Thalapathy Archives - Good News 24x7 https://www.goodnews24x7.com/tag/thalapathy/ Kannada Thu, 02 Jul 2026 06:00:06 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Thalapathy Archives - Good News 24x7 https://www.goodnews24x7.com/tag/thalapathy/ 32 32 ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? https://www.goodnews24x7.com/has-the-film-jana-nayagan-finally-received-a-censor-certificate/ Thu, 02 Jul 2026 06:00:06 +0000 https://www.goodnews24x7.com/?p=9732 ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ವಿಳಂಬವಾಗುತ್ತಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆ ಎಂಬ ವದಂತಿಗಳ ಬೆನ್ನಲ್ಲೇ, ಸಿನಿಮಾ ಜುಲೈ ಮಧ್ಯಭಾಗ ಅಥವಾ ಆಗಸ್ಟ್ 7 ರಂದು ತೆರೆಗೆ…

The post ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? appeared first on Good News 24x7.

]]>

ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ವಿಳಂಬವಾಗುತ್ತಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆ ಎಂಬ ವದಂತಿಗಳ ಬೆನ್ನಲ್ಲೇ, ಸಿನಿಮಾ ಜುಲೈ ಮಧ್ಯಭಾಗ ಅಥವಾ ಆಗಸ್ಟ್ 7 ರಂದು ತೆರೆಗೆ ಬರಬಹುದು ಎನ್ನಲಾಗುತ್ತಿದೆ. ಸಂಕ್ರಾಂತಿ ಬಿಡುಗಡೆಯಿಂದ ಮುಂದೂಡಲ್ಪಟ್ಟಿರುವ ಈ ಹೈ-ಬಜೆಟ್ ಚಿತ್ರದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತ ಪ್ರಕಟಣೆ ನೀಡಬೇಕಿದೆ.

‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? ರಿಲೀಸ್ ಬಗ್ಗೆ ಹರಿದಾಡ್ತಿದೆ ಹೊಸ ಸುದ್ದಿ

ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ?:
‘ಜನ ನಾಯಗನ್’ ಚಿತ್ರದ ರಿಲೀಸ್ ಕುರಿತು ಹರಿದಾಡುತ್ತಿರುವ ಹೊಸ ಸುದ್ದಿ
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿರುವ ಚಿತ್ರಪ್ರೇಮಿಗಳು
ಅಂದುಕೊಂಡಂತೆ ನಡೆದಿದ್ದರೆ ದಳಪತಿ ವಿಜಯ್ (Thalapathy Vijay) ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಿ ಆರು ತಿಂಗಳು ಕಳೆದಿರಬೇಕಿತ್ತು. ಆರಂಭದಲ್ಲಿ ಈ ಚಿತ್ರವನ್ನು 2026ರ ಸಂಕ್ರಾಂತಿಗೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಹಲವು ಕಾರಣಗಳಿಂದ ಸಿನಿಮಾ ಮುಂದೂಡಲ್ಪಟ್ಟಿದೆ. ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಈಗ ಚಿತ್ರಕ್ಕೆ ಸೆನ್ಸಾರ್ ಆಗಿದೆ ಎಂದು ವರದಿ ಆಗಿದೆ.

ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇಲ್ಲದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ವದಂತಿಗಳು ಹರಿದಾಡುತ್ತಿವೆ. ಈಗಾಗಲೇ ಸಿನಿಮಾ ಬಗ್ಗೆ ಹಲವು ಸುದ್ದಿಗಳು ಓಡಾಡಿವೆಹಹ. ಈ ಮೊದಲು ವಿಜಯ್ ಜನ್ಮದಿನದ ಅಂಗವಾಗಿ ಜೂನ್​ ಅಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆಯಂತೆ. ಹೀಗಾಗಿ ಸಿನಿಮಾ ಜುಲೈ ಮಧ್ಯಭಾಗದಲ್ಲಿ ತೆರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ವರದಿಗಳ ಪ್ರಕಾರ ಆಗಸ್ಟ್ 7ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಈಗಾಗಲೇ ಚಿತ್ರ ಲೀಕ್ ಆಗಿ ಸಿನಿಮಾ ಮೇಲಿನ ಆಸಕ್ತಿಯೇ ಜನರಿಗೆ ಹೋಗಿದೆ. ಹೀಗಾಗಿ, ಒಂದರಿಂದ ಎರಡು ವಾರ ಮಾತ್ರ ಸಿನಿಮಾ ಪ್ರದರ್ಶನ ಕಂಡರೆ ಸಾಕು ಎಂಬುದು ತಂಡದ ಆಲೋಚನೆ ಎನ್ನಲಾಗುತ್ತಿದೆ. ಹೀಗಾಗಿ, ‘ಟಾಕ್ಸಿಕ್’ ರಿಲೀಸ್​​ಗೂ 20 ದಿನ ಮೊದಲು ಈ ಚಿತ್ರ ತೆರೆಗೆ ತರುವ ಆಲೋಚನೆ ತಂಡದ್ದಿರಬಹುದು.

