Thailand Archives - Good News 24x7 https://www.goodnews24x7.com/tag/thailand/ Kannada Fri, 03 Jul 2026 07:27:42 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Thailand Archives - Good News 24x7 https://www.goodnews24x7.com/tag/thailand/ 32 32 ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು https://www.goodnews24x7.com/car-runs-over-buddhist-monks-on-pilgrimage-9-dead/ Fri, 03 Jul 2026 07:27:42 +0000 https://www.goodnews24x7.com/?p=9756 ಥೈಲ್ಯಾಂಡ್‌ನ ಮುಕ್ದಹಾನ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಅಪ್ಪ ಅಮ್ಮನಿಗೆ ತಿಳಿಯದೆ ಕಾರು ಚಲಾಯಿಸಿ, ತೀರ್ಥಯಾತ್ರೆಗೆ ಹೊರಟಿದ್ದ 9 ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಒಂಬತ್ತು ಸನ್ಯಾಸಿಗಳು ಮೃ*ತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ…

The post ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು appeared first on Good News 24x7.

]]>

ಥೈಲ್ಯಾಂಡ್‌ನ ಮುಕ್ದಹಾನ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಅಪ್ಪ ಅಮ್ಮನಿಗೆ ತಿಳಿಯದೆ ಕಾರು ಚಲಾಯಿಸಿ, ತೀರ್ಥಯಾತ್ರೆಗೆ ಹೊರಟಿದ್ದ 9 ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಒಂಬತ್ತು ಸನ್ಯಾಸಿಗಳು ಮೃ*ತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಥೈಲ್ಯಾಂಡ್ ದೇಶವನ್ನು ತಲ್ಲಣಗೊಳಿಸಿದ್ದು, ರಸ್ತೆ ಸುರಕ್ಷತೆ ಮತ್ತು ಮಕ್ಕಳ ಮೇಲಿನ ನಿಗಾದ ಮಹತ್ವವನ್ನು ಎತ್ತಿ ತೋರಿಸಿದೆ
.
ಥೈಲ್ಯಾಂಡ್: ಯಾತ್ರೆಗೆ ಹೊರಟಿದ್ದ ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು

ಬ್ಯಾಂಕಾಕ್, ಜುಲೈ 03: ಈಶಾನ್ಯ ಥೈಲ್ಯಾಂಡ್‌ನ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ಅಪಘಾತ(Accident)ವೊಂದು ಸಂಭವಿಸಿದೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಬಾಲಕನೊಬ್ಬ ವಾಹನ ಚಲಾಯಿಸಿಕೊಂಡು , ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದೆ. ಈ ಘೋರ ಅಪಘಾತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಸಾ*ವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

‘ಬುದ್ಧೋ ಬುದ್ಧೋ’ ಎನ್ನುತ್ತಿದ್ದಾಗಲೇ ಅಪ್ಪಳಿಸಿತು ಸಾ*ವು ಸುಮಾರು 35 ಸನ್ಯಾಸಿಗಳು ಮತ್ತು ಐದು ಜನ ಸಾಮಾನ್ಯ ಅನುಯಾಯಿಗಳ ಗುಂಪು ಮುಕ್ದಹಾನ್ ಪ್ರಾಂತ್ಯದ ರಸ್ತೆಯ ಮೂಲಕ ತೀರ್ಥಯಾತ್ರೆಗಾಗಿ ನಡೆದುಕೊಂಡು ಹೋಗುತ್ತಿತ್ತು. ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಬದುಕುಳಿದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಘಟನೆ ಬಗ್ಗೆ ಮಾತನಾಡಿ, ನಾವೆಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದೆವು. ಈ ವೇಳೆ ಬಾಲಕನೊಬ್ಬ ಓಡಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ವೇಗದಲ್ಲಿ ನಮ್ಮ ಸಾಲಿಗೆ ಡಿಕ್ಕಿ ಹೊಡೆಯಿತು. ಮೊದಲ ಒಂಬತ್ತು ಸನ್ಯಾಸಿಗಳು ಬದುಕುಳಿದರು, ಆದರೆ ಉಳಿದವರು ಕಾರು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃ*ತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರು ಸನ್ಯಾಸಿಗಳ ಸ್ಥಿತಿ ಗಂಭೀರವಾಗಿದೆ.

