tomorrow Archives - Good News 24x7 https://www.goodnews24x7.com/tag/tomorrow/ Kannada Tue, 26 May 2026 09:32:45 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg tomorrow Archives - Good News 24x7 https://www.goodnews24x7.com/tag/tomorrow/ 32 32 RTI ಕಾರ್ಯಕರ್ತ ಗಂಗರಾಜು ಜಾಮೀನು ಅರ್ಜಿ ನಾಳೆಗೆ ಮುಂದೂಡಿದೆ. https://www.goodnews24x7.com/rti-activist-gangarajus-bail-application-postponed-to-tomorrow/ Tue, 26 May 2026 09:32:45 +0000 https://www.goodnews24x7.com/?p=9535 ಮೈಸೂರು : RTI ಕಾರ್ಯಕರ್ತ ಗಂಗರಾಜು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ…

The post RTI ಕಾರ್ಯಕರ್ತ ಗಂಗರಾಜು ಜಾಮೀನು ಅರ್ಜಿ ನಾಳೆಗೆ ಮುಂದೂಡಿದೆ. appeared first on Good News 24x7.

]]>

ಮೈಸೂರು : RTI ಕಾರ್ಯಕರ್ತ ಗಂಗರಾಜು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಅರ್ಜಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

RTI ಕಾರ್ಯಕರ್ತ ಗಂಗರಾಜು ವಿರುದ್ಧ ಹಣಕಾಸು ವ್ಯವಹಾರ ಸಂಬಂಧ ವ್ಯಕ್ತಿಯೊಬ್ಬರನ್ನು ಅಪಾಯಕಾರಿ ರೀತಿಯಲ್ಲಿ ಕಾರಿನ ಬ್ಯಾನೆಟ್ ಮೇಲೆ ಕೂರಿಸಿಕೊಂಡು ಕಾರು ಚಲಾಯಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ಪರವಾಗಿ ಹಿರಿಯ ವಕೀಲ ಎಸ್. ಲೋಕೇಶ್ ವಕಾಲತ್ತು ವಹಿಸಿಕೊಂಡಿದ್ದಾರೆ. ನಾಳೆಯ ವಿಚಾರಣೆಯಲ್ಲಿ ಸರ್ಕಾರದ ಪರದಿಂದ ಆಕ್ಷೇಪಣೆ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಿರೀಕ್ಷಿಸಲಾಗಿದೆ.

The post RTI ಕಾರ್ಯಕರ್ತ ಗಂಗರಾಜು ಜಾಮೀನು ಅರ್ಜಿ ನಾಳೆಗೆ ಮುಂದೂಡಿದೆ. appeared first on Good News 24x7.

]]>
ನಟ ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ! https://www.goodnews24x7.com/is-friday-auspicious-for-actor-darshan-the-future-is-in-the-hands-of-the-supreme-court/ Thu, 14 May 2026 12:39:30 +0000 https://www.goodnews24x7.com/?p=9512 ನಟ ದರ್ಶನ್  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿ ವರ್ಷವಾಗುತ್ತಾ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್, ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಇದೀಗ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಾಕ್ಷ್ಯಗಳ ವಿಚಾರಣೆ ತಡವಾಗುತ್ತಿದ್ದು, ತಮಗೆ…

The post ನಟ ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ! appeared first on Good News 24x7.

]]>

ನಟ ದರ್ಶನ್  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿ ವರ್ಷವಾಗುತ್ತಾ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್, ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಇದೀಗ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಾಕ್ಷ್ಯಗಳ ವಿಚಾರಣೆ ತಡವಾಗುತ್ತಿದ್ದು, ತಮಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿ ಕುರಿತಂತೆ ನಾಳೆ (ಮೇ 15) ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.

ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಕಾರಾಗೃಹ ಇಲಾಖೆಯಿಂದ ವರದಿಯನ್ನು ಸುಪ್ರೀಂಕೋರ್ಟ್ ಕೇಳಿತ್ತು. ಇದೀಗ ಎಸ್​​ಪಿಪಿ ಅವರು ಈ ಕುರಿತು ನ್ಯಾಯಾಲಯಕ್ಕೆ ಕೆಲವು ವಿಡಿಯೋ ಸಾಕ್ಷ್ಯಗಳ ಸಹಿತ ವಾದ ಮಂಡಿಸಿದ್ದು, ದರ್ಶನ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ದರ್ಶನ್​​ಗೆ ಇತರೆ ಕೈದಿಗಳೊಟ್ಟಿಗೆ ಸಂಪರ್ಕ ಇಲ್ಲವೆಂದು, ಅವರನ್ನು ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ ಎಂದಿದ್ದಾರೆ. ನ್ಯಾಯಾಲಯಕ್ಕೆ ಸಿಸಿಟಿವಿ ಮತ್ತು ಬಾಡಿಕ್ಯಾಮ್​​ಗಳ ದೃಶ್ಯಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇವುಗಳ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡುತ್ತಿಲ್ಲ, 270 ಸಾಕ್ಷ್ಯಗಳಲ್ಲಿ 10 ಸಾಕ್ಷ್ಯಗಳ ವಿಚಾರಣೆಯನ್ನೂ ಮಾಡಲಾಗಿಲ್ಲ ವಿಚಾರಣೆ ನಡೆಯುವವರೆಗೆ ತಮಗೆ ಜಾಮೀನು ನೀಡಬೇಕು ಎಂದು ಸಹ ದರ್ಶನ್ ಮನವಿ ಮಾಡಿದ್ದರು. ಈ ಬಗ್ಗೆಯೂ ಸಹ ಸುಪ್ರೀಂಕೋರ್ಟ್ ವರದಿ ಕೇಳಿತ್ತು. ಅದನ್ನೂ ಸಹ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಸುಪ್ರೀಂಕೋರ್ಟ್​​ಗೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ದರ್ಶನ್ ಸಲ್ಲಿಕೆ ಮಾಡಿದ್ದ ಇತರೆ ಅರ್ಜಿಗಳ ಕಾರಣಕ್ಕೆ ಮುಖ್ಯ ಆರೋಪದ ವಿಚಾರಣೆ ತಡವಾಗಿದೆ ಎಂದು ಎಸ್​​ಪಿಪಿ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ರೇಣುಕಾ ಸ್ವಾಮಿ ಕೊಲೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. (ಜೂನ್ 08, 2024) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದರು. 2024ರ ಅಕ್ಟೋಬರ್ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣ ನೀಡಿ ದರ್ಶನ್ ಜಾಮೀನು ಪಡೆದಿದ್ದರು. ಆ ಬಳಿಕ ಪವಿತ್ರಾ ಸೇರಿದಂತೆ ಇತರೆ ಕೆಲವು ಆರೋಪಿಗಳಿಗೂ ಜಾಮೀನು ನೀಡಲಾಯ್ತು. ಬಳಿಕ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು, ಚಿತ್ರೀಕರಣವನ್ನೂ ಮುಗಿಸಿದರು. ಆದರೆ ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್​​ಗೆ ಮನವಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಕೆಲ ಆರೋಪಿಗಳ ಜಾಮೀನನ್ನು 2025ರ ಆಗಸ್ಟ್ ತಿಂಗಳಲ್ಲಿ ರದ್ದು ಮಾಡಿತು. ಆಗಿನಿಂದಲೂ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

The post ನಟ ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ! appeared first on Good News 24x7.

]]>
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. https://www.goodnews24x7.com/registration-and-stamp-fee-revision-effective-from-tomorrow/ Sat, 30 Aug 2025 12:46:57 +0000 https://www.goodnews24x7.com/?p=7070 ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ, ಮತ್ತು ಈ ಪರಿಷ್ಕೃತ ಶುಲ್ಕಗಳು ನಾಳೆಯಿಂದ ಜಾರಿಗೆ ಬರಲಿದೆ. ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ನಾಳೆಯಿಂದ ಹೆಚ್ಚಲಿವೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ…

The post ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. appeared first on Good News 24x7.

]]>

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ, ಮತ್ತು ಈ ಪರಿಷ್ಕೃತ ಶುಲ್ಕಗಳು ನಾಳೆಯಿಂದ ಜಾರಿಗೆ ಬರಲಿದೆ. ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ನಾಳೆಯಿಂದ ಹೆಚ್ಚಲಿವೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಮುಲೈ ಮುಗಿಲನ್, ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ 31ರಿಂದ ಜಾರಿಗೆ ತರಲಿರುವ ಈ ಪರಿಷ್ಕೃತ ಶುಲ್ಕಗಳು ಇತ್ತೀಚೆಗೆ ಅನೇಕರಾದ ನೆರೆಹೊರೆಯ ರಾಜ್ಯಗಳ ದರಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಇತ್ತು. ಇವುನ್ನು ಇತರ ರಾಜ್ಯಗಳ ದರಗಳೊಂದಿಗೆ ಸಮನ್ವಯ ಪಡಿಸಿ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೆ, ಕರ್ನಾಟಕ ರಾಜ್ಯವು ಮುದ್ರಾಂಕ, ನೋಂದಣಿ ಮತ್ತು ಇತರೆ ಸೆಸ್ ಸೇರಿ 6.6% ಶುಲ್ಕವನ್ನು ವಿಧಿಸುತ್ತಿತ್ತು. ಆದರೆ, ಇವು ಯಾವುದೇ ಸ್ಥಿರಾಸ್ತಿ ದಸ್ತಾವೇಜುಗಳ ಬಗ್ಗೆಯೂ ನಿಜವಾಗಿಯೂ ಕಡಿಮೆ ಇದ್ದು, ತಮಿಳುನಾಡು (9%), ಕೇರಳ (10%), ಆಂಧ್ರಪ್ರದೇಶ (7.5%) ಮತ್ತು ತೆಲಂಗಾಣ (7.5%) ರಾಜ್ಯಗಳಲ್ಲಿ ಉದ್ದೇಶಿತ ಶುಲ್ಕಗಳು ಹೆಚ್ಚು ಇದ್ದವು.

ಈ ಪರಿಷ್ಕರಣೆ, ರಾಜ್ಯದಲ್ಲಿ ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಗಳನ್ನು ನೀಡಲು ಮತ್ತು ಇತರ ರಾಜ್ಯಗಳೊಂದಿಗೆ ಸಮನ್ವಯದಲ್ಲಿರಲು ಅಧಿಸೂಚಿಸಲಾಗುತ್ತಿದೆ. ಇದರಂತೆ, 31-08-2025 ರಿಂದ, ನೋಂದಣಿ ಶುಲ್ಕವನ್ನು ಶೇಕಡಾ 1 ರಿಂದ 2 ರಷ್ಟು ಪರಿಷ್ಕರಿಸಲಾಗಿದೆ.

The post ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. appeared first on Good News 24x7.

]]>