಕ್ಕಾಗಿ ನೀಡಿದ್ದು ಒಂದೇ ಒಂದು ಕರೆಯಷ್ಟೇ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೂ ವೈಟ್ ಜೆರ್ಸಿಯಲ್ಲಿ ಬನ್ನಿ ಎಂದು ಆರ್ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಈ ಒಂದು ಮನವಿಗೆ ಸಿಕ್ಕಿದ ಸ್ಪಂದನೆ ಅಭೂತಪೂರ್ವ. ಇದಕ್ಕೆ ಸಾಕ್ಷಿಯೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಕಂಡು ಬಂದ ವೈಟ್ ಜೆರ್ಸಿಗಳು.

ಆರ್ಸಿಬಿ ತಂಡದ ಬಹುತೇಕ ಅಭಿಮಾನಿಗಳು ವೈಟ್ ಜೆರ್ಸಿಯಲ್ಲಿ ಆಗಮಿಸಿದ್ದರು. ಇನ್ನೂ ಕೆಲವರು ಬಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಈ ಮೂಲಕ ವಿರಾಟ್ ಕೊಹ್ಲಿಯನ್ನು ತಾವೆಷ್ಟು ಪ್ರೀತಿಸುತ್ತೇವೆ ಎಂಬುದನ್ನು ವಿಶ್ವಕ್ಕೆ ಸಾರಿದರು. ಹೌದು, ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್ ಮಾತ್ರ. ಆ ಅಭಿಮಾನಿಗಳ ಅಭಿಮಾನ ಹೇಗಿರುತ್ತೆ ಎಂಬುದಕ್ಕೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಿತ್ತು.

The post RCB ಅಭಿಮಾನಿಗಳ ಈ ಅಭಿಮಾನಕ್ಕೆ ಕೊನೆಯೇ ಇಲ್ಲ…. appeared first on Good News 24x7.

]]>
ಟೆಸ್ಟ್ ಕ್ರಿಕೆಟ್ಗೆ ಕಿಂಗ್ ಕೊಹ್ಲಿ ವಿದಾಯ…. https://www.goodnews24x7.com/%e0%b2%9f%e0%b3%86%e0%b2%b8%e0%b3%8d%e0%b2%9f%e0%b3%8d-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d%e0%b2%97%e0%b3%86-%e0%b2%95%e0%b2%bf%e0%b2%82%e0%b2%97%e0%b3%8d/ Mon, 12 May 2025 12:17:13 +0000 https://www.goodnews24x7.com/?p=3836 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ವಿರಾಟ್ ಕೊಹ್ಲಿ, 2014 ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎನ್ನಬಹುದು. ಟೀಮ್ ಇಂಡಿಯಾ ಪರ 123 ಟೆಸ್ಟ್…

The post ಟೆಸ್ಟ್ ಕ್ರಿಕೆಟ್ಗೆ ಕಿಂಗ್ ಕೊಹ್ಲಿ ವಿದಾಯ…. appeared first on Good News 24x7.

]]>

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ವಿರಾಟ್ ಕೊಹ್ಲಿ, 2014 ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎನ್ನಬಹುದು. ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 210 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 16608 ಎಸೆತಗಳನ್ನು ಎದುರಿಸಿರುವ ಕೊಹ್ಲಿ ಅವರು 46.9 ಸರಾಸರಿಯಲ್ಲಿ ಒಟ್ಟು 9230 ರನ್ ಕಲೆಹಾಕಿದ್ದಾರೆ. ಇದರ ನಡುವೆ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಮತ್ತೊಂದು ಮೈಲಿಗಲ್ಲೆಂದರೆ , ಟೆಸ್ಟ್ ಕ್ರಿಕೆಟ್ ನಲ್ಲಿ 254 ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಹಾಗೆಯೇ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 40 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೇವಲ 17 ಮ್ಯಾಚ್ಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು 11 ಪಂದ್ಯಗಳಲ್ಲಿ ಭಾರತ ತಂಡವು ಡ್ರಾ ಸಾಧಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಇದೀಗ 14 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ಗೆ ವಿರಾಮ ಇಟ್ಟಿರುವ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರ ನಿವೃತ್ತಿ ಪತ್ರ:

ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಕ್ಯಾಪ್ ಧರಿಸಿ 14 ವರ್ಷಗಳು ಕಳೆದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಈ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿದೆ.

ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಆಳವಾದ ವೈಯಕ್ತಿಕ ಅಂಶವಿದೆ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು. ಇವೆಲ್ಲವೂ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಾನು ಈ ಸ್ವರೂಪದಿಂದ ದೂರ ಸರಿಯುತ್ತಿರುವುದು ಸುಲಭದ ನಿರ್ಧಾರವಲ್ಲ. ಆದರೆ ಇದುವೇ ಸರಿ ಎಂದು ಅನಿಸುತ್ತದೆ.

The post ಟೆಸ್ಟ್ ಕ್ರಿಕೆಟ್ಗೆ ಕಿಂಗ್ ಕೊಹ್ಲಿ ವಿದಾಯ…. appeared first on Good News 24x7.

]]>