ಮನೆಯಲ್ಲಿ ಯಾರೂ ಇಲ್ಲದಾಗ ಕಾರು ತಂದಿದ್ದ ಬಾಲಕ ಪೊಲೀಸ್ ತನಿಖೆಯ ಪ್ರಕಾರ, ಅಪಘಾತದ ಸಮಯದಲ್ಲಿ ಬಾಲಕನ ಮನೆಯಲ್ಲಿ ಯಾರೂ ಇರಲಿಲ್ಲ. ಆತ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದ. ಈ ವೇಳೆ ಹೆತ್ತವರಿಗೆ ತಿಳಿಸದೆ ಕಾರಿನ ಕೀ ತಗೆದುಕೊಂಡು ರಸ್ತೆಗಿಳಿದಿದ್ದಾನೆ. ಕಾರು ಕಾಣೆಯಾಗಿರುವುದನ್ನು ಅರಿತ ಪೋಷಕರು ಪೊಲೀಸರಿಗೆ ದೂರು ನೀಡುವಷ್ಟರಲ್ಲೇ ಈ ಭೀಕರ ದುರಂತ ಸಂಭವಿಸಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಆತ ವಿಶೇಷ ಅಗತ್ಯವಿರುವ ಬಾಲಕ ಎಂದು ತಿಳಿದುಬಂದಿದ್ದು, ವೈದ್ಯರು ಮತ್ತು ಪೋಷಕರ ತಂಡ ಆತನನ್ನು ನೋಡಿಕೊಳ್ಳುತ್ತಿದೆ.

 

ಥೈಲ್ಯಾಂಡ್‌ನಲ್ಲಿ ಬೌದ್ಧ ಸನ್ಯಾಸಿಗಳನ್ನು ಅತ್ಯಂತ ಪವಿತ್ರವಾಗಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಹೀಗಾಗಿ ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಗಾಯಗೊಂಡ ಸನ್ಯಾಸಿಗಳ ಪ್ರಾಣ ಉಳಿಸಲು ಮುಕ್ದಹಾನ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ತುರ್ತು ರಕ್ತದಾನ ಮಾಡುವಂತೆ ಮನವಿ ಮಾಡಿದೆ.

ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಈ ಕುರಿತು ಮಾತನಾಡಿ, ಈ ಘಟನೆ ಇಡೀ ದೇಶದ ರಸ್ತೆ ಸುರಕ್ಷತೆಗೆ ಒಂದು ದೊಡ್ಡ ಎಚ್ಚರಿಕೆಯಾಗಬೇಕು. ಅಪಘಾತಗಳನ್ನು ತಡೆಗಟ್ಟುವ ವಿಷಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಪಾಠ ಎಂದು ಹೇಳಿದ್ದಾರೆ. ವಾಹನವನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

The post ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು appeared first on Good News 24x7.

]]>
ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. https://www.goodnews24x7.com/%e0%b2%b8%e0%b3%82%e0%b2%aa%e0%b2%b0%e0%b3%8d-%e0%b2%ae%e0%b2%be%e0%b2%b0%e0%b3%8d%e0%b2%95%e0%b3%86%e0%b2%9f%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%be%e0%b2%aa/ Sat, 07 Jun 2025 12:00:57 +0000 https://www.goodnews24x7.com/?p=4268 ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾದರೆ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಒಂದಲ್ಲ ಒಂದು ವಿಶೇಷವಾದ ಹಾಗೂ ಅಚ್ಚರಿಮೂಡಿಸುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಶಾಪಿಂಗ್ ಮಾಡಲು ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಅಷ್ಟೇ ಅಲ್ಲದೇ ತನಗೆ…

The post ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. appeared first on Good News 24x7.