ಅಧಿಕೃತ ಪ್ರಕಟಣೆಗೆ ಕಾಯುತ್ತಿರುವ ಅಭಿಮಾನಿಗಳು
ಚಿತ್ರತಂಡದಿಂದ ಈ ವರದಿಗಳಿಗೆ ಯಾವುದೇ ಅಧಿಕೃತ ಮುದ್ರೆ ಸಿಕ್ಕಿಲ್ಲ. ಈ ಹಿಂದೆ ಜೂನ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಕೂಡ ಸುಳ್ಳಾಗಿದ್ದವು. ಗೊಂದಲಗಳಿಗೆ ತೆರೆ ಎಳೆಯಲು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಶೀಘ್ರದಲ್ಲೇ ಅಧಿಕೃತ ದಿನಾಂಕ ಪ್ರಕಟಿಸಬೇಕಿದೆ.

 

ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

The post ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? appeared first on Good News 24x7.

]]>
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ https://www.goodnews24x7.com/thalapathy-vijays-wife-files-for-divorce8522-2/ Fri, 27 Feb 2026 13:37:48 +0000 https://www.goodnews24x7.com/?p=8522 ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ…

The post ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ appeared first on Good News 24x7.

]]>

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿನಟಿ ಜೊತೆ ಅನೈತಿಕ ಸಂಬಂಧ ಆರೋಪ

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ವಿಜಯ್ ಅವರು ಈಗ ಆಸಕ್ತಿ ಹೊಂದಿದ್ದಾರೆ. ಆದರೆ, ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು ಕಪ್ಪು ಚುಕ್ಕಿ ಆಗಲಿದೆ.

ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಫೆಬ್ರವರಿ 27ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿದಿದ್ದಾರೆ. ಈ ವಿಷಯದ ಬಗ್ಗೆ ವಿಜಯ್ ಅವರು ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ. ನಟಿಯ ಜೊತೆ ವಿಜಯ್ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಆರೋಪ ಮಾಡಿದ್ದು, ಕೋರ್ಟ್ ವಿಚಾರಣೆ ವೇಳೆ ಆ ನಟಿಯ ಹೆಸರು ಹೊರಬರಲಿದೆ.

ವಿಜಯ್ ಮತ್ತು ಸಂಗೀತಾ ಅವರ ಸಂಸಾರದ ವಿಚಾರಗಳು ಆದಷ್ಟು ಗುಟ್ಟಾಗಿ ಇರುತ್ತಿದ್ದವು. ಅದರ ನಡುವೆ ದಳಪತಿ ವಿಜಯ್ ಅವರ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಈಗ ಸ್ವತಃ ಪತ್ನಿಯೇ ಆರೋಪ ಮಾಡಿರುವುದರಿಂದ ವದಂತಿ ನಿಜವಾದಂತಾಗಿದೆ.

ದಳಪತಿ ವಿಜಯ್ ನಟಿಸಿರುವ ಕೊನೇ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗುವುದು ಬಾಕಿ ಇದೆ. ಆ ಚಿತ್ರ ತೆರೆಕಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು, ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ.

.

The post ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ appeared first on Good News 24x7.

