tradition Archives - Good News 24x7 https://www.goodnews24x7.com/tag/tradition/ Kannada Sat, 28 Jun 2025 10:49:47 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg tradition Archives - Good News 24x7 https://www.goodnews24x7.com/tag/tradition/ 32 32 ಹೆಣ್ಣುಮಕ್ಕಳಿಗೆ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ಒಂದು ಮಹತ್ತರ ಕಾರಣ …. https://www.goodnews24x7.com/%e0%b2%b9%e0%b3%86%e0%b2%a3%e0%b3%8d%e0%b2%a3%e0%b3%81%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%8f%e0%b2%95%e0%b3%86-%e0%b2%ae%e0%b3%82%e0%b2%97%e0%b3%81/ Sat, 28 Jun 2025 10:49:47 +0000 https://www.goodnews24x7.com/?p=4748 ಭಾರತೀಯರಿಗೆ ಮೂಗು ಚುಚ್ಚುವುದು ವಿವಾಹ ಸಂಪ್ರದಾಯದ ಒಂದು ಪ್ರಮುಖ ಆಚರಣೆ ಅಥವಾ ಭಾಗ. ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು. ಮೂಗು ಚುಚ್ಚಿ ಮೂಗುತಿ ಹಾಕುವುದು ಮಹಿಳೆಯರ ಅಂದ…

The post ಹೆಣ್ಣುಮಕ್ಕಳಿಗೆ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ಒಂದು ಮಹತ್ತರ ಕಾರಣ …. appeared first on Good News 24x7.

]]>

ಭಾರತೀಯರಿಗೆ ಮೂಗು ಚುಚ್ಚುವುದು ವಿವಾಹ ಸಂಪ್ರದಾಯದ ಒಂದು ಪ್ರಮುಖ ಆಚರಣೆ ಅಥವಾ ಭಾಗ. ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು. ಮೂಗು ಚುಚ್ಚಿ ಮೂಗುತಿ ಹಾಕುವುದು ಮಹಿಳೆಯರ ಅಂದ ಹೆಚ್ಚಿಸುವುದಕ್ಕಲ್ಲ. ಇದರ ಹಿಂದೆ ಮಹತ್ತರ ಕಾರಣವಿದೆ. ಹೌದು, ಈ ರೀತಿ ಮೂಗು ಚುಚ್ಚುವುದರ ಹಿಂದೆ ಕಾರಣವಿದೆ. ಹಾಗಾದರೆ ಏನದು? ಯಾಕೆ ಎಡಭಾಗದಲ್ಲಿ ಮೂಗುತಿ ಹಾಕಬೇಕು ಎಂಬುದರ ವಿಶೇಷ ಮಾಹಿತಿ ಇಲ್ಲಿದೆ ನೋಡಿ….

ಅಲಂಕಾರಿಕ ದೃಷ್ಟಿಕೋನದಿಂದ ನೋಡುವುದಾದರೆ ಇದು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ಆದರೆ ಇದು ಅಂದ ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಈ ಆಭರಣಗಳು ಮಹಿಳೆಯರ ಆರೋಗ್ಯ ಕಾಪಾಡುತ್ತವೆ. ಕೆಲವು ಕಡೆಗಳಲ್ಲಿ ಮದುವೆಯಾದ ಹೆಂಗಸರು ಇದನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದೊಂದು ವಿವಾಹಿತರ ಸಂಕೇತ ಅದಲ್ಲದೆ ಮೂಗುತಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮೂಗು ಚುಚ್ಚುವುದು ಪಾರ್ವತಿ ದೇವಿಯನ್ನು ಗೌರವಿಸುವ ಒಂದು ಮಾರ್ಗವಾಗಿದೆ. ಇದನ್ನು ಹದಿನಾರು ಅಲಂಕಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮೂಗು ಅಥವಾ ಕಿವಿಗಳನ್ನು ಚುಚ್ಚಿಕೊಳ್ಳುವುದನ್ನು ಅಲಂಕಾರದ ಒಂದು ರೂಪವೆಂದು ನಾವು ಪರಿಗಣಿಸಬಹುದು, ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. ವಾಸ್ತವವಾಗಿ, ಮೂಗು ಚುಚ್ಚುವುದರಿಂದ ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ ಎಂದು ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ. ಹೆಚ್ಚುವರಿಯಾಗಿ, ಹೆರಿಗೆಯ ಸಮಯದಲ್ಲಿ ಮಗುವಿಗೆ ಜನ್ಮ ನೀಡುವುದು ಸಹ ತುಂಬಾ ಸುಲಭವಾಗುತ್ತದೆ ಇದು ಆ ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ನಡೆದ ಕೆಲವು ಸಂಶೋಧನಗೆಳು ಕೂಡ ಇದಕ್ಕೆ ಪೂರಕವಾಗಿದೆ. ಮಾತ್ರವಲ್ಲ ಇದು ಮೈಗ್ರೇನ್ ನೋವಿನಿಂದ ಕೂಡ ಪರಿಹಾರ ನೀಡುತ್ತದೆ.

 

The post ಹೆಣ್ಣುಮಕ್ಕಳಿಗೆ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ಒಂದು ಮಹತ್ತರ ಕಾರಣ …. appeared first on Good News 24x7.