]]>

ಸಾಮಾಜಿಕ ಜಾಲತಾಣದಲ್ಲಿ ದಿನಬೆಳಗಾದರೆ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಒಂದಲ್ಲ ಒಂದು ವಿಶೇಷವಾದ ಹಾಗೂ ಅಚ್ಚರಿಮೂಡಿಸುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಶಾಪಿಂಗ್ ಮಾಡಲು ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದೆ. ಅಷ್ಟೇ ಅಲ್ಲದೇ ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಅಚ್ಚರಿಗೊಳಿಸಿದೆ.

ಆನೆಗಳು ನಿಜವಾಗಿಯೂ ಸಾಧು ಪ್ರಾಣಿಗಳು, ಸುಖಾ ಸುಮ್ಮನೆ ಯಾರ ತಂಟೆಗೂ ಹೋಗುವುದಿಲ್ಲ. ಒಂದು ವೇಳೆ ಸಿಟ್ಟು ಬಂದರೆ, ಮದವೇರಿದರೆ ಅದನ್ನು ನಿಯಂತ್ರಿಸುವುದೇ ಕಷ್ಟ. ಮನುಷ್ಯರನ್ನಷ್ಟೇ ಅಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ರಂಪಾಟ ಮಾಡುವುದಿದೆ. ಆದರೆ ಇದೀಗ ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿ ಶಾಪಿಂಗ್ ಮಾಡಿದೆ. ಹೌದು ಥೈಲ್ಯಾಂಡ್ ನ ಸೂಪರ್ ಮಾರ್ಕೆಟ್ ನಲ್ಲಿ ಇಂತಹದೊಂದು ಅಪರೂಪದ ದೃಶ್ಯ ಕಂಡು ಬಂದಿದ್ದು, ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಅಲ್ಲಿಂದ ಹೊರಟು ಹೋಗಿದೆ. ಇಂಡಿಪೆಂಡೆಂಟ್ ವರದಿಯ ಪ್ರಕಾರವಾಗಿ, ಈ ಆನೆಯು ಕಾವೋ ಯಾಯ್ ರಾಷ್ಟ್ರೀಯ ಉದ್ಯಾನವನದ ನಿವಾಸಿಯಾಗಿದ್ದು, ಪ್ಲಾಯ್ ಬಿಯಾಂಗ್ ಲೆಕ್ ಎಂದು ಗುರುತಿಸಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

The post ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡಲು ಗಜರಾಜ ಎಂಟ್ರಿ…. appeared first on Good News 24x7.

]]>
ಬ್ಯಾಂಕಾಕ್ ನಲ್ಲಿ ಸಂಭವಿಸಿದ ಭೂಕಂಪಕ್ಕೂ ಸಮುದ್ರದ ಮೇಲ್ದಂಡೆಯಲ್ಲಿ ಕಾಣಿಸಿಕೊಂಡ ಓರ್ಫಿಶ್ ಗೂ ಸಂಬಂಧ ಇದ್ಯಾ!? https://www.goodnews24x7.com/%e0%b2%ac%e0%b3%8d%e0%b2%af%e0%b2%be%e0%b2%82%e0%b2%95%e0%b2%be%e0%b2%95%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%82%e0%b2%ad%e0%b2%b5%e0%b2%bf%e0%b2%b8%e0%b2%bf%e0%b2%a6/ Sat, 29 Mar 2025 11:42:27 +0000 https://www.goodnews24x7.com/?p=2933 ಮಾರ್ಚ್ 3,2025 ರಲ್ಲಿ 2025 ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ ಇದು ನಿಜನ ಎಂದು ಸುದ್ದಿಯನ್ನ ಮಾಡಿದ್ವಿ ಈ ಸುದ್ದಿಗೆ ಕಾರಣ ಏನಪ್ಪಾ ಅಂತ ಹೇಳಿದ್ರೆ ಸಮುದ್ರದ ಆಳ ಭಾಗದಲ್ಲಿ ಇರತಕ್ಕಂತಹ ಓರ್ಫಿಶ್ ಮೀನುಗಳು ಸಮುದ್ರದ ಮೇಲ್ಭಾಗದಲ್ಲಿ ಕಂಡಂತಹದ್ದು.  …

The post ಬ್ಯಾಂಕಾಕ್ ನಲ್ಲಿ ಸಂಭವಿಸಿದ ಭೂಕಂಪಕ್ಕೂ ಸಮುದ್ರದ ಮೇಲ್ದಂಡೆಯಲ್ಲಿ ಕಾಣಿಸಿಕೊಂಡ ಓರ್ಫಿಶ್ ಗೂ ಸಂಬಂಧ ಇದ್ಯಾ!? appeared first on Good News 24x7.