]]>
ದಳಪತಿ ವಿಜಯ್ ಸಮಾವೇಶಕ್ಕೆ ಸೇರಿರುವ ಜನಸಂಖ್ಯೆ ಅಚ್ಚರಿ ಮೂಡಿಸುವಂತೆ ಇದೆ. https://www.goodnews24x7.com/da%e1%b8%b7apati-vijay-samavesakke-seriruva-janasa%e1%b9%85khye-accari-mu%e1%b8%8disuvante-ide-thalapathy-tamilnaduelectionsmaduraitvkmadurai-da%e1%b8%b7apati-vijay-avaru-tammade-svanta-pak/ Fri, 22 Aug 2025 07:03:11 +0000 https://www.goodnews24x7.com/?p=6458 ದಳಪತಿ ವಿಜಯ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿದ್ದು, ಟಿವಿಕೆ ಎಂದು ಹೆಸರು ಇಟ್ಟಿದ್ದಾರೆ. ಈ ಪಕ್ಷ 2026ರ ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲಿದೆ. ದಳಪತಿ ವಿಜಯ್ ಅವರ ಅಭಿಮಾನಿ ಬಳಗ ದೊಡ್ದದಿದೆ. ಹೀರೋ ಆಗಿ ಅವರು ಸಾಕಷ್ಟು ದೊಡ್ಡ ಅಭಿಮಾನಿ…

The post ದಳಪತಿ ವಿಜಯ್ ಸಮಾವೇಶಕ್ಕೆ ಸೇರಿರುವ ಜನಸಂಖ್ಯೆ ಅಚ್ಚರಿ ಮೂಡಿಸುವಂತೆ ಇದೆ. appeared first on Good News 24x7.

]]>

ದಳಪತಿ ವಿಜಯ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿದ್ದು, ಟಿವಿಕೆ ಎಂದು ಹೆಸರು ಇಟ್ಟಿದ್ದಾರೆ. ಈ ಪಕ್ಷ 2026ರ ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲಿದೆ. ದಳಪತಿ ವಿಜಯ್ ಅವರ ಅಭಿಮಾನಿ ಬಳಗ ದೊಡ್ದದಿದೆ. ಹೀರೋ ಆಗಿ ಅವರು ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಮಧುರೈನ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಪಕ್ಷ ಘೋಷಣೆ ವೇಳೆ ವಿಜಯ್ ಅವರು ದೊಡ್ಡ ಸಮಾವೇಶ ಆಯೋಜನೆ ಮಾಡಿದ್ದರು. ಇದಾದ ಬಳಿಕ ನಡೆದ ಮತ್ತೊಂದು ದೊಡ್ಡ ಸಮಾವೇಶ ಇದಾಗಿದೆ. ಮಧುರೈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯ ಜನರು ನೆರೆದಿದ್ದರು. ಆ ಫೋಟೋಗಳು ವೈರಲ್ ಆಗಿವೆ.

 

ಅಭಿಮಾನಿಗಳನ್ನು ನೋಡಿ ದಳಪತಿ ವಿಜಯ್ ಅವರು ಭಾವುಕರಾದರು. ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಅವರು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ.ವಿಜಯ್ ಅವರು ಸಮಾವೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಸೇರಿಸಿದ್ದಾರೆ ನಿಜ. ಆದರೆ, ಇದನ್ನು ಅವರು ಮತವಾಗಿ ಬದಲಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಬಂದವರೆಲ್ಲರೂ ಟಿವಿಕೆಗೆ ಮತ ಹಾಕಿದರೆ ಅವರ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ವಿಜಯ್ ಅವರು ಮಧುರೈನ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ಅವರು ಈ ರೀತಿಯ ಘೋಷಣೆ ಮಾಡಿದ್ದಾರೆ ಅನ್ನೋದು ವಿಶೇಷ. ಪಕ್ಷ ಗೆದ್ದರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

The post ದಳಪತಿ ವಿಜಯ್ ಸಮಾವೇಶಕ್ಕೆ ಸೇರಿರುವ ಜನಸಂಖ್ಯೆ ಅಚ್ಚರಿ ಮೂಡಿಸುವಂತೆ ಇದೆ. appeared first on Good News 24x7.

]]>
ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ https://www.goodnews24x7.com/%e0%b2%a6%e0%b2%b3%e0%b2%aa%e0%b2%a4%e0%b2%bf-%e0%b2%b5%e0%b2%bf%e0%b2%9c%e0%b2%af%e0%b3%8d-%e0%b2%95%e0%b3%8a%e0%b2%a8%e0%b3%87-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%95/ Wed, 02 Oct 2024 13:27:03 +0000 https://www.goodnews24x7.com/?p=710 ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.   ತಮಿಳು ಸೂಪರ್‌…

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

 

ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.

 

ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ”ಕೆವಿಎನ್ ಪ್ರೊಡಕ್ಷನ್ಸ್‌” ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.

 

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>