]]>
ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. https://www.goodnews24x7.com/%e0%b2%ae%e0%b2%a6%e0%b3%81%e0%b2%b5%e0%b3%86-%e0%b2%a6%e0%b2%bf%e0%b2%a8-%e0%b2%ae%e0%b2%be%e0%b2%a4%e0%b3%8d%e0%b2%b0-%e0%b2%b8%e0%b3%8d%e0%b2%a8%e0%b2%be%e0%b2%a8-%e0%b2%ae%e0%b2%be%e0%b2%a1/ Thu, 26 Jun 2025 11:19:40 +0000 https://www.goodnews24x7.com/?p=4658 ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೆಲವರು ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡ್ತಾರೆ. ಆದರೆ ಈ ಜನರು ಮಾತ್ರ ಸ್ನಾನ ಅಂದ್ರೆ ಸಾಕು, ಮಾರು ದೂರ ಓಡ್ತಾರೆರಂತೆ. ಹೌದು, ಇಲ್ಲಿನ ಜನರ ಜೀವನಶೈಲಿ ಮಾತ್ರ ಇವತ್ತಿಗೂ ಬದಲಾಗಿಲ್ಲ. ಇಂದಿಗೂ…

The post ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. appeared first on Good News 24x7.

]]>

ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೆಲವರು ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡ್ತಾರೆ. ಆದರೆ ಈ ಜನರು ಮಾತ್ರ ಸ್ನಾನ ಅಂದ್ರೆ ಸಾಕು, ಮಾರು ದೂರ ಓಡ್ತಾರೆರಂತೆ. ಹೌದು, ಇಲ್ಲಿನ ಜನರ ಜೀವನಶೈಲಿ ಮಾತ್ರ ಇವತ್ತಿಗೂ ಬದಲಾಗಿಲ್ಲ. ಇಂದಿಗೂ ತಮ್ಮ ಹಿಂದಿನ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುವ ಇಲ್ಲಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವುದು. ಹಾಗಾದ್ರೆ ಇಂತಹ ವಿಚಿತ್ರ ಜನರು ಇರುವುದು ಎಲ್ಲಿ? ದೇಹದ ಸ್ವಚ್ಛತೆ ಹೇಗೆ ಮಾಡ್ತಾರೆ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ….

ಈ ಬುಡಕಟ್ಟು ಜನಾಂಗದವರು ತಮ್ಮ ಹಿರಿಯರು ಪಾಲಿಸಿಕೊಂಡ ಬಂದ ಸಂಪ್ರದಾಯವನ್ನು ಇವತ್ತಿಗೂ ಕೂಡ ಅನುಸರಿಸಿಕೊಂಡು ಬರುತ್ತಿದ್ದಾರಂತೆ. ಅಂತಹ ಆಚರಣೆಗಳಲ್ಲಿ ಒಂದು ಸ್ನಾನ ಮಾಡದೇ ಇರುವುದು. ಪ್ರಪಂಚದಲ್ಲಿರುವ ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನೇ ನಿಷೇಧಿಸಲಾಗಿದೆ, ಹೌದು, ಈ ಬುಡಕಟ್ಟು ಜನಾಂಗದ ಹೆಸರು ಹಿಂಬಾ ಬುಡಕಟ್ಟು. ಆಫ್ರಿಕಾ ನಮೀಬಾ ದೇಶದ ಮರುಭೂಮಿಗಳಲ್ಲಿ ಈ ಬುಡಕಟ್ಟು ಜನಾಂಗದ ಜನರು ನೆಲೆಸಿದ್ದು, ಆಧುನಿಕತೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ. ನಮ್ಗೆಲ್ಲರಿಗೂ ಒಂದು ದಿನ ಸ್ನಾನ ಮಾಡದೇ ಇದ್ರೆ ಕಿರಿಕಿರಿ ಅನುಭವ ಆಗ್ತದೆ, ಕೆಲವರ ದೇಹದಿಂದ ಗಬ್ಬು ವಾಸನೆ ಬರಲು ಶುರುವಾಗುತ್ತದೆ, ಆದರೆ ಬುಡಕಟ್ಟು ಜನಾಂಗದ ಮಹಿಳೆಯರು ಬೇಸಿಗೆಯಿರಲಿ, ಚಳಿಗಾಲವಿರಲಿ, ಮಳೆಗಾಲವೇ ಇರಲಿ ಸ್ನಾನ ಮಾಡುವುದೇ ಇಲ್ಲ. ಅಷ್ಟೇ ಅಲ್ಲದೇ, ಈ ಮಹಿಳೆಯರು ಬಟ್ಟೆ ಕೂಡ ಒಗೆಯೋದಿಲ್ಲವಂತೆ. ಆದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೋದು, ಅದುವೇ ತಮ್ಮ ಮದುವೆ ದಿನವಂತೆ.

ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಕೂಡ ಇಲ್ಲಿನ ಮಹಿಳೆಯರು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸ್ತಾರೆ. ದೇಹದ ಸ್ವಚ್ಛತೆಗಾಗಿ ಗಿಡಮೂಲಿಕೆಯನ್ನು ಬಳಸ್ತಾರೆ. ಹೌದು ತಮ್ಮ ಸುತ್ತಮುತ್ತಲಿನಲ್ಲಿ ಸಿಗುವ ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸುತ್ತಾರೆ. ಅದರ ಹೊಗೆಯನ್ನು ಬಳಸಿ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ವಿಶೇಷ ಲೋಷನ್ ಬಳಸುತ್ತಾರೆ.

 

The post ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. appeared first on Good News 24x7.

]]>