]]>

ಮಾರ್ಚ್ 3,2025 ರಲ್ಲಿ 2025 ಕ್ಕೆ ವಿಶ್ವವೇ ಅಂತ್ಯ ಕಾಣಲಿದೆ ಅಂತೆ ಇದು ನಿಜನ ಎಂದು ಸುದ್ದಿಯನ್ನ ಮಾಡಿದ್ವಿ ಈ ಸುದ್ದಿಗೆ ಕಾರಣ ಏನಪ್ಪಾ ಅಂತ ಹೇಳಿದ್ರೆ ಸಮುದ್ರದ ಆಳ ಭಾಗದಲ್ಲಿ ಇರತಕ್ಕಂತಹ ಓರ್ಫಿಶ್ ಮೀನುಗಳು ಸಮುದ್ರದ ಮೇಲ್ಭಾಗದಲ್ಲಿ ಕಂಡಂತಹದ್ದು.

 

 

 

 

 

ಸದ್ಯ ಈ ಸುದ್ದಿಗೆ ಪುಷ್ಟಿ ನೀಡುವಂತೆ ಬ್ಯಾಂಕಾಕ್ ನಲ್ಲಿ ಭೂಕಂಪನ ಸಂಪವಿಸಿದೆ ಹೌದು ಮ್ಯಾನ್ಮಾರ್, ಥೈಲ್ಯಾಂಡ್, ಬ್ಯಾಂಕಾಕ್ ಭೂಕಂಪದಿಂದ ತತ್ತರಿಸಿದೆ. ಮ್ಯಾನ್ಮಾರ್ನಲ್ಲಿ ಭೂಕಂಪದಿಂದ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಭಾಗಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಬ್ಯಾಂಕಾಕ್ ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಮ್ಯಾನ್ಮಾರ್, ಥೈಲ್ಯಾಂಡ್ ಎರಡೂ ಕಡೆ ಸಂಭವಿಸಿದ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿದವು ತೀವ್ರತೆಯ ಭೂಕಂಪದ ನಂತರ ಮ್ಯಾನ್ಮಾರ್ನಲ್ಲಿ 20ಕ್ಕೂ ಹೆಚ್ಚು ಜನರು ಮತ್ತು ಥೈಲ್ಯಾಂಡ್ನಲ್ಲಿ ಮೂವರು ಜನರು ಸಾವನ್ನಪ್ಪಿದ್ದಾರೆ.

 

 

 

 

 

https://www.instagram.com/reel/DGpwgG2P9h4/?utm_source=ig_web_copy_link&igsh=MzRlODBiNWFlZA==ಈ ಮೀನು ವಿನಾಶದ ಮುನ್ಸೂಚನೆಯೇ?

