Thodupuzha Archives - Good News 24x7 https://www.goodnews24x7.com/tag/thodupuzha/ Kannada Wed, 01 Apr 2026 10:07:55 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Thodupuzha Archives - Good News 24x7 https://www.goodnews24x7.com/tag/thodupuzha/ 32 32 ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. https://www.goodnews24x7.com/sexual-assault-charges-renowned-malayalam-director-ranjith-arrested-sent-to-14-days-judicial-custody/ Wed, 01 Apr 2026 10:06:46 +0000 https://www.goodnews24x7.com/?p=9063 ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು…

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>

ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧನದ ಬಳಿಕ ರಂಜಿತ್ ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (JFMC) ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಸದ್ಯ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಕೊಚ್ಚಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ನಿರ್ದೇಶಕ ರಂಜಿತ್ ವಿರುದ್ಧ ಈ ಹಿಂದೆಯೂ ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. 2024ರಲ್ಲಿ ಬಂಗಾಳಿ ನಟಿಯೊಬ್ಬರು 2009ರ ಘಟನೆಯನ್ನು ಉಲ್ಲೇಖಿಸಿ ದೂರು ನೀಡಿದ್ದರು. ಇದು ರಂಜಿತ್ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವಾಗಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ರಂಜಿತ್, ಇವೆಲ್ಲವೂ ಸುಳ್ಳು ದೂರುಗಳು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>