ಇದರಿಂದ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿ, ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಿತು. ಮೇಘಾಲಯ ಮತ್ತು ಹಲವಾರು ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ ಮತ್ತು ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲೂ ಬಲವಾದ ಭೂಕಂಪನಗಳು ಸಂಭವಿಸಿವೆ. ಇಂದಿನ ಭೂಕಂಪದ ಪರಿಣಾಮ ಎಷ್ಟಿತ್ತೆಂದರೆ, ಸುಮಾರು 900 ಕಿ.ಮೀ ದೂರದಲ್ಲಿರುವ ಬ್ಯಾಂಕಾಕ್ನ ಚತುಚಕ್ ಜಿಲ್ಲೆಯಲ್ಲಿ ಒಂದು ಎತ್ತರದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದರು. ಹಲವರು ಇನ್ನೂ ಸಿಲುಕಿಕೊಂಡಿದ್ದಾರೆ. ಕಂಪನದಿಂದಾಗಿ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗಬೇಕಾಯಿತು ಮತ್ತು ಎತ್ತರದ ಕಟ್ಟಡಗಳಿಂದ ನೀರು ಹರಿಯಿತು.
ಮ್ಯಾನ್ಮಾರ್ನಲ್ಲಿ, ಮಸೀದಿ ಭಾಗಶಃ ಕುಸಿದ ನಂತರ ಮೂವರು ಜನರು ಸಾವನ್ನಪ್ಪಿದರು. ಮ್ಯಾನ್ಮಾರ್ನ ಮಂಡಲೆಯಲ್ಲಿರುವ 90 ವರ್ಷ ಹಳೆಯದಾದ ಅವಾ ಸೇತುವೆ ಕೂಡ ಬೃಹತ್ ಭೂಕಂಪದಿಂದಾಗಿ ಇರಾವಡ್ಡಿ ನದಿಗೆ ಕುಸಿದಿದೆ, ಇದರ ಕೇಂದ್ರಬಿಂದು ಸಾಗೈಂಗ್ ಬಳಿ ಇತ್ತು. ಬ್ಯಾಂಕಾಕ್ನಲ್ಲಿ ಹಲವಾರು ಕಟ್ಟಡಗಳನ್ನು ಸ್ಥಳಾಂತರಿಸಲಾಯಿತು. ಸರ್ಕಾರ ಮೆಟ್ರೋ ಸೇವೆಗಳು, ವಿಮಾನ ನಿಲ್ದಾಣ ಮತ್ತು ಸುರಂಗಮಾರ್ಗಗಳನ್ನು ಮುಚ್ಚಿದ್ದರಿಂದ ಬ್ಯಾಂಕಾಕ್ ಲಾಕ್ಡೌನ್ಗೆ ಒಳಗಾಯಿತು. ಥೈಲ್ಯಾಂಡ್ನ ಸ್ಟಾಕ್ ಎಕ್ಸ್ಚೇಂಜ್ ಸಹ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು.

 

 

 

 

 

 

ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ, ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇಂದು ಮಧ್ಯಾಹ್ನ ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಥೈಲ್ಯಾಂಡ್ ಮತ್ತು ಚೀನಾದಲ್ಲಿ ಕೂಡ ಭೂಕಂಪನ ಉಂಟಾಗಿದೆ. ಮಂಡಲೆ ಬಳಿ ಕೇಂದ್ರೀಕೃತವಾದ ಭೂಕಂಪದ ನಂತರ 6.4 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. ಮ್ಯಾನ್ಮಾರ್ನ ಸೇನೆ ಮಂಡಲೆ ಮತ್ತು ನೇಪಿಟಾವ್ ಸೇರಿದಂತೆ 6 ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದೆ.
ಬ್ಯಾಂಕಾಕ್ನಲ್ಲಿ ಎತ್ತರದ ಕಟ್ಟಡ ಕುಸಿತದ ನಂತರ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು 90 ಜನರು ಕಾಣೆಯಾಗಿದ್ದಾರೆ. ಏಳು ಜನರನ್ನು ರಕ್ಷಿಸಲಾಗಿದೆ. ಬ್ಯಾಂಕಾಕ್ ಅನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಮ್ಯಾನ್ಮಾರ್ನಲ್ಲಿ ಕಟ್ಟಡಗಳು, ಎಕ್ಸ್ಪ್ರೆಸ್ವೇಗಳು ಮತ್ತು ಪ್ರಮುಖ ಸೌಲಭ್ಯಗಳು ಹಾನಿಗೊಳಗಾಗಿವೆ. ಬ್ಯಾಂಕಾಕ್ನ ಸಬ್ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ನಲ್ಲಿ ಶೋಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲೂ ಬಲವಾದ ಕಂಪನದ ಅನುಭವವಾಗಿದೆ, ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

The post ಬ್ಯಾಂಕಾಕ್ ನಲ್ಲಿ ಸಂಭವಿಸಿದ ಭೂಕಂಪಕ್ಕೂ ಸಮುದ್ರದ ಮೇಲ್ದಂಡೆಯಲ್ಲಿ ಕಾಣಿಸಿಕೊಂಡ ಓರ್ಫಿಶ್ ಗೂ ಸಂಬಂಧ ಇದ್ಯಾ!? appeared first on Good News 24x7.